ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ?

(ಶ್ರಾದ್ಧಕರ್ಮದಲ್ಲಿ ಹೇಳುವ ಮಂತ್ರಗಳ ಶಕ್ತಿಯಿಂದ ಕೇವಲ ಪಿತೃಗಳ ಹೆಸರು ಮತ್ತು ಗೋತ್ರವನ್ನು ಹೇಳಿದರೆ ಅವರಿಗೆ ಶ್ರಾದ್ಧದ ಹವ್ಯವು ಸಿಗುವುದು): ‘ಶಬ್ದವಿದ್ದಲ್ಲಿ ಅದರ ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಒಟ್ಟಿಗೆ ಇರುತ್ತವೆ’ ಇದು ಅಧ್ಯಾತ್ಮದಲ್ಲಿನ ಮೂಲ ಸಿದ್ಧಾಂತವಾಗಿದೆ. ಪಂಚತತ್ತ್ವಗಳ ಲಹರಿಗಳನ್ನು ಘನೀಕರಿಸಿ, ಸಗುಣ ರೂಪವು ಸಾಕಾರವಾಗುತ್ತದೆ. ಪ್ರತಿಯೊಂದು ವಸ್ತುವು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಈ ಪಂಚತತ್ತ್ವಗಳ ಸಹಾಯದಿಂದಲೇ ನಿರ್ಮಾಣವಾಗಿದೆ. ಶ್ರಾದ್ಧದಲ್ಲಿ ಪಿತೃಗಳ ಹೆಸರುಗಳನ್ನು ಹೇಳುವುದರಿಂದ ಮಂತ್ರಗಳ ಸಹಾಯದಿಂದ ಪ್ರಕ್ಷೇಪಿತವಾಗುವ ಶಬ್ದಕಂಪನಗಳು ವಾಯುಮಂಡಲದಲ್ಲಿ ಅಲೆದಾಡುತ್ತಿರುವ ಲಿಂಗದೇಹಗಳ ವಾಸನಾಮಯಕೋಶವನ್ನು ಭೇದಿಸಿ ಅವುಗಳನ್ನು ಶ್ರಾದ್ಧದ ಸ್ಥಳಕ್ಕೆ ಆಕರ್ಷಿಸುತ್ತವೆ. ಇದರಿಂದ ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ. ಆಯಾ ಪಿತೃಗಳ ಹೆಸರಿನ ಶಬ್ದಗಳಿಂದ ಪ್ರಕ್ಷೇಪಿತವಾಗುವ ಧ್ವನಿಕಂಪನಗಳಿಗೆ ಮಂತ್ರಶಕ್ತಿಯಿಂದ ಚಲನೆಯು ಪ್ರಾಪ್ತವಾಗಿ ಅವು ತಮ್ಮ ಸೂಕ್ಷ್ಮಪರಿಣಾಮವನ್ನು ವಾಯುಮಂಡಲದ ಮೇಲೆ ಬೀರುತ್ತವೆ ಮತ್ತು ಸೂಕ್ಷ್ಮ ಸ್ತರದಲ್ಲಿ ವಾಯುರೂಪದಲ್ಲಿ ಅಥವಾ ಸ್ಪರ್ಶರೂಪದಲ್ಲಿ ಪಿತೃಗಳು ಹವ್ಯವನ್ನು ಸ್ವೀಕರಿಸುವಂತೆ ಮಾಡುತ್ತವೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೨.೮.೨೦೦೫, ಸಾಯಂಕಾಲ ೫.೪೬)
(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ಶ್ರಾದ್ಧ - ೨ ಭಾಗಗಳು’)

ಸಂಬಂಧಿಸಿದ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಶ್ರಾದ್ಧವನ್ನು ಮಾಡುವುದರ ಮಹತ್ವ
ಶ್ರಾದ್ಧವನ್ನು ಯಾವಾಗ ಮಾಡಬೇಕು?
ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ
ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು?
ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?
ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?
ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು
ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ
ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?
ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?
ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ
Dharma Granth

2 comments:

  1. Sir Namaskara
    Naavu brother 3 jana namagella maduve aagide, naane doddavanu ega nanu matra mane inda saperate aagiddini nam thayi aavarnu aagaga nam manege bandu hoktirtare bt nam father aavara pitru paksha yaaru madabeku hagu veg or non veg madabeka pls thilisi. And nam father exped aagi 25 years aagide shrada madabeka dayavitu thilisi

    ReplyDelete
    Replies
    1. ನಮಸ್ಕಾರ,
      ಧರ್ಮಶಾಸ್ತ್ರದಲ್ಲಿ ಮೊದಲನೆಯ ಮಗ ಅಥವಾ ಕಿರಿಯ ಮಗನಿಗೆ ಶ್ರಾದ್ಧ ಮಾಡುವ ಅಧಿಕಾರ ಇದೆ. ಹಾಗಾಗಿ ತಾವು ಶ್ರಾದ್ಧ ಮಾಡಬಹುದು. ಶ್ರಾದ್ಧದಲ್ಲಿ ಮಾಂಸಾಹಾರ ಸಂಪೂರ್ಣ ನಿಷಿದ್ಧ, ಶ್ರಾದ್ಧದಲ್ಲಿ ಮಾಂಸಾಹಾರವನ್ನು ಧರ್ಮಶಾಸ್ತ್ರವು ಕಟುವಾಗಿ ವಿರೋಧಿಸಿದೆ. ದಯವಿಟ್ಟು ಅಂತಹ ಅಶಾಸ್ತ್ರೀಯ ಕೃತಿ ಮಾಡಬೇಡಿ. ನಿಮ್ಮ ತಂದೆಯವರು ತೀರಿ 25 ವರ್ಷವಾಗಿದ್ದರೂ ಪರವಾಗಿಲ್ಲ. ಮಹಾಲಯದಲ್ಲಿ ಶ್ರಾದ್ಧ ಮಾಡಿ. ಹಾಗೆಯೇ ಪ್ರತಿವರ್ಷವೂ ಶ್ರಾದ್ಧವನ್ನು ಮಾಡಲೇ ಬೇಕು. ಈ ಬ್ಲಾಗ್‌ನಲ್ಲಿರುವ ಶ್ರಾದ್ಧದ ಕುರಿತಾದ ಇತರ ವಿಷಯಗಳನ್ನೂ ಓದಿ, ಸಾಧ್ಯವಿದ್ದಲ್ಲಿ ನಾವು (ಸನಾತನ ಸಂಸ್ಥೆಯು) ಮುದ್ರಿಸಿದ ಶ್ರಾದ್ಧದ ಕುರಿತಾದ ೨ ಗ್ರಂಥಗಳನ್ನೂ ಖರೀದಿಸಿ ಓದಿ, ಅದರಲ್ಲಿ ಸಂಪೂರ್ಣ ಮಾಹಿತಿಯನ್ನು ಕೊಡಲಾಗಿದೆ. ಧನ್ಯವಾದಗಳು

      Delete

Note: only a member of this blog may post a comment.