ವ್ರತಗಳಲ್ಲಿ ಏಕಾದಶಿಯಂತಹ ಶ್ರೇಷ್ಠ ವ್ರತ ಯಾವುದು ಇಲ್ಲ. ಇಂತಹ ಏಕಾದಶಿಗಳಲ್ಲಿ ಒಂದಾದ ಪುತ್ರದಾ ಏಕಾದಶಿಯ ಮಹಿಮೆಯ ಬಗ್ಗೆ ಧರ್ಮರಾಜನು ಶ್ರೀ ಕೃಷ್ಣನನ್ನು ಪ್ರಶ್ನೆ ಮಾಡುತ್ತಾನೆ. ಶುಕ್ಲ ಪಕ್ಷದ ಏಕಾದಶಿ ದಿನದಂದು ಬರುವುದೇ "ಪುತ್ರದಾ" ಏಕಾದಶಿ. ಈ ಏಕಾದಶಿ ಮಾಡುವವರು ಸರ್ವಸಂಪತ್ತನ್ನು, ಕೀರ್ತಿಯನ್ನು, ಸತ್ಸಂತಾನವನ್ನು ಹೊಂದುತ್ತಾರೆ.
ಆಗ ಶ್ರೀ ಕೃಷ್ಣನು, ಧರ್ಮರಾಜನನ್ನು ಕುರಿತು ಹೀಗೆ ಹೇಳುತ್ತಾನೆ. ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿ ಅನ್ನುತ್ತಾರೆ. ಈ ವಿಷಯವಾಗಿ ಒಂದು ಪುರಾತನ ಇತಿಹಾಸವನ್ನು ಹೇಳುತ್ತೇನೆ ಕೇಳು.
ಹಿಂದೆ ಭದ್ರಾವತಿ ಎಂಬ ಪಟ್ಟಣದಲ್ಲಿ "ಸುಕೇತಮಾನ್" ಎಂಬ ರಾಜನಿದ್ದನು. ಅವನ ಹೆಂಡತಿ ಶೈಭ್ಯಾ ಎಂಬುವಳು ಇದ್ದಳು. ಅವರಿಗೆ ಸಂತಾನ ಯೋಗ ಇಲ್ಲದವರಾಗಿ ತುಂಬಾ ದುಃಖಿತರಾಗಿ ಕಾಲಕಳೆಯುತ್ತಾ ಇದ್ದರು. ಅವರು ಎಲ್ಲ ವಿಧವಾದ ವ್ರತ ನಿಯಮಗಳನ್ನು ಮಾಡಿದ್ದರು. ಆದರೂ ಪುತ್ರಸಂತಾನ ಆಗಿರಲಿಲ್ಲ. ಆದ್ದರಿಂದ ಅವನು ತುಂಬ ದುಃಖವನ್ನು ಮನದಲ್ಲಿಟ್ಟುಕೊಂಡು ಅವನು, ಅವನ ಹೆಂಡತಿ ಸರ್ವರಾಜ್ಯವನ್ನು ತ್ಯಾಜ್ಯಮಾಡಿ ಕಾಡಿಗೆ ಹೊರಟರು. ಆ ಕಾಡಿನಲ್ಲಿ, ರಾಜನಿಗೆ ಒಂದು ಆಶ್ರಮ ಕಂಡಿತು. ಆ ಆಶ್ರಮವನ್ನು ನೋಡಿದ ಕೂಡಲೆ ರಾಜನು ಆಶ್ರಮದತ್ತ ಹೊರಟನು.
ಅಲ್ಲಿ ೧೧ ಜನ ಋಷಿಗಳನ್ನು ಕಂಡರು. ಆಗ ಆರಾಜನು ಆ ಋಷಿಗಳಿಗೆಲ್ಲ ನಮಸ್ಕಾರ ಸಲ್ಲಿಸಿ ನೀವೆಲ್ಲ ಯಾರು ಈ ಕಾಡಿಗೆ ಯಾತಕ್ಕಾಗಿ ಬಂದಿರಿ ಎಂದು ವಿಚಾರಿಸಿದಾಗ ಆ ಋಷಿಗಳು ನಾವೆಲ್ಲ ವಿಶ್ವೇ ದೇವತೆಗಳು. ಪುಷ್ಯಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಭೂಲೋಕದಲ್ಲಿ ಆಚರಿಸುವುದರಿಂದ ಒಳ್ಳೆಯ ಸಂತಾನವನ್ನು ಆ ಭಗವಂತ ದಯಪಾಲಿಸುತ್ತಾನೆ ಅಂತ ಆಚರಿಸುವ ಉದ್ದೇಶವನ್ನು ರಾಜನಿಗೆ ತಿಳಿಸಿದರು.
ಆಗ ಆ ರಾಜನು ನಾನು ಸಹ ಪುತ್ರದಾ ಏಕಾದಶಿಯ ಆಚರಣೆ ನಿಮ್ಮ ಸನ್ನಿಧಾನದಲ್ಲಿ ಮಾಡುತ್ತೇನೆ ಎಂದು ಆ ಋಷಿ, ಮುನಿಗಳನ್ನು ಪ್ರಾರ್ಥಿಸುತ್ತಾನೆ. ವಿಶ್ವೇ ದೇವತೆಗಳು ಆಗಲಿ ಎಂದು ಹೇಳಿದಾಗ. ರಾಜನು ಅವರ ಸನ್ನಿಧಾನದಲ್ಲಿ ಏಕಾದಶಿಯನ್ನು ಆಚರಣೆ ಮಾಡಿ ಋಷಿಮುನಿಗಳ ಅನುಗ್ರಹ ಪಡೆದುಕೊಂಡು ರಾಜ್ಯಕ್ಕೆ ಹೊರಡುತ್ತಾನೆ. ಪುತ್ರದಾ ಏಕಾದಶಿಯ ಫಲದಿಂದ ರಾಜನು ಅತಿ ಶೀಘ್ರದಲ್ಲಿ ಉತ್ತಮವಾದ "ಮಗನನ್ನು" ಪಡೆದನು. ಆ ಮಗನು ಮುಂದೆ ತಾಯಿ, ತಂದೆಯಲ್ಲಿ ಭಗವಂತನಲ್ಲಿ ಗೌರವ, ಭಕ್ತಿಯಿಂದ ಕೂಡಿಕೊಂಡು ರಾಜ್ಯವನ್ನು, ಸಮರ್ಥವಾಗಿ ನಿರ್ವಹಿಸುತ್ತಿದ್ದನು.
ಈ ರೀತಿಯಾಗಿ ಶ್ರೀ ಕೃಷ್ಣನನ್ನು ಧರ್ಮರಾಜನಿಗೆ ಭವಿಷ್ಯೋತ್ತರ ಪುರಾಣದಲ್ಲಿ "ಪುತ್ರದಾ" ಏಕಾದಶಿಯ ಮಹಾತ್ಮೆಯನ್ನು ತಿಳಿಸಿದನು.
Summary in English: Significance of Putradaa Ekadashi
There is no parallel to observance of Ekadashi Vrata of all Vratas. The Ekadasi of Shuklapaskha of the month of Pushya is known as ‘Putradaa Ekadashi’. People who observe this Vrata are bestowed with prosperity, fame and worthy children.
Lord Krishna explains to Yudhishtra the significance of this Vrata as under:
Long ago there lived a king named Sukethaman along with his wife, queen Shybya in the city of Bhadravati. They were very much worried and sad about them having no children despite performing all types of rituals and observing spiritual practices. Finally, after giving up all hopes of having a son, they gave up the kingdom and left for the forest. There they came across a hermitage and went towards the same.
They saw 11 hermits and asked them, who they were and why they were in the forest. The hermits replied that they are ‘Vishve Devatas’ who have come down to earth to observe the Shukla Paksha Ekadashi of the holy month of Pushya which is also known as ‘Putradaa Ekadashi’ since the Almighty had indicated to them that the people who observe the ‘Putradaa Ekadashi’ on Earth are blessed with worthy children.
Upon hearing this, the King requested ‘Vishve Devatas’ that he too may please be allowed to observe the same under their guidance and shelter for which they gladly agreed. The King after having observed ‘Putradaa Ekadashi’ under their august guidance and having obtained their blessings returned back to the kingdom along with his queen and was blessed with a son soon.
The boy grew up into a very pious and able young man who respected his parents, all elders and the Lord and ruled the kingdom in a very befitting way.
This episode was narrated by Lord Krishna to Yudhishtra in ‘Bhavishyothara Purana’
Source - Sri Raghavendra Matha, Mantralaya
ಸಂಬಂಧಿತ ವಿಷಯಗಳು
ಏಕಾದಶಿ ವ್ರತ
ವ್ರತಗಳು
ವ್ರತಗಳ ವಿಧಗಳು
ಕಾರ್ತಿಕ ಏಕಾದಶಿ
ಸಹೋದರ ಬಿದಿಗೆ (ಯಮದ್ವಿತೀಯಾ)
ಬಲಿಪಾಡ್ಯ (ದೀಪಾವಳಿ ಪಾಡ್ಯ)
ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ
ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)
ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ದೀಪಾವಳಿ
ಗೋವತ್ಸ ದ್ವಾದಶಿ
ಸಹೋದರ ಬಿದಿಗೆ (ಯಮದ್ವಿತೀಯಾ)
ಬಲಿಪಾಡ್ಯ (ದೀಪಾವಳಿ ಪಾಡ್ಯ)
ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ
ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)
ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ದೀಪಾವಳಿ
ಗೋವತ್ಸ ದ್ವಾದಶಿ
No comments:
Post a Comment
Note: only a member of this blog may post a comment.