ಟಿ.ವಿ., ಮೊಬೈಲ್ ಮತ್ತು ಇಂಟರನೆಟ್ ಇವುಗಳಿಂದಾಗುವ ಹಾನಿ ತಪ್ಪಿಸಿ ಲಾಭ ಪಡೆಯಿರಿ!

ಮನೋಗತ
ಸ್ವಾತಂತ್ರ್ಯಪೂರ್ವ ಕಾಲದಲ್ಲಿನ ಒಂದು ಘಟನೆ. ಲೋ. ತಿಲಕರ ‘ಕೇಸರಿ’ ವಾರ್ತಾಪತ್ರಿಕೆಯಲ್ಲಿ, ‘ಆದಿಕ್ರಾಂತಿಕಾರಿಗಳಾದ ವಾಸುದೇವ ಬಳವಂತ ಫಡಕೆಯವರಿಗೆ ಆಂಗ್ಲ ಸರಕಾರವು ಕಾರಾಗೃಹದಲ್ಲಿ ಎಷ್ಟು ಯಾತನೆ ನೀಡಿತೆಂದರೆ, ಅವರ ಜೀವನವೇ ಮುಗಿಯಿತು!’ ಎಂಬ ವಾರ್ತೆ ಪ್ರಕಟವಾಗಿತ್ತು. ದಾಮೋದರ, ಬಾಲಕೃಷ್ಣ ಮತ್ತು ವಾಸುದೇವ ಚಾಪೇಕರ ಎಂಬ ಮಕ್ಕಳು ಆ ವಾರ್ತೆಯನ್ನು ಓದಿದರು. ಅವರು ‘ಹಿಂದೂಸ್ಥಾನದ ಸ್ವಾತಂತ್ರ್ಯಕ್ಕಾಗಿ ಆಂಗ್ಲರ ವಿರುದ್ಧ ಹೋರಾಡಲು ನಿಶ್ಚಯಿಸಿದರು ಮತ್ತು ಅವರು ಅದರಂತೆ ಮಾಡಿಯೂ ತೋರಿಸಿದರು. ಆ ಕಾಲದಲ್ಲಿ ವಾರ್ತಾಪತ್ರಿಕೆಯೇ ಪ್ರಸಾರದ ಮಾಧ್ಯಮವಾಗಿತ್ತು. ಈಗ ವಾರ್ತಾಪತ್ರಿಕೆಗಳೊಂದಿಗೆ ದೂರದರ್ಶನವೂ ಒಂದು ಪ್ರಮುಖ ಪ್ರಸಾರ ಮಾಧ್ಯಮವಾಗಿದೆ. ಪ್ರಸಾರಮಾಧ್ಯಮವು ಮಾನವೀ ಮನಸ್ಸನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಾರ್ತಾಪತ್ರಿಕೆಯಲ್ಲಿನ ಒಂದು ವಾರ್ತೆಯನ್ನು ಓದಿ ಈ ಮೂರು ಮಂದಿ ಬಾಲಕರು ಕ್ರಾಂತಿಕಾರರಾಗುತ್ತಾರೆಂದರೆ, ಇಂದು ಪ್ರತಿದಿನ ಯಾವ ಮಕ್ಕಳು ದೂರದರ್ಶನದಲ್ಲಿನ ಪ್ರೇಮಕಥೆಗಳು, ಬಲಾತ್ಕಾರ, ಅಶ್ಲೀಲ ದೃಶ್ಯ ಮತ್ತು ಹಿಂಸಾಚಾರವನ್ನು ನೋಡುತ್ತಾರೆಯೋ, ಅವರು ಮುಂದೆ ಏನಾಗಬಹುದು?

ದೂರದರ್ಶನದಿಂದ ಮಕ್ಕಳ ಮೇಲೆ ಚಲನಚಿತ್ರ ಕಲಾವಿದರ, ಕ್ರಿಕೆಟ್ ಆಟಗಾರರಂತಹ ತಪ್ಪು ಆದರ್ಶಗಳು ನಿರ್ಮಾಣವಾಗುತ್ತಿವೆ ಮತ್ತು ಸಮರ್ಥ ರಾಮದಾಸಸ್ವಾಮಿಗಳು, ಸ್ವಾಮೀ ವಿವೇಕಾನಂದರು ಮುಂತಾದ ಧರ್ಮಪುರುಷರ ಕಡೆಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು, ಲೋ.ತಿಲಕರು ಮುಂತಾದ ರಾಷ್ಟ್ರಪುರುಷರಂತಹ ಆದರ್ಶಗಳ ಕಡೆಗೆ ಮಕ್ಕಳ ನಿರ್ಲಕ್ಷ್ಯವಾಗುತ್ತಿದೆ. ದೂರದರ್ಶನವು ಮನೋರಂಜನೆಯ ಸಾಧನವಾಗದೇ, ಸಮಾಜದ ನೀತಿವಂತಿಕೆ, ಭಾರತೀಯ ಸಂಸ್ಕ ತಿ ಮತ್ತು ರಾಷ್ಟ್ರೀಯ ಆದರ್ಶಗಳನ್ನು ನಾಶಗೊಳಿಸುವ ಸಾಧನವಾಗಿಬಿಟ್ಟಿದೆ!

ಇಂದು ‘ಮೊಬೈಲ್’ನ್ನು ‘ಆವಶ್ಯಕತೆ’ ಎಂದು ಉಪಯೋಗಿಸುವುದಕ್ಕಿಂತ ‘ಫ್ಯಾಶನ್’ ಎಂದು ಹೆಚ್ಚು ಉಪಯೋಗಿಸಲಾಗುತ್ತದೆ! ಇನ್ನೊಬ್ಬರಲ್ಲಿ ‘ಟಚ್ ಸ್ಕ್ರೀನ್’ ಮೊಬೈಲನ್ನು ನೋಡಿದ ಕೂಡಲೇ ಮಕ್ಕಳಿಗೆ ತಮ್ಮಲ್ಲಿಯೂ ‘ಟಚ್ ಸ್ಕ್ರೀನ್’ ಮೊಬೈಲ್ ಇರಬೇಕು ಎಂದೆನಿಸುತ್ತದೆ! ಮದ್ಯ ಮತ್ತು ಸಿಗರೆಟ್‌ಗಳು ವ್ಯಸನಗಳಾಗಿವೆ; ಏಕೆಂದರೆ ಅವು ಶರೀರಕ್ಕೆ ಘಾತಕವಾಗಿವೆ. ‘ಇಂಟರ್‌ನೆಟ್’ನಿಂದ ಅಶ್ಲೀಲ ಛಾಯಾಚಿತ್ರಗಳನ್ನು ‘ಡೌನ್‌ಲೋಡ್’ ಮಾಡುವ ಮತ್ತು ಗಣಕಯಂತ್ರದಲ್ಲಿ ಗಂಟೆಗಟ್ಟಲೆ ಕುಳಿತು ‘ಟೆರರ್ ಗೇಮ್ಸ್’ ಆಡುವ ಮಕ್ಕಳು ನೀತಿಭ್ರಷ್ಟರಾಗುತ್ತಾರೆ, ಅವರ ಮನೋವೃತ್ತಿ ವಿಧ್ವಂಸಕವಾಗುತ್ತದೆ ಮತ್ತು ವಿಚಾರಕ್ಷಮತೆಯು ಕುಂಠಿತಗೊಳ್ಳುತ್ತದೆ. ಹಾಗಾದರೆ ಇಂಟರ್‌ನೆಟ್ ಮತ್ತು ವೀಡಿಯೋ ಗೇಮ್ಸ್‌ಗಳೂ ಕೂಡ ಮನೋಘಾತಕ ವ್ಯಸನಗಳಲ್ಲವೇ?

ಮಕ್ಕಳೇ, ಆಧುನಿಕ ವಿಜ್ಞಾನವು ದೂರದರ್ಶನ, ವೀಡಿಯೋ ಗೇಮ್ಸ್ ಮುಂತಾದವುಗಳನ್ನು ಸುಖ ಪ್ರಾಪ್ತಿಗಾಗಿ ಕಂಡು ಹಿಡಿಯಿತು. ನಮ್ಮ ಪ್ರಾಚೀನ ಋಷಿಮುನಿಗಳೂ ವೈಜ್ಞಾನಿಕರಾಗಿದ್ದರು. ಗುರುತ್ವಾಕರ್ಷಣೆಯ ಸಿದ್ಧಾಂತ, ಆಕಾಶಯಾನ (ವಿಮಾನ), ಶರೀರದ ಮೇಲಿನ ಶಸ್ತ್ರಕ್ರಿಯೆ ಮುಂತಾದವುಗಳನ್ನು ಪಾಶ್ಚಾತ್ಯ ವಿಜ್ಞಾನಿಗಳಿಗಿಂತ ನೂರಾರು ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ಕಂಡು ಹಿಡಿದಿದ್ದಾರೆ. ಅವರು ವಿಜ್ಞಾನವನ್ನು ಮಾನವನ ಹಿತಕ್ಕಾಗಿ ಉಪಯೋಗಿಸಿದರು. ಅವರು ಮೋಹಿತರಾಗಿ ತಾತ್ಕಾಲಿಕ ಸುಖದ ಹಿಂದೆ ಹೋಗಲು ಕಲಿಸದೇ, ಸತತವಾಗಿ ಉಳಿಯುವ ಆನಂದ ಮತ್ತು ಮನಃಶಾಂತಿಯನ್ನು ಕಂಡು ಹಿಡಿಯಲು ಕಲಿಸಿದರು. ಮಕ್ಕಳೇ, ಆದುದರಿಂದ ದೂರದರ್ಶನ, ಇಂಟರ್‌ನೆಟ್, ವೀಡಿಯೋ ಗೇಮ್ಸ್ ಮುಂತಾದವುಗಳನ್ನು ತಾತ್ಕಾಲಿಕ ಸುಖ ಪಡೆಯಲು ಉಪಯೋಗಿಸಬೇಡಿರಿ; ಏಕೆಂದರೆ ಅವುಗಳ ಮೋಹಜಾಲದಲ್ಲಿ ನೀವು ಸಿಲುಕಿಕೊಳ್ಳುತ್ತಾ ಹೋಗುವಿರಿ ಮತ್ತು ಜೀವನದ ಅತ್ಯಮೂಲ್ಯ ಸಮಯ ಮತ್ತು ಹಣವನ್ನೂ ಕಳೆದುಕೊಳ್ಳುವಿರಿ! ಹೀಗಾಗಬಾರದೆಂದೇ ಈ ಗ್ರಂಥದಲ್ಲಿ ದೂರದರ್ಶನ, ಇಂಟರ್‌ನೆಟ್, ವೀಡಿಯೋ ಗೇಮ್ಸ್ ಮುಂತಾದವುಗಳಿಂದಾಗುವ ಶಾರೀರಿಕ, ಮಾನಸಿಕ, ರಾಷ್ಟ್ರೀಯ, ಸಾಂಸ್ಕ ತಿಕ ಮುಂತಾದ ವಿವಿಧ ಸ್ತರಗಳಲ್ಲಿನ ಹಾನಿಗಳನ್ನು ಹೇಳಲಾಗಿದೆ.

ಸ್ವಾಮಿ ವಿವೇಕಾನಂದರು, ‘ಜೀವನದಲ್ಲಿ ವಿಜ್ಞಾನ ಮತ್ತು ಧರ್ಮ ಇವುಗಳ ಯೋಗ್ಯ ಜೊತೆ ನೀಡುವುದು ಮಹತ್ವದ್ದಾಗಿದೆ’ ಎಂದು ಹೇಳುತ್ತಿದ್ದರು. ನಿಜವಾದ ಆನಂದವು ಸುಖದ ಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ. ಆದುದರಿಂದ ಧರ್ಮಪಾಲನೆ ಮತ್ತು ಧರ್ಮಕಾರ್ಯಗಳ ಸದುದ್ದೇಶದಿಂದ ವಿಜ್ಞಾನವನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಇದಕ್ಕಾಗಿಯೇ ಈ ಗ್ರಂಥದಲ್ಲಿ ದೂರದರ್ಶನ, ಮೊಬೈಲ್ ಮತ್ತು ಇಂಟರ್‌ನೆಟ್‌ಗಳನ್ನು ಧರ್ಮ, ಹಾಗೆಯೇ ರಾಷ್ಟ್ರ ಕಾರ್ಯಕ್ಕಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಹೇಳಲಾಗಿದೆ.

ಪಾಲಕರೇ ಮಕ್ಕಳ ಮೊದಲ ‘ಶಿಕ್ಷಕ’ ರಾಗಿರುತ್ತಾರೆ. ಇಂದು ಪಾಲಕರೇ ಮನೆಯಲ್ಲಿ ಕೇಬಲ್ ಜೋಡಣೆ ಮಾಡಿಸುತ್ತಾರೆ, ಮಕ್ಕಳು ಹಠ ಮಾಡಿದಾಗ ಅವರಿಗೆ ಮೊಬೈಲ್ ಮತ್ತು ವೀಡಿಯೋ ಗೇಮ್ಸ್ ಕೊಡಿಸುತ್ತಾರೆ! ನಂತರ ದೂರದರ್ಶನ ಮತ್ತು ಇಂಟರ್‌ನೆಟ್‌ಗಳಿಂದ ಮಕ್ಕಳು ಕೆಟ್ಟರೆ ಅದರಲ್ಲಿ ಪಾಲಕರದ್ದೂ ಅಷ್ಟೇ ತಪ್ಪಿದೆ ಎಂಬುದನ್ನು ಪಾಲಕರು ಗಮನದಲ್ಲಿಟ್ಟುಕೊಳ್ಳಬೇಕು. ಇದು ಮಕ್ಕಳ ಉಜ್ವಲ ಭವಿಷ್ಯದ ಕಾಳಜಿಯಿರುವ ಪಾಲಕರೂ ಓದಬೇಕಾದಂತಹ ಗ್ರಂಥವಾಗಿದೆ.

ಈ ಗ್ರಂಥವನ್ನು ಓದಿ ದೂರದರ್ಶನ, ಇಂಟರ್‌ನೆಟ್ ಇತ್ಯಾದಿಗಳನ್ನು ಮಕ್ಕಳು ರಾಷ್ಟ್ರಸೇವೆ ಮತ್ತು ಧರ್ಮಸೇವೆಗಳಿಗಾಗಿ ಉಪಯೋಗಿಸಿದರೆ ಈ ಗ್ರಂಥವನ್ನು ನಿರ್ಮಿಸಿದ ಉದ್ದೇಶವು ಸಾರ್ಥಕವಾಗುತ್ತದೆ. ಇಂತಹ ಸದ್ಬುದ್ಧಿ ಮಕ್ಕಳಲ್ಲಿ ಬರಲಿ, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ! - ಸಂಕಲನಕಾರರು

ಈ ಗ್ರಂಥದಲ್ಲಿರುವ ವಿಷಯಗಳ ಬಗ್ಗೆ ಸಂಕ್ಷಿಪ್ತ ಪರಿವಿಡಿ
ದೂರದರ್ಶನದಿಂದಾಗುವ ಶಾರೀರಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಹಾನಿಗಳು
ದೂರದರ್ಶನದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಪ್ರಮಾಣ
ಅನಾವಶ್ಯಕ ದೂರದರ್ಶನವನ್ನು ನೋಡುವ ಅಭ್ಯಾಸವನ್ನು ಹೇಗೆ ತೆಗೆಯಬೇಕು?
ಮಕ್ಕಳಿಂದ ಹೇಗೆ ಮೊಬೈಲ್‌ನ ದುರುಪಯೋಗವಾಗುತ್ತದೆ?
ಮಕ್ಕಳೇ, ಮೊಬೈಲ್‌ನ ಸದುಪಯೋಗ ಹೇಗೆ ಮಾಡುವಿರಿ?
ಇಂಟರ್‌ನೆಟ್ ಎಂದರೆ ಆಧುನಿಕ ಪೀಳಿಗೆಗೆ ತಗಲಿದ ಒಂದು ವ್ಯಸನ!
ಇಂಟರನೆಟ್‌ಗೆ ಬಲಿಯಾದುದರಿಂದಾಗುವ ಹಾನಿಗಳು
ಇಂಟರನೆಟ್‌ನಿಂದಾಗುವ ಮೋಸಗಳು
ಇಂಟರನೆಟ್‌ನ ಸದುಪಯೋಗ ಮಾಡಿ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳಾಗಿ!
ವೀಡಿಯೋ ಗೇಮ್ಸ್‌ನಿಂದಾಗುವ ಹಾನಿಗಳು
ವೀಡಿಯೋ ಗೇಮ್ಸ್‌ನ ಚಟವನ್ನು ಹೇಗೆ ಬಿಡಿಸಬೇಕು?
ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಈ ಗ್ರಂಥದಲ್ಲಿದೆ.

1 comment:

  1. A VERY VERY VERY ESSENTIAL TIMELY NEEDED GRANTH. BY THE GRACE OF BHAGAVAN SRI KRISHNA THIS GRANTH MAY HAVE VIDE PUBLICITY AND PARENTS AND CHILDREN SHOULD READ THIS SEVERAL TIME AS A TEXT FOR MORAL EDUCATION. JAI SRI KRUSHNA.

    ReplyDelete

Note: only a member of this blog may post a comment.