‘ಸ್ಲೀಪ್ ಪ್ಯಾರಲಿಸಿಸ್’

ಆಧ್ಯಾತ್ಮಿಕ ಸಂಶೋಧನೆ
ಸನಾತನವು ಮಾಡಿದ ಆಧ್ಯಾತ್ಮಿಕ ಸಂಶೋಧನೆಗಳ ಮೇಲೆ ಆಧಾರಿತ 'Spiritual Science Research foundation' ಈ ಸಂಸ್ಥೆಯ ಆಸ್ಟ್ರೇಲಿಯಾದಲ್ಲಿನ ಸಂಕೇತಸ್ಥಳದಲ್ಲಿ ಜೀವನದ ಅನೇಕ ಅಂಗಗಳ ಮತ್ತು ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಅದರಲ್ಲಿನ ಒಂದು ಅಂಕಣವೆಂದರೆ 'Spiritual causes of difficulties' ಅಂದರೆ ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ. 80 ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ವಿವಿಧ ರೀತಿಯಲ್ಲಿ ಇರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು’. ಕೆಲವೊಮ್ಮೆ ನಮಗಾಗುವ ಶಾರೀರಿಕ ವ್ಯಾಧಿಗಳ ಮೂಲ ಕಾರಣವು ಕೆಟ್ಟ ಶಕ್ತಿಗಳಾಗಿರುತ್ತವೆ. 'Spiritual Research in Physical health' ಅಂದರೆ ‘ಆರೋಗ್ಯಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಸಂಶೋಧನೆ’ ಈ ವಿಷಯಕ್ಕೆ ಸಂಬಂಧಿಸಿದ ‘ಶರೀರದ ಚಲನವಲನ ಮಾಡಲು ಆಗದಿರುವುದು’ (ಸ್ಲೀಪ್ ಪ್ಯಾರಾಲಿಸಿಸ್) ಇದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ. 'Spiritual Science Research foundation' (www.spiritualresearchfoundation.org) ಇವರ ಸೌಜನ್ಯದಿಂದ ಈ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ನಿದ್ದೆಯಿಂದ ಎಚ್ಚರವಾದಾಗ ಶರೀರದ ಚಲನವಲನ ಮಾಡಲು ಆಗದಿರುವುದು
‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರದ ಲಕ್ಷಣಗಳು
ಕೆಲವೊಮ್ಮೆ ನಡುರಾತ್ರಿಯಲ್ಲಿ ನಾವು ನಿದ್ದೆಯಲ್ಲಿರುವಾಗ ಆಕಸ್ಮಿಕವಾಗಿ ಎಚ್ಚರಗೊಳ್ಳುತ್ತೇವೆ ಮತ್ತು ಆಗ ನಮಗೆ ನಮ್ಮ ಶರೀರದ ಯಾವುದೇ ಭಾಗವನ್ನು ಅಲುಗಾಡಿಸಲು ಆಗುವುದಿಲ್ಲ. ಇಂತಹ ಪ್ರಸಂಗಗಳನ್ನು ಬಹಳಷ್ಟು ಜನರು ಅನುಭವಿಸಿರುತ್ತಾರೆ. ಇಂತಹ ಸಮಯದಲ್ಲಿ ನಾವು ಸಂಪೂರ್ಣ ಎಚ್ಚರವಿದ್ದರೂ ಮತ್ತು ನಮ್ಮ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವಿದ್ದರೂ ಸಹ ನಮಗೆ ಅಲುಗಾಡಲು ಆಗುವುದಿಲ್ಲ. ಇಂತಹ ಸಮಯದಲ್ಲಿ ನಮ್ಮ ಮೇಲೆ ಅಥವಾ ನಮ್ಮ ಕೋಣೆಯಲ್ಲಿ ಯಾರಾದರೂ ಇದ್ದಾರೆ ಎಂದು ಅನಿಸುತ್ತದೆ. ಇಂತಹ ಅನುಭವಗಳು ಅತ್ಯಂತ ಭಯಾನಕವಾಗಿದ್ದು ಜನರು ಬಹಳಷ್ಟು ಹೆದರುತ್ತಾರೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ‘ಸ್ಲೀಪ್ ಪ್ಯಾರಾಲಿಸಿಸ್’ ಅಥವಾ ‘ಶರೀರದ ಚಲನವಲನ ಮಾಡಲು ಆಗದಿರುವುದು’ ಎಂದು ಹೇಳುತ್ತಾರೆ.

‘ಸ್ಲೀಪ್ ಪ್ಯಾರಾಲಿಸಿಸ್’ನ ಬಗ್ಗೆ ಆಧುನಿಕ ವಿಜ್ಞಾನದ ದೃಷ್ಟಿಕೋನ

‘ಸ್ಲೀಪ್ ಪ್ಯಾರಾಲಿಸಿಸ್’ನ ಬಗ್ಗೆ ಆಧುನಿಕ ವಿಜ್ಞಾನದ ಸಂದೇಹಾಸ್ಪದ ಸ್ಪಷ್ಟೀಕರಣಗಳು:
‘ಸ್ಲೀಪ್ ಪ್ಯಾರಾಲಿಸಿಸ್’ನ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಆಧುನಿಕ ವಿಜ್ಞಾನಕ್ಕೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ; ಆದರೆ ಇದರ ಲಕ್ಷಣಗಳ ಬಗ್ಗೆ ಆಧುನಿಕ ವಿಜ್ಞಾನವು ನೀಡಿದ ಸ್ಪಷ್ಟೀಕರಣಗಳು ಮುಂದಿನಂತಿವೆ.
೧. ಅತ್ಯಂತ ಒತ್ತಡದ ಸ್ಥಿತಿಯಲ್ಲಿರುವ ವ್ಯಕ್ತಿಗೆ ಭಯದಿಂದ ಶರೀರದ ಚಲನವಲನ ಮಾಡಲು ಆಗದಿರುವುದು.
೨. ‘ಸ್ಲೀಪ್ ಪ್ಯಾರಾಲಿಸಿಸ್’ ಇದೊಂದು ಭ್ರಮೆಯಾಗಿದೆ.
೩. ನಮ್ಮ ಸುತ್ತಲಿನ ಅಪಾಯಗಳನ್ನು ಗುರುತಿಸುವ ಮೆದುಳಿನ ಭಾಗವು ಕಾರ್ಯನಿರತವಾಗಿರುತ್ತದೆ. ಆದರೆ ಗುರುತಿಸಿದ ಅಪಾಯದ ಸಂದರ್ಭದಲ್ಲಿ ಶರೀರವು ಕಾರ್ಯನಿರತವಾಗುವುದಿಲ್ಲ. ಅದರಿಂದ ಶರೀರವನ್ನು ಚಲನವಲನ ಮಾಡಲು ಆಗುವುದಿಲ್ಲ. ಅರ್.ಇ.ಎಮ್. (ರಾಪಿಡ್ ಐ ಮೂವ್‌ಮೆಂಟ್ ಎಂದರೆ ಕಣ್ಣುಗಳ ತೀವ್ರ ಚಲನೆ) ಈ ವಿಧದ ನಿದ್ದೆಯ ಸಮಯದಲ್ಲಿ, ಪ್ರತ್ಯಕ್ಷದಲ್ಲಿ ಯಾವುದೇ ಅಪಾಯಗಳಿಲ್ಲದಿದ್ದರೂ ಅಪಾಯವನ್ನು ಗುರುತಿಸುವ ಮೆದುಳಿನ ಭಾಗವು ಕಾರ್ಯನಿರತವಾಗುತ್ತದೆ ಮತ್ತು ಇದರಿಂದ ತನ್ನ ಸುತ್ತಮುತ್ತಲೂ ಭಯಾನಕ ವಾತಾವರಣವು ನಿರ್ಮಾಣವಾದಂತೆ ಆ ವ್ಯಕ್ತಿಗೆ ಭಾಸವಾಗುತ್ತದೆ.
೪. ನಿದ್ರಾವಸ್ಥೆ ಮತ್ತು ಜಾಗೃತಾವಸ್ಥೆಯ ಸಂವೇದನೆಗಳನ್ನು ಗ್ರಹಿಸುವ ಪ್ರಕ್ರಿಯೆಯಲ್ಲಿ ತಾತ್ಕಾಲಿಕ ಅಡಚಣೆಗಳುಂಟಾಗಿ ಶರೀರದ ಚಲನವಲನ ಮಾಡಲು ಆಗುವುದಿಲ್ಲ.

ಆಧುನಿಕ ವಿಜ್ಞಾನಕ್ಕನುಸಾರ ‘ಸ್ಲೀಪ್ ಪ್ಯಾರಾಲಿಸಿಸ್’ನ ಕಾರಣಗಳು

೧. ಜೀವನದಲ್ಲಿ ತುಂಬಾ ತೊಂದರೆಗಳಿರುವುದು ಮತ್ತು ಅದರಿಂದ ಮನಸ್ಸಿನ ಮೇಲೆ ಒತ್ತಡ ಬರುವುದು.
೨. ಬಹಳಷ್ಟು ದಿನಗಳ ವರೆಗೆ ನಿದ್ರೆಯು ಬಾರದಿರುವುದು.
೩. ಲೈಂಗಿಕ ಶೋಷಣೆಗಳಂತಹ ಆಘಾತಗಳಾಗಿ ದೀರ್ಘಕಾಲದವರೆಗೆ ನಿದ್ರೆಯು ಬಾರದಿರುವುದು.
೪. ಅನುವಂಶಿಯತೆ

ಆಧುನಿಕ ವಿಜ್ಞಾನಕ್ಕನುಸಾರ ‘ಸ್ಲೀಪ್ ಪ್ಯಾರಾಲಿಸಿಸ್’ನ ಮೇಲಿನ ಪರಿಹಾರೋಪಾಯ

ಆಧುನಿಕ ವಿಜ್ಞಾನಕ್ಕೆ ‘ಸ್ಲೀಪ್ ಪ್ಯಾರಾಲಿಸಿಸ್’ನ ಮೂಲ ಕಾರಣ ಅಥವಾ ಅದರ ಬಗ್ಗೆ ಸವಿಸ್ತಾರ ಮಾಹಿತಿಯು ಇಲ್ಲದಿರುವುದರಿಂದ ಅದರ ಮೇಲಿನ ಪರಿಹಾರಗಳು ಸಹ ಕೇವಲ ಪ್ರಯೋಗಗಳಿಂದ ಪ್ರಾಪ್ತವಾಗಿವೆ.

ಕೆಲವೊಂದು ವೈಜ್ಞಾನಿಕರ ಅಭಿಪ್ರಾಯದಂತೆ ಒತ್ತಡವನ್ನು ನಿವಾರಿಸುವ ಔಷಧಿಗಳನ್ನು ಉಪಯೋಗಿಸಿ (Anti depressants) ‘ಸ್ಲೀಪ್ ಪ್ಯಾರಾಲಿಸಿಸ್’ನ ಮೇಲೆ ನಿಯಂತ್ರಣವನ್ನು ಪಡೆಯಬಹುದು. ಇದರ ಉಪಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಹತಾಶಗೊಂಡ ವ್ಯಕ್ತಿಗಳ ಮೇಲೆ ಮಾಡಬಹುದು.

ಕೆಲವು ವೈಜ್ಞಾನಿಕರ ಅಭಿಪ್ರಾಯಗಳು ಭಿನ್ನವಾಗಿದ್ದು ಮುಂದಿನ ಕಾರಣಗಳಿಗಾಗಿ ಅವರು ಇಂತಹ ಔಷಧಿಗಳ ಉಪಯೋಗವನ್ನು ನಿಷೇಧಿಸುತ್ತಾರೆ. ಅವರ ಅಭಿಪ್ರಾಯದಂತೆ -
೧. ಈ ವಿಕಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ‘ಸ್ಲೀಪ್ ಪ್ಯಾರಾಲಿಸಿಸ್’ನ ಸಮಯದಲ್ಲಿ ಜಾಗೃತಾವಸ್ಥೆಗೆ ಬರಲು ಅಥವಾ ಜೊತೆಗಿದ್ದವರನ್ನು ಎಬ್ಬಿಸಲು ತಾವೇ ಪರಿಣಾಮಕಾರಿಯಾದ ಪರಿಹಾರವನ್ನು ಕಂಡುಕೊಳ್ಳುವುದೇ ಈ ವಿಕಾರದ ಮೇಲಿನ ಪರಿಣಾಮಕಾರಿ ಪರಿಹಾರವಾಗಿದೆ.
೨. ಈ ವಿಕಾರದಿಂದ ನಾನೊಬ್ಬನೇ ತೊಂದರೆಗೀಡಾಗಿಲ್ಲ, ಅನೇಕ ಜನರೂ ಈ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ಅವರಿಗೆ ಮನದಟ್ಟಾಗುವುದು.

‘ಸ್ಲೀಪ್ ಪ್ಯಾರಾಲಿಸಿಸ್’ನ ಮೇಲೆ ಆಧ್ಯಾತ್ಮಿಕ ಸಂಶೋಧನೆಗಳು
  • ಮೇಲೆ ಉಲ್ಲೇಖಿಸಿದ ಕೆಲವು ಮಹತ್ವದ ವಿಷಯಗಳ ಆಧ್ಯಾತ್ಮಿಕ ವಿವರಣೆಯು ಮುಂದಿನಂತಿದೆ. ಇಲ್ಲಿ ನೀಡಲಾದ ಎಲ್ಲ ಮಾಹಿತಿಗಳು ಮತ್ತು ಕೋಷ್ಟಕಗಳು ಸನಾತನ ಸಂಸ್ಥೆಯ ಸೂಕ್ಷ್ಮ ವಿಷಯಗಳು ತಿಳಿಯುವ (ಸೂಕ್ಷ್ಮ ಜ್ಞಾನವಿರುವ) ಹಾಗೂ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರಿಂದ ಪ್ರಾಪ್ತವಾಗಿದೆ. ಈ ಜ್ಞಾನವು ಅವರಿಗೆ ವಿಶ್ವಬುದ್ಧಿಯಿಂದ ಲಭಿಸಿದೆ. (ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ಬಗ್ಗೆ ಸವಿಸ್ತಾರವಾಗಿ ಮುಂಬರುವ ದಿನಗಳಲ್ಲಿ ನೀಡಲಾಗುವುದು. ಆಂಗ್ಲದಲ್ಲಿ ಓದಲು ಈಗಾಗಲೇ ನೀಡಿರುವ ಸಂಕೇತಸ್ಥಳಕ್ಕೆ ಭೇಟಿ ಕೊಡಿ.)
ಅ. ‘ಸ್ಲೀಪ್ ಪ್ಯಾರಾಲಿಸಿಸ್’ನ್ನು ಅನುಭವಿಸುತ್ತಿರುವಾಗ ಬೇರೆ ಯಾರಾದರ ಅಸ್ತಿತ್ವದ ಅರಿವಾಗುವುದು: ‘ಸ್ಲೀಪ್ ಪ್ಯಾರಾಲಿಸಿಸ್’ನ ಮೂಲ ಆಧ್ಯಾತ್ಮಿಕ ಕಾರಣವು ಕೆಟ್ಟ ಶಕ್ತಿಗಳ ಹಲ್ಲೆಯಾಗಿದೆ. ಆದುದರಿಂದಲೇ ಇಂತಹ ಸಮಯದಲ್ಲಿ ಆ ವ್ಯಕ್ತಿಗಳಿಗೆ ಬೇರೆ ಯಾರದಾದರೂ ಅಸ್ತಿತ್ವದ ಅರಿವಾಗುತ್ತದೆ ಅಥವಾ ಕೆಟ್ಟ ಶಕ್ತಿಗಳು ಪ್ರತ್ಯಕ್ಷ ಕಾಣಿಸುತ್ತವೆ. ಸೂಕ್ಷ್ಮ-ಜ್ಞಾನವಿರುವ ಸನಾತನದ ಸಾಧಕರಿಗೆ ಕೆಟ್ಟ ಶಕ್ತಿಗಳು ಕಾಣಿಸುವುದರಿಂದ ‘ಸ್ಲೀಪ್ ಪ್ಯಾರಾಲಿಸಿಸ್’ವು ಭ್ರಮೆಯಾಗಿಲ್ಲ.

ಆ. ‘ಸ್ಲೀಪ್ ಪ್ಯಾರಾಲಿಸಿಸ್’ ವಿಕಾರದ ಪ್ರಮಾಣ: ಸಾಧಕರಿಗೆ ಮತ್ತು ಸಾಧಕರಲ್ಲದವರಿಗೆ ‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರವು ಸಂಭವಿಸುವುದರ ಪ್ರಮಾಣವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

‘ಸ್ಲೀಪ್ ಪ್ಯಾರಾಲಿಸಿಸ್’ನ್ನು ಅನುಭವಿಸುವುದರ ಪ್ರಮಾಣ
                                                   ಜೀವನದಲ್ಲಿ               ಜೀವನದಲ್ಲಿ
                                                   ಒಮ್ಮೆ ಮಾತ್ರ            ಬಹಳಷ್ಟು ಬಾರಿ
ಸಾಧಕರಾಗಿರುವವರು (ಶೇಕಡಾ)         ೩                            ೦.೦೦೧
ಸಾಧಕರಲ್ಲದವರು (ಶೇಕಡಾ)              ೨೦                          ೫

ಟಿಪ್ಪಣಿ: ೧. ಸಾಧನೆಯ ಐದು ಮೂಲಭೂತ ತತ್ತ್ವಗಳಿಗನುಸಾರ ನಿಯಮಿತವಾಗಿ ಸಾಧನೆ ಮಾಡುವವನು, ಆಧ್ಯಾತ್ಮಿಕ ಉನ್ನತಿಯಾಗಬೇಕೆಂಬ ತೀವ್ರ ಇಚ್ಛೆಯನ್ನು ಇಟ್ಟುಕೊಂಡಿರುವವನು ಮತ್ತು ಆ ನಿಟ್ಟಿನಲ್ಲಿ ಸತತವಾಗಿ ಹಾಗೂ ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ಸಾಧಕನಾಗಿರುತ್ತಾನೆ. (ಆಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಸನಾತನ ಸಂಸ್ಥೆಯ ಸತ್ಸಂಗಗಳಲ್ಲಿ ಹೇಳಿಕೊಡಲಾಗುತ್ತದೆ ಅಥವಾ ಗ್ರಂಥಗಳಲ್ಲಿ ವಿವರಿಸಿರಲಾಗಿರುತ್ತದೆ.)

೨. ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವವರಿಗೆ ಈಶ್ವರನ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ. ‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರದ ಸಂದರ್ಭದಲ್ಲಿ ಸಂಭವಿಸುವ ಒಟ್ಟು ಆಘಾತಗಳಲ್ಲಿ ಶೇ. 10 ರಷ್ಟು ಆಘಾತಗಳು ಜಾಗೃತಾವಸ್ಥೆಯಲ್ಲಿ ಮತ್ತು ಉಳಿದ ಶೇ. 90 ರಷ್ಟು ಆಘಾತಗಳು ನಿದ್ರಾವಸ್ಥೆಯಲ್ಲಿ ಸಂಭವಿಸುತ್ತವೆ. ‘ಸ್ಲೀಪ್ ಪ್ಯಾರಾಲಿಸಿಸ್’ ಈ ಆಘಾತವು ಜೀವನದಲ್ಲಿ ಒಮ್ಮೆ ಅಥವಾ ಬಹಳಷ್ಟು ಬಾರಿ ಬಂದರೂ ಶೇ. 30 ರಷ್ಟು ವ್ಯಕ್ತಿಗಳಿಗೆ ಮಾತ್ರ ಇದರ ಅರಿವಾಗುತ್ತದೆ. ಇನ್ನುಳಿದ ಶೇ. 70 ರಷ್ಟು ವ್ಯಕ್ತಿಗಳಿಗೆ ಇದರ ಅರಿವಾಗುವುದಿಲ್ಲ. ಏಕೆಂದರೆ ಈ ಆಘಾತಗಳು ಗಾಢ ನಿದ್ರೆಯಲ್ಲಿ ಸಂಭವಿಸುತ್ತವೆ ಅಥವಾ ಅವು ಕ್ಷಣಿಕವಾಗಿರುವುದರಿಂದ ವ್ಯಕ್ತಿಗೆ ಅವುಗಳ ಅರಿವಾಗುವುದಿಲ್ಲ.

ಇ. ‘ಸ್ಲೀಪ್ ಪ್ಯಾರಾಲಿಸಿಸ್’ ಇದು ಹೆಚ್ಚಾಗಿ ತರುಣರ ಅನುಭವಕ್ಕೆ ಬರುವ ಕಾರಣಗಳು : ‘ಸ್ಲೀಪ್ ಪ್ಯಾರಾಲಿಸಿಸ್’ ಇದು ಹೆಚ್ಚಾಗಿ ತರುಣರ ಅನುಭವಕ್ಕೆ ಬರುತ್ತದೆ; ಏಕೆಂದರೆ ಅವರ ಕೊಡು-ಕೊಳ್ಳುವ ಲೆಕ್ಕವು ತುಂಬಾ ಬಾಕಿ ಇರುತ್ತದೆ. ಅದೇ ರೀತಿ ತರುಣರಲ್ಲಿ ಭೌತಿಕ ವಿಷಯಗಳ ಬಗ್ಗೆ ಇಚ್ಛೆ/ವಾಸನೆಗಳು ಹೆಚ್ಚು ಪ್ರಮಾಣದಲ್ಲಿರುವುದರಿಂದ ಕೆಟ್ಟ ಶಕ್ತಿಗಳು ಅವರ ಮಾಧ್ಯಮದಿಂದ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳುತ್ತವೆ.
ಇಚ್ಛೆ/ವಾಸನೆಗಳನ್ನು ಪೂರ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಕೆಟ್ಟ ಶಕ್ತಿಗಳಿಗೆ ಸಣ್ಣ ಮಕ್ಕಳು ಅಥವಾ ವೃದ್ಧ ವ್ಯಕ್ತಿಗಳು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ವೃದ್ಧ ವ್ಯಕ್ತಿಗಳ ಕೊಡು-ಕೊಳ್ಳುವ ಲೆಕ್ಕವು ಮುಗಿಯುತ್ತಾ ಬಂದಿರುತ್ತದೆ ಮತ್ತು ಅವರು ಜೀವನದಲ್ಲಿ ದುಃಖಗಳನ್ನು ಎದುರಿಸಿರುವುದರಿಂದ ಪರಿಪಕ್ವವಾಗಿರುತ್ತಾರೆ.

ಈ. ‘ಸ್ಲೀಪ್ ಪ್ಯಾರಾಲಿಸಿಸ್’ ಇದು ಮೇಲ್ಮುಖವಾಗಿ (ಅಂಗಾತ) ಮಲಗಿದ ಸ್ಥಿತಿಯಲ್ಲಿ ಹೆಚ್ಚು ಅನುಭವಕ್ಕೆ ಬರುವುದು: ‘ಸ್ಲೀಪ್ ಪ್ಯಾರಾಲಿಸಿಸ್’ ಇದು ಹೆಚ್ಚಾಗಿ ಮೇಲ್ಮುಖವಾಗಿ ಮಲಗಿದ ವ್ಯಕ್ತಿಗಳ ಅನು ಭವಕ್ಕೆ ಬರುತ್ತದೆ. ಯಾವಾಗ ಒಬ್ಬ ವ್ಯಕ್ತಿಯು ತನ್ನ ಶರೀರಿದ ಎಡಭಾಗದ ಮೇಲೆ (ಎಡ ಮಗ್ಗಲು) ಅಥವಾ ತನ್ನ ಶರೀರಿದ ಬಲಭಾಗದ ಮೇಲೆ (ಬಲ ಮಗ್ಗಲು) ಮಲಗುತ್ತಾನೆಯೋ ಆಗ ಅವನು ಮಲಗಿರುವ ಶರೀರದ ಭಾಗದ ಕುಂಡಲಿನಿ ನಾಡಿಯು (ಚಂದ್ರನಾಡಿ ಅಥವಾ ಸೂರ್ಯನಾಡಿ) ಕಾರ್ಯನಿರತವಾಗಿ ಅದರಲ್ಲಿನ ಶಕ್ತಿಯ ಪ್ರವಾಹವು ಪ್ರಾರಂಭವಾಗುತ್ತದೆ. ಯಾವಾಗ ಅವನು ಮೇಲ್ಮುಖವಾಗಿ ಮಲಗುತ್ತಾನೆಯೋ ಆಗ ಅವನ ಕುಂಡಲಿನಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕಾರ್ಯನಿರತವಾಗಿರುತ್ತದೆ. ಶಕ್ತಿಯ ಪ್ರವಾಹವು ಕಡಿಮೆ ಇರುವುದರಿಂದ ಕೆಟ್ಟ ಶಕ್ತಿಗಳಿಗೆ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಸುಲಭವಾಗುತ್ತದೆ. ಇದರಿಂದಾಗಿ ‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರದ ಒಟ್ಟು ಅನುಭವಗಳಲ್ಲಿ ಶೇ. 70 ರಷ್ಟು ಅನುಭವಗಳು ಮೇಲ್ಮುಖವಾಗಿ ಮಲಗಿದಾಗ ಬರುತ್ತವೆ.

ಉ. ಸಾಮಾನ್ಯವಾಗಿ ನಿದ್ರಾವಸ್ಥೆಗೆ ಹೋಗುವಾಗ ಅಥವಾ ನಿದ್ರಾವಸ್ಥೆಯಿಂದ ಹೊರಗೆ ಬರುವಾಗ ಈ ಅನುಭವವು ಬಾರದಿರುವುದು : ‘ಸ್ಲೀಪ್ ಪ್ಯಾರಾಲಿಸಿಸ್’ ಇದರ ಒಟ್ಟು ಅನುಭವಗಳಲ್ಲಿ ಶೇ. 10 ರಷ್ಟು ಅನುಭವಗಳು ನಿದ್ರಾವಸ್ಥೆಗೆ ಹೋಗುವಾಗ ಅಥವಾ ಅದರಿಂದ ಹೊರಗೆ ಬರುವಾಗ ಬರುತ್ತವೆ. ಉಳಿದ ಶೇ. 90 ರಷ್ಟು ಅನುಭವಗಳು ವ್ಯಕ್ತಿಯು ಗಾಢ ನಿದ್ರೆಯಲ್ಲಿರುವಾಗ ಬರುತ್ತವೆ. ಗಾಢ ನಿದ್ರಾವಸ್ಥೆಯಲ್ಲಿರುವ ವ್ಯಕ್ತಿಗೆ ಯಾವುದರ ಬಗ್ಗೆಯೂ ಅರಿವು ಇರುವುದಿಲ್ಲ ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅರಿವು ಇರುತ್ತದೆ. ‘ಸ್ಲೀಪ್ ಪ್ಯಾರಾಲಿಸಿಸ್’ ಇದರ ತೊಂದರೆ ಇರುವ ಕೆಲವು ವ್ಯಕ್ತಿಗಳ ಅಧ್ಯಯನ ಮಾಡಿದಾಗ, ಅವರಲ್ಲಿ ಬಹಳಷ್ಟು ಜನರು ಗಾಢ ನಿದ್ರಾವಸ್ಥೆಯಲ್ಲಿರುವಾಗಲೇ ಅವರಿಗೆ ಈ ವಿಕಾರದ ತೊಂದರೆಯಾಗುತ್ತದೆ ಎಂಬುದು ಕಂಡು ಬಂದಿತು. ಅವರನ್ನು ಅಲುಗಾಡಿಸಿ ಎಬ್ಬಿಸಲು ಪ್ರಯತ್ನಿಸಿದಾಗ ಅವರಿಗೆ ಏಳಲು ಆಗಲಿಲ್ಲ. ಕೆಟ್ಟಶಕ್ತಿಗಳು ಹೆಚ್ಚಾಗಿ ಗಾಢನಿದ್ರೆಯಲ್ಲಿರುವ ವ್ಯಕ್ತಿಗಳ ಮೇಲೆಯೇ ಹಲ್ಲೆಯನ್ನು ಮಾಡುತ್ತವೆ; ಏಕೆಂದರೆ ಆ ಸಮಯದಲ್ಲಿ ಕೆಟ್ಟ ಶಕ್ತಿಗಳಿಗೆ ಆ ವ್ಯಕ್ತಿಯ ಮೇಲೆ ಹಲ್ಲೆಯನ್ನು ಮಾಡಲು (ಉದಾ: ಲೈಂಗಿಕ ವಾಸನೆಗಳನ್ನು ಪೂರ್ಣ ಮಾಡಲು ಇತ್ಯಾದಿ) ಕಡಿಮೆ ಶಕ್ತಿಯು ಬೇಕಾಗುತ್ತದೆ.

ಊ. ಕಾಲಾವಧಿ : ‘ಸ್ಲೀಪ್ ಪ್ಯಾರಾಲಿಸಿಸ್’ ಇದರ ಅನುಭವವು ಸಾಮಾನ್ಯವಾಗಿ 3 ನಿಮಿಷದಿಂದ 3 ಗಂಟೆಗಳ ಕಾಲ ಇರುತ್ತದೆ.

‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರದ ವಿಧಗಳು
‘ಸ್ಲೀಪ್ ಪ್ಯಾರಾಲಿಸಿಸ್’ನ ವರ್ಗೀಕರಣವನ್ನು 3 ವಿಧಗಳಲ್ಲಿ ಮಾಡಬಹುದು.

ಅ. ವ್ಯಕ್ತಿಯನ್ನು ಕಟ್ಟಿಹಾಕುವುದು


ಅ೧. ಈ ಪ್ರಕಾರದಲ್ಲಿ ಉಚ್ಚ ಸ್ತರದಲ್ಲಿನ ಕೆಟ್ಟ ಶಕ್ತಿಗಳು (ನಾಲ್ಕನೇ ಪಾತಾಳದ ಮಾಂತ್ರಿಕರು) ತಮ್ಮ ಸಿದ್ಧಿಯ ಬಲವನ್ನು ಉಪಯೋಗಿಸಿ ಕಪ್ಪುಶಕ್ತಿಯ ದಾರದಿಂದ (ಚಿತ್ರ 1 ರಲ್ಲಿ ತೋರಿಸಿದಂತೆ) ವ್ಯಕ್ತಿಗಳನ್ನು ಕಟ್ಟಿಹಾಕುತ್ತವೆ. ಆ ವ್ಯಕ್ತಿಗೂ ಸಹ ಆ ಸಮಯದಲ್ಲಿ ಯಾರಾದರೂ ತನ್ನನ್ನು ಕಟ್ಟಿಹಾಕಿದ್ದಾರೆ ಎಂದು ತಿಳಿಯುತ್ತದೆ. ಇಂತಹ ಸಮಯದಲ್ಲಿ ಆ ವ್ಯಕ್ತಿಗೆ ಮಾತನಾಡಲು ಮತ್ತು ಚಲನವಲನ ಮಾಡಲು ಬರುವುದಿಲ್ಲ.

ಅ೨. ವ್ಯಕ್ತಿಗೆ ತನ್ನನ್ನು ಯಾರಾದರೂ ಒತ್ತಿ ಹಿಡಿದಿದ್ದಾರೆ ಎಂದು ಅನಿಸುತ್ತಿರುತ್ತದೆ, ಆದರೆ ಅವರಿಗೆ ಒತ್ತಡದ ಅರಿವಾಗುವುದಿಲ್ಲ.

ಟಿಪ್ಪಣಿ - ತಾಮಸಿಕ (ಅಸುರೀ) ಚಿತ್ರಗಳ ಸುತ್ತಲೂ ನಾಮಜಪದ ಚೌಕಟ್ಟನ್ನು, ಅಂದರೆ ಮಂಡಲವನ್ನು ಹಾಕುವುದರ ಕಾರಣ
‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ತಾಮಸಿಕ (ಅಸುರೀ) ಚಿತ್ರಗಳಿಂದ (ಉದಾ. ಚಿತ್ರದಿಂದ) ಕೆಟ್ಟ ಸ್ಪಂದನಗಳು ನಿರ್ಮಾಣವಾಗುತ್ತವೆ. ಹಾಗೆಯೇ ಈ ಕೆಟ್ಟ ಸ್ಪಂದನಗಳ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳೂ ಆಕರ್ಷಿತವಾಗುತ್ತವೆ. ಇಂತಹ ಚಿತ್ರಗಳಿಂದ ತೊಂದರೆದಾಯಕ ಕಪ್ಪು ಶಕ್ತಿಯು ಪ್ರಕ್ಷೇಪಿಸುವ ಪ್ರಮಾಣವು ಹೆಚ್ಚಿಗಿರುತ್ತದೆ. ಈ ಕಪ್ಪು ಶಕ್ತಿಯಿಂದ ವಾಚಕರಿಗೆ ತೊಂದರೆಯಾಗಬಾರದೆಂದು ಇಂತಹ ಚಿತ್ರಗಳ ಸುತ್ತಲೂ ಸೂಕ್ಷ್ಮದಿಂದ ಆವಶ್ಯಕ ನಾಮಜಪವನ್ನು ಹುಡುಕಿ ಆ ನಾಮಜಪದ ಮಂಡಲವನ್ನು ಹಾಕುವುದು ಆವಶ್ಯಕವಾಗಿದೆ.

ಅ೩. ‘ಸ್ಲೀಪ್ ಪ್ಯಾರಾಲಿಸಿಸ್’ನ ಒಂದು ಪ್ರತ್ಯಕ್ಷ ಅನುಭವ
ನಾನು ೧೦ ವರ್ಷಗಳ ಹಿಂದೆ ಒಂದು ಸಲ ‘ಸ್ಲೀಪ್ ಪ್ಯಾರಾಲಿಸಿಸ್’ ಅನ್ನು (ಶರೀರದ ಚಲನವಲನೆಯಾಗದಿರುವುದು) ಅನುಭವಿಸಿದ್ದೇನೆ. ಇದು ನನ್ನ ಜೀವನದಲ್ಲಿನ ಮರೆಯಲಾಗದ ಅನುಭವವಾಗಿದೆ ಮತ್ತು ಅದು ನನಗೆ ಇಂದಿಗೂ ಚೆನ್ನಾಗಿ ನೆನಪಿದೆ. ಆಗ ನನಗೆ ೨೫ ವರ್ಷಗಳಾಗಿದ್ದವು. ಒಂದು ದಿನ ರಾತ್ರಿ ನನಗೆ ನಿದ್ದೆಯಿಂದ ಎಚ್ಚರವಾಯಿತು; ಆಗ ನನಗೆ ಶರೀರದ ಯಾವುದೇ ಭಾಗವನ್ನು ಅಲುಗಾಡಿಸಲು ಆಗುತ್ತಿರಲಿಲ್ಲ. ಮೊದಲು ನಾನು ‘ಯಾವುದೋ ಒಂದು ಕೆಟ್ಟ ಕನಸನ್ನು ನೋಡುತ್ತಿದ್ದೇನೆ ಎಂದೆನಿಸಿತು’, ಆದರೆ ನಂತರ ನನ್ನ ಕಣ್ಣುಗಳು ತೆರೆದೇ ಇದ್ದದ್ದು ಗಮನಕ್ಕೆ ಬಂದಿತು. ನಾನು ಮತ್ತೊಮ್ಮೆ ನನ್ನ ಎಲ್ಲ ಶಕ್ತಿಯನ್ನು ಉಪಯೋಗಿಸಿ ಕೈಕಾಲುಗಳನ್ನು ಅಲುಗಾಡಿಸಲು ಪ್ರಯತ್ನಿಸಿದೆ, ಆದರೆ ನನ್ನಿಂದ ಅದು ಸಾಧ್ಯವಾಗಲಿಲ್ಲ. ನನಗೆ ಏನು ಆಗುತ್ತಿದೆ ಎಂಬುದು ತಿಳಿಯದೇ ಇದ್ದುದರಿಂದ ಭಯವಾಗತೊಡಗಿತು. ನಾನು ಸುಮಾರು 30 ನಿಮಿಷಗಳ ಕಾಲ ಇದೇ ಸ್ಥಿತಿಯಲ್ಲಿ ಇದ್ದು ಕೇವಲ ಕೋಣೆಯ ಛಾವಣಿಯನ್ನು ಮತ್ತು ಕೋಣೆಯನ್ನು ನೋಡುತ್ತಾ ಇದ್ದೆ. ಆಗ ನನಗೆ ಮಾತನಾಡಲೂ ಆಗುತ್ತಿರಲಿಲ್ಲ, ಆದುದರಿಂದ ನನಗೆ ಯಾರನ್ನೂ ಸಹಾಯಕ್ಕಾಗಿ ಕರೆಯಲೂ ಆಗಲಿಲ್ಲ. ಕೊನೆಗೆ ನಾನು ಮಲಗಲು ಪ್ರಯತ್ನ ಮಾಡಿದೆ. ನಂತರ ನನಗೆ ನಿದ್ದೆ ಬಂದಿತು. ಬೆಳಗ್ಗೆ ಎದ್ದ ಕೂಡಲೇ ಮೊದಲು ನನಗೆ, ‘ಈಗಲಾದರೂ ಶರೀರವನ್ನು ಅಲುಗಾಡಿಸಲು ಬರುವುದೇ?’ ಎಂಬ ವಿಚಾರ ಬಂದಿತು. ಸುದೈವದಿಂದ ನನಗೆ ಶರೀರದ ಚಲನವಲನವನ್ನು ಮಾಡಲು ಸಾಧ್ಯವಾಯಿತು. ೧೦ ವರ್ಷಗಳ ಹಿಂದೆ ನಡೆದ ಈ ಘಟನೆಯು ಇಂದಿಗೂ ನನಗೆ ಸ್ಪಷ್ಟವಾಗಿ ನೆನಪಿದೆ. ಇತ್ತೀಚೆಗೆ ನಾನು ‘ಸ್ಪಿರಿಚ್ಯುಯಲ್ ರಿಸರ್ಚ ಫೌಂಡೇಷನ್’ನ ಸಂಪರ್ಕಕ್ಕೆ ಬಂದೆನು. ಆಗ ನನಗೆ ಆ ಘಟನೆಯ ಕಾರಣಗಳು ತಿಳಿದವು ಮತ್ತು ಅದರ ಮೇಲಿನ ಆಧ್ಯಾತ್ಮಿಕ ಉಪಚಾರವೂ ತಿಳಿಯಿತು. ಇನ್ನು ಮುಂದೆ ನನ್ನ ಜೀವನದಲ್ಲಿ ಇಂತಹ ಪ್ರಸಂಗಗಳು ಬಂದರೆ ಅಥವಾ ಇನ್ನು ಯಾರಿಗಾದರೂ ಇಂತಹ ಪ್ರಸಂಗಗಳು ಬಂದರೆ ಅದಕ್ಕೆ ಅವಶ್ಯಕವಿರುವ ಆಧ್ಯಾತ್ಮಿಕ ಉಪಚಾರಗಳನ್ನು ನಾನು ಮಾಡಬಹುದು ಎಂಬ ಆತ್ಮವಿಶ್ವಾಸ ನನಗಿದೆ. - ಶ್ರೀ.ಶಾನ್ ಕ್ಲಾರ್ಕ, ಆಸ್ಟ್ರೇಲಿಯಾ.

ಆ.    ಮನುಷ್ಯನ ಮನಸ್ಸು ಮತ್ತು ಬುದ್ಧಿಯ ಮೇಲೆ ಹಿಡಿತವನ್ನು ಸಾಧಿಸುವುದು


ಆ೧. ಈ ಪ್ರಕಾರದಲ್ಲಿ ಕೆಟ್ಟ ಶಕ್ತಿಗಳು ವ್ಯಕ್ತಿಯ ಶರೀರ, ಮನಸ್ಸು, ಮತ್ತು ಬುದ್ಧಿ ಎಲ್ಲವನ್ನು ನಿಷ್ಕ್ರಿಯ ಗೊಳಿಸುತ್ತವೆ.
ಆ೨. ಉಚ್ಚಮಟ್ಟದ ಕೆಟ್ಟ ಶಕ್ತಿಗಳು (ಉದಾ. ನಾಲ್ಕನೇ ಪಾತಾಳದ ಮಾಂತ್ರಿಕರು) ಸಿದ್ಧಿಯನ್ನು ಉಪಯೋಗಿಸಿ ವ್ಯಕ್ತಿಯ ಸುತ್ತಲೂ ಕಪ್ಪು ಶಕ್ತಿಯ ಬಲೆಗಳನ್ನು ನಿರ್ಮಾಣ ಮಾಡುತ್ತವೆ.
ಆ೩. ಕೆಟ್ಟ ಶಕ್ತಿಗಳು ಪಾತಾಳದಲ್ಲಿ ಯಜ್ಞಗಳನ್ನು ಮಾಡಿ ಕಪ್ಪು ಶಕ್ತಿಯ ಬಲೆಗಳನ್ನು ತಯಾರಿಸುತ್ತವೆ. (ಚಿತ್ರ 2 ನೋಡಿರಿ) ಈ ಬಲೆಯನ್ನು ವ್ಯಕ್ತಿಯ ಸುತ್ತಲೂ ಹರಡಿದ ನಂತರ ಅವನ ಮನಸ್ಸು ಮತ್ತು ಬುದ್ಧಿ ಮರಗಟ್ಟುತ್ತವೆ ಮತ್ತು ಆ ವ್ಯಕ್ತಿಗೆ ಮಾತನಾಡಲು ಮತ್ತು ಚಲನವಲನ ಮಾಡಲು ಬರುವುದಿಲ್ಲ.

ಇ. ವ್ಯಕ್ತಿಯ ಶರೀರವನ್ನು ಒತ್ತಿ ಹಿಡಿಯುವುದು


ಈ ಮೂರನೆಯ ಪ್ರಕಾರವು ಹೆಚ್ಚಾಗಿ ಮೇಲ್ಮುಖವಾಗಿ ಮಲಗಿರುವ ವ್ಯಕ್ತಿಗಳಿಗೆ ಆಗುತ್ತದೆ. ಇದರಲ್ಲಿ ಕೆಟ್ಟ ಶಕ್ತಿಗಳು ವ್ಯಕ್ತಿಯ ಶರೀರವನ್ನು ಕೆಳಗಿನ ದಿಶೆಯಲ್ಲಿ ಒತ್ತಿಹಿಡಿಯುತ್ತವೆ. ಇದರಿಂದ ವ್ಯಕ್ತಿಗೆ ಚಲನವಲನ ಮಾಡಲು ಬರುವುದಿಲ್ಲ.

ಇ೧. ಕೆಟ್ಟ ಶಕ್ತಿಗಳು ವ್ಯಕ್ತಿಯ ಶರೀರವನ್ನು ಹೇಗೆ ಒತ್ತಿ ಹಿಡಿಯುತ್ತವೆ?

ಕೆಟ್ಟ ಶಕ್ತಿಗಳು ವಾಯುರೂಪದಲ್ಲಿರುತ್ತವೆ ಮತ್ತು ಮನುಷ್ಯನ ಶರೀರವು ಪೃಥ್ವಿ ಮತ್ತು ಆಪ ತತ್ತ್ವಗಳಿಂದ ನಿರ್ಮಾಣವಾಗಿದೆ. ಪಂಚತತ್ತ್ವಗಳಲ್ಲಿ ವಾಯುತತ್ತ್ವವು ಪೃಥ್ವಿ ಮತ್ತು ಆಪ ತತ್ತ್ವಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಕಪ್ಪು ಶಕ್ತಿಯು ಕೆಟ್ಟ ಶಕ್ತಿಗಳ ಕಾರ್ಯ ಮಾಡುವ ಒಂದು ಮಾಧ್ಯಮ ಮತ್ತು ಒಂದು ಪ್ರಮುಖ ಅಸ್ತ್ರವಾಗಿದೆ. ಆದುದರಿಂದ ಕೆಟ್ಟ ಶಕ್ತಿಗಳು ಮನುಷ್ಯರಿಗೆ ಯಾವುದೇ ರೀತಿಯ ತೊಂದರೆಗಳನ್ನು ಕೊಟ್ಟರೂ ಉದಾ: ವ್ಯಕ್ತಿಯನ್ನು ಒತ್ತಿ ಹಿಡಿಯುವುದಿರಬಹುದು ಅಥವಾ ವ್ಯಕ್ತಿಯನ್ನು ಕಟ್ಟಿಹಾಕುವುದಿರಬಹುದು ಅಥವಾ ಬಲೆಯನ್ನು ಹರಡುವುದಿರಬಹುದು ಮೂಲತಃ ಅದು ಕಪ್ಪು ಶಕ್ತಿಯೇ ಆಗಿರುತ್ತದೆ. ಈ ಕಪ್ಪು ಶಕ್ತಿಯು ವಿಷಕಾರಿ ವಾಯುವಿನಂತೆ ವ್ಯಕ್ತಿಯ ಸಂಪೂರ್ಣ ಶರೀರದ ಮೇಲೆ ಪರಿಣಾಮವನ್ನು ಬೀರುತ್ತದೆ. (ಚಿತ್ರ 3 ನೋಡಿರಿ) ಯಾವುದಾದರೊಬ್ಬ ವ್ಯಕ್ತಿಗೆ ಎಷ್ಟು ಪ್ರಮಾಣದಲ್ಲಿ ತೊಂದರೆಯನ್ನು ಕೊಡಬೇಕು ಎಂಬುದರ ಮೇಲೆ ಕೆಟ್ಟ ಶಕ್ತಿಯು ಆ ವ್ಯಕ್ತಿಯ ಯಾವ ಅವಯವದ ಮೇಲೆ ಪರಿಣಾಮವನ್ನು ಮಾಡಬೇಕು ಮತ್ತು ಯಾವ ರೀತಿ ತೊಂದರೆಯನ್ನು ಕೊಡಬೇಕು ಎಂಬುದನ್ನು ನಿರ್ಧರಿಸುತ್ತವೆ.

‘ಸ್ಲೀಪ್ ಪ್ಯಾರಾಲಿಸಿಸ್’ ಈ ವಿಕಾರವು ನಮಗೆ ಆಗಬಾರದೆಂದು ನಾವು ಏನು ಮಾಡಬೇಕು?
  • ಎಲ್ಲ ಪ್ರತಿಬಂಧಕ ಉಪಾಯಗಳ ತಿರುಳು ಒಂದೇ ಆಗಿದೆ. ಅದೇನೆಂದರೆ ನಮ್ಮ ಸಾತ್ತ್ವಿಕತೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ಈಶ್ವರನಿಂದ ಸುರಕ್ಷಾ ಕವಚವನ್ನು ಪಡೆದುಕೊಳ್ಳುವುದು. ಇದಕ್ಕಾಗಿ ಮುಂದಿನ ವಿಷಯಗಳನ್ನು ಮಾಡಬೇಕು.

ಅ. ನಾಮಜಪವನ್ನು ಮಾಡಬೇಕು. ನಾಮಜಪವನ್ನು ಮಾಡುವುದರಿಂದ ನಮ್ಮ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.
ಆ. ಆಧ್ಯಾತ್ಮಿಕ ಉನ್ನತಿಗಾಗಿ ಇತರ ಸಾಧನೆಯನ್ನು ಮಾಡಬೇಕು. ಉದಾ. ಸೇವೆ, ತ್ಯಾಗ ಇತ್ಯಾದಿ.
ಇ. ಪೂರ್ವಜರ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಮಾಡಬೇಕು.
ಈ. ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ರಕ್ಷಣೆಯಾಗಲು ಆಗಾಗ ಭಾವಪೂರ್ಣ ಪ್ರಾರ್ಥನೆ ಮಾಡಬೇಕು.
ಉ. ಯಜ್ಞದಲ್ಲಿನ ವಿಭೂತಿಯನ್ನು (ಅಥವಾ ಸನಾತನದ ಊದುಬತ್ತಿಗಳ ವಿಭೂತಿಯನ್ನು) ಶರೀರಕ್ಕೆ ಹಚ್ಚಿಕೊಳ್ಳುವುದು ಮತ್ತು ತೀರ್ಥವನ್ನು ಪ್ರಾಶನ ಮಾಡಬೇಕು.
ಊ. ವಾಸ್ತುಗಳ ಶುದ್ಧಿಯನ್ನು ಮಾಡಲು ಮನೆಗಳಲ್ಲಿ ಧೂಪ ಹಾಕಬೇಕು ಮತ್ತು ಸಾತ್ತ್ವಿಕ ಚಂದನ, ಚಮೇಲಿ, ಕೇದಗೆ ಈ ಊದುಬತ್ತಿಗಳನ್ನು ಹಚ್ಚಬೇಕು. (ಈ ಊದುಬತ್ತಿಗಳು ಸನಾತನ ಸಂಸ್ಥೆಯ ಮಾರಾಟ ಕೇಂದ್ರಗಳಲ್ಲಿ ಉಪಲಬ್ಧವಿವೆ.)
ಎ. ಉಪ್ಪು ನೀರಿನಲ್ಲಿ ಕಾಲಿಟ್ಟು ಪ್ರತಿದಿನ ಒಂದೆರಡು ಸಲ (೧೫ ನಿಮಿಷಗಳ ಕಾಲ) ನಾಮಜಪ ಮಾಡಬೇಕು. (ಈ ಉಪಚಾರದ ಬಗ್ಗೆ ತಿಳಿದುಕೊಳ್ಳಲು ನೋಡಿ - http://on.fb.me/X5now6)

ತೊಂದರೆಗೊಳಗಾದ ವ್ಯಕ್ತಿಗೆ ಇತರರು ಹೇಗೆ ಸಹಾಯ ಮಾಡಬೇಕು?
  • ಎಲ್ಲ ಆಧ್ಯಾತ್ಮಿಕ ಉಪಚಾರಗಳ ತತ್ತ್ವವು ಒಂದೇ ಆಗಿದೆ, ಅದೇನೆಂದರೆ ವ್ಯಕ್ತಿಯ ಸತ್ತ್ವಗುಣವನ್ನು ಹೆಚ್ಚಿಸುವುದು ಮತ್ತು ತಮೋಗುಣವನ್ನು ಕಡಿಮೆ ಮಾಡುವುದು. ಇದಕ್ಕಾಗಿ ನಾವು ಮುಂದಿನ ಉಪಾಯಗಳನ್ನು ಮಾಡಬಹುದು.
ಅ. ಮೊದಲು ನಮ್ಮ ರಕ್ಷಣೆಗಾಗಿ ಪ್ರಾರ್ಥನೆ ಮಾಡಬೇಕು.
ಆ. ಆಮೇಲೆ ಕೆಟ್ಟ ಶಕ್ತಿಯ ತೊಂದರೆಗೊಳಗಾದ ವ್ಯಕ್ತಿಯ ಹತ್ತಿರ ಧೂಪವನ್ನು ಹಾಕಬೇಕು ಅಥವಾ ಊದುಬತ್ತಿಗಳನ್ನು (ವಿಶೇಷವಾಗಿ ಚಂದನ, ಕೇದಗೆ ಮತ್ತು ಚಮೇಲಿ) ಹಚ್ಚಿಡಬೇಕು.
ಇ. ತೊಂದರೆಗೊಳಗಾದ ವ್ಯಕ್ತಿಗೆ ವಿಭೂತಿಯನ್ನು ಹಚ್ಚಬೇಕು
ಈ. ಆ ವ್ಯಕ್ತಿಯ ಮೇಲೆ ತೀರ್ಥವನ್ನು ಸಿಂಪಡಿಸಬೇಕು
ಉ. ತೊಂದರೆಯಿರುವ ವ್ಯಕ್ತಿಯ ಹತ್ತಿರ ದೇವತೆಗಳ ಚಿತ್ರಗಳನ್ನು ಇಡಬೇಕು
ಊ. ನಾಮಜಪದ ಧ್ವನಿಸುರುಳಿಗಳನ್ನು ಹಾಕಬೇಕು

ತೊಂದರೆಗೊಳಗಾದ ವ್ಯಕ್ತಿಯನ್ನು ಅಲುಗಾಡಿಸಬೇಕು. ತೊಂದರೆಗೊಳಗಾದ ವ್ಯಕ್ತಿಯನ್ನು ಅಲುಗಾಡಿಸಿದರೆ ಆ ವ್ಯಕ್ತಿಗೆ ‘ತಾನು ಯಾವ ಸ್ಥಿತಿಯಲ್ಲಿದ್ದೇನೆ,’ ಎಂಬುದರ ಅರಿವಾಗುತ್ತದೆ ಮತ್ತು ಅವನು ಆ ಸ್ಥಿತಿಯಿಂದ ಹೊರಗೆ ಬರಲು ಪ್ರಯತ್ನಿಸುತ್ತಾನೆ. ಯಾವಾಗ ವ್ಯಕ್ತಿಯು ನಿಶ್ಚಲನಾಗುತ್ತಾನೆಯೋ ಆಗ ಅವನ ಆಧ್ಯಾತ್ಮಿಕ ಶಕ್ತಿಯ ಪ್ರವಾಹವು ನಿಲ್ಲುತ್ತದೆ. ವ್ಯಕ್ತಿಯನ್ನು ಅಲುಗಾಡಿಸಿ ಎಚ್ಚರಗೊಳಿಸಲು ಪ್ರಯತ್ನ ಮಾಡಿದರೆ ನಿಂತು ಹೋದ ಶಕ್ತಿಯ ಪ್ರವಾಹವು ಮತ್ತೆ ಪ್ರಾರಂಭವಾಗುತ್ತದೆ. ಶಕ್ತಿಯ ಪ್ರವಾಹವು ಪ್ರಾರಂಭವಾಗುವುದರಿಂದ ವ್ಯಕ್ತಿಯು ತನ್ನ ಶರೀರದ ಚಲನವಲನವನ್ನು ಮಾಡಬಹುದು.

ಆಂಗ್ಲ ಆವೃತ್ತಿ - Sleep paralysis - spiritual research on causes and remedies

3 comments:

  1. That Was really Informatics. Everything is Well Defined without any doubts in Mind. Thaks

    ReplyDelete
  2. sleep paralysis one big problem it is showing in Zee tv on the show Fear files and they shown How we come out from this you are told is it real please give me feedback about this.

    ReplyDelete
    Replies
    1. ನೀವು ಹೇಳಿದ್ದು ಅರ್ಥವಾಗಿಲ್ಲ. ಝೀ ಟಿವಿಯವರು ಏನು ಹೇಳಿದ್ದಾರೆ ಎಂದು ಸ್ವಲ್ಪ ವಿವರವಾಗಿ ಹೇಳಿ

      Delete

Note: only a member of this blog may post a comment.