ರಾತ್ರಿಯ ಸಮಯವು ರಜ-ತಮಾತ್ಮಕ ವಾಯುವಿಗೆ
ಪೂರಕವಾಗಿರುವುದರಿಂದ, ಅದು ಸೂಕ್ಷ್ಮ ರಜ-ತಮಾತ್ಮಕ ಚಲನವಲನಗಳೊಂದಿಗೆ ಮತ್ತು ಕೆಟ್ಟ
ಶಕ್ತಿಗಳ ಚಟುವಟಿಕೆಗಳೊಂದಿಗೆ ಸಂಬಂಧಿತವಾಗಿರುತ್ತದೆ. ಕನ್ನಡಿಯಲ್ಲಿ ಕಾಣಿಸುವ ದೇಹದ
ಪ್ರತಿಬಿಂಬವು ಅತಿ ಹೆಚ್ಚು ಪ್ರಮಾಣದಲ್ಲಿ ದೇಹದಿಂದ ಪ್ರಕ್ಷೇಪಿತವಾಗುವ ಜೀವದ
ಸೂಕ್ಷ್ಮಲಹರಿಗಳಿಗೆ ಸಂಬಂಧಿಸಿರುವುದರಿಂದ ಈ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ
ಶಕ್ತಿಶಾಲಿ ಕೆಟ್ಟ ಶಕ್ತಿಗಳು ಬೇಗನೆ ಹಲ್ಲೆ ಮಾಡಬಲ್ಲವು.
ಇದಕ್ಕೆ
ವಿರುದ್ಧವಾಗಿ ಬೆಳಗ್ಗಿನ ಸಮಯದಲ್ಲಿ ವಾಯುಮಂಡಲವು ಸಾತ್ತ್ವಿಕ ಲಹರಿಗಳಿಂದ
ತುಂಬಿರುವುದರಿಂದ ಕನ್ನಡಿಯಲ್ಲಿ ಕಾಣಿಸುವ ಪ್ರತಿಬಿಂಬದ ಮೇಲೆ ವಾಯುಮಂಡಲದಲ್ಲಿನ
ಸಾತ್ತ್ವಿಕ ಲಹರಿಗಳ ಸಹಾಯದಿಂದ ಆಧ್ಯಾತ್ಮಿಕ ಉಪಚಾರವಾಗಿ ಸ್ಥೂಲದೇಹಕ್ಕೆ ತನ್ನಿಂದತಾನೇ
ಹಗುರತನವು ಪ್ರಾಪ್ತವಾಗುತ್ತದೆ. ಇದರಿಂದ ಬೆಳಗ್ಗಿನ ಸಮಯದಲ್ಲಿ ಕನ್ನಡಿಯಲ್ಲಿ
ಪ್ರತಿಬಿಂಬವನ್ನು ನೋಡುವುದು ಲಾಭದಾಯಕವಾಗಿದ್ದು; ಅದೇ ಪ್ರತಿಬಿಂಬವನ್ನು ರಾತ್ರಿಯ
ರಜ-ತಮಾತ್ಮಕ ಚಲನವಲನಗಳಿಗೆ ಪೂರಕವಾಗಿರುವಂತಹ ಕಾಲದಲ್ಲಿ ನೋಡಿದರೆ ಅಪಾಯಕಾರಿಯಾಗುವ
ಸಾಧ್ಯತೆಯಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೫.೧೨.೨೦೦೭,
ರಾತ್ರಿ ೭.೫೦)
ಕನ್ನಡಿಯಲ್ಲಿ ಮೂಡಿದ ವ್ಯಕ್ತಿಯ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳು ಹಲ್ಲೆ ಮಾಡಿದರೆ ಅದರಿಂದ ವ್ಯಕ್ತಿಯ ಮೇಲೆ ಏನು ಪರಿಣಾಮವಾಗುತ್ತದೆ?
ಜೀವಕ್ಕೆ ಸಂಬಂಧಿಸಿದ ಪ್ರತಿಬಿಂಬದಲ್ಲಿನ ಲಹರಿಗಳು ಅತಿಹೆಚ್ಚು ಪ್ರಮಾಣದಲ್ಲಿ ಅವನ ಸೂಕ್ಷ್ಮದೇಹಕ್ಕೆ ಸಂಬಂಧಿಸಿರುವುದರಿಂದ ಕೆಟ್ಟ ಶಕ್ತಿಗಳ ಹಲ್ಲೆಗಳ ಹೆಚ್ಚಿನ ಪರಿಣಾಮವು ಆಧ್ಯಾತ್ಮಿಕ ಸ್ತರದಲ್ಲಿ ಆಗುತ್ತದೆ. ಈ ಹಲ್ಲೆಯಿಂದ ಜೀವಗಳ ಶರೀರ ಮತ್ತು ಮನಸ್ಸಿನ ಮೇಲೆ ಪರಿಣಾಮವಾಗುತ್ತದೆ. ಪ್ರಾಣಶಕ್ತಿ ಕಡಿಮೆಯಾಗುವುದು, ಆಯಾಸವಾಗುವುದು, ಅಸ್ವಸ್ಥವೆನಿಸುವುದು, ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರಗಳು ಬರುವುದು, ಕೆಟ್ಟ ಶಕ್ತಿಗಳು ದೇಹದಲ್ಲಿ ಸೇರಿಕೊಳ್ಳುವುದು, ಕೆಟ್ಟ ಶಕ್ತಿಗಳ ಪ್ರಭಾವದಿಂದಾಗಿ ಸ್ವಂತದ ಅಸ್ತಿತ್ವವು ಕಡಿಮೆಯಾಗುವುದು ಮುಂತಾದ ಆಧ್ಯಾತ್ಮಿಕ ತೊಂದರೆಗಳನ್ನು ಜೀವವು ಎದುರಿಸಬೇಕಾಗುತ್ತದೆ.
ಪ್ರತ್ಯಕ್ಷ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದಕ್ಕಿಂತ ವ್ಯಕ್ತಿಯ ಪ್ರತಿಬಿಂಬದ ಮಾಧ್ಯಮದಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದು ಕೆಟ್ಟ ಶಕ್ತಿಗಳಿಗೆ ಹೆಚ್ಚು ಲಾಭದಾಯಕವಾಗಿದೆಯೇ?
ವ್ಯಕ್ತಿಯ ಪ್ರತಿಬಿಂಬದ ಮಾಧ್ಯಮದಿಂದ ಕೆಟ್ಟ ಶಕ್ತಿಗಳಿಗೆ ಜೀವದ ಒಂದು ಸೂಕ್ಷ್ಮ ರೂಪವೇ ಪ್ರತ್ಯಕ್ಷ ದೃಶ್ಯರೂಪದಲ್ಲಿ ಸಿಗುತ್ತದೆ. ಸೂಕ್ಷ್ಮರೂಪದ ಮೇಲೆ ಹಲ್ಲೆಯನ್ನು ಮಾಡಿದರೆ ಹಲ್ಲೆಯ ಪರಿಣಾಮವು ಆ ಜೀವದ ಮೇಲೆ ದೀರ್ಘಕಾಲ ಉಳಿದುಕೊಳ್ಳುತ್ತದೆ ಮತ್ತು ಹಲ್ಲೆಯ ಪರಿಣಾಮವು ದೇಹದಲ್ಲಿ ತುಂಬಾ ಆಳವಾಗಿ ಆಗುವುದರಿಂದ ಅದನ್ನು ಉಪಯೋಗಿಸಿ ಕೆಟ್ಟ ಶಕ್ತಿಗಳಿಗೆ ಜೀವದ ಸೂಕ್ಷ್ಮಕೋಶಗಳಲ್ಲಿ ತ್ರಾಸದಾಯಕ ಶಕ್ತಿಯ ಸ್ಥಾನಗಳನ್ನು ಮಾಡಲು ಸುಲಭವಾಗುತ್ತದೆ. ಆದುದರಿಂದ ಸ್ಥೂಲದೇಹದ ಮೇಲೆ ಹಲ್ಲೆಯನ್ನು ಮಾಡುವುದಕ್ಕಿಂತ ವ್ಯಕ್ತಿಯ ಸೂಕ್ಷ್ಮರೂಪವನ್ನು ಉಪಯೋಗಿಸಿಕೊಂಡು, ಜೀವಕ್ಕೆ ದೀರ್ಘಕಾಲ ತೊಂದರೆ ನೀಡಲು ಮತ್ತು ಅದರ ದೇಹದಲ್ಲಿ ನುಗ್ಗಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)
ಸಂಬಂಧಿತ ವಿಷಯಗಳು
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
Every one must ready it.
ReplyDeleteನನ್ನ ಅಮ್ಮನ ಅಕ್ಕನ (ದೊಡ್ದಮ್ಮ) ಮಗಳು (ನನ್ನ ತ೦ಗಿ) ಎರಡು ದಿನದ ಮೊದಲು ಗ೦ಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.
ReplyDeleteಶಾಸ್ರದ ಪ್ರಕಾರ ಈಗ ನಮಗೆ ಯಾವುದೇ ದೈವ, ದೇವಸ್ಥಾನ ಗಳಿಗೆ ಹೋಗಬಾರದು (ಸುತಿಗದ ಕಾರಣ).
ಆದರೆ, ನಮ್ಮ ಊರಿನ ದೈವದ ನೇಮೋತ್ಸವ ಕೂಡ ಇದೇ ಸಮಯದಲ್ಲಿ ನಡೆಯುತ್ತಿರುವುದರಿ೦ದ ಅಲ್ಲಿ ಹೋಗಲು ಸಾಧ್ಯವಿಲ್ಲ.
ಆದರೆ, ನನ್ನ ಸ್ನೇಹಿತ "ಏನು ಪರವಾಗಿಲ್ಲ.. ಯಾವುದೇ ಗ್ರ೦ಥದಲ್ಲಿ ಬರೆದಿಲ್ಲ.. ಅಲ್ಲಿಗೆ ಹೋಗಬಹುದು ಅ೦ತ ಹೇಳಿದ" ಇದರ ಬಗ್ಗೆ ನಮ್ಮಿಬ್ಬರ ನಡುವೆ ಚರ್ಚೆ ನಡೆದು ಮನಸ್ತಾಪ ಕಾರಣವಾಗಿದೆ.
ಇದರ ಬಗ್ಗೆ (ಸುತಿಗಾ ಯಾಕೆ)ನನಗೆ ದಯವಿಟ್ಟು ತಿಳಿಯಪಡಿಸಿ.
ನಮಸ್ಕಾರ, ನಿಮ್ಮ ಮನೆಯಲ್ಲಿಯೇ ಜನ್ಮ ಕೊಟ್ಟಿದ್ದಾರೆಯೇ? ಇಲ್ಲದಿದ್ದರೆ ಒಂದು ದಿನ ಸಾಕಾಗುತ್ತದೆ. ಈಗ ಜನನವಾಗಿ ೨ ದಿನವಾಗಿರುವುದರಿಂದ, ಸ್ನಾನವೂ ಆಗಿರುವುದರಿಂದ ಹೋಗಬಹುದು.
Deleteಸನಾತನ ಪ೦ಚಾ೦ಗ ಚೆನ್ನಾಗಿದೆ.ಹಿ೦ದೂ ಹಬ್ಬ-ಹರಿದಿನಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಿದ್ದು ಸರ್ವಾದರಣೀಯವಾಗಿ ಉಪಯುಕ್ತವಾಗಿದೆ.ಇ೦ಥ ಒ೦ದು ಸತ್ಕಾರ್ಯವನ್ನು ನಡೆಸುತ್ತಿರುವ ನಿಮಗೆ ಹೃತ್ಪೂರ್ವಕ ಅಭಿನ೦ದನೆಗಳು.
ReplyDelete