ಕರ್ನಾಟಕದ ಒಂದು ಕನ್ನಡ ದೈನಿಕದ ಪುರವಣಿಯಲ್ಲಿ ’ಹಗ್ ಜಮಾನಾ!’ ಎಂಬ ಲೇಖನ ಪ್ರಕಟವಾಗಿದೆ. ಅದರಲ್ಲಿ ಈ ಆಧುನಿಕ ಯುಗಕ್ಕೆ ಸಂಬಂಧಿಸಿದಂತೆ ’ಹಗ್ಗಿಂಗ್’ (ಅಪ್ಪಿಕೊಳ್ಳುವಿಕೆ) ಬಗೆಗಿನ ವಿಚಾರಗಳೊಂದಿಗೆ ’ಹಗ್ಗಿಂಗ್’ನಿಂದ ಪ್ರಯೋಜನವೂ ಇದೆ ಎಂದು ಲೇಖಕಿ ಬರೆದಿದ್ದಾರೆ. ಅಲ್ಲದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾರನ್ನಾದರೂ ಬರಮಾಡಿಕೊಳ್ಳುವಾಗ ಅಥವಾ ಬೀಳ್ಕೊಡುವಾಗ ನಮಸ್ಕಾರ ಎನ್ನುವ ಪದ್ಧತಿ ಇರುವುದರಿಂದ ತುಂಬಾ ಜನರು ’ಹಗ್’ ಬಗ್ಗೆ ಇನ್ನೂ ತಿಳಿದುಕೊಂಡಿಲ್ಲ ಅಷ್ಟೇ! ಎಂದೂ ಬರೆದಿದ್ದಾರೆ.
ಆದರೆ ’ಹಗ್’ನಿಂದಾಗುವ ಅಪಾರ ಹಾನಿಯ ಬಗ್ಗೆ ಯಾರೂ ತಿಳಿದುಕೊಂಡಿಲ್ಲ ಎನಿಸುತ್ತದೆ. ’ಹಗ್ಗಿಂಗ್’ನಿಂದ ದೊರೆಯುವ ಪ್ರಯೋಜನಗಳ ಹಾಗೂ ಹಾನಿಯ ಬಗ್ಗೆ ಆಸ್ಟ್ರೇಲಿಯಾದ Spiritual Science Research Foundation (ಮುಂದೆ SSRF ಎಂದು ಕರೆಯಲಾಗುವ) ಆಧ್ಯಾತ್ಮಿಕ ವೈಜ್ಞಾನಿಕ ಸಂಶೋಧನಾ ಪ್ರತಿಷ್ಠಾನವು ಆಳವಾದ ಅನೇಕ ಸೂಕ್ಷ್ಮ ಪ್ರಯೋಗಗಳನ್ನು ಮಾಡಿ ಅತ್ಯಂತ ಉಪಯುಕ್ತವಾದ ಆದರೆ ಜನ ಸಾಮಾನ್ಯರ ಜ್ಞಾನಕ್ಕೆ ಸುಲಭವಾಗಿ ನಿಲುಕದ ವಿಶೇಷ ಮಾಹಿತಿಗಳನ್ನು ಹೊರಗೆಡಹಿದೆ. ಮಾಹಿತಿಗಳು ಈ ಪ್ರತಿಷ್ಠಾನದ ಅಂತರ್ಜಾಲದಲ್ಲಿ http://www.spiritualresearchfoundation.org/hugging-people ಎಂಬ ಲಿಂಕ್‌ನಲ್ಲಿ ಲಭ್ಯವಿವೆ. ಜನಸಾಮಾನ್ಯರ ತಿಳುವಳಿಕೆಗಾಗಿ ಅವುಗಳಿಂದ ಆಯ್ದ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ಒದಗಿಸಲಾಗಿದೆ.
ನಮಗರಿಯದ ಸೂಕ್ಷ್ಮ ಜಗತ್ತು
ಭೌತಿಕ ಪ್ರಪಂಚದಲ್ಲಿ ಕೋಟ್ಯವಧಿ ಜೀವಿಗಳಿರುವಂತೆಯೇ ನಮಗರಿಯದ ಸೂಕ್ಷ್ಮ ಜಗತ್ತನಲ್ಲೂ ಕೂಡಾ ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯ ದೈವಿಕ ಶಕ್ತಿಗಳೂ, ನಿರಂತರ ಆಧ್ಯಾತ್ಮಿಕ ಸಾಧನೆ ಮಾಡಿ ದೈವಿಕ ಶಕ್ತಿಯನ್ನು ಸಂಪಾದಿಸಿಕೊಳ್ಳದ ಜನಸಾಮಾನ್ಯರನ್ನು ತಮ್ಮ ಅಂಕೆಯಲ್ಲಿರಿಸಿಕೊಂಡು ಅವರ ಶರೀರವನ್ನು ಆಶ್ರಯಿಸಿಕೊಂಡು ಅವರ ಮೂಲಕ ತಮಗೆ ಹಿತವಾಗದ ಜೀವಗಳಿಗೆ ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ನೀಡುವ ಅಥವಾ ತಮ್ಮ ದುಶ್ಚಟಗಳ ತೀಟೆ ತೀರಿಸಿಕೊಳ್ಳುವ ಅಸಂಖ್ಯಾತ ಅನಿಷ್ಟ ಶಕ್ತಿಗಳೂ ಇವೆ. ಅವುಗಳ ಚಿತಾವಣೆಯಿಂದಲೇ ಇಂದು ಅನೇಕ ಕೊಲೆ, ದರೋಡೆ, ಸಾಮೂಹಿಕ ಅತ್ಯಾಚಾರ, ಕಳವು, ಆತ್ಮಹತ್ಯೆ ಇಂತಹ ದುಷ್ಕೃತ್ಯಗಳು ಸಾರಾಸಗಟಾಗಿ ನಡೆಯುತ್ತಲಿವೆ. ಈ ಶಕ್ತಿಗಳಲ್ಲಿ ಪ್ರೇತ, ಪಿಶಾಚಿ, ಬೇತಾಳ, ರಾಕ್ಷಸ, ಮಾಂತ್ರಿಕ, ಮಾಟಗಾರ, ಮಾಟಗಾರ್ತಿ ಕರಿನಾಗ ಇತ್ಯಾದಿ ಬೇರೆ ಬೇರೆ ಸ್ತರದ ಹಲವು ಪ್ರಭೇದಗಳಿವೆ.
ಇವುಗಳು ನೀಡುವ ತೊಂದರೆಯ ಅನುಭವವು ಗ್ರಾಮೀಣ ಜನತೆಗೆ ಆಗಾಗ ಆಗುತ್ತಿರುತ್ತದೆ. ಪೇಟೆ ಪಟ್ಟಣಗಳ ನಾಗರಿಕರಿಗೂ ಅದರ ಅನುಭವವು ಆಗುತ್ತಿರುವುದಾದರೂ ವಿದ್ಯಾವಂತರೆನಿಸಿಕೊಂಡವರು ಅದನ್ನು ಮೂಢನಂಬಿಕೆ ಎಂದು ನಿರ್ಲಕ್ಷಿಸುತ್ತಾ ಉದಾಸೀನದಿಂದಿರುತ್ತಾರೆ. ಹಾಗೂ ಅವುಗಳಿಂದ ಬರುವ ತೊಂದರೆಗಳಿಗೆ ಆಧ್ಯಾತ್ಮಿಕ ಉಪಚಾರಗಳನ್ನು ಮಾಡಿಕೊಳ್ಳದೆ ಅಜ್ಞಾನದಿಂದ ಹಾಗೂ ಅಹಂಭಾವದಿಂದ ಸದಾ ಯಾತನೆ ಪಡುತ್ತಲೇ ಇರುತ್ತಾರೆ. ಇಂತಹ ಸೂಕ್ಷ್ಮ ಪ್ರಪಂಚದ ಅರಿವು ಕೇವಲ ಪಂಚ ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಹಾಗೂ ಮನಸ್ಸು ಮತ್ತು ಬುದ್ಧಿ ಇವುಗಳ ಮಿತಿಗಿಂತ ಆಚೆ ಇರುವ ಅತೀಂದ್ರಿಯ ಜ್ಞಾನ ಪಡೆದ ಸಂತ ಮಹಾತ್ಮರಿಗೆ ಹಾಗೂ ಉನ್ನತ ಸ್ತರದ ಕೆಲವು ಸಾಧಕರಿಗೆ ಮಾತ್ರ ಇರುತ್ತದೆ. SSRF ಸಂಸ್ಥೆಯಲ್ಲಿ ಇಂತಹ ಅತೀಂದ್ರಿಯ ಸೂಕ್ಷ್ಮ ಜ್ಞಾನವಿರುವ ವಿದೇಶೀ ಸಂತರು ಹಾಗೂ ಸಾಧಕರು ಇದ್ದು ಸೂಕ್ಷ್ಮ ಜಗತ್ತಿನ ಕುರಿತು ಸಂಶೋಧನೆಗಳಲ್ಲಿ ಸದಾ ನಿರತರಾಗಿ ಅಮೂಲ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಅನಿಷ್ಟ ಶಕ್ತಿಯ ಒಂದು ತ್ರಾಸದಾಯಕ ಅನುಭವ
ಸನಾತನ ಸಂಸ್ಥೆಯ ಸಾಧಕನಾದ ನನ್ನ ಹಾಗೂ ನನ್ನ ಪತ್ನಿಯ ಅನುಭವಕ್ಕೆ ಬಂದ ಅನಿಷ್ಟ ಶಕ್ತಿಗಳ ತೊಂದರೆಯ ಅನುಭವದ ಒಂದು ಪ್ರಸಂಗವನ್ನು ಹೇಳಲಿಚ್ಛಿಸುತ್ತೇನೆ. ಒಮ್ಮೆ ಒಂದು ಆಧ್ಯಾತ್ಮಿಕ ಕಾರ್ಯಕ್ರಮದ ಕೊನೆಯಲ್ಲಿ ಓರ್ವ ತರುಣಿಗೆ ಒಮ್ಮಿಂದೊಮ್ಮೆಲೇ ಅತೀವ ತ್ರಾಸವಾಗತೊಡಗಿತು. ಆಕೆಗೆ ಕೆಲವು ಆಧ್ಯಾತ್ಮಿಕ ಉಪಚಾರಗಳನ್ನು ಮಾಡಿಯೂ ಆಕೆಯಲ್ಲಿ ಸುಧಾರಣೆ ಕಂಡು ಬರಲಿಲ್ಲ. ಅದಕ್ಕಾಗಿ ನಾನು ನನ್ನ ಪತ್ನಿಯಲ್ಲಿ ಆ ತರುಣಿಯ ಕೈಹಿಡಿದುಕೊಂಡು ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿ ಜಪ ಮಾಡಲು ಹೇಳಿದೆ. ಸ್ವಲ್ಪ ಹೊತ್ತಿನಲ್ಲಿ ಅದರಿಂದ ಆ ತರುಣಿ ಪೂರ್ತಿ ಸುಧಾರಿಸಿಕೊಂಡಳು. ಆದರೆ ನನ್ನ ಪತ್ನಿಗೆ ಅವಳಂತೆಯೇ ತ್ರಾಸವಾಗತೊಡಗಿ ಅವಳು ಮೊದಲಿನಂತಾಗಲು ಹಲವು ಆಧ್ಯಾತ್ಮಿಕ ಉಪಚಾರಗಳೊಂದಿಗೆ ಎರಡು ದಿನ ಬೇಕಾಯಿತು! ಇಲ್ಲಿ ಆ ತರುಣಿಗೆ ತ್ರಾಸ ನೀಡುತ್ತಿದ್ದ ಅನಿಷ್ಟ ಶಕ್ತಿಯು ಅವಳನ್ನು ಬಿಟ್ಟು ನನ್ನ ಪತ್ನಿಗೆ ತ್ರಾಸ ಕೊಡಲಾರಂಭಿಸಿತ್ತು! ಹಾಗಿದ್ದರೆ ಯಾತನೆ ಪಡುತ್ತಿದ್ದ ಆ ತರುಣಿಗೆ ಸಾಂತ್ವನ ನೀಡಲು ಸಾಧಕಿಯಲ್ಲದ ಇನ್ನೋರ್ವ ಮಹಿಳೆ ಸ್ಪರ್ಶಿಸಿದ್ದರೆ ಏನಾಗಬಹುದಿತ್ತು ಎಂಬುದನ್ನು ಯೋಚಿಸಿ!
’ಹಗ್ಗಿಂಗ್’ ಬಗ್ಗೆ SSRF ಏನು ಹೇಳುತ್ತದೆ?
- ಜಗತ್ತಿನಾದ್ಯಂತ ’ಹಗ್ಗಿಂಗ್’ ಎಂಬುದು ಅಭಿನಂದನೆಯ, ಸದ್ಭಾವನೆಯ ಅಭಿವ್ಯಕ್ತಿಯ ಪ್ರತೀಕವೆಂದು ಹೇಳಲಾಗಿದೆ. ಆಯಾಯ ದೇಶದ ಸಂಸ್ಕೃತಿ, ಸಂದರ್ಭ ಹಾಗೂ ಸಂಬಂಧದ ನೆಲೆಯಲ್ಲಿ ’ಹಗ್ಗ್’ ಎಂಬುದು ಸಲಿಗೆಯ, ಪ್ರೇಮದ, ವಾತ್ಸಲ್ಯದ ಅಥವಾ ಮೈತ್ರಿಯ ಪ್ರತೀಕವಾಗಿದೆ. ಅಂತೆಯೇ ಒಬ್ಬನು ಮತ್ತೊಬ್ಬನಿಗೆ ಬೆಂಬಲ ಸೂಚಿಸಲು, ಸಮಾಧಾನ ನೀಡಲು ಅಥವಾ ದುಃಖೋಪಶಮನದ ಉದ್ದೇಶದಿಂದ ’ಹಗ್’ ಮಾಡಬಹುದು. ವಿಶೇಷವಾಗಿ ತಮ್ಮ ಪ್ರೀತಿ ಪಾತ್ರರನ್ನು ಆಲಂಗಿಸುವ ಹೆಚ್ಚಿನ ಮಂದಿಗೆ ಅದೊಂದು ಭಾವನಾತ್ಮಕ ಸ್ವಭಾವವೇ ಆಗಿದ್ದರೂ ಅದರಿಂದಾಗುವ ಅಪಾರ ಹಾನಿಯ ಬಗ್ಗೆ ಅವರಿಗೆ ಏನೇನೂ ತಿಳಿಯದು.
- ’ಹಗ್’ನಿಂದ ಹೆಚ್ಚಿನ ಜನರು ಒಂದಲ್ಲೊಂದು ರೀತಿಯಲ್ಲಿ ಅಪಾರ ದೈಹಿಕ ಹಾಗೂ ಮಾನಸಿಕ ಹಾನಿಯನ್ನು ತಂದುಕೊಳ್ಳುತ್ತಿದ್ದಾರೆ ಎಂಬುದು SSRF ನ ಸೂಕ್ಷ್ಮ ಪ್ರಯೋಗಗಳಿಂದ, ಸಂಶೋಧನೆಗಳಿಂದ ಸಾಬೀತಾಗಿದೆ.
- ಹಸ್ತ ಲಾಘವದಿಂದಾಗಿ, ಆಲಿಂಗನದಿಂದಾಗಿ ಚರ್ಮದ ಮಾಧ್ಯಮದಿಂದ ಪರಸ್ಪರರಲ್ಲಿ ಮನೆ ಮಾಡಿರುವ ಅನಿಷ್ಟ ಶಕ್ತಿಗಳು ಸುಲಭವಾಗಿ ವರ್ಗಾವಣೆ ಹೊಂದಬಲ್ಲವು. ಹಸ್ತದ ಚುಂಬನದಿಂದಾಗಿ ಅಥವಾ ಕೆನ್ನೆಗೆ ಮುತ್ತಿಕ್ಕುವುದರಿಂದ ಈ ಪ್ರಕ್ರಿಯೆಯು ಇನ್ನೂ ಜೋರಾಗಿ ಆಗಬಲ್ಲದು. ಅದರ ಚುಂಬನದಿಂದಂತೂ ಅನಿಷ್ಟ ಶಕ್ತಿಯ ವಿನಿಮಯವು ಅತೀ ಹೆಚ್ಚು ಪ್ರಮಾಣದಲ್ಲಿ ಜರಗಿ ತೊಂದರೆ ಹೆಚ್ಚುವುದು.
ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಆಲಿಂಗಿಸುವುದರಿಂದಾಗುವ ಪರಿಣಾಮಗಳು
- ಅನಿಷ್ಟ ಸೂಕ್ಷ್ಮ ಶಕ್ತಿಯ ನಿಯಂತ್ರಣದಲ್ಲಿರುವ ಓರ್ವ ವ್ಯಕ್ತಿಯೂ ಅಂತಹನೇ ಇನ್ನೊಬ್ಬನನ್ನು ಆಲಂಗಿಸಿದಾಗ ಜ್ಞಾನ ಶಕ್ತಿಯನ್ನು ಮಸುಕಾಗಿಸುವ ಗಾಢವಾದ ಕಪ್ಪು ಶಕ್ತಿಯ ನಿರ್ಮಾಣದಿಂದ ವಾತಾವರಣದಲ್ಲಿ ಸಹ ರಜ ತಮಗಳ ಆಧಿಕ್ಯದಿಂದ ಪ್ರತಿಕೂಲ ಪರಿಣಾಮ ಉಂಟಾಗುವುದು. ಅವರಿಬ್ಬರ ಅನಾಹತ ಚಕ್ರದ ಮೇಲೆ ಕಪ್ಪು ಶಕ್ತಿಯ ಸಂಗ್ರಹದಿಂದಾಗಿ ಅವರಿಗೆ ಹೆಚ್ಚಿನ ತ್ರಾಸ ಉಂಟಾಗುವುದು.
- ಅಂತಹ ವ್ಯಕ್ತಿಯು ಇನ್ನೊಬ್ಬ ಜನಸಾಮಾನ್ಯನನ್ನು ಆಲಂಗಿಸಿದಾಗ ಎರಡನೇ ವ್ಯಕ್ತಿಯಲ್ಲಿ ಸುಲಭವಾಗಿ ತ್ರಾಸದಾಯಕ ವಾತಾವರಣ ಉಂಟಾಗಬಹುದು ಮತ್ತು ಎರಡನೇ ವ್ಯಕ್ತಿಯು ದೈಹಿಕ ಹಾಗೂ ಮಾನಸಿಕ ಆಘಾತಕ್ಕೊಳಗಾಗಬಹುದು.
- ಅನಿಷ್ಟ ಶಕ್ತಿಯಿಂದ ತ್ರಾಸಕ್ಕೊಳಗಾದ ಅಂತಹದೇ ವ್ಯಕ್ತಿಯನ್ನು ಆಲಂಗಿಸಿದಾಗ ಕಪ್ಪು ಶಕ್ತಿಯ ಸಂಕ್ರಮಣದಿಂದ ಹಾಗೂ ಮಾನಸಿಕ ಕೋಶಗಳ ಘರ್ಷಣೆಯಿಂದಾಗಿ ಉಂಟಾಗುವ ತ್ರಾಸದಾಯಕ ರಜ ತಮಯುಕ್ತ ಲಹರಿಗಳಿಂದ ವಾತಾವರಣವೂ ಕೆಡಬಹುದು.
- ಆಧ್ಯಾತ್ಮಿಕ ಉನ್ನತಿ ಹೊಂದಿ ಸಂತರಾದವರು ಹಾಗೂ ೬೦% ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚಿರುವ ಸಾಧಕರು ಸಾಮಾನ್ಯ ವ್ಯಕ್ತಿಗಳನ್ನು ಆಲಂಗಿಸಿದಾಗ ಇಂತಹ ತೊಂದರೆಗಳಾಗುವ ಬದಲಾಗಿ ಆಧ್ಯಾತ್ಮಿಕ ಉಪಚಾರ ದೊರೆತು ಜನ ಸಾಮಾನ್ಯರಿಗೆ ಸಾತ್ತ್ವಿಕ ಸುಖ ಸಿಗುವುದು. ಇದರ ಜ್ವಲಂತ ಉದಾಹರಣೆಯೆಂದರೆ ಅಮ್ಮ ಎಂದು ಖ್ಯಾತಿ ಪಡೆದ ಪರಮ ಪೂಜ್ಯ ಮಾತಾ ಅಮೃತಾನಂದಮಯೀ ದೇವಿಯವರು ಭಕ್ತರನ್ನು ಅಪ್ಪಿಕೊಂಡು ಸಾಂತ್ವನ ನೀಡುತ್ತಿರುವುದರ ಅನುಭವವನ್ನು ಲಕ್ಷೋಪಲಕ್ಷಮಂದಿ ಅನುಭವಿಸಿದ್ದಾರೆ.
SSRF ಪ್ರಕಟಿಸಿರುವ ಮೇಲಿನ ಲಿಂಕ್‌ನಲ್ಲಿರುವ ಸೂಕ್ಷ್ಮ ಚಿತ್ರವು ಅನಿಷ್ಟ ಶಕ್ತಿಯ ಹಿಡಿತದಲ್ಲಿರುವ ಓರ್ವ ಮಹಿಳೆಯು ಸಾಮಾನ್ಯ ಪುರುಷನನ್ನು ಆಲಂಗಿಸಿ ಆತನ ದೇಹದಲ್ಲಿನ ವಿವಿಧ ಸೂಕ್ಷ್ಮ ಚಕ್ರಗಳ ಮೇಲೆ ಗಾಢವಾದ ಕಪ್ಪು ಶಕ್ತಿಯನ್ನು ಪಸರಿಸಿ, ಆತನ ಸುತ್ತ ಮಾಯಾವೀ ಸ್ಪಂದನಗಳ ಕವಚವನ್ನು ನಿರ್ಮಿಸಿ ಮೋಹಿನೀ ಶಕ್ತಿಯನ್ನು ಬಳಸಿ ಅವನ ಮಾನಸಿಕ ಸಾಮ್ರಾಜ್ಯದ ಮೇಲೆ ತನ್ನ ಆಧಿಪತ್ಯವನ್ನು ಸ್ಥಾಪಿಸಿ ಆತನನ್ನು ಕೈ ವಶಮಾಡಿಕೊಳ್ಳುವುದನ್ನು ತೋರಿಸುತ್ತದೆ. ಬಹುಷಃ ಕೆಲವು ಮಹಿಳಾ ಗೂಢಚಾರಿಣಿಯರು ಶತ್ರು ದೇಶದೊಳಗೆ ನುಸುಳಿ, ಅಲ್ಲಿನ ಉನ್ನತ ಅಧಿಕಾರಸ್ಥರು ಹಾಗೂ ಸೇನಾಧಿಕಾರಿಗಳ ಬಳಿ ಸಾರಿ ಅವರ ದೇಹ ಸಂಪರ್ಕ ಪಡೆದು ಮಾಯಾವೀ ಸ್ಪಂದನಗಳಿಂದ ಅವರನ್ನು ಸಮ್ಮೋಹನಕ್ಕೊಳಪಡಿಸಿ ಭದ್ರತೆಯ ರಹಸ್ಯಗಳನ್ನೆಲ್ಲಾ ಬಯಲಿಗೆಳೆದು ಶತ್ರು ನಾಶಕ್ಕೆ ವೇದಿಕೆಯನ್ನೊದಗಿಸುವ ನೈಜ ಘಟನೆಗಳೂ ಇಂತಹ ಅನಿಷ್ಟ ಶಕ್ತಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಇನ್ನೂ ಕೆಲವು ಮಾಹಿತಿಗಳು:
- ಇಬ್ಬರು ವ್ಯಕ್ತಿಗಳು ಪರಸ್ಪರ ಆಲಂಗಿಸಿಕೊಂಡಾಗ ಅವರ ಮಿದುಳುಗಳ ಕೋಶಗಳ ನಡುವೆ ಉಂಟಾಗುವ ಘರ್ಷಣೆಯಿಂದ ನಿರ್ಮಾಣವಾಗುವ ತ್ರಾಸದಾಯಕ ಲಹರಿಗಳನ್ನು ಅನಿಷ್ಟ ಶಕ್ತಿಗಳು ಇತರರಿಗೆ ತೊಂದರೆ ಕೊಡಲು ಬಳಸಿಕೊಳ್ಳುವ ಸಾಧ್ಯತೆಯಿದೆ.
- ಬೇರೆ ಬೇರೆ ಆಧ್ಯಾತ್ಮಿಕ ಸಾಧನಾ ಮಾರ್ಗಗಳ ಸಾಧಕರಲ್ಲಿನ ಸ್ಪಂದನಗಳು ಬೇರೆ ಬೇರೆ ರೀತಿಯದ್ದಾಗಿರುವುದರಿಂದ ಅವರ ಪರಸ್ಪರ ಆಲಿಂಗನದಿಂದಲೂ ತ್ರಾಸದಾಯಕ ವಾತಾವರಣ ನಿರ್ಮಾಣವಾಗಬಹುದು.
- ಚಿಂತಾಕ್ರಾಂತನಾದ ಅಥವಾ ತೀರಾ ಕಾಯಿಲೆಯಿಂದ ಬಳಲುವ ವ್ಯಕ್ತಿಯು ತನಗೆ ತಿಳಿಯದೆಯೇ ಅನಿಷ್ಟ ಶಕ್ತಿಗಳನ್ನು ತನ್ನತ್ತ ಆಕರ್ಷಿಸುತ್ತಿರುವುದರಿಂದ ಅಂತಹವರನ್ನು ಸಾಂತ್ವನ ನೀಡುವುದಕ್ಕಾಗಿ ಸಾಮಾನ್ಯ ವ್ಯಕ್ತಿಯು ಆಲಂಗಿಸುವುದೂ ಅಪಾಯಕಾರಿಯೇ ಆಗಿದೆ.
- ಮಕ್ಕಳ ಕಲ್ಯಾಣಕ್ಕಾಗಿ, ಅವರ ಹಿತಕ್ಕಾಗಿ ಹೆತ್ತವರು ಮಕ್ಕಳನ್ನು ಎತ್ತಿ ಅಪ್ಪಿಕೊಳ್ಳುವುದು, ಮುದ್ದಾಡುವುದು, ಮಕ್ಕಳು ಭಯಭೀತರಾದಾಗ ತಂದೆ ತಾಯಿಯನ್ನು ಅಪ್ಪಿಕೊಳ್ಳುವುದು ಸಹಜವಾದರೂ ಆಧ್ಯಾತ್ಮಿಕ ಸಾಧನೆ ಮಾಡದ ಹೊರತು ಸಾಮಾನ್ಯ ಪರಿಸ್ಥಿತಿಯಲ್ಲಿ ತಮ್ಮಲ್ಲಿನ ಅನಿಷ್ಟ ಶಕ್ತಿಗಳ ಪರಸ್ಪರ ವಿನಿಮಯಕ್ಕೆ ಅವರೂ ಅತೀತರಲ್ಲ. ಆದುದರಿಂದ ಇಂತಹ ಸಂದರ್ಭಗಳಲ್ಲಿ ಮುಂದೆ ಹೇಳಿದಂತಹ ಉಪಚಾರಗಳನ್ನು ಮಾಡಿಕೊಳ್ಳುವುದು ಅಗತ್ಯ.
- ಹಸ್ತ ಲಾಘವವೂ ಆಲಿಂಗನದಲ್ಲಿರುವಷ್ಟು ಪ್ರಮಾಣದಲ್ಲಿ ಅಲ್ಲವಾದರೂ ಅನಿಷ್ಟ ಶಕ್ತಿಗಳ ವಿನಿಮಯಕ್ಕೆ ಸಹಕಾರಿಯೇ ಆಗಿದೆ. ಆದುದರಿಂದ ಭಾರತೀಯ ಸಂಸ್ಕೃತಿಯಂತೆ ಗೌರವಪೂರ್ವಕವಾಗಿ ಎರಡೂ ಕೈ ಮುಗಿದು ತಲೆ ಬಾಗಿ ನಮಸ್ಕಾರ ಮಾಡುವುದು ಉತ್ತಮ ಸಂಸ್ಕಾರವಾಗಿದೆ.
- ಇಷ್ಟೆಲ್ಲ ಅಪಾಯವಿದ್ದರೂ ಆಧುನಿಕ ಜಗತ್ತು ತನಗೆ ಸೂಕ್ಷ್ಮದ ತೊಂದರೆ ಇರಬಹುದು ಯಾ ಇದೆ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಸೂಕ್ಷ್ಮದ ತೊಂದರೆ ಏನೆಂದು ಗೊತ್ತಿದ್ದರೆ ತಾನೇ? ಅಲ್ಲದೆ ಇದು ತನ್ನ ಅಂತಸ್ತಿಗೆ ಒಂದು ಕಪ್ಪು ಚುಕ್ಕಿ ಎಂದು ಭಾವಿಸುತ್ತದೆ. ಆದರೂ ಸೂಕ್ಷ್ಮ ಜಗತ್ತು ಮಾಡುವುದನ್ನು ಮಾಡಿಯೇ ಬಿಡುತ್ತದೆ. ಅನುಭವಿಸುವುದು ಅವರವರ ಹಣೆಬರಹ ಆದುದರಿಂದ ಯಾವುದೇ ಕೆಲಸ ಮಾಡುವಾಗ ಅದರ ಸಾಧಕ ಬಾಧಕ ತಿಳಿದು ಮಾಡುವುದು ಮಾತ್ರ ಬುದ್ಧಿವಂತನ ಲಕ್ಷಣವೇ ಆಗಿದೆ.
ಪರಿಹಾರೋಪಾಯಗಳು
’ಹಗ್ಗಿಂಗ್’ ಮಾಡಲೇ ಬೇಕಾದಾಗ ಈ ಕ್ರಮಗಳನ್ನು ಅವಶ್ಯವಾಗಿ ಅನುಸರಿಸಿರಿ.
- ’ಹಗ್ಗಿಂಗ್’ನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡಿ.
- ’ಹಗ್ಗಿಂಗ್’ನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗ ಎಂದು ತಿಳಿಯಬೇಡಿ. ಯಾಕೆಂದರೆ ಯಾರಲ್ಲಿ ಎಂತಹ ಅನಿಷ್ಟ ಶಕ್ತಿಯಿದೆಯೋ ಎಂದು ನಮಗೆ ತಿಳಿಯುವುದಿಲ್ಲವಲ್ಲ!
- ನಿರಂತರ ನಿಮ್ಮ ಉಪಾಸ್ಯದೇವತೆಯ ನಾಮಸ್ಮರಣೆ ಮಾಡುವುದರಿಂದ ನಿಮ್ಮ ಸುತ್ತಲೂ ಅಭೇದ್ಯವಾದ ರಕ್ಷಾಕವಚ ನಿರ್ಮಾಣವಾಗಿ ಅದರಿಂದ ನಿಮ್ಮ ರಕ್ಷಣೆಯಾಗುತ್ತದೆ.
- ಆಗಾಗ ದೇವರಿಗೆ ಪ್ರಾರ್ಥನೆ ಕೃತಜ್ಞತೆ ಸಲ್ಲಿಸುವುದರಿಂದಲೂ ನಮಗೆ ರಕ್ಷಣೆ ಸಿಗುತ್ತದೆ. ಇದರಿಂದ ನಮಗೆ ದೇವತೆಯ ಕೃಪೆಯುಂಟಾಗಿ ನಮ್ಮ ಜೀವನವು ಆನಂದಮಯವಾಗುತ್ತದೆ. (ಆನಂದವೆಂದರೆ ದುಃಖದ ಜೊತೆಯಿಲ್ಲದ, ನಿರಂತರವಾಗಿ ಸಿಗುವ ಅತ್ಯುಚ್ಚ ಮಟ್ಟದ ಸುಖವಾಗಿದೆ) ನಮ್ಮ ತೊಂದರೆಗಳು ಕಡಿಮೆಯಾಗುತ್ತವೆ. ಪ್ರಾರಬ್ಧವನ್ನು ಸಹಿಸಲು ಶಕ್ತಿಯೂ ದೊರಕುತ್ತದೆ.
ಉಪಸಂಹಾರ
’ಹಗ್ಗಿಂಗ್’ನಿಂದ ’ಹಗ್ ಜಮಾನಾ’ ಲೇಖನದಲ್ಲಿ ಹೇಳಿದ ಪ್ರಯೋಜನ ಪಡೆಯುವುದರ ಪ್ರತಿಯಾಗಿ ಅನವಶ್ಯಕ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ದೈಹಿಕ ತೊಂದರೆಗಳನ್ನು ಚಿಕಿತ್ಸೆಯಿಂದ ಪರಿಹರಿಸಿಕೊಳ್ಳಬಹುದು. ಮನಸ್ಸಿಗೆ ಆದ ಆಘಾತವು ಸುಲಭವಾಗಿ ಮಾಯಲಾರದು. ’ಹಗ್ಗಿಂಗ್’ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಆಲಿಂಗನಕ್ಕೆ, ಅಪ್ಪುಗೆಗೆ ತನ್ನದೇ ಆದ ಇತಿಮಿತಿಗಳಿವೆ. ಸ್ಥಳ ಕಾಲಗಳ ನಿಬಂಧನೆ ಇದೆ. ನಾವು ಸದಾಚಾರಿಗಳಾಗಿರೋಣ. ನಮ್ಮ ಗೌರವ ಅಂತಸ್ತುಗಳನ್ನು ಮೆರೆಸಲು ’ಹಗ್ಗಿಂಗ್’ ಒಂದು ಮಾಧ್ಯಮವಾಗದಿರಲಿ. ಸಿನೆಮಾ ಮಂದಿ ಮಾಡುವುದನ್ನೆಲ್ಲ ನಾವು ಸ್ಥಳ ಕಾಲ ಮಿತಿಯ ಪರಿಗಣನೆಯಿಲ್ಲದೆ ಮಾಡಲಾಗದು. ಅದು ಕಾನೂನು ಸಮ್ಮತವೂ ಅಲ್ಲ ಧರ್ಮ ಸಮ್ಮತವೂ ಅಲ್ಲ. ಕಾರ್ಯ ಸಾಧುವೂ ಅಲ್ಲ. ಕೇವಲ ’ಹಗ್ಗಿಂಗ್’ಗೆ ಪ್ರೋತ್ಸಾಹಿಸುವುದೆಂದರೆ ಜನತೆಯನ್ನು ಅದರಲ್ಲೂ ವಿಶೇಷವಾಗಿ ಯುವ ಜನತೆಯನ್ನು ನರಕ ಕೂಪಕ್ಕೆ ತಳ್ಳಿದಂತೆಯೇ ಸರಿ. ಅಪಾರ ಭಕ್ತವೃಂದವನ್ನು ಹೊಂದಿದು, ನಶಿಸುತ್ತಿರುವ ಸನಾತನ ಧರ್ಮದ ಪುನರುತ್ಥಾನಕ್ಕೆ ಅವಿರತ ಶ್ರಮಿಸುತ್ತಿರುವ ಎಪ್ಪತ್ತೆರಡು ವಯಸ್ಸಿನ ವಯೋವೃದ್ಧರೂ, ಜ್ಞಾನ ವೃದ್ಧರೂ ಆಗಿರುವ ಪರಮ ಪೂಜ್ಯ ಆಸಾರಾಂ ಬಾಪೂರವರು ತನ್ನ ಆಶ್ರಮದಲ್ಲಿ ಬೆಳೆದಿದ್ದ ತನ್ನ ಮೊಮ್ಮಗಳ ಪ್ರಾಯದ ತರುಣಿಯ ಬೆನ್ನಿನ ಮೇಲೆ ವಾತ್ಸಲ್ಯದಿಂದ ಕೈಯಾಡಿಸಿದರೆ ಅದು ಧರ್ಮದ್ರೋಹಿಗಳ ದೃಷ್ಟಿಯಲ್ಲಿ ಅತ್ಯಾಚಾರವೆನಿಸಿ ಮಹಾನ್ ಸಂತರು ಕಂಬಿ ಎಣಿಸುವಂತೆ ಮಾಡುತ್ತದೆ. ಹೀಗಿರುವಾಗ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಸಭ್ಯತೆಯ ಎಲ್ಲೆ ಮೀರಿ ಹೆಣ್ಣು ಗಂಡುಗಳು ಪರಸ್ಪರ ಅಪ್ಪಿಕೊಳ್ಳಲು ಮುಂದಾದರೆ ಏನಾಗಬಹುದು?
ಮನವೆಂಬುದು ಮರ್ಕಟವೆಂಬ ಗಾದೆಯೇ ಇದೆಯಲ್ಲ!
ಮರ್ಕಟಸ್ಯ ಸುರಾಪಾನಂ
ಮಧ್ಯೇ ವೃಶ್ಚಿಕ ದಂಶನಂ
ತನ್ಮಧ್ಯೇ ಭೂತ ಸಂಚಾರೋ
ಯದ್ವಾ ತದ್ವಾ ಭವಿಷ್ಯತೀ
ಎಂಬಂತೆ ಆಗದಿರಲಿ ಎಂಬುದೇ ಈ ಲೇಖನದ ಆಶಯ. ಹೆಚ್ಚಿನ ಮಾಹಿತಿಗೆ ಓದುಗರು ಕೂಡಾ SSRF ಗೆ ಪ್ರಶ್ನೆ ಕೇಳಬಹುದು. ಎರಡು ದಿನಗಳಲ್ಲಿ ಉತ್ತರಿಸುವ ಭರವಸೆ ದೊರೆತಿದೆ.
ಲೇಖನವನ್ನು ಆಂಗ್ಲಭಾಷೆಯಲ್ಲಿ ಓದಲು, ಹಗ್‌ನಿಂದಾಗುವ ದುಷ್ಪರಿಣಾಮಗಳ ಬಗೆಗಿನ ಸೂಕ್ಷ್ಮಚಿತ್ರವನ್ನು ನೋಡಲು ಈ ಕೊಂಡಿಯನ್ನು ನೋಡಿ. - http://www.spiritualresearchfoundation.org/hugging-people
ಸಂಕಲನ: ಶ್ರೀ. ಬಿ. ರಾಮ ಭಟ್, ನಿವೃತ್ತ ಉಪ ತಹಶೀಲ್ದಾರರು ಮತ್ತು ಸಮನ್ವಯಕಾರರು, ಹಿಂದೂ ಜನಜಾಗೃತಿ ಸಮಿತಿ, ಸುಳ್ಯ, ದ.ಕ. ದೂರವಾಣಿ: 09481756028
© Sanatan Sanstha
Very nice information... Keep up good work :-)
ReplyDeletesir, paraspara ibbru hug madidaaga athama vishwas jasthi aguthe antha nan ello odidde,mathu nanige aatharahada anubava agide....nange yavude ketta rithiya anubava agilla..!!!!
ReplyDeleteಹಗ್ ಮಾಡಿದ ಮೇಲೆ ಕೆಟ್ಟ ಅನುಭವ ತಕ್ಷಣವೇ ಆಗಬೇಕೆಂದಿಲ್ಲ. ಪರಸ್ಪರ ವಿನಿಮಯವಾದ ಅನಿಷ್ಟ ಸ್ಪಂದನಗಳು ಒಂದೆರಡು ಗಂಟೆ ಅಥವಾ ಒಂದೆರಡು ದಿನಗಳಲ್ಲಿ ಕೂಡಾ ಕಾಣಬಹುದು. ಆದರೆ ನಿಮಗೆ ಹಗ್‌ನಿಂದಲೇ ಅದು ಆಗಿದೆ ಎಂದು ತಿಳಿಯುವುದಾದರೂ ಹೇಗೆ!! ಎಚ್ಚರಿಸುವುದು ನಮ್ಮ ಧರ್ಮಕರ್ತವ್ಯ...
DeleteI AM LOOKING FOR LALITA DEVI STORY where i will get it. please help me
ReplyDelete