ಮಣೆಯ ಸುತ್ತಲೂ ಅಥವಾ ಚೌರಂಗದ ಕೆಳಗೆ ರಂಗೋಲಿಯನ್ನು ಬಿಡಿಸುವುದರ ಮತ್ತು ಅದರ ಮೇಲೆ ಅರಿಶಿನ-ಕುಂಕುಮವನ್ನು ಹಾಕುವುದರ ಮಹತ್ವ: ‘ಯಾವುದೇ ಪೂಜಾವಿಧಿಯನ್ನು ಮಾಡುವಾಗ ಮೊದಲು ಮಣೆಯ ಸುತ್ತಲೂ ಅಥವಾ ಚೌರಂಗದ ಕೆಳಗೆ ಸಾತ್ತ್ವಿಕ ಆಕಾರದ ರಂಗೋಲಿಯನ್ನು ಬಿಡಿಸುವುದರಿಂದ, ಈ ಆಕಾರದಿಂದ ವೇಗವಾಗಿ ಪ್ರಕ್ಷೇಪಿಸುವ ಲಹರಿಗಳ ಕವಚವು ಮಣೆಯ ಸುತ್ತಲೂ ಅಥವಾ ಚೌರಂಗದ ಸುತ್ತಲೂ ನಿರ್ಮಾಣವಾಗಲು ಸಹಾಯವಾಗುತ್ತದೆ. ರಂಗೋಲಿಯಿಂದ ಪ್ರಕ್ಷೇಪಿತವಾಗುವ ವೇಗವಾದ ಲಹರಿಗಳ ಕಡೆಗೆ ಮತ್ತು ರಂಗೋಲಿಯ ಆಕೃತಿಯಲ್ಲಿ ಭೂಮಿಲಹರಿಗಳು ಆಕರ್ಷಿತವಾಗಿ ಅವು ಅಲ್ಲಿ ಬಂಧಿಸಲ್ಪಡುತ್ತವೆ. ರಂಗೋಲಿಯ ರೇಖೆಗಳಿಂದ ಆವಶ್ಯಕತೆಗನುಸಾರ ಸಾತ್ತ್ವಿಕ ಲಹರಿಗಳು ಜೀವದ ಕಡೆಗೆ ಪ್ರಕ್ಷೇಪಿತವಾಗುತ್ತವೆ ಹಾಗೂ ಭೂಮಿಯ ಮೇಲೆ ಈ ಲಹರಿಗಳ ಸೂಕ್ಷ್ಮ ಹೊದಿಕೆಯು ನಿರ್ಮಾಣವಾಗಲು ಸಹಾಯವಾಗುವುದರಿಂದ ಪಾತಾಳದಲ್ಲಿನ ಅಥವಾ ವಾಸ್ತುವಿನಲ್ಲಿನ ಕೆಟ್ಟ ಶಕ್ತಿಗಳಿಂದ ಪ್ರಕ್ಷೇಪಿತವಾಗುವ ಕಪ್ಪು ಶಕ್ತಿಯ ಲಹರಿಗಳಿಂದ ಜೀವದ ರಕ್ಷಣೆಯಾಗಲು ಸಹಾಯವಾಗುತ್ತದೆ. ರಂಗೋಲಿಯ ಬೇರೆಬೇರೆ ಆಕೃತಿಯಂತೆ, ಆಯಾ ಆಕೃತಿಯಲ್ಲಿ ಸಂಗ್ರಹವಾದ ವಿಶಿಷ್ಟ ದೇವತೆಗಳ ಲಹರಿಗಳಿಂದಾಗಿ ಕೆಟ್ಟ ಶಕ್ತಿಗಳು ರಂಗೋಲಿಯನ್ನು ನೋಡಿ ಹೆದರುತ್ತವೆ. ರಂಗೋಲಿಯನ್ನು ಬಿಡಿಸಿದ ನಂತರ ರಂಗೋಲಿಯ ಕೇಂದ್ರಬಿಂದುವಿನ ಮೇಲೆ ಅರಿಶಿನ-ಕುಂಕುಮವನ್ನು ಹಾಕುವುದರಿಂದ ಅರಿಶಿನ-ಕುಂಕುಮದಿಂದ ಪ್ರಕ್ಷೇಪಿತವಾಗುವ ತೇಜತತ್ತ್ವಕ್ಕೆ ಸಂಬಂಧಿಸಿದ ಬಣ್ಣದ ಕಣಗಳೆಡೆಗೆ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಲಹರಿಗಳು ಕೂಡಲೇ ಆಕರ್ಷಿಸುತ್ತವೆ. ಇದರಿಂದ ರಂಗೋಲಿಯಿಂದ ಪ್ರಕ್ಷೇಪಿತವಾಗುವ ಲಹರಿಗಳ ಕಾರ್ಯಕ್ಷಮತೆ, ವೇಗ ಮತ್ತು ಪರಿಣಾಮಕಾರಕತೆಯೂ ಹೆಚ್ಚುತ್ತದೆ. ಆದುದರಿಂದ ಯಾವುದೇ ಶುಭವಿಧಿಯಲ್ಲಿ ಕೆಟ್ಟ ಶಕ್ತಿಗಳ ಅಡಚಣೆಗಳು ಬರಬಾರದೆಂದು ಬಾಗಿಲಿನ ಮುಂದೆ, ಪೂಜಾವಿಧಿಯ ಎದುರಿಗೆ ಅಥವಾ ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸುತ್ತಾರೆ.’ - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೧೧.೨೦೦೪, ಸಾಯಂಕಾಲ ೬.೩೭)
(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಪೂಜಾ ಸಾಮಗ್ರಿಗಳ ಮಹತ್ವ')
ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳುದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?
ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು?
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು?
No comments:
Post a Comment
Note: only a member of this blog may post a comment.