ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?

ರಾತ್ರಿ ಸಮಯದಲ್ಲಿ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮನೆ ಗುಡಿಸುವಾಗ ಕಸಬರಿಕೆಯಿಂದ ಉಂಟಾಗುವ ಶಬ್ದಗಳ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಆಕರ್ಷಿತವಾಗುವುದರಿಂದ ಅವು ವಾಸ್ತುವನ್ನು ಪ್ರವೇಶಿಸುವ ಸಾಧ್ಯತೆಯು ಬಹಳಷ್ಟು ಇರುತ್ತದೆ. ಆದುದರಿಂದ ರಾತ್ರಿ ಸಮಯದಲ್ಲಿ ಕಸ ಗುಡಿಸಬಾರದು.

ಆದಷ್ಟು ಮಟ್ಟಿಗೆ ಜೀವನದಲ್ಲಿನ ಎಲ್ಲ ಕೃತಿಗಳನ್ನು ನಾಮಸಹಿತ ಮಾಡಬೇಕು. ಎಲ್ಲ ಕೃತಿಗಳನ್ನು ನಾಮಸಹಿತ ಮಾಡುವುದರಿಂದ ನಾಮಜಪದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನಾಮಧಾರಕನಿಗೆ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗುತ್ತದೆ.

ಕಸ ತೆಗೆಯುವಾಗ ಬಗ್ಗುವಾಗ ಆಗುವ ಪ್ರಕ್ರಿಯೆ

ಕಸ ಗುಡಿಸುವಾಗ ಬಗ್ಗುವುದರಿಂದ ನಾಭಿಚಕ್ರದ ಮೇಲೆ ಒತ್ತಡವು ಬಂದು ಪಂಚಪ್ರಾಣಗಳು ಜಾಗೃತ ಅವಸ್ಥೆಯಲ್ಲಿ ಉಳಿಯುತ್ತವೆ. (ಬಗ್ಗಿ ಕಸ ತೆಗೆಯುವಾಗ ವ್ಯಕ್ತಿಯ ದೇಹದಲ್ಲಿ ಶಕ್ತಿಯ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ. - ಸಂಕಲನಕಾರರು) ಮೊಣಕಾಲುಗಳನ್ನು ಮಡಚಿ ಕಸ ತೆಗೆಯಬಾರದು. ಏಕೆಂದರೆ ಈ ಮುದ್ರೆಯಿಂದಾಗಿ ಮೊಣಕಾಲುಗಳ ಟೊಳ್ಳಿನಲ್ಲಿ ಸಂಗ್ರಹವಾದ ಅಥವಾ ಘನೀಕೃತವಾಗಿರುವ ರಜ-ತಮಾತ್ಮಕ ವಾಯುವಿಗೆ ವೇಗ ಸಿಗುವ ಸಾಧ್ಯತೆಯಿರುತ್ತದೆ. ಆದುದರಿಂದ ಈ ಮುದ್ರೆಯಲ್ಲಿ ಕಸ ತೆಗೆದರೆ ಕಸ ತೆಗೆಯುವಾಗ ಪಾತಾಳದಿಂದ ವಾಯುಮಂಡಲದಲ್ಲಿ ಹರಡುವ ತೊಂದರೆದಾಯಕ ಸ್ಪಂದನಗಳು ದೇಹದ ಕಡೆಗೆ ಆಕರ್ಷಿತವಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ದೇಹದಲ್ಲಿ ರಜ-ತಮಗಳ ಸಂವರ್ಧನೆಯಾಗುವಂತಹ ಇಂತಹ ಕೃತಿಗಳನ್ನು ಮಾಡಬಾರದು.

ಪೊರಕೆಯನ್ನು ನೆಲಕ್ಕೆ ಬಡಿಯಬಾರದು ಅಥವಾ ಅದನ್ನು ನೆಲದ ಮೇಲೆ ಜೋರಾಗಿ ತಿಕ್ಕಿ ಕಸ ತೆಗೆಯಬಾರದು

ಶಾಸ್ತ್ರ: ಕಸ ತೆಗೆಯುವಾಗ ಪೊರಕೆಯನ್ನು ನೆಲಕ್ಕೆ ಬಡಿಯುವುದು ಅಥವಾ ನೆಲದ ಮೇಲೆ ಜೋರಾಗಿ ತಿಕ್ಕಿ ಕಸ ತೆಗೆಯುವುದು ಮುಂತಾದ ತೊಂದರೆದಾಯಕ ನಾದಗಳನ್ನು ನಿರ್ಮಾಣ ಮಾಡುವ ಕೃತಿಗಳಿಂದ ಪಾತಾಳದಲ್ಲಿನ ಹಾಗೂ ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳು ಕಾರ್ಯನಿರತವಾಗುತ್ತವೆ ಮತ್ತು ಕಾಲಕ್ರಮೇಣ ಈ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿತವಾಗಲು ಪ್ರಾರಂಭವಾಗುವುದರಿಂದ ವಾಸ್ತುವಿನಲ್ಲಿರುವ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಾಗುತ್ತದೆ. ಆದುದರಿಂದ ಇಂತಹ ಕೃತಿಗಳನ್ನು ಮಾಡಬಾರದು. ಮೇಲಿನ ಎಲ್ಲ ಕೃತಿಗಳು ತಮೋಗುಣಿ ವೃತ್ತಿಯ ನಿದರ್ಶಕವಾಗಿವೆ.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು

9 comments:

  1. Jai Hindu Dharma... Dhanyawadagalu. ''Dharmo Rakshati Rakshitaha''

    ReplyDelete
  2. i think we will come out of kali prabhava, very soon. everyone should study this

    ReplyDelete
  3. ಇದನ್ನು ಸಂಪೂರ್ಣ ನಂಬಲು ಸಾಧ್ಯವಿಲ್ಲ , ಹಾಗಂತ ಶಾಸ್ತ್ರವನ್ನು ಪ್ರಶ್ನಿಸುವಷ್ಟು ಜ್ಞಾನಿಯು ಅಲ್ಲ , ಸಂದೇಹ ಅಷ್ಟೆ . ಜನರು ಮಾತನಾಡುವಾಗ ಆಗುವ ಶಬ್ದಕ್ಕಿಂತ ಕಸಗುಡಿಸುವಾಗ ಆಗುವ ಶಬ್ದ ಕಮ್ಮಿ ಆಗಿರುತ್ತದೆ .

    ReplyDelete
    Replies
    1. ನಾಗರಾಜರವರೇ, ನಿಮ್ಮ ಸಂದೇಹಕ್ಕೆ ಉತ್ತರಿಸುತ್ತಿದ್ದೇವೆ...
      ನೀವು ಹೇಳಿದಂತೆ ಜನರು ಮಾತನಾಡುವಾಗ ಆಗುವ ಶಬ್ದಕ್ಕಿಂತ ಕಸಗುಡಿಸುವಾಗ ಆಗುವ ಶಬ್ದ ಕಡಿಮೆ ಇದೆ ಎನ್ನುವುದು ಸತ್ಯ. ಆದರೆ ಕಸಗಳು ರಜ-ತಮಗಳನ್ನು (ಕನಿಷ್ಠ ಗುಣ) ಪ್ರತಿನಿಧಿಸುತ್ತವೆ. ಅಂದರೆ ಅವುಗಳ ಸ್ಪಂದನಗಳು ಜನರು ಮಾತನಾಡುವುದರಿಂದ ಹೊರಡುವ ಸ್ಪಂದನಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ಪ್ರಭಾವಶಾಲಿಯಾಗಿರುತ್ತವೆ. ಹಾಗಾಗಿ ಅದರ ಪರಿಣಾಮ ಹೆಚ್ಚಿರುತ್ತದೆ. ಹೆಚ್ಚು ಪ್ರಕಾಶ ಬೀರುವ ಟಾಚ್Fಗಳಿಗಿಂತ ಲೇಸರ್ ಕಿರಣಗಳು, ಅಲ್ಟ್ರಾ ವಯಲೆಟ್ ಕಿರಣಗಳು ಪ್ರಕಾಶ ಬೀರುವುದಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ ಮತ್ತು ಪರಿಣಾಮಕಾರಿಯಾಗಿರುತ್ತವೆ.
      ಇನ್ನೊಂದು ಬದಿಯಿಂದ ನೋಡಿದರೆ ಈಗಿನ ಕಾಲದಲ್ಲಿ ಕಸ ಗುಡಿಸುವ ಕೃತಿಯ ಪ್ರಭಾವಕ್ಕಿಂತ ಮನೆಯಲ್ಲಿ ರಾತ್ರಿ ಹಾಕಿರುವ ಟಿ.ವಿ.ಯ ಭಯಂಕರ ಶಬ್ದಗಳು, ಕರ್ಕಶ ಹಾಡುಗಳು ಇನ್ನೂ ಹೆಚ್ಚು ಪ್ರಭಾವ ಬೀರುತ್ತವೆ.
      ಇನ್ನೊಂದು ಕೋನದಿಂದ ನೋಡಿದರೆ, ಜನರು ಮಾತನಾಡುವ ಪ್ರಭಾವ ಕಡಿಮೆಯಿದ್ದರೂ, ಅವರು ಮಾತನಾಡುವ ವಿಷಯದ ಮೇಲೆ ಕೆಟ್ಟ ಪರಿಣಾಮ ಅವಲಂಬಿಸಿರುತ್ತದೆ. ದೇವರ ವಿಷಯ, ಪರೋಪಕಾರದ ವಿಷಯಗಳು ಒಳ್ಳೆಯ ಪರಿಣಾಮಗಳನ್ನು ಬೀರಿದರೆ, ಮತ್ಸರ ದ್ವೇಷ ಅಸೂಯೆ ಅಶ್ಲೀಲ ವಿಷಯಗಳಿಂದ ಕೆಟ್ಟ ಪ್ರಭಾವ ಬೀರುತ್ತವೆ. ಇದು ಕಸ ಗುಡಿಸುವ ಕೃತಿಗಿಂತ ಹೆಚ್ಚಿನ ಅನಿಷ್ಟ ಪರಿಣಾಮ ಬೀರುತ್ತದೆ.
      ಇಷ್ಟು ವಿಷಯಗಳಿಂದ ನಿಮ್ಮ ಸಂದೇಹ ನಿವಾರಣೆಯಾಗಿರಬಹುದೆಂದು ಆಶಿಸುತ್ತೇನೆ. ಇತರ ವಾಚಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.

      Delete

Note: only a member of this blog may post a comment.