ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಹಾಕಬೇಕು ಮತ್ತು ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು
ಕೃತಿ
ಅ. ಸ್ನಾನದ ಪ್ರಾರಂಭದಲ್ಲಿ ಇನ್ನೊಂದು ಚಿಕ್ಕ ಬಾಲ್ದಿಯಲ್ಲಿ ಎರಡು-ಮೂರು ತಂಬಿಗೆ ಬಿಸಿ ಅಥವಾ ತಣ್ಣೀರನ್ನು ತೆಗೆದುಕೊಂಡು ಆ ನೀರಿನಲ್ಲಿ ೨ ಚಹಾ ಚಮಚ (ಟೇಬಲ್ ಸ್ಪೂನ್) ಕಲ್ಲುಪ್ಪನ್ನು ಹಾಕಬೇಕು.
ಆ. ಉಪಾಸ್ಯ ದೇವತೆಗೆ ‘ನನ್ನ ಶರೀರದಲ್ಲಿನ ತೊಂದರೆದಾಯಕ ಶಕ್ತಿಯು ಉಪ್ಪುನೀರಿನಲ್ಲಿ ಸೆಳೆಯಲ್ಪಟ್ಟು ನಾಶವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು.
ಇ. ನಾಮಜಪ ಮಾಡುತ್ತಾ ಆ ಕಲ್ಲುಪ್ಪಿನ ನೀರನ್ನು ತಂಬಿಗೆಯಿಂದ ಮೈಮೇಲೆ ಸುರಿಯಬೇಕು.
ಈ. ಅನಂತರ ನಿತ್ಯದಂತೆ ಸ್ನಾನ ಮಾಡಬೇಕು.
೧. ಸ್ನಾನದ ನೀರಿನಲ್ಲಿ ಉಪ್ಪು ಹಾಕುವುದರ ಶಾಸ್ತ್ರ:
ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ: ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಸಂಪೂರ್ಣ ಶರೀರದಲ್ಲಿರುವ ದೇಹಶುದ್ಧಿ ಮಾಡುವ ೧೦೬ ಚಕ್ರಗಳ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ನಾಶವಾಗಿ ದೇಹವನ್ನು ಶುದ್ಧಮಾಡುವ ಚಕ್ರಗಳು ಶೇ. ೨-೩ ರಷ್ಟು ಪ್ರಮಾಣದಲ್ಲಿ ಜಾಗೃತವಾಗಿ ತ್ರಾಸದಾಯಕ ಶಕ್ತಿಯು ಶರೀರದಿಂದ ಹೊರಬೀಳುತ್ತದೆ. ಹಾಗೆಯೇ ಉಪ್ಪಿನ ನೀರಿಗೆ ಆಪತತ್ತ್ವದಿಂದ ಶೇ.೧೦೦ರಷ್ಟು ಸಹಾಯವು ಸಿಗುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ. - ಶ್ರೀಗುರುತತ್ತ್ವ (ಶ್ರೀ.ನಿಷಾದ ದೇಶಮುಖರ ಮಾಧ್ಯಮದಿಂದ, ೧೬.೪.೨೦೦೬, ರಾತ್ರಿ ೯.೩೩)
ಅನುಭೂತಿ - ಕೀರ್ತನೆಯಲ್ಲಿ (ಹರಿಕಥೆ) ಧರ್ಮದ ವಿಷಯದಲ್ಲಿ ಮಾತನಾಡಿದುದರಿಂದ ಆಧ್ಯಾತ್ಮಿಕ ತೊಂದರೆಯಾಗುವುದು ಮತ್ತು ಕಲ್ಲುಪ್ಪಿನ ನೀರಿನಿಂದ ಉಪಾಯ ಮಾಡಿದ ನಂತರ ಒಳ್ಳೆಯದೆನಿಸುವುದು : ನಾನು ಕೀರ್ತನೆಗಾಗಿ ಎದ್ದು ನಿಂತಾಗ ನನ್ನ ಶರೀರ ಜಡವಾಗುತ್ತಿತ್ತು ಮತ್ತು ನಿದ್ದೆ ಬರುತ್ತಿತ್ತು. ಬಹಳಷ್ಟು ಸಲ ನನಗೆ ಏನೂ ಹೊಳೆಯುತ್ತಿರಲಿಲ್ಲ. ನಿದ್ದೆಯನ್ನು ದೂರಗೊಳಿಸಲು ನಾನು ಸ್ವಲ್ಪ ಹೊತ್ತು ನಾಮಜಪ ಮಾಡಿದಾಗ ಸ್ವಲ್ಪ ಸಮಯದ ನಂತರ ನನಗೆ ಒಳ್ಳೆಯದೆನಿಸುತ್ತಿತ್ತು. ನಾನು ಕೀರ್ತನೆಗಳಿಂದ ಧರ್ಮದ ವಿಷಯದಲ್ಲಿ ಪ್ರಬೋಧನೆ ಮಾಡುತ್ತೇನೆಂದು ನನಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ‘ತೊಂದರೆದಾಯಕ ಶಕ್ತಿ ಎಂದರೇನು’ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಬಹಳ ತೊಂದರೆಯಾಗುತ್ತಿತ್ತು. ಸನಾತನದ ಆಶ್ರಮಕ್ಕೆ ಬಂದ ನಂತರ ನನಗೆ ಕೆಟ್ಟ ಶಕ್ತಿಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯು ದೊರಕಿತು. ಈಗ ನಾನು ಕಲ್ಲುಪ್ಪಿನ ನೀರಿನ ಉಪಾಯ ಮಾಡುತ್ತೇನೆ. ಅದರಿಂದ ನನಗೆ ಒಳ್ಳೆಯದೆನಿಸುತ್ತದೆ. - ಹ.ಭ.ಪ.ಆಂಧಳೆ ಮಹಾರಾಜರು, ಸಂಭಾಜಿನಗರ.
ಕಲ್ಲುಪ್ಪು ರಜ-ತಮಯುಕ್ತವಾಗಿದೆ. ಹೀಗಿರುವಾಗ ಉಪಾಯಕ್ಕಾಗಿ ನಾವು ಅದನ್ನೇಕೆ ಉಪಯೋಗಿಸುತ್ತೇವೆ?
ಉತ್ತರ : ಕೇವಲ ಕಲ್ಲುಪ್ಪಿನಿಂದ ಉಪಾಯವಾಗುವುದಿಲ್ಲ, ಕಲ್ಲುಪ್ಪು ನೀರಿನ ಸಂಪರ್ಕಕ್ಕೆ ಬರುವುದರಿಂದ ಉಪಾಯವಾಗುತ್ತದೆ. ಕಲ್ಲುಪ್ಪಿನಲ್ಲಿ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಂಡು ಅವುಗಳನ್ನು ಘನೀಕೃತಗೊಳಿಸುವ ಕ್ಷಮತೆಯಿರುತ್ತದೆ. ಕಲ್ಲುಪ್ಪಿನ ಸುತ್ತಲಿರುವ ಆಪತತ್ತ್ವಾತ್ಮಕ ಸೂಕ್ಷ್ಮ ಕೋಶವು ಬಾಹ್ಯ ವಾತಾವರಣದಲ್ಲಿನ ರಜ-ತಮವನ್ನು ಸೆಳೆದುಕೊಳ್ಳುವಲ್ಲಿ ಅಗ್ರೇಸರವಾಗಿದೆ. ಉಪ್ಪುನ್ನು ನೀರಿನಲ್ಲಿ ಹಾಕುವುದರಿಂದ ಉಪ್ಪಿನ ಸಂಪರ್ಕದಿಂದ ದೇಹದಿಂದ ಸೆಳೆದುಕೊಂಡ ರಜ-ತಮಾತ್ಮಕ ಲಹರಿಗಳು ಕೂಡಲೇ ನೀರಿನಲ್ಲಿ ವಿಸರ್ಜನೆಯಾಗುತ್ತವೆ ಮತ್ತು ರಜ-ತಮಾತ್ಮಕ ಲಹರಿಗಳ ಕಾರ್ಯ ಮಾಡುವ ತೀವ್ರತೆಯು ಕೂಡಲೇ ಕಡಿಮೆಯಾಗುತ್ತದೆ. ನೀರಿನ ಸಂಪರ್ಕದಿಂದ ಉಪ್ಪಿನಲ್ಲಿರುವ ರಜ-ತಮವು ಕೂಡಲೇ ನೀರಿನಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಈ ಪ್ರಕ್ರಿಯೆಯಿಂದ ದೇಹದ ಜಡತ್ವವೂ ಕೂಡಲೇ ಕಡಿಮೆಯಾಗುತ್ತದೆ.
ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; ಆದುದರಿಂದ ಉಪ್ಪಿನ ಗುಣಧರ್ಮವನ್ನು ಉಪಯೋಗಿಸಿಕೊಂಡು ದೇಹದಿಂದ ಸೆಳೆದುಕೊಂಡ ರಜ-ತಮವನ್ನು ಕೂಡಲೇ ನೀರು ತನ್ನಲ್ಲಿ ವಿಸರ್ಜಿಸಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ನೀರು ಆಧ್ಯಾತ್ಮಿಕ ಉಪಾಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿ ಶೇ.೩೦ರಷ್ಟು ಪ್ರಮಾಣದಲ್ಲಿ ಕಲ್ಲುಪ್ಪು ರಜ-ತಮವನ್ನು ಸೆಳೆದುಕೊಳ್ಳುವ ಕಾರ್ಯವನ್ನು ಮಾಡುತ್ತದೆ ಮತ್ತು ಶೇ.೭೦ರಷ್ಟು ನೀರು ಈ ಸ್ಪಂದನಗಳನ್ನು ತನ್ನಲ್ಲಿ ವಿಸರ್ಜಿಸಿಕೊಳ್ಳುವ ಕಾರ್ಯವನ್ನು ಮಾಡಿ ವ್ಯಕ್ತಿಯನ್ನು ಪೃಥ್ವಿತತ್ತ್ವಜನ್ಯ ತ್ರಾಸದಾಯಕ ಜಡತ್ವದಿಂದ ಮುಕ್ತಗೊಳಿಸುತ್ತದೆ.
- ಓರ್ವ ವಿದ್ವಾಂಸರು (ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೧೨, ಬೆಳಗ್ಗೆ ೮.೩೨)
ಇದನ್ನೂ ಓದಿ - ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು
ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನ ಮಾಡುವುದರ ಮಹತ್ವ
ಶಾಸ್ತ್ರ: ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗಿ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗುತ್ತದೆ ಮತ್ತು ಇದರಿಂದ ದೇಹಕ್ಕೆ ದೇವತ್ವವು ಪ್ರಾಪ್ತವಾಗಿ ದಿನವಿಡೀ ಮಾಡುವ ಕೃತಿಗಳನ್ನು ಚೈತನ್ಯದ ಸ್ತರದಲ್ಲಿ ಮಾಡಲು ದೇಹವು ಸಕ್ಷಮವಾಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೦.೧೦.೨೦೦೭, ಮಧ್ಯಾಹ್ನ ೧.೨೩)
(ಆಧಾರ - ಸನಾತನ ಸಂಸ್ಥೆಯ ಗ್ರಂಥ 'ದಿನಚರಿಗೆ ಸಂಬಂಧಿತ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ')
ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ ಸ್ನಾನವನ್ನು ಮಾಡುವಾಗ ಹೇಳಬೇಕಾದ ಶ್ಲೋಕಗಳು
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
Dharma Granth
sari, adu daily maddbeka?
ReplyDeletehavadu ,dina madbeku .olleya result barbekandre
ReplyDeleteSir,
ReplyDeleteNavu daily snana maduvaga kalupu badalu puddi uppu haaki snana madabahuda athava maadidare yenadaru problem hagutha please thilisi daily kalupu hakuvudakintha puddi uppu hakidare hege.
ನಮಸ್ಕಾರ, ಪುಡಿ ಉಪ್ಪಿಗಿಂತ ಕಲ್ಲುಪ್ಪು ಹೆಚ್ಚು ಪರಿಣಾಮಕಾರಿ. ಅನಿವಾರ್ಯವಾಗಿ ಕಲ್ಲುಪ್ಪು ಸಿಗಲೇ ಇಲ್ಲ ಎಂದರೆ ಮಾತ್ರ ಪುಡಿ ಉಪ್ಪನ್ನು ಉಪಯೋಗಿಸಬಹುದು.
Deletesir,
ReplyDeletefrom lemon can we destroy drusti dosha.. or how to protect from drusti dosha
regards
mahesh
ನಮಸ್ಕಾರ, ಈ ಲಿಂಕ್‌ನಲ್ಲಿ ಸಂಕ್ಷಿಪ್ತವಾಗಿ ದೃಷ್ಟಿಯನ್ನು ಹೇಗೆ ತೆಗೆಯಬೇಕು ಎಂದು ಕೊಡಲಾಗಿದೆ. ದಯವಿಟ್ಟು ಓದಿ - http://dharmagranth.blogspot.in/2012/10/blog-post_1745.html
DeleteTo take a bath which time is best,evening or morning and what is dfrenc between
ReplyDeleteನಮಸ್ಕಾರ ಉಷಾ ಪವಾರ್ ಇವರಿಗೆ, ಆದಷ್ಟು ಬ್ರಾಹ್ಮೀಮುಹೂರ್ತದಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಿಲ್ಲದಿದ್ದರೆ ಸೂರ್ಯೋದಯದ ಒಳಗೆ ಸ್ನಾನ ಮಾಡಬೇಕು. ಇದೂ ಸಾಧ್ಯವಿಲ್ಲದಿದ್ದರೆ ಸೂರ್ಯೋದಯದ ನಂತರ ಆದಷ್ಟು ಬೇಗನೇ ಸ್ನಾನ ಮಾಡಬೇಕು. ಇದರ ನಂತರ ಮಾಡಿದರೆ ಕೇವಲ ದೇಹ ಸ್ವಚ್ಛ ಮಾಡಿದಂತಾಗುತ್ತದೆಯೇ ವಿನಃ ಆಧ್ಯಾತ್ಮಿಕವಾಗಿ (ಅಂದರೆ ಸೂಕ್ಷ್ಮದೇಹಕ್ಕೆ ಮತ್ತು ಸಾತ್ತ್ವಿಕತೆಯ) ಯಾವುದೇ ಲಾಭವಾಗುವುದಿಲ್ಲ.
DeleteSir can you give also solution for students to concentrate at book
ReplyDelete