‘ಮದ್ಯದಲ್ಲಿ ಯಾವುದೇ ವಸ್ತುವಿನಲ್ಲಿನ ನೀರಿನ ಅಂಶವನ್ನು ಹೀರಿಕೊಳ್ಳುವ ಗುಣವಿದೆ. ಆದುದರಿಂದ ಮದ್ಯವು ದೇಹದ ಯಾವ ಭಾಗವನ್ನು ಸ್ಪರ್ಶಿಸಿದರೂ, ಅಲ್ಲಿ ದಾಹ ಉಂಟಾಗುತ್ತದೆ. ಕೆಲವೊಮ್ಮೆ ಚರ್ಮವು ಸುಡುತ್ತದೆ. ಇದರಿಂದ ‘ಹೊಟ್ಟೆಯೊಳಗಿನ ಅತಿಸಂವೇದನಾಶೀಲ ತ್ವಚೆಯ ಮೇಲೆ ಎಂತಹ ಪರಿಣಾಮವಾಗ ಬಹುದು’ ಎಂಬುದನ್ನು ಊಹಿಸಿ. - ಹ.ಭ.ಪ.ಸುಧಾತಾಯಿ ಧಾಮಣಕರ (೨೦)
ಸಕ್ಕರೆ ಮತ್ತು ಉಪ್ಪಿಗಿಂತ ೪೦೦೦ ಪಟ್ಟು ವೇಗದಿಂದ ಮದ್ಯವು ರಕ್ತದಲ್ಲಿ ಬೆರೆಯುತ್ತದೆ
ಮದ್ಯದ ಸೇವನೆಯಿಂದ ಸ್ಪರ್ಶಜ್ಞಾನವಿಲ್ಲದಂತಾಗುತ್ತದೆ. ತನ್ನ ಸ್ವಂತದ ಕೈ ಸ್ಪರ್ಶವೂ ತನಗೆ ಬೇರೆಯವರದ್ದಾಗಿದೆ ಎಂದೆನಿಸುತ್ತದೆ. ಸಕ್ಕರೆ ಮತ್ತು ಉಪ್ಪಿಗಿಂತ ೪೦೦೦ ಪಟ್ಟು ವೇಗದಿಂದ ಮದ್ಯವು ರಕ್ತದಲ್ಲಿ ಬೆರೆಯುತ್ತದೆ. ಹಾಗೆಯೇ ಮದ್ಯವು ರಕ್ತದಲ್ಲಿ ಇಂಗಾಲ ಡೈಆಕ್ಸೈಡ್ ಮತ್ತು ಪ್ರಾಣವಾಯುಗಳಿಗಿಂತ ೨೦೦ ಪಟ್ಟು ಹೆಚ್ಚು ಇಂಗುತ್ತದೆ. ಮದ್ಯದ ಕಣಗಳು ಪ್ರತ್ಯಕ್ಷ ಅಡ್ಡ ಲಂಬಗೋಲಾಕಾರವಾಗಿರುತ್ತವೆ, ಆದರೆ ರಕ್ತದಲ್ಲಿ ಹರಿಯುವಾಗ ಅವು ಎರಡು ಉದ್ದ ಲಂಬಗೋಲ ಒಟ್ಟಿಗೆಯಿರುವ ಆಕೃತಿಯಂತೆ ಹರಿಯುತ್ತವೆ.
ಇತರ ಪರಿಣಾಮಗಳು
ಅ. ಸ್ಪರ್ಶಜ್ಞಾನವಿಲ್ಲದಂತಾಗುತ್ತದೆ
ಆ. ಶರೀರದ ಮೇಲೆ ಪರಿಣಾಮವಾಗುತ್ತದೆ
ಇ. ಮಜ್ಜಾರಜ್ಜುವಿನ (spinalcord) ಮೇಲೆ ಪರಿಣಾಮವಾಗುತ್ತದೆ
ಈ. ಕಣ್ಣುಗಳ ಮೇಲೆ ಪರಿಣಾಮವಾಗುವುದರಿಂದ ಪ್ರಖರ ಬೆಳಕನ್ನು ನೋಡಲಾಗುವುದಿಲ್ಲ, ಆದುದರಿಂದ ಮದ್ಯದ ಅಂಗಡಿಗಳನ್ನು ಮುಚ್ಚುವ ಸಮಯವಾದಾಗ ಗಿರಾಕಿಗಳನ್ನು ಹೊರಗೆ ಹಾಕಲು ಬೆಳಕನ್ನು ಹೆಚ್ಚಿಸುತ್ತಾರೆ.
ಉ. ಆಜ್ಞಾಚಕ್ರದ ಮೇಲೆ ಒತ್ತಡ ಬರುತ್ತದೆ.
ಊ. ಸ್ಮರಣಾಶಕ್ತಿಗೆ ಧಕ್ಕೆಯಾಗುತ್ತದೆ. ಇದರಿಂದ ಹಳೆಯ ನೆನಪುಗಳು ಜಾಗೃತವಾಗುತ್ತವೆ. ‘ಕುಡಿದ ಮನುಷ್ಯನು ಸುಳ್ಳು ಹೇಳುವುದಿಲ್ಲ’ ಎಂಬುದು ಶೇ.೮೫ರಷ್ಟು ಸತ್ಯವಾಗಿದೆ.
ಮದ್ಯವನ್ನು ತಯಾರಿಸಲು ದ್ರಾಕ್ಷಿಗಳನ್ನು ಹಿಚುಕುವುದು, ಮದ್ಯ ಮಾರಾಟ ಮಾಡುವುದು, ಮದ್ಯ ಖರೀದಿ ಅಥವಾ ಮದ್ಯವನ್ನು ಮಾರಿ ಜೀವನ ನಡೆಸುವುದು ಪಾಪವೇ ಆಗಿದೆ ಎಂದು ಕುರಾನಿನಲ್ಲಿ ಹೇಳಲಾಗಿದೆ
ಕುರಾನಿನಲ್ಲಿಯೂ ಮದ್ಯವು ನಿಷಿದ್ಧವಾಗಿದೆ. ಕುರಾನನ್ನು ಟಂಬನರ್ ಕಂಪನಿಯು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದೆ. ಅದರ ಪ್ರಸ್ತಾವನೆಯಲ್ಲಿ ಸೆಲ್‌ಸಾಹೇಬರು ಹೀಗೆ ಬರೆಯುತ್ತಾರೆ, ‘ಕುರಾನಿನಲ್ಲಿ ಅನೇಕ ಕಡೆ ಮದ್ಯ ನಿಷೇಧದ ಉಲ್ಲೇಖವಿದೆ. ಅದರಲ್ಲಿ ‘ಮದ್ಯದ ರುಚಿ ನೋಡುವುದೂ ಪಾಪಕರವಾಗಿದೆ, ಅಲ್ಲದೇ ಮದ್ಯ ತಯಾರಿಸಲು ದ್ರಾಕ್ಷಿಗಳನ್ನು ಹಿಚುಕುವುದು, ಮದ್ಯ ಮರಾಟ ಮಾಡುವುದು ಅಥವಾ ಮದ್ಯದ ಖರೀದಿ ಅಥವಾ ಮದ್ಯವನ್ನು ಮಾರಿ ಜೀವನ ನಡೆಸುವುದೂ ಪಾಪವೇ ಆಗಿದೆ.’ - ಹ.ಭ.ಪ.ಸುಧಾತಾಯಿ ಧಾಮಣಕರ (೨೧)
ಮದ್ಯಪಾನವನ್ನು ಎಲ್ಲ ಧರ್ಮಗಳು ನಿಷೇಧಿಸಿವೆ
ವಿಶ್ವದಲ್ಲಿನ ಎಲ್ಲ ಧರ್ಮಗಳು ಮದ್ಯಪಾನವನ್ನು ನಿಷೇಧಿಸಿವೆ. ವೇದಗಳು ಸುರಾಪಾನವನ್ನು ಮಹಾಪಾಪವೆಂದು ಹೇಳಿ, ಅದನ್ನು ಕಠೋರವಾಗಿ ನಿಷೇಧಿಸಿವೆ.
ಮದ್ಯ ಕುಡಿಯುವವನಷ್ಟೇ ಅಲ್ಲ, ಅವನೊಂದಿಗೆ ಅವನ ಸಹವಾಸದಲ್ಲಿರುವವರೂ ಮಹಾಪಾತಕಿಗಳಾಗಿದ್ದಾರೆ. - ಗುರುದೇವ ಡಾ.ಕಾಟೇಸ್ವಾಮೀಜಿ
ಮದ್ಯಪಾನವನ್ನು ನಿಷೇಧಿಸಿದ ಹಿಂದೂ ಧರ್ಮದಲ್ಲಿನ ಶ್ರುತಿ
ಯಕ್ಷರಕ್ಷಃಪಿಶಾಚಾನ್ನಂ ಮದ್ಯಂ ಮಾಂಸಂ ಸುರಾಸವಮ್|
- ಮನುಸ್ಮೃತಿ, ಅಧ್ಯಾಯ ೧೧, ಶ್ಲೋಕ ೯೫
ಅರ್ಥ: ಮದ್ಯ, ಮಾಂಸ ಮತ್ತು ಮೂರು ವಿಧದ (ಗೌಡಿ, ಪೈಷ್ಟೀ ಮತ್ತು ಮಾಧ್ವೀ) ಮದ್ಯಗಳು ಯಕ್ಷ, ರಾಕ್ಷಸ ಮತ್ತು ಪಿಶಾಚಿಗಳ ಅನ್ನವಾಗಿದೆ.
ಮದ್ಯಪಾನದಿಂದಾಗುವ ಆಧ್ಯಾತ್ಮಿಕ ದುಷ್ಪರಿಣಾಮಗಳನ್ನು ತೋರಿಸುವ ಈ ವೀಡಿಯೋ ನೋಡಿ
(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ ‘ಸಾತ್ತ್ವಿಕ ಆಹಾರದ ಮಹತ್ವ’)
ಆಹಾರಕ್ಕೆ ಸಂಬಂಧಿತ ವಿಷಯಗಳು
ಮದ್ಯಪಾನ ಮಾಡುವುದು thadeyudu heage ????//
ReplyDeleteOriginal Post from: http://dharmagranth.blogspot.in/2012/12/blog-post_6350.html
© Sanatan Sanstha - All Rights Reserved