ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?

ಕುಂಕುಮವು ಪಾವಿತ್ರ್ಯದ ಮತ್ತು ಮಾಂಗಲ್ಯದ ಪ್ರತೀಕವಾಗಿದೆ. ಕೃತಕ ವಸ್ತುಗಳಿಗಿಂತ ನೈಸರ್ಗಿಕ ವಸ್ತುಗಳಲ್ಲಿ ದೇವತೆಗಳ ಚೈತನ್ಯಲಹರಿಗಳನ್ನು ಸೆಳೆದುಕೊಳ್ಳುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುತ್ತದೆ. ಕುಂಕುಮವನ್ನು ಅರಿಶಿನದಿಂದ ತಯಾರಿಸಿರುವುದರಿಂದ ಟಿಕಲಿಗಿಂತ ಕುಂಕುಮವು ಹೆಚ್ಚು ನೈಸರ್ಗಿಕವಾಗಿದೆ, ಅಲ್ಲದೇ ಕುಂಕುಮದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಪರಿಮಳದಲ್ಲಿ ಬ್ರಹ್ಮಾಂಡದಲ್ಲಿನ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆಯಿರುವುದರಿಂದ ಕುಂಕುಮವು ತಾರಕ-ಮಾರಕ ಚೈತನ್ಯಲಹರಿಗಳನ್ನು ಪ್ರಕ್ಷೇಪಿಸಿ ಜೀವವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಆದುದರಿಂದ ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳುವುದು ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುವ ದೃಷ್ಟಿಯಿಂದ ಹೆಚ್ಚು ಫಲದಾಯಕವಾಗಿದೆ.

ಟಿಕಲಿಯ ಹಿಂಬದಿಯಲ್ಲಿ ಉಪಯೋಗಿಸಿದ ಅಂಟು ತಮೋಗುಣಿಯಾಗಿರುವುದರಿಂದ ಅದು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುತ್ತದೆ. ಈ ಲಹರಿಗಳು ಜೀವದ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳುವುದರಿಂದ ಶರೀರದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಸತತವಾಗಿ ಟಿಕಲಿಯನ್ನು ಹಚ್ಚಿಕೊಳ್ಳುವುದರಿಂದ ಆ ಸ್ಥಳದಲ್ಲಿ ಕೆಟ್ಟಶಕ್ತಿಗಳ ಸ್ಥಾನವು ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ.

(ಈ ಶಾಸ್ತ್ರದ ಮಾಹಿತಿಯಿಲ್ಲದಿರುವುದರಿಂದ ಮತ್ತು ಹಿಂದೂ ಧರ್ಮದಲ್ಲಿನ ಮಂಗಲಕರ ವಿಷಯಗಳೆಡೆಗೆ ನೋಡುವ ಆಸಕ್ತಿಯೂ ಇಲ್ಲದಿರುವುದರಿಂದ ಇತ್ತೀಚೆಗೆ ಸ್ತ್ರೀಯರು ಹಾಗೂ ಯುವತಿಯರು ಕುಂಕುಮವನ್ನು ಹಚ್ಚಿಕೊಳ್ಳುವುದರ ಬದಲು ಟಿಕಲಿಯನ್ನು ಉಪಯೋಗಿಸುತ್ತಿದ್ದಾರೆ.)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಆಭರಣಗಳು)’)

ಆಚಾರಧರ್ಮಕ್ಕೆ ಸಂಬಂಧಿತ ಲೇಖನಗಳು 
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?

1 comment:

  1. ಪವಿತ್ರವಾದಂತಹ ಹಿಂದೂ ಸಂಸ್ಕೃತಿಯನ್ನು ಉಳಿಸೋಣ

    ReplyDelete

Note: only a member of this blog may post a comment.