ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು?


 (ಪಾದುಕೆಗಳು ಶಿವ ಮತ್ತು ಶಕ್ತಿಯ ಪ್ರತೀಕವಾಗಿದ್ದು ನಮಸ್ಕಾರ ಮಾಡುವಾಗ ತೊಂದರೆಯಾಗಬಾರದೆಂದು ಪಾದುಕೆಗಳ ಕುಟ್ಟಿಗಳ ಮೇಲೆ ತಲೆಯನ್ನಿಡದೇ ಪಾದುಕೆಗಳ ಮುಂದಿನ ಭಾಗದ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಬೇಕು) : ‘ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ. ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು ಬಲಪಾದುಕೆ ಎಂದರೆ ಈಶ್ವರನ ಅಪ್ರಕಟ ಮಾರಕ ಶಕ್ತಿಯಾಗಿದೆ. ಪಾದುಕೆಗಳ ಹೆಬ್ಬೆರಳುಗಳಿಂದ (ಪಾದುಕೆಗಳ ಕುಟ್ಟಿಗಳಿಂದ) ಆವಶ್ಯಕತೆಗನುಗುಣವಾಗಿ ಈಶ್ವರನ ತಾರಕ ಮತ್ತು ಮಾರಕ ಶಕ್ತಿಯು ಹೊರಬೀಳುತ್ತಿರುತ್ತದೆ. ಯಾವಾಗ ನಾವು ಪಾದುಕೆಗಳ ಹೆಬ್ಬೆರಳುಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುತ್ತೇವೆಯೋ, ಆಗ ಕೆಲವು ಜನರಿಗೆ ಅದರಲ್ಲಿರುವ ಪ್ರಕಟ ಶಕ್ತಿಯನ್ನು ಸಹಿಸಲು ಆಗದಿರುವುದರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಪಾದುಕೆಗಳಿಗೆ ನಮಸ್ಕಾರ ಮಾಡುವಾಗ ಸಾಧ್ಯವಾದಷ್ಟು ತಲೆಯನ್ನು ಪಾದುಕೆಗಳ ಹೆಬ್ಬೆರಳುಗಳ ಮೇಲೆ ಇಡದೇ ಪಾದುಕೆಗಳ ಮುಂದಿನ ಭಾಗದಲ್ಲಿ (ಯಾವ ಭಾಗದಲ್ಲಿ ಸಂತರ ಕಾಲುಗಳ ಬೆರಳುಗಳು ಬರುತ್ತವೆಯೋ ಆ ಜಾಗದಲ್ಲಿ) ಇಡಬೇಕು.’ - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೧೨.೨೦೦೩, ಬೆಳಗ್ಗೆ ೧೧.೨೦)

(ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ನಮಸ್ಕಾರಗಳ ಯೋಗ್ಯ ಪದ್ಧತಿ')

ವಿಷಯದಲ್ಲಿನ ಆಧ್ಯಾತ್ಮಿಕ ಸಂಜ್ಞೆಗಳನ್ನು ಈ ಕೊಂಡಿಯಲ್ಲಿ ತಿಳಿದುಕೊಳ್ಳಿ.

ಸಂಬಂಧಿತ ವಿಷಯಗಳು
Dharma Granth

No comments:

Post a Comment

Note: only a member of this blog may post a comment.