ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?

ಸ್ಟೀಲ್ ಧಾತುವಿನ ಉಪಕರಣಗಳಿಗಿಂತ ತಾಮ್ರದ ಅಥವಾ ಹಿತ್ತಾಳೆಯ ಉಪಕರಣಗಳನ್ನು ಉಪಯೋಗಿಸುವುದು ಏಕೆ ಹೆಚ್ಚು ಶ್ರೇಯಸ್ಕರವಾಗಿದೆ?

೧. ಸ್ಟೀಲ್ ಧಾತುವಿನ ಉಪಕರಣಗಳಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ ಮತ್ತು ಅದರಲ್ಲಿ ಕಪ್ಪು ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿರುತ್ತದೆ: ಪೂಜೆಗಾಗಿ ಇತ್ತೀಚೆಗೆ ಅನೇಕ ಜನರು ಸ್ಟೀಲ್ ಧಾತುವಿನ ಉಪಕರಣಗಳನ್ನು ಉಪಯೋಗಿಸುತ್ತಿದ್ದಾರೆ. ಸ್ಟೀಲ್ ಧಾತುವಿನಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಎಲ್ಲಕ್ಕಿಂತ ಕಡಿಮೆ ಮತ್ತು ಕಪ್ಪುಶಕ್ತಿಯನ್ನು ಆಕರ್ಷಿಸುವ ಸಾಧ್ಯತೆಯು ಎಲ್ಲಕ್ಕಿಂತ ಹೆಚ್ಚಿರುತ್ತದೆ. ಸ್ಟೀಲ್‌ನ ಉಪಕರಣಗಳಿಂದ ನಮಗೆ ಹೆಚ್ಚಿನ ಲಾಭ ಆಗುವುದಿಲ್ಲ; ಏಕೆಂದರೆ ಅವುಗಳಿಂದ ನಮಗೆ ಸಾತ್ತ್ವಿಕತೆ ಮತ್ತು ಚೈತನ್ಯವು ಸಿಗುವುದಿಲ್ಲ ಮತ್ತು ಭಾವಜಾಗೃತಿಯೂ ಆಗುವುದಿಲ್ಲ.

೨. ತಾಮ್ರ ಮತ್ತು ಹಿತ್ತಾಳೆಯಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ: ತಾಮ್ರ ಮತ್ತು ಹಿತ್ತಾಳೆಯ ಧಾತುಗಳ ಪ್ರತಿಯೊಂದು ಕಣದಲ್ಲಿ ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯು ಹೆಚ್ಚಿರುತ್ತದೆ. ಹಾಗೆಯೇ ಪ್ರತಿದಿನ ಪೂಜೆಯನ್ನು ಮಾಡುವುದಕ್ಕಿಂತ ಮೊದಲು ಹುಣಸೆ ಮತ್ತು ನಿಂಬೆಹಣ್ಣನ್ನು ಉಪಯೋಗಿಸಿ ತಾಮ್ರ-ಹಿತ್ತಾಳೆಯ ಉಪಕರಣಗಳನ್ನು ಸ್ವಚ್ಛಗೊಳಿಸುವುದರಿಂದ ಅವುಗಳ ಮೇಲೆ ಬಂದಿರುವ ಕಪ್ಪು ಆವರಣವೂ ದೂರವಾಗುತ್ತದೆ.

೩. ತಾಮ್ರದ ವೈಶಿಷ್ಟ್ಯಗಳು
ಅ. ತಾಮ್ರದಲ್ಲಿ ಎಲ್ಲ ದೇವತೆಗಳ ತತ್ತ್ವಗಳನ್ನು ಶೇ.೩೦ರಷ್ಟು ಗ್ರಹಿಸುವ ಕ್ಷಮತೆಯಿದೆ.
ಆ. ತಾಮ್ರದಲ್ಲಿ ಶೇ.೩೦ರಷ್ಟು ಸಾತ್ತ್ವಿಕತೆಯನ್ನು ಗ್ರಹಿಸುವ ಕ್ಷಮತೆಯಿದೆ. ಆದುದರಿಂದ ತಾಮ್ರವನ್ನು ಮಂಗಲಸ್ವರೂಪವೆಂದು ತಿಳಿಯುತ್ತಾರೆ ಮತ್ತು ಅದರಿಂದ ಭಗವಂತನು ಪ್ರಸನ್ನನಾಗುತ್ತಾನೆ.
ಇ. ತಾಮ್ರದಲ್ಲಿ ರಜ-ತಮವನ್ನು ನಾಶಗೊಳಿಸುವ ಕ್ಷಮತೆಯು ಶೇ.೭೦ರಷ್ಟಿದೆ. ಆದುದರಿಂದ ತಾಮ್ರದ ಪಾತ್ರೆಗಳಲ್ಲಿ ಯಾವುದೇ ವಸ್ತುವನ್ನು ಉದಾ.ನೀರನ್ನು ಇಟ್ಟರೆ ಅದರಲ್ಲಿರುವ ರಜ-ತಮವು ಶೇ.೭೦ರಷ್ಟು ಕಡಿಮೆಯಾಗುತ್ತದೆ ಮತ್ತು ಸಾತ್ತ್ವಿಕತೆಯು ಹೆಚ್ಚಾಗತೊಡಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೫.೧.೨೦೦೫, ರಾತ್ರಿ ೧೧.೪೯)

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!

2 comments:

  1. ಉಪಯುಕ್ತ ಮಾಹಿತಿ....... ಧರ್ಮಗ್ರಂಥ ಹೀಗೆ ಸದಾ ಧಾರ್ಮಿಕ ವಿಷಯಗಳನ್ನು ಜನರಿಗೆ ತಿಳಿಸಿ, ಸನಾತನ ಧರ್ಮವನ್ನು ಉಳಿಸಲಿ......
    ಸನಾತನ ಹಿಂದೂ ಧರ್ಮಕ್ಕೆ...
    ಜಯವಾಗಲಿ.....

    ReplyDelete
    Replies
    1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete

Note: only a member of this blog may post a comment.