ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳ ಪವಿತ್ರಕಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಯಾವ ಹೂವುಗಳಲ್ಲಿ ಯಾವ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆ ಹೆಚ್ಚಿರುತ್ತದೆಯೋ, ಆ ಹೂವುಗಳ ಕಡೆಗೆ ಆ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಸೂರ್ಯನ ತೇಜದಿಂದಾಗಿ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗುತ್ತದೆ. ಆದುದರಿಂದ ಸೂರ್ಯಾಸ್ತದ ಮೊದಲಿನ ವಾತಾವರಣವು ಸೂರ್ಯಾಸ್ತದ ನಂತರದ ವಾತಾವರಣದ ತುಲನೆಯಲ್ಲಿ ಹೆಚ್ಚು ಸಾತ್ತ್ವಿಕವಾಗಿರುತ್ತದೆ. ಸೂರ್ಯಾಸ್ತದ ನಂತರ ವಾಯುಮಂಡಲದಲ್ಲಿನ ರಜ-ತಮದ ಪ್ರಮಾಣವು ಹೆಚ್ಚಾಗಿ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಾಗುವುದರಿಂದ ವಾತಾವರಣವು ಕಲುಷಿತವಾಗುತ್ತದೆ. ಆದುದರಿಂದ ಸೂರ್ಯಾಸ್ತದ ನಂತರ ಹೂವಿನ ಮೊಗ್ಗುಗಳು ರಜ-ತಮಯುಕ್ತ ಕಣಗಳಿಂದ ತುಂಬಿರುವುದರಿಂದ ದೇವರ ಪವಿತ್ರಕಗಳನ್ನು ಸೆಳೆಯುವ ಕ್ಷಮತೆಯು ಕಡಿಮೆಯಾಗುತ್ತದೆ. ಇದಕ್ಕಾಗಿ ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಕೀಳುವುದು ಸೂಕ್ತವಲ್ಲ.
ಮಲ್ಲಿಗೆ, ಜಾಜಿ, ಸುಗಂಧರಾಜ ಇತ್ಯಾದಿ ಹೂವುಗಳಲ್ಲಿ ದೇವತೆಗಳ ಪವಿತ್ರಕಗಳು ತಮ್ಮಲ್ಲಿ ಹೆಚ್ಚೆಚ್ಚು ಆಕರ್ಷಿತವಾಗಬೇಕು ಎನ್ನುವ ತಳಮಳವಿರುತ್ತದೆ. ಈ ಹೂವುಗಳ ಮೊಗ್ಗುಗಳು ಸೂರ್ಯಾಸ್ತದ ನಂತರ ಅರಳಲು ಪ್ರಾರಂಭವಾಗಿ ಬ್ರಾಹ್ಮೀಮುಹೂರ್ತವನ್ನು ಆತುರದಿಂದ ಕಾಯುತ್ತಿರುತ್ತವೆ. ಅವುಗಳ ತಳಮಳದಿಂದಾಗಿ ದೇವತೆಗಳ ಪವಿತ್ರಕಗಳು ಅವುಗಳತ್ತ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಆದುದರಿಂದ ಅವುಗಳ ಸುಗಂಧವು ಇತರ ಹೂವುಗಳ ತುಲನೆಯಲ್ಲಿ ಹೆಚ್ಚಿರುತ್ತದೆ ಹಾಗೂ ಮನಸ್ಸಿಗೆ ಸಮಾಧಾನವನ್ನು ಕೊಡುವಂತಹದ್ದಾಗಿರುತ್ತದೆ. ಕೆಲವು ಹೂವುಗಳು (ಉದಾ. ಬಿಳಿ ಮತ್ತು ಗುಲಾಬಿ ಬಣ್ಣದ ದಾಸವಾಳಗಳು) ಸೂರ್ಯೋದಯವಾದರೂ ಅರಳುತ್ತಲೇ ಇರುತ್ತವೆ. ಇಂತಹ ಹೂವುಗಳಲ್ಲಿ ದೇವತೆಗಳ ಪವಿತ್ರಕಗಳು ಕಡಿಮೆಯಿರುತ್ತವೆ ಅಥವಾ ಕೆಲವೊಮ್ಮೆ ಇರುವುದೇ ಇಲ್ಲ, ಇಂತಹ ಹೂವುಗಳಲ್ಲಿ ಪರಿಮಳವೂ ಇರುವುದಿಲ್ಲ. ಇಂತಹ ಹೂವುಗಳನ್ನು ದೇವರಿಗೆ ಅರ್ಪಿಸುವುದೆಂದರೆ ದೇವರಿಗೆ ಕಾಗದದ ಹೂವುಗಳನ್ನು ಅರ್ಪಿಸಿದಂತೆಯೇ ಆಗುತ್ತದೆ. ಇಂತಹ ಹೂವುಗಳನ್ನು ದೇವರಿಗೆ ಅರ್ಪಿಸಿದರೂ, ಅದರಿಂದ ಪೂಜಕನಿಗೆ ಹೆಚ್ಚಿನ ಲಾಭವು ಸಿಗುವುದಿಲ್ಲ.
ತುಳಸಿ, ಗೊಂಡೆ (ಚೆಂಡು ಹೂವು), ಗುಲಾಬಿ, ಕೇದಗೆ ಇತ್ಯಾದಿ ಹೂವುಗಳು ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಅರಳುತ್ತವೆ ಮತ್ತು ಗಿಡದ ಮೇಲೆ ಹೆಚ್ಚು ದಿನ ತಾಜಾತನದಿಂದಿರುತ್ತವೆ. ಇಂತಹ ಹೂವುಗಳಲ್ಲಿ ಮಂದವಾದ ಪರಿಮಳವಿರುತ್ತದೆ ಮತ್ತು ಗುರುತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯವು ಹೆಚ್ಚಿರುತ್ತದೆ. ಗುರುತತ್ತ್ವವು ಕಾರ್ಯನಿರತ ಅಥವಾ ಪ್ರಕಟವಾಗಿರುವಂತಹ ಸ್ಥಳದಲ್ಲಿ ಹೂವುಗಳ ಅಸ್ತಿತ್ವ ಇಲ್ಲದಿರುವಾಗಲೂ ಅವುಗಳ ಸೂಕ್ಷ್ಮಸುಗಂಧವು ಬರುತ್ತಿರುತ್ತದೆ. ತುಳಸಿ, ಗುಲಾಬಿ, ಗೊಂಡೆ ಮತ್ತು ಕೇದಗೆಗಳ ಮಿಶ್ರ ಸೂಕ್ಷ್ಮಸುಗಂಧವು ಬರುತ್ತಿದ್ದಲ್ಲಿ ‘ಗುರುತತ್ತ್ವವು ನಮಗಾಗಿ ಓಡೋಡಿ ಬಂದಿದೆ ಎಂದು ತಿಳಿಯಬೇಕು.’
- ಬ್ರಹ್ಮತತ್ತ್ವ (ಸೌ.ಪಾಟೀಲರ ಮಾಧ್ಯಮದಿಂದ)
ಹೂವು
ವಾತಾವರಣದಲ್ಲಿ
ದೇವತೆಗಳ ‘ಸೂಕ್ಷ್ಮ-ತರಂಗಗಳು’ (ಸೂಕ್ಷ್ಮ-ಲಹರಿಗಳು) ಕಾರ್ಯನಿರತವಾಗಿರುತ್ತವೆ. ಈ ತರಂಗಗಳು ವಿಶಿಷ್ಟ ಹೂವುಗಳೆಡೆಗೆ ಆಕರ್ಷಿತವಾಗುತ್ತವೆ. ಅನಂತರ ಈ ತರಂಗಗಳು ಹೂವಿನ ಮೂಲಕ
ಪ್ರಕ್ಷೇಪಿತವಾಗುತ್ತವೆ, ಆಗ ಅವುಗಳಿಗೆ ‘ಪವಿತ್ರಕ’ ಎನ್ನುತ್ತಾರೆ. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಹೂವನ್ನು ಅರ್ಪಿಸುವುದರ ಮಹತ್ವವನ್ನು ತಿಳಿದುಕೊಳ್ಳಲು ಮೊದಲು
‘ತರಂಗ’ ಮತ್ತು ‘ಪವಿತ್ರಕ’ ಈ ಶಬ್ದಗಳ ನಡುವಿನ ಭಿನ್ನತೆಯನ್ನು ಅರಿತುಕೊಳ್ಳಬೇಕು.
೧. ಬ್ರಹ್ಮಾಂಡದಿಂದ ಪುಷ್ಪಗಳತ್ತ ಆಕರ್ಷಿತವಾಗುವ ದೇವತೆಗಳ ಸೂಕ್ಷ್ಮತರ ತತ್ತ್ವಗಳಿಗೆ ‘ತರಂಗ’ ಎನ್ನುತ್ತಾರೆ. ಪುಷ್ಪಗಳ ಮೂಲಕ ಈ ದೇವತೆಗಳ ತತ್ತ್ವಗಳು ಯಾವಾಗ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತವೆಯೋ, ಆಗ ಅವುಗಳಿಗೆ ‘ಪವಿತ್ರಕ’ ಎನ್ನುತ್ತಾರೆ.
೨. ತರಂಗಗಳು ದೇವತಾತತ್ತ್ವದ ಸೂಕ್ಷ್ಮತರ ಮತ್ತು ತುಲನೆಯಲ್ಲಿ ಅಧಿಕ ನಿರ್ಗುಣ ಸ್ವರೂಪದ್ದಾಗಿವೆ. ಪವಿತ್ರಕ ಅದೇ ದೇವತಾ ತತ್ತ್ವದ ಸೂಕ್ಷ್ಮ ಮತ್ತು ಸಗುಣಸ್ವರೂಪದ್ದಾಗಿವೆ. ಈ ಸೂಕ್ಷ್ಮ ಸ್ತರದಲ್ಲಾಗುವ ಪ್ರಕ್ರಿಯೆ ನೋಡಲು ಸೂಕ್ಷ್ಮ ದೃಷ್ಟಿಯು ಅವಶ್ಯಕವಾಗಿದೆ ಮತ್ತು ಅದು ಸಾಧನೆಯಿಂದಲೇ ಪ್ರಾಪ್ತವಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಪೂಜಾ ಸಾಮಗ್ರಿಗಳ ಮಹತ್ವ')
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?
ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು?
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು?
ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳುದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?
ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು?
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು?
OUR GOD IS NATURE!!!!!!!!!!!!!!!
ReplyDelete