ಅ. ‘ಉಡುಗೊರೆ’ ಶಬ್ದದ ಅರ್ಥ: ‘ಉಡುಗೊರೆ’ ಎಂದರೆ ಕಸಿದುಕೊಳ್ಳದೇ, ನಾವಾಗಿ ತೆಗೆದುಕೊಳ್ಳದೇ ಬಂದಿರುವ ವಸ್ತು ಅಥವಾ ವಿಷಯ.
ಆ. ಉಡುಗೊರೆಗಳು ಹೇಗಿರಬೇಕು?: ಇತ್ತೀಚೆಗೆ ಬೆಲೆಬಾಳುವ ವಸ್ತುಗಳನ್ನು ಕೊಡುವುದೆಂದರೇ ಉಡುಗೊರೆಗಳನ್ನು ಕೊಡುವುದು ಎಂದು ತಿಳಿದುಕೊಳ್ಳುತ್ತಾರೆ; ಆದರೆ ಇದು ಭಾವನೆಯ ಸ್ತರದಲ್ಲಿ ಮಾಡಿದ ಕರ್ಮವಾಗಿದೆ. ಉಡುಗೊರೆಗಳು ಮತ್ತೊಂದು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರಬೇಕು. ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಕಲಿಸುವ ಗ್ರಂಥಗಳು, ದೇವರ ಬಗ್ಗೆ ಭಕ್ತಿಭಾವವನ್ನು ಹೆಚ್ಚಿಸುವ ಗ್ರಂಥಗಳು, ದೇವತೆಗಳ ಸಾತ್ತ್ವಿಕ ಚಿತ್ರಗಳು ಮತ್ತು ನಾಮಪಟ್ಟಿಗಳು ಇತ್ಯಾದಿ, ಇವು ಉಡುಗೊರೆಯ ಕೆಲವು ಉದಾಹರಣೆಗಳಾಗಿವೆ.
ಇ. ಉಡುಗೊರೆಗಳನ್ನು ಕೊಡುವಾಗ ನಮ್ಮ ಭಾವವು ಹೇಗಿರಬೇಕು?: ಇತ್ತೀಚೆಗೆ ದೊಡ್ಡಸ್ತಿಕೆಯನ್ನು ತೋರಿಸಲು ಉಡುಗೊರೆಗಳನ್ನು ಕೊಡುತ್ತಾರೆ. ಇದು ಅಯೋಗ್ಯವಾಗಿದೆ. ಉಡುಗೊರೆಗಳನ್ನು ಅಹಂರಹಿತ ಮತ್ತು ನಿರಪೇಕ್ಷ ಭಾವದಿಂದ ಕೊಡಬೇಕು. ಈ ಭಾವದಿಂದ ಉಡುಗೊರೆಗಳನ್ನು ಕೊಡದಿದ್ದರೆ ಕೊಡುಕೊಳ್ಳುವ ಲೆಕ್ಕಾಚಾರವು (ಅಂದರೆ ಪ್ರತಿಯೊಂದು ಕರ್ಮಕ್ಕೂ ಕರ್ಮಫಲ ನ್ಯಾಯವಿರುವುದರಿಂದ, ಪಾಪ ಅಥವಾ ಪುಣ್ಯವು ನಿರ್ಮಾಣವಾಗಿ ಅದನ್ನು ಪ್ರಸ್ತುತ ಜನ್ಮದಲ್ಲಿ ಅಥವಾ ಮುಂದಿನ ಜನ್ಮಗಳಲ್ಲಿ ಭೋಗಿಸಲೇಬೇಕಾಗುತ್ತದೆ.) ನಿರ್ಮಾಣವಾಗುತ್ತದೆ. ‘ಉಡುಗೊರೆಗಳನ್ನು ಸ್ವೀಕರಿಸುವ ಜೀವಗಳಲ್ಲಿ ಉಡುಗೊರೆಗಳೆಂದರೆ ಈಶ್ವರನಿಂದ ವಸ್ತುರೂಪದಲ್ಲಿ ದೊರೆತ ಪ್ರಸಾದವಾಗಿದೆ’, ಎಂಬ ಭಾವವಿರಬೇಕು.
ಈ. ಉಡುಗೊರೆ ಎಂದು ಕೊಡುವ ವಸ್ತುಗಳಿಗೆ ಅರಿಸಿನ-ಕುಂಕುಮವನ್ನು ಏಕೆ ಹಚ್ಚುತ್ತಾರೆ?: ಉಡುಗೊರೆ ಎಂದು ಕೊಡುವ ವಸ್ತುಗಳಿಗೆ ಅರಿಸಿನ-ಕುಂಕುಮವನ್ನು ಹಚ್ಚುವುದರಿಂದ ಬ್ರಹ್ಮಾಂಡದಲ್ಲಿ ಕಾರ್ಯನಿರತ ಈಶ್ವರೀ ಚೈತನ್ಯದ ಲಹರಿಗಳು ಆಕರ್ಷಿತವಾಗುತ್ತವೆ. ಇದರಿಂದ ಜೀವಗಳಿಗೆ ಉಡುಗೊರೆಗಳೊಂದಿಗೆ ಈಶ್ವರನ ಚೈತನ್ಯವೂ ಸಿಗುತ್ತದೆ.
ಉ. ಎಲ್ಲಕ್ಕಿಂತ ದೊಡ್ಡ ಉಡುಗೊರೆ ಯಾವುದು ಮತ್ತು ಅದನ್ನು ಯಾರು ಕೊಡಬಲ್ಲರು?: ಈಶ್ವರನೇ ಎಲ್ಲರ ಪಾಲನೆ ಪೋಷಣೆಯನ್ನು ಮಾಡುವವನಾಗಿದ್ದಾನೆ. ಆದುದರಿಂದ ಈಶ್ವರನ ಸಗುಣ ರೂಪ, ಅಂದರೆ ಸಂತರು ಅಥವಾ ಗುರುಗಳಿಗೆ ಮಾತ್ರ ಉಡುಗೊರೆಯನ್ನು ಕೊಡುವ ಅಧಿಕಾರವಿದೆ. ಗುರುಗಳು ಶಿಷ್ಯರ ಐಹಿಕ ಮತ್ತು ಪಾರಮಾರ್ಥಿಕ ಹೀಗೆ ಎರಡೂ ರೀತಿಯ ಉನ್ನತಿಯನ್ನು ಮಾಡಿಸಿಕೊಳ್ಳುತ್ತಾರೆ. ಗುರುಗಳು ಕಲಿಸಿದ ಸಾಧನೆಯನ್ನು ಯಾರಿಂದಲೂ ಕಸಿದುಕೊಳ್ಳಲು ಆಗುವುದಿಲ್ಲ; ಏಕೆಂದರೆ ಸಾಧನೆಯನ್ನು ಮಾಡುವವರ ಹಿಂದೆ ಗುರುಕೃಪೆ ಅಂದರೆ ಈಶ್ವರನ ಕೃಪೆ ಇರುತ್ತದೆ. ಸಾಧನೆಯನ್ನು ಮಾಡುವ ಅವಕಾಶವು ಸಿಗುವುದು ಮತ್ತು ಈಶ್ವರನ ಕೃಪೆಯಾಗುವುದು ಇದುವೇ ಜೀವಕ್ಕೆ ಈಶ್ವರನಿಂದ ದೊರಕಿದ ಸರ್ವೋಚ್ಚ ಉಡುಗೊರೆಯಾಗಿದೆ.
ಉಡುಗೊರೆಯನ್ನು ಕೊಡುವ, ಈಶ್ವರನ ಪ್ರತಿರೂಪವಾಗಿರುವ ಸಂತರ ಎದುರು ಜೀವಗಳು ‘ಯಾಚಕ’ರಾಗಬೇಕು. ಯಾಚಕ ಎಂದರೆ ಈಶ್ವರನ ಚರಣಗಳಲ್ಲಿ ಯಾವಾಗಲೂ ಶರಣಾಗತಿಯ ಭಾವವಿರುವವನು. ಸಂತರ ಉಡುಗೊರೆಗೆ ಪಾತ್ರನಾಗುವುದು, ಎಂದರೆ ಈಶ್ವರಪ್ರಾಪ್ತಿಗಾಗಿ ಅರ್ಹನಾಗುವುದು, ಇದೇ ನಿಜವಾದ ಶಿಷ್ಯನ ಧರ್ಮವಾಗಿದೆ.’ - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೨.೧.೨೦೦೫ ಮತ್ತು ೨೨.೨.೨೦೦೫)
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ')
ಸಂಬಂಧಿತ ವಿಷಯಗಳು
No comments:
Post a Comment
Note: only a member of this blog may post a comment.