ಇಂತಹ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ!!!


ಮೊದಲನೆಯ ಟಿ-ಶರ್ಟ್‌ನಲ್ಲಿ ಶ್ರೀ ಗಣೇಶನ ಚಿತ್ರವಿರುವಂತೆ, ಶ್ರೀರಾಮ, ಶ್ರೀಕೃಷ್ಣ, ಶ್ರೀಲಕ್ಷ್ಮೀ ಅಥವಾ ಓಂ ಚಿಹ್ನೆಗಳು ಇರುತ್ತವೆ. ಆದರೆ ಇಂತಹ ಬಟ್ಟೆಗಳನ್ನು ನಾವು ಹಾಕಿದ ನಂತರ ಬಟ್ಟೆಯ ಮೇಲಿರುವ ದೇವತ್ವವನ್ನು ಕಾಪಾಡುವುದಿಲ್ಲ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಮಲಗುತ್ತೇವೆ, ಕೂರುತ್ತೇವೆ ಕೆಲಸ ಮಾಡುತ್ತೇವೆ, ಇದರಿಂದ ದೇವರ ಮೇಲೆ ಧೂಳು, ಕೊಳೆ ಬರುತ್ತವೆ. ನಂತರ ಬಟ್ಟೆ ಒಗೆಯಲು ಅದನ್ನು ಕಲ್ಲಿನ ಮೇಲೆ ಉಜ್ಜುತ್ತೇವೆ, ಬ್ರಶ್‌ನಿಂದ ಉಜ್ಜುತ್ತೇವೆ ಅಥವಾ ವಾಷಿಂಗ್ ಮೆಶಿನ್‌ಗೆ ಹಾಕಿ ನಮ್ಮ ದೇವರನ್ನು ನಾವೇ ತಿರುಗಿಸುತ್ತೇವೆ, ಒಣಗಿಸಲು ಡ್ರೈಯರ್‌ಗೆ ಹಾಕಿ ಕೊನೆಗೆ ಬಿಸಿಲಿನಲ್ಲಿ ನೇತಾಡಿಸುತ್ತೇವೆ. ಇದರಿಂದ ದೇವರ ಕೃಪೆಯಾಗಬಹುದೇ? ನಾವು ಹಾಕಿರುವ ಉದ್ದೇಶ ಸಫಲವಾಗಬಹುದೇ? ದೇವರಲ್ಲಿ ಭಕ್ತಿಯಿರಬೇಕು, ಧರ್ಮದ ಮೇಲೆ ಶ್ರದ್ಧೆಯಿರಬೇಕು, ಆದರೆ ಅದು ಈ ರೀತಿಯಲ್ಲಿ ಆಗಬಾರದು. ಹಾಗಾಗಿ ದಯವಿಟ್ಟು ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಎಲ್ಲ ಹಿಂದೂ ಬಾಂಧವರಿಗೂ ಈ ರೀತಿ ಮಾಡದಂತೆ ಪ್ರಬೋಧನೆ ಮಾಡಿ.

ಎರಡನೆಯ ಟಿ-ಶರ್ಟ್ ಏಕೆ ಬೇಡ? ಹೇಗೆ ದೇವರ ಚಿತ್ರವಿರುವಲ್ಲಿ ದೇವರ ತತ್ತ್ವ, ಸ್ಪಂದನ, ದೇವರ ಅಸ್ತಿತ್ವವಿರುತ್ತದೆಯೋ, ಹಾಗೆಯೇ ಭೂತ, ಪಿಶಾಚಿ, ಮಾಂತ್ರಿಕರ ಚಿತ್ರ, ತಲೆ ಬುರುಡೆ, ಎಲುಬು ಮುಂತಾದ ಚಿತ್ರಗಳಿರುವ ಬಟ್ಟೆಗಳಲ್ಲಿ ಅಂತಹ ಸ್ಪಂದನಗಳೇ ಆಕರ್ಷಿಸುತ್ತವೆ ಮತ್ತು ನಮಗೆ ತಿಳಿಯದೇ ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯೆನಿಸುವುದು, ಸಿಟ್ಟು, ದ್ವೇಷ, ಹೊಡೆದಾಟ ಮುಂತಾದ ಅನೇಕ ವಿಕಾರಗಳು ಉಂಟಾಗುತ್ತವೆ. ಇಂತಹ ಬಟ್ಟೆಗಳಲ್ಲದೇ ಯಾವುದೇ ಕ್ರೀಡಾಪಟುವಾಗಲಿ, ನಟ-ನಟಿಯರದ್ದಾಗಲಿ ಚಿತ್ರವಿರುವ ಬಟ್ಟೆಗಳನ್ನು ಹಾಕಬೇಡಿ. ಪ್ರತಿಯೊಬ್ಬ ವ್ಯಕ್ತಿಯಿಂದ ಅವನ ವ್ಯಕ್ತಿತ್ವಕ್ಕೆ ತಕ್ಕ ಸ್ಪಂದನಗಳು ಬರುವುದರಿಂದ ಇಂತಹ ಯಾವುದೇ ಬಟ್ಟೆಗಳನ್ನು ಹಾಕದೇ ಸಾತ್ತ್ವಿಕ ಬಟ್ಟೆಗಳನ್ನೇ ಧರಿಸಿ. ಯಾರಾದರೂ ಇಂತಹ ಬಟ್ಟೆಗಳನ್ನು ಧರಿಸಿದ್ದರೆ ಅವರಿಗೆ ಈ ವಿಷಯಗಳನ್ನು ತಿಳಿಸಿಹೇಳಿ.


ಸಾತ್ತ್ವಿಕ ಬಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಓದಿ, ಸನಾತನ ಸಂಸ್ಥೆಯ ಗ್ರಂಥ 'ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು?'


ಇತರ ವಿಷಯಗಳು
ಹಿಂದೂಗಳೇ, ಒಂದು ದಿನದ ಮತಾಂತರವು ನಿಮಗೆ ಒಪ್ಪಿಗೆಯಿದೆಯೇ?
ಮಾತೃಭಾಷಾಭಿಮಾನವು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಡಿಪಾಯವಾಗಿದೆ!
ರಾಷ್ಟ್ರಭಕ್ತಿ' ಮತ್ತು 'ರಾಷ್ಟ್ರಾಭಿಮಾನ' ಎಂದರೇನು?
ಬೆಳಕಿನ ಇಚ್ಛೆ ಅಥವಾ ವಿಶ್ವಪ್ರಜ್ಞೆ
ಹಿಂದೂ' ಎಂದರೆ ಯಾರು?
ಸ್ವಾಮಿ ವಿವೇಕಾನಂದ
ನೇತಾಜಿ ಸುಭಾಷಚಂದ್ರ ಬೋಸ್ : ಜ್ವಾಜ್ವಲ್ಯಮಾನ ರಾಷ್ಟ್ರಭಕ್ತಿಯ ಪ್ರತೀಕ
ರಾಷ್ಟ್ರಧ್ವಜದ ಗೌರವ ಕಾಪಾಡಿ!
ಯುವಕರೇ, ಅರ್ಥಹೀನ 'ವೆಲೆಂಟೈನ ಡೇ' ಬೇಡ
ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನೀ…
ಗೌರವಯುತ ಜ್ಞಾನಕೇಂದ್ರ : ನಾಲಂದಾ
ಭಾರತದ ಗೌರವಶಾಲಿ ವೈಜ್ಞಾನಿಕ ಇತಿಹಾಸ!
ಅನಿವಾರ್ಯವಾದ ಸಾವನ್ನು ಹೇಗೆ ಸ್ವೀಕರಿಸಬೇಕು?
ಗೋಮೂತ್ರ - ಆರೋಗ್ಯವರ್ಧಕ ಹೇಗೆ?
ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!

Dharma Granth

6 comments:

  1. utthama samaja da nirmanakkagi dharmagrantha mahathvada sandeshvanna ravanisuthiruva dharmagranth da samsthe gondu bhakthi purvaka namanagalu....

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. "ಸುಖಸ್ಯ ಮೂಲಂ ಧರ್ಮಃ" ಎಲ್ಲರೂ ಧರ್ಮಾಚರಣೆ ಮಾಡಬೇಕು ಎಂಬುದೇ ನಮ್ಮ ಉದ್ದೇಶ. ನೀವೂ ಮಾಡಿ ಇತರರಿಗೂ ತಿಳಿಸಿ.

      Delete
  2. ತುಳಸಿ ಪೂಜೆಯ ಮಹತ್ವ ಹಾಗು ಅದರ ನಿಯಮ ಸ್ತ್ರೀಯರು ತುಳಸಿ ಕೀಳಬಹುದೇ ಬೇಡವೇ ದಯವಿಟ್ಟು ಗೊಂದಲವಿದೆ ಪರಿಹರಿಸಿ ನಿಮ್ಮ ಬ್ಲಾಕ್ ನಲ್ಲಾದರು ಸರಿ ಫೇಸ್ ಬುಕ್ ನಲ್ಲಾದರೂ ಸರಿ ಪ್ಲೀಸ್

    ReplyDelete
    Replies
    1. ನೀವು ಹೇಳಿದ ವಿಷಯದಲ್ಲಿ ತುಳಸಿಯ ಬಗ್ಗೆ ಖಂಡಿತ ಪೋಸ್ಟ್ ಮಾಡುತ್ತೇವೆ.

      Delete
  3. Hi, Once i used black T-Shirt, on that the name written as TENSION. When ever i wear this i started to feel like i am getting tensed, i am getting into problems, i am falling down, my progress is not good, i am not doing well stressed etc. Once i faced the problem & after sensing my problem i stopped using this type of dress on me.

    ReplyDelete
    Replies
    1. ನಿಮ್ಮ ಅನುಭವ ಕೇಳಿ ಇತರರಿಗೂ ತಿಳುವಳಿಕೆಯಾಗಲಿ. ಇಂತಹ ವಿಷಯಗಳನ್ನು ಅನುಭವಿಸಿದಾಗಲೇ ನಮಗೆ ಅದರ ಮಹತ್ವ ಗೊತ್ತಾಗುತ್ತದೆ. ಇದರಿಂದಲೇ ನಮ್ಮ ಹಿಂದೂ ಧರ್ಮದ ಮಹತ್ವ ಗೊತ್ತಾಗುತ್ತದೆ. ಇಂತಹ ಬಟ್ಟೆಗಳನ್ನು ಧರಿಸಿ/ಧರಿಸಬೇಡಿ ಎಂದು ಹೇಳುವುದರ ಹಿಂದೆಯೂ ಏನಾದರೂ ಕಾರಣವಿರುತ್ತದೆ. ಇದೇ ರೀತಿ ನಿಮ್ಮ ಸ್ನೇಹಿತರಿಗೂ ಪ್ರಬೋಧನೆ ಮಾಡಿ.

      Delete

Note: only a member of this blog may post a comment.