೧ಅ. ಭಕ್ತಿಯೋಗಾನುಸಾರ ಮಹತ್ವ
೧. ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ ದೇವತೆಯ ಬಗ್ಗೆ ನಮ್ಮ ಭಕ್ತಿಭಾವವು ಹೆಚ್ಚಾಗಲು ಸಹಾಯವಾಗುತ್ತದೆ.
೨. ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮುಂತಾದ ಧಾರ್ಮಿಕ ವಿಧಿಗಳ ಸಮಯದಲ್ಲಿ ಹಾಗೂ ಆರತಿಯ ಸಮಯದಲ್ಲಿ ದೇವತೆಯ ಪವಿತ್ರಕಗಳು (ದೇವತೆಯ ಸೂಕ್ಷ್ಮಾತಿಸೂಕ್ಷ್ಮ ಚೈತನ್ಯ ಕಣಗಳು) ದೇವತೆಯ ಮೂರ್ತಿಯ ಕಡೆಗೆ ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿಸುತ್ತವೆ. ಇಂತಹ ಸಮಯದಲ್ಲಿ ನಾವು ದೇವಸ್ಥಾನದಲ್ಲಿ ಉಪಸ್ಥಿತರಿದ್ದರೆ ನಮಗೆ ಆ ಪವಿತ್ರಕಗಳ ಲಾಭವಾಗುತ್ತದೆ.
೩. ಸ್ವಯಂಭೂ ಅಥವಾ ಜಾಗೃತ ದೇವಸ್ಥಾನಗಳಲ್ಲಿ (ಉದಾ.೧೨ ಜ್ಯೋತಿರ್ಲಿಂಗಗಳು) ಹಾಗೆಯೇ ಸಂತರು ಕಟ್ಟಿಸಿರುವ ದೇವಸ್ಥಾನಗಳಲ್ಲಿ ಶಕ್ತಿ ಮತ್ತು ಚೈತನ್ಯದ ಪ್ರಮಾಣವು ಹೆಚ್ಚಿಗಿರುವು ದರಿಂದ ಇಂತಹ ದೇವಸ್ಥಾನಗಳ ದರ್ಶನಕ್ಕೆ ಹೋದರೆ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.
೧ಆ. ಜ್ಞಾನಯೋಗಕ್ಕನುಸಾರ ಮಹತ್ವ: ‘ದ್ರಷ್ಟಾ ದೃಶ್ಯವಶಾದ್ಬದ್ಧಃ ದೃಶ್ಯಾಭಾವೇ ವಿಮುಚ್ಯತೆ|’ ಅಂದರೆ ದ್ರಷ್ಟಾ (ಜೀವವು) ದೃಶ್ಯದಿಂದಾಗಿ ಬದ್ಧನಾಗುತ್ತಾನೆ ಮತ್ತು ಯಾವಾಗ ದೃಶ್ಯದ ಅಭಾವವಾಗುತ್ತದೆಯೋ ಆಗ ಅವನು ಮುಕ್ತನಾಗುತ್ತಾನೆ. ಉದಾ. ಇಷ್ಟವಾದ ಪದಾರ್ಥ ನಮ್ಮೆದುರಿಗಿದ್ದರೆ ನಮಗೆ ಅದನ್ನು ತಿನ್ನಬೇಕೆಂದು ಅನಿಸುತ್ತದೆ, ಇತರ ಸಮಯದಲ್ಲಿ ಹಾಗೆನಿಸುವುದಿಲ್ಲ; ಆದರೆ ದೃಶ್ಯಗಳಂತೂ ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ಹಾಗಾದರೆ ಯಾವಾಗ ದೃಶ್ಯದ ಅಭಾವವಾಗುವುದು? ಹೀಗಿದ್ದಾಗ ದ್ರಷ್ಟಾನಿಗೆ ಮುಕ್ತವಾಗಲು ಇರುವ ಏಕೈಕ ಮಾರ್ಗವೆಂದರೆ, ಅವನು ಯಾವ ದೃಶ್ಯಗಳಲ್ಲಿ ಬದ್ಧನಾಗುವುದರಿಂದ ಅವನಿಗೆ ಮುಕ್ತವಾಗಲು ಸಹಾಯವಾಗುತ್ತದೆಯೋ ಅಂತಹ ದೃಶ್ಯಗಳನ್ನಿಡುವುದು, ಅಂದರೆ ಅವುಗಳನ್ನು ನೋಡಿ ಅವನ ವೃತ್ತಿಯು ತಮೋಗುಣದಿಂದ ರಜೋಗುಣದ ಕಡೆಗೆ ಮತ್ತು ರಜೋಗುಣದಿಂದ ಸತ್ತ್ವದ ಕಡೆಗೆ ಹೋಗುವುದು. ಬದ್ಧನಾದ ದ್ರಷ್ಟಾ ಯಾವ ದೃಶ್ಯಗಳಿಂದ ಮುಕ್ತನಾಗಬಹುದೋ, ಅಂತಹ ದೃಶ್ಯಗಳಲ್ಲಿನ ಒಂದು ದೃಶ್ಯವೆಂದರೆ ದೇವಸ್ಥಾನ. ದೇವಸ್ಥಾನದಲ್ಲಿ ಅಧ್ಯಾತ್ಮಕ್ಕೆ ಪೂರಕವಾಗಿರುವ ಈಶ್ವರನ ಅವತಾರಗಳ ಜನ್ಮಕರ್ಮಗಳ ಮತ್ತು ಲೀಲೆಗಳ ಹಾಗೆಯೇ ಅವನ ಭಕ್ತರ ಗುಣಗಾನ ಮಾಡುವ ಪ್ರವಚನಗಳು, ಹರಿಕಥೆಗಳು ನಡೆಯುತ್ತಿರುತ್ತವೆ. ಅವುಗಳನ್ನು ಕೇಳುವುದ ರಿಂದ ಈ ವಿಷಯಗಳ ಬಗ್ಗೆ ಮನನವಾಗಿ ಅದರ ಪರಿಣಾಮವು ನಿದಿಧ್ಯಾಸದಲ್ಲಿ ಆಗುತ್ತದೆ ಮತ್ತು ಅದರಿಂದ ಆತ್ಮಸಾಕ್ಷಾತ್ಕಾರವಾಗಲು ಸಹಾಯವಾಗುತ್ತದೆ.’ - ಪ.ಪೂ.ಕಾಣೆ ಮಹಾರಾಜರು, ನಾರಾಯಣಗಾಂವ, ಮಹಾರಾಷ್ಟ್ರ.
೧ಇ. ದೇವಸ್ಥಾನಗಳಿಂದ ಹತ್ತೂ ದಿಕ್ಕುಗಳು (ದಶದಿಕ್ಕುಗಳು) ಚೈತನ್ಯಮಯವಾಗುವುದು: ‘ದೇವಸ್ಥಾನಗಳು ಈಶ್ವರನ ಶಕ್ತಿಯನ್ನು ಆಕರ್ಷಿಸುವ, ಪ್ರಕ್ಷೇಪಿಸುವ ಮತ್ತು ಹರಡುವ ಕೇಂದ್ರಗಳಾಗಿವೆ. ದೇವಸ್ಥಾನಗಳಿಂದ ಸತತವಾಗಿ ಈಶ್ವರನ ಶಕ್ತಿಯು ಆಕರ್ಷಿಸಲ್ಪಟ್ಟು ಎಲ್ಲ ದಿಕ್ಕುಗಳಲ್ಲಿ ಪ್ರಕ್ಷೇಪಿಸುತ್ತಿರುತ್ತದೆ. ಈಶ್ವರನ ಶಕ್ತಿಯು ದೇವಸ್ಥಾನದ ಕ್ಷೇತ್ರದಲ್ಲಿ ವ್ಯಾಪಿಸಿ ವಾಯುಮಂಡಲ ಮತ್ತು ಜೀವಗಳ ಶುದ್ಧೀಕರಣವನ್ನು ಮಾಡುತ್ತದೆ.’
೧ಇ೧. ‘ಅಧೋದಿಶೆ: ದೇವಸ್ಥಾನದ ಅಡಿಪಾಯ ಹಾಕುವಾಗ ಮಾಡಲಾಗುವ ಶಿಲೆಯ ಸ್ಥಾಪನೆಯಿಂದ ದೇವಸ್ಥಾನದ ಅಧೋದಿಕ್ಕಿನ ವಾಯುಮಂಡಲವು ಚೈತನ್ಯ ಲಹರಿಗಳಿಂದ ತುಂಬಿಕೊಳ್ಳುತ್ತದೆ.
೧ಇ೨. ಅಷ್ಟದಿಕ್ಕುಗಳು: ದೇವಸ್ಥಾನದಲ್ಲಿ ದೇವತೆಯ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡುವುದರಿಂದ ಅಷ್ಟದಿಕ್ಕುಗಳು ಚೈತನ್ಯಮಯವಾಗುತ್ತವೆ.
೧ಇ೩. ಊರ್ಧ್ವದಿಶೆ: ದೇವಸ್ಥಾನದ ಕಲಶದಿಂದ ಕಾರಂಜಿಯಂತೆ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ಅದರ ಸುತ್ತಮುತ್ತಲಿನ ಪರಿಸರದಲ್ಲಿರುವ ಊರ್ಧ್ವದಿಕ್ಕಿನ ವಾಯುಮಂಡಲವು ಶುದ್ಧವಾಗುತ್ತದೆ; ಹಾಗೆಯೇ ಈ ಲಹರಿಗಳಿಂದ ಹತ್ತೂ ದಿಕ್ಕುಗಳಿಂದ ಪ್ರವೇಶಿಸುವ ಕೆಟ್ಟ ಶಕ್ತಿಗಳಿಂದ ಗ್ರಾಮದ ರಕ್ಷಣೆಯಾಗಲು ಸಹಾಯವಾಗುತ್ತದೆ.’
(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆಯ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?’)

ಸಂಬಂಧಿತ ವಿಷಯಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?

No comments:
Post a Comment
Note: only a member of this blog may post a comment.