ಗೋಹತ್ಯೆ ಮತ್ತು ಸದ್ಯದ ಸ್ಥಿತಿ

ಗೋಹತ್ಯೆ
೧೮೪೭: ಗೋವಿನ ಕೊಬ್ಬನ್ನು ಉಪಯೋಗಿಸಿದ ಕಾಡತೂಸುಗಳನ್ನು ಉಪಯೋಗಿಸಿದರೆಂದು ಹಿಂದೂಸ್ಥಾನಿ ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಯುದ್ಧವನ್ನು ಸಾರಿದರು.
ಸದ್ಯದ ಸ್ಥಿತಿ
೧. ೧೯೪೮ರಲ್ಲಿ ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬಂದಿತು. ಇಡೀ ಹಿಂದುಸ್ಥಾನದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಕಲಂ ಇದೆ. ಆದರೆ ಇದು ವರೆಗೂ ಅದು ಜಾರಿಗೆ ಬಂದಿಲ್ಲ.

೨. ಮಹಾರಾಷ್ಟ್ರ ಸರಕಾರದ ವಿಧಾನ ಸಭೆಯು ೧೯೯೫ರ ಮಧ್ಯದಲ್ಲಿ ಗೋಹತ್ಯಾ ನಿಷೇಧದ ಕಾನೂನನ್ನು ಅನುಮೋದಿಸಿ ರಾಷ್ಟ್ರಪತಿಗಳಿಗೆ ಮಂಜೂರಾತಿಗಾಗಿ ಕಳುಹಿಸಿಕೊಟ್ಟಿತು. ಇಂದಿನ ವರೆಗೆ ಅದು ಹಾಗೆಯೇ ಧೂಳು ತಿನ್ನುತ್ತಿದೆ. ೧೪ ವರ್ಷಗಳಾದ ನಂತರವೂ ಆ ಕಾನೂನಿಗೆ ರಾಷ್ಟ್ರಪತಿಗಳ ಸಮ್ಮತಿ ದೊರೆತಿಲ್ಲ. ಅದರಿಂದ ಇಂದಿನ ವರೆಗೆ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಿಲ್ಲ.

೩. ಕೇಂದ್ರ ಸರಕಾರವು ಗೋಹತ್ಯಾ ನಿಷೇಧದ ಕುರಿತು ಏನೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ. ಈ ವಿಷಯದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಭಾಗ ಮಾತ್ರವಲ್ಲದೇ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಗೋ ಮಾಂಸದಿಂದ ಪ್ರಚಂಡ ಪ್ರಮಾಣದಲ್ಲಿ ಹಣ ದೊರೆಯುತ್ತದೆ. ಬಹುದೊಡ್ಡ ಪ್ರಮಾಣದಲ್ಲಿ ಡಾಲರ್ಸ, ಯುರೋ, ರಿಯಾಲ, ದಿನಾರ ಈ ಸ್ವರೂಪ ಗಳಲ್ಲಿ ಧನ ಪ್ರಾಪ್ತವಾಗುತ್ತದೆ. ಸರಕಾರಕ್ಕೆ ಕೇವಲ ಹಣ ಬೇಕಾಗಿದೆ. ಹಿಂದೂ ಗಳೊಂದಿಗೆ ಅವರಿಗೆ ಯಾವುದೇ ಸಂಬಂಧ ಇಲ್ಲ.

೪. ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ ಇಂತಹ ಕೆಲವು ರಾಜ್ಯಗಳು ಗೋಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿದವು. ಆದರೆ ಅಲ್ಲಿಯೂ ಗೋಹತ್ಯೆಗಳಾಗುತ್ತಲಿವೆ. ಹಿಂದುಸ್ಥಾನದ ಅನೇಕ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸುವ ಕಾನೂನುಗಳಿದ್ದರೂ, ಗೋಹತ್ಯೆಯು ನಿರಾತಂಕವಾಗಿ ನಡೆಯುತ್ತಲಿದೆ. ಇಂತಹ ಸಂದರ್ಭದಲ್ಲಿ ಗೋಹತ್ಯೆ ಕಾನೂನು ಜಾರಿಯಲ್ಲಿಲ್ಲದ ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರದಲ್ಲಿಯ ಅನೇಕ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಹತ್ಯೆಯ ಕುರಿತು ಏನು ಹೇಳುವುದು?

೫. ಯಾವ ರಾಜ್ಯದಲ್ಲಿ ಗೋವಧೆಯನ್ನು ನಿಷೇಧಿಸಲಾಗಿದೆಯೋ, ಆ ರಾಜ್ಯಗಳ ಮತಾಂಧರು ಎಲ್ಲಿ ಗೋವಧೆಯನ್ನು ನಿಷೇಧಿಸಿಲ್ಲವೋ ಆ ರಾಜ್ಯಗಳಿಗೆ ಗೋವುಗಳನ್ನು ಟ್ರಕ್‌ಗಳಲ್ಲಿ ತುಂಬಿಸಿಕೊಂಡು ಬರುತ್ತಾರೆ. ಅಲ್ಲಿ ಗೋವುಗಳನ್ನು ವಧಿಸುತ್ತಾರೆ. ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೆ ಸಾವಿರಾರು ಆಕಳುಗಳನ್ನು ತೆಗೆದುಕೊಂಡು ಬರುತ್ತಾರೆ  ಮತ್ತು ದೊಡ್ಡ ದೊಡ್ಡ ನಗರಗಳಲ್ಲಿ ಮತ್ತು ಮುಂಬಯಿಯಲ್ಲಿ ಮತಾಂಧರ ಬಾಹುಳ್ಯ ಇರುವ ಭಾಗದಲ್ಲಿ ವಧಿಸುತ್ತಾರೆ. ನಾಗಪೂರದ ಪ್ರದೇಶವೊಂದರಲ್ಲಿ ಬಹಿರಂಗವಾಗಿ ಎಲ್ಲರೆದುರೇ ಮನೆ, ಮನೆಗಳಲ್ಲಿ ಗೋಹತ್ಯೆಯನ್ನು ಮಾಡುತ್ತಾರೆ. ಕಸಾಯಿಖಾನೆಯನ್ನು ಹೊರತುಪಡಿಸಿ ನಾಗಪೂರ, ದೆಹಲಿ, ಪುಣೆ, ಸಾಂಗ್ಲಿ, ಕೊಲ್ಲಾಪೂರ, ಸಾತಾರಾ ಇಂತಹ ದೊಡ್ಡ ನಗರಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಅಲ್ಲದೇ ಮತಾಂಧರ ಬಾಹುಳ್ಯವಿರುವ ಸ್ಥಳಗಳಲ್ಲಿ ಮನೆಮನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಗಿ ವಧಿಸಲಾಗುತ್ತದೆ.

೬. ಹೈದ್ರಾಬಾದಿನ ಕಸಾಯಿಖಾನೆಯು ಮುಂಬಯಿಯ ಹತ್ತಿರದ ದೇವನಾರಿನ ಕಸಾಯಿಖಾನೆಯಂತೆ ದೊಡ್ಡದಾಗಿದೆ.   ಇವೆರಡೂ ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಕಸಾಯಿಖಾನೆಗಳಾಗಿವೆ.

೭. ಖಾನದೇಶದ ನಡೋಂಜಾ ಗ್ರಾಮದಲ್ಲಿ  ಪ್ರತಿದಿನ ೪೦೦ ಆಕಳುಗಳನ್ನು ವಧಿಸಲಾಗುತ್ತಿದೆ. ಅಲ್ಲಿಂದ  ಗೋಮಾಂಸ ದಿಂದ ತುಂಬಿದ ಸಾವಿರಾರು ಟ್ರಕ್‌ಗಳು ಮುಂಬಯಿಗೆ ಬರುತ್ತವೆ. ಇಲ್ಲಿಂದ ಹೊರ ದೇಶಗಳಿಗೆ ಗೋಮಾಂಸ ರಫ್ತಾಗುತ್ತವೆ. ಕುವೈತ, ಅರಬ ರಾಷ್ಟ್ರಗಳು, ಮಲೇಶಿಯಾ, ಈಜಿಪ್ಟ, ಮಧ್ಯ ಏಷ್ಯಾದ ದೇಶಗಳಿಗೆ ಲಕ್ಷಾಂತರ ಟನ್‌ಗಳಷ್ಟು ಗೋಮಾಂಸ ಮಾರಲಾಗುತ್ತಿದೆ.

೮. ಮಾನಖುರ್ದನಲ್ಲಿ ಎರಡು ಟ್ರಕ್ ಗಳಲ್ಲಿ ತುಂಬಿದ ೬ ಟನ್ ಗೋಮಾಂಸವನ್ನು ಆರಕ್ಷಕರು ಜಪ್ತಿ ಮಾಡಿದರು. ಆರು ಟನ್ ಗೋಮಾಂಸವೆಂದರೆ, ಈ ಸೈತಾನನರು ಎಷ್ಟು ಆಕಳುಗಳ ಹತ್ಯೆ ಮಾಡಿರಬಹುದು?

೯. ಬಕರಿ ಈದ್ ಹತ್ತಿರ ಬಂತೆಂದರೆ ಇಡೀ ಭಾರತದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ನಿರುಪದ್ರವಿ ಜೀವಿಗಳಾದ ಪವಿತ್ರ ಗೋವು, ಎತ್ತು, ಕರುಗಳ ಕಳ್ಳಸಾಗಾಣಿಕೆ ನಡೆಯುತ್ತದೆ. ಮತಾಂಧರು ಬಕರಿ ಈದ್ಗಾಗಿ ಅಗಾಧ ಪ್ರಮಾಣದಲ್ಲಿ ಗೋವುಗಳ ಸಾಮೂಹಿಕ ಹತ್ಯೆಯನ್ನು ನಡೆಸುತ್ತಾರೆ. ಹಿಂದುಸ್ಥಾನದಲ್ಲಿ ಮತಾಂಧರು ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಗೋವುಗಳನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡುತ್ತಾರೆ.

೧೦. ಬಕರಿ-ಈದ್ ದಿನ ದೊಡ್ಡ ದೊಡ್ಡ ನಗರಗಳು ಮಾತ್ರವಲ್ಲದೇ, ಸಣ್ಣಪುಟ್ಟ ಊರುಗಳಲ್ಲಿಯೂ ಆಕಳು ಮತ್ತು ಕರುಗಳ ಹತ್ಯೆಯು ಅಗಾಧ ಪ್ರಮಾಣದಲ್ಲಾಗುತ್ತದೆ. ಸರಕಾರವು ಕಟುಕರನ್ನು ಬಂಧಿಸುವ ಧೈರ್ಯವನ್ನು ತೋರಿಸುವುದಿಲ್ಲ. ಕಾನೂನು ರೀತ್ಯಾ ಗೋಹತ್ಯೆಗೆ ನಿಷೇಧ ವಿರುವಲ್ಲಿಯೂ ಆರಕ್ಷಕರ ಕಣ್ಮುಂದೆಯೇ ಬೀದಿಬೀದಿಗಳಲ್ಲಿ ಗೋಮಾಂಸದ ಮಾರಾಟ ನಡೆಯುತ್ತದೆ.

೧೧. ಭಾರತದಲ್ಲಿ ಆಗುತ್ತಿರುವ ಪಶುಗಳ ಹತ್ಯೆಯ ಬಗ್ಗೆ ಶೇಕಡಾವಾರು ಅಂಕಿಅಂಶ ಗಳನ್ನು ಸಂಯುಕ್ತ ರಾಷ್ಟ್ರ ಸಂಘದ ಅಗ್ರಿಕಲ್ಚರ್ ಆರ್ಗನೈಸೇಶನ್ ೫ ವರ್ಷಗಳ ಹಿಂದೆ ಕೊಟ್ಟಿತ್ತು. ಅದೊಂದೇ ವರ್ಷದಲ್ಲಿ ಒಂದು ಕೋಟಿ ಅರವತ್ತು ಲಕ್ಷ ಎಪ್ಪತ್ತು ಸಾವಿರ ಆಕಳು ಮತ್ತು ಕರುಗಳ ವಧೆಯಾಗಿರುವ ದಾಖಲೆ ಇದೆ. ಇಂದು ಸರಿಸುಮಾರು ಎರಡೂವರೆ ಕೋಟಿಯಷ್ಟು ಆಕಳು ಮತ್ತು ಕರುಗಳ ವಧೆಯಾಗುತ್ತದೆ.

೧೨. ದಿನಪತ್ರಿಕೆಯೊಂದರ ಸಂಪಾದಕರಾದ ಗಿರೀಶ ಕುಮಾರ ಇವರು ಹೇಳಿದಂತೆ, “ಗೋಮಾಂಸವನ್ನು ಮಾರಾಟ ಮಾಡುವ (ಫಾಸ್ಟ್‌ಫುಡ್‌ನಂತೆ) ಅಮೇರಿಕಾ ಮತ್ತು ಯುರೋಪಿನ ಬಹುರಾಷ್ಟ್ರೀಯ ಕಂಪನಿಗಳು ಭಾರತ ಸರಕಾರಕ್ಕೆ  ಭಾರತದೆಲ್ಲೆಡೆ ಮಾಂಸಮಾರಾಟದ ದೊಡ್ಡ ಯೋಜನೆಯನ್ನು ನೀಡಿದೆ. ಇದು ಒಂದು ರೀತಿಯಲ್ಲಿ ಭಾರತವನ್ನು ಬಲವಂತವಾಗಿ ಮಾಂಸಾಹಾರಿಯನ್ನಾಗಿ ಮಾಡುವ ಕುತಂತ್ರವಾಗಿದೆ. ಭಾರತವು ಅದನ್ನು ಸ್ವೀಕರಿಸಿದೆ. ಅವರ ನಿಯೋಜನೆಯ ಅಡಿಯಲ್ಲಿ ಆ ಯೋಜನೆಗಳು ಕಾರ್ಯಾನ್ವಿತವಾಗುತ್ತಿವೆ. ಗೋಹತ್ಯಾ ನಿಷೇಧದ ವಿಷಯವು ಇಂದು ಬಹುದೂರದ ವಿಷಯವಾಗಿದ್ದು, ಈಗ ಸರಕಾರವೇ ಗೋಹತ್ಯೆಗಾಗಿ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಬಹುದು.

ಗೋವು ಹಿಂದೂಗಳಿಗೆ ಅತ್ಯಂತ ಪವಿತ್ರವಾಗಿದೆ. ಗೋರಕ್ಷಣೆಗಾಗಿ ಹಿಂದೂಗಳು ಸಹಜವಾಗಿ ಪ್ರಾಣವನ್ನು ಬೇಕಾದರೂ ಕೊಡುತ್ತಾರೆ. ಇಂದಿಗೂ ಹಿಂದೂಗಳು ರಸ್ತೆ ಮೇಲೆ ಹೋಗುವಾಗ ಗೋವು ಕಂಡರೆ, ಅವರು ತಮಗರಿವಿಲ್ಲದಂತೆ ಸಹಜ ಭಕ್ತಿ ಭಾವದಿಂದ ಗೋವನ್ನು ಸ್ಪರ್ಶಿಸಿ ವಂದಿಸು ತ್ತಾರೆ. ಆದರೆ, ಸರಕಾರವು ಹಿಂದೂಗಳ ಶ್ರದ್ಧಾಸ್ಥಾನವನ್ನು ನಿರ್ದಾಕ್ಷಿಣ್ಯವಾಗಿ ನಾಶಗೊಳಿಸಲು ಪಣತೊಟ್ಟಂತಿದೆ. ಹಿಂದೂಸ್ಥಾನದಲ್ಲಿ ನಾಲ್ಕು ಸಾವಿರ ಕಸಾಯಿಖಾನೆಗಳಿದ್ದು, ಈ ಕಸಾಯಿಖಾನೆಗಳಲ್ಲಿ ನಿರಂತರವಾಗಿ ಹಿಂದೂಗಳ ಶ್ರದ್ಧೆಯನ್ನು ಹೊಸಕಿ ಹಾಕಲಾಗುತ್ತಿದೆ.

೧೩. ಆಧುನಿಕ ಜಾತ್ಯತೀತ ಜನರು ಆಕಳು ಮತ್ತು ಕರುಗಳಿಂದಾಗಿ ಡಾಲರುಗಳ ರೂಪದಲ್ಲಿ ಹಣ ದೊರೆಯುತ್ತದೆಯೆಂದು ಆನಂದಾಶ್ರು ಸುರಿಸುತ್ತಾರೆ : “ಆಧುನಿಕ ಜನರ ಬೌದ್ಧಿಕ ದಿವಾಳಿ ಖೋರತನವು ಪ್ರತ್ಯಕ್ಷ ಪಿಸ್ತೂಲಿನಿಂದ ಕೊಲ್ಲುವುದಕ್ಕಿಂತಲೂ ಘೋರವಾಗಿದೆ. ಈ ಆಧುನಿಕ ಜಾತ್ಯತೀತರ ಕಣ್ಣೀರನ್ನು ನೋಡಿ, ಅವರು ಆಕಳು ಮತ್ತು ಕರುಗಳ ದುರ್ದೆಶೆಗಾಗಿ ಕಣ್ಣೀರು ಹಾಕುತ್ತಾರೆಂದು ಕೊಂಡರೆ ತಪ್ಪಾಗುತ್ತದೆ. ಅವರು ಆಕಳು ಮತ್ತು ಕರುವಿನ ದುರ್ದೆಶೆಗಾಗಿ ಕಣ್ಣೀರು ಹಾಕದೇ, ಅವುಗಳನ್ನು ಸಮಾಪ್ತಿಗೊಳಿಸಿ, ಅವುಗಳ ಮೂಲಕ ದೊರೆಯುವ ಡಾಲರುಗಳನ್ನು ಬಾಚಿಕೊಳ್ಳುವ ಸಲುವಾಗಿ ಆನಂದಾಶ್ರುಗಳನ್ನು ಹರಿಸುತ್ತಿದ್ದಾರೆ.
- ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೭.೧.೨೦೧೦)

(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಸಂಬಂಧಿತ ವಿಷಯಗಳು
Dharma Granth

No comments:

Post a Comment

Note: only a member of this blog may post a comment.