'ಸನಾತನ ಕರ್ಪೂರ'ದಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

ಅ. ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು? : ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ.


ಆ. ಪಂಚತತ್ತ್ವಗಳ ಸ್ತರಗಳಿನುಸಾರ ಸನಾತನದ ಸಾತ್ತ್ವಿಕ ಉತ್ಪಾದನೆಗಳ ಉಪಯೋಗ : ಕ್ರಮವಾಗಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಗನುಸಾರ ಆಧ್ಯಾತ್ಮಿಕ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ನಾವು ವಿವಿಧ ಲೇಖನಗಳಿಂದ ತಿಳಿದುಕೊಳ್ಳುವವರಿದ್ದೇವೆ. ‘ಸನಾತನ ಊದುಬತ್ತಿ’ಯನ್ನು ಉರಿಸದೇ ಅದರ ಸಹಾಯದಿಂದ ಶರೀರದ ಮೇಲಿನ ತ್ರಾಸದಾಯಕ ಆವರಣ ತೆಗೆಯುವುದು ಪೃಥ್ವಿತತ್ತ್ವದ ಸ್ತರದಲ್ಲಿನ ಉಪಾಯದಲ್ಲಿ ಬರುತ್ತದೆ, ಊದುಬತ್ತಿ ಉರಿಸಿ ಉಪಾಯ ಮಾಡುವುದು ತೇಜ-ವಾಯು ಸ್ತರದ ಉಪಾಯದಲ್ಲಿ ಬರುತ್ತದೆ.

‘ಸನಾತನ ಕರ್ಪೂರ’ದ ಪುಡಿಯನ್ನು ಹಚ್ಚುವುದು ಅಥವಾ ಕರ್ಪೂರದ ಸುಗಂಧವನ್ನು ತೆಗೆದುಕೊಳ್ಳುವುದು 
(ತತ್ತ್ವ : ತೇಜತತ್ತ್ವ)


ಅ. ‘ಸನಾತನ ಕರ್ಪೂರ’ದ ವೈಶಿಷ್ಟ್ಯಗಳು

೧. ‘ಸನಾತನ ಕರ್ಪೂರ’ವು ಭೀಮಸೇನಿ ಕರ್ಪೂರವಾಗಿದೆ. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುತ್ತದೆ.
೨. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯ ಕ್ಷಮತೆಯೂ ಹೆಚ್ಚಿರುತ್ತದೆ.

ಆ. ಉಪಯುಕ್ತತೆ /ಲಾಭ

೧. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಶ್ವಾಸಮಾರ್ಗದಲ್ಲಿನ ತ್ರಾಸದಾಯಕ ಶಕ್ತಿಯು ನಾಶವಾಗುತ್ತದೆ.
೨. ಕರ್ಪೂರದ ಸುಗಂಧವನ್ನು ತೆಗೆದುಕೊಂಡರೆ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗಿ ಬುದ್ಧಿಯ ತೀಕ್ಷ್ಣತೆ ಹೆಚ್ಚಾಗುತ್ತದೆ: ಕರ್ಪೂರದ ಸುಗಂಧದಿಂದ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗುವುದರಿಂದ ಅದರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಅದರಲ್ಲಿ ಆಧ್ಯಾತ್ಮಿಕ ಶಕ್ತಿಯು ಸಂಗ್ರಹವಾಗುವುದರಿಂದ ಅದರ ತೀಕ್ಷ್ಣತೆಯೂ ಹೆಚ್ಚಾಗುತ್ತದೆ. ಕರ್ಪೂರದ ಸುಗಂಧದಿಂದ ಸೇವೆಯಲ್ಲಿನ ಬುದ್ಧಿಯ ಅಡಚಣೆಯು ದೂರವಾಗುವುದರಿಂದ ಸೇವೆಯ ಪರಿಣಾಮವೂ ಹೆಚ್ಚಾಗುತ್ತದೆ.
೩. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿನ ದೂಷಿತ ವಾಯು ನಾಶವಾಗಿ ಕಣ್ಣುಗಳು ಶಾಂತವಾಗಲು ಮತ್ತು ಮುಖಚರ್ಯೆ ಮತ್ತು ಮನಸ್ಸು ಪ್ರಸನ್ನವಾಗಲು ಸಹಾಯವಾಗುತ್ತದೆ.
೪. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗುತ್ತದೆ, ಕಣ್ಣುಗಳಿಗೆ ಮಸುಕಾಗಿ ಕಾಣಿಸುತ್ತಿದ್ದರೆ ದೃಷ್ಟಿಯು ಸ್ಪಷ್ಟವಾಗುತ್ತದೆ, ನಿದ್ರೆಯು ಪೂರ್ಣವಾಗಿದ್ದರೂ ಬರುವಂತಹ ನಿದ್ರೆಯು ದೂರವಾಗುತ್ತದೆ, ಮನಸ್ಸಿನ ನಿರಾಶೆ ದೂರವಾಗುತ್ತದೆ; ಇವೇ ಮುಂತಾದ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೧.೧೨.೨೦೧೦)
೫. ಸನಾತನದ ‘ಭೀಮಸೇನಿ ಕರ್ಪೂರ’ವು ದೃಷ್ಟಿಯನ್ನು ತೆಗೆಯಲೂ ಉಪಯುಕ್ತವಾಗಿದೆ.
(‘ಕರ್ಪೂರದಿಂದ ದೃಷ್ಟಿಯನ್ನು ಹೇಗೆ ತೆಗೆಯಬೇಕು?’ ಈ ವಿಷಯದ ವಿವೇಚನೆಯನ್ನು ಸನಾತನ ನಿರ್ಮಿತ ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.)

ಇ. ಕರ್ಪೂರವನ್ನು ಹೇಗೆ ಉಪಯೋಗಿಸಬೇಕು?

೧. ಕರ್ಪೂರದ ಪುಡಿಯನ್ನು ಮುಖಕ್ಕೆ ಹಚ್ಚಿ ಅದರ ಪರಿಮಳವನ್ನೂ ತೆಗೆದುಕೊಳ್ಳಬೇಕು.
ಅ. ಚಿಟಿಕೆಯಷ್ಟು ಪುಡಿಯಾಗುವಷ್ಟು ಕರ್ಪೂರದ ತುಂಡನ್ನು ಕೈಯಲ್ಲಿ ತೆಗೆದುಕೊಂಡು ನಾಮಜಪ ಮಾಡುತ್ತಾ ಅದನ್ನು ಅಂಗೈಯಲ್ಲಿ ಪುಡಿ ಮಾಡಬೇಕು. ಕಣ್ಣುಗಳನ್ನು ಮುಚ್ಚಿ ಪುಡಿಯನ್ನು ಕಣ್ಣುಗಳೊಂದಿಗೆ ಇಡೀ ಮುಖದ ಮೇಲೆ ನಿಧಾನವಾಗಿ ಹಚ್ಚಬೇಕು. ಇದರಿಂದ ಮುಖದ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ಕಡಿಮೆಯಾಗುತ್ತದೆ.
ಆ. ಈ ಪುಡಿಯನ್ನು ಆಜ್ಞಾಚಕ್ರದ ಮೇಲೆ (ಎರಡೂ ಹುಬ್ಬುಗಳ ನಡುವೆ) ಹೆಚ್ಚು ಪ್ರಮಾಣದಲ್ಲಿ ತಿಕ್ಕಬೇಕು. ಇದರಿಂದ ಆಜ್ಞಾಚಕ್ರ ಜಾಗೃತವಾಗಲು ಸಹಾಯವಾಗುತ್ತದೆ.
ಇ. ಉಳಿದ ಪುಡಿಯನ್ನು ಎರಡೂ ಅಂಗೈಗಳಿಗೆ ತಿಕ್ಕಬೇಕು. ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮೂಗಿನೊಂದಿಗೆ ಮುಖವನ್ನು ಮುಚ್ಚಿಕೊಳ್ಳಬೇಕು.
ಈ. ಎರಡೂ ಕೈಗಳ ಬೊಗಸೆಯಲ್ಲಿ ಕಣ್ಣುಗಳ ರೆಪ್ಪೆಗಳನ್ನು ೪-೫ ಬಾರಿ ಮುಚ್ಚುವುದು ತೆರೆಯುವುದು ಮಾಡಬೇಕು. ಬೊಗಸೆಯ ಟೊಳ್ಳಿನಿಂದ ದೀರ್ಘಶ್ವಾಸವನ್ನು ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಒಂದು ಸಲಕ್ಕೆ ೩-೪ ಬಾರಿ ಮಾಡಬೇಕು.

೨. ಇತರ ಉಪಯೋಗಗಳು
ಅ. ಖಾಲಿ ಡಬ್ಬಿಯಲ್ಲಿ ಕರ್ಪೂರದ ತುಂಡುಗಳನ್ನಿಟ್ಟು ಆ ಡಬ್ಬಿಯ ಟೊಳ್ಳಿನ ಸುಗಂಧವನ್ನು ಆಗಾಗ ತೆಗೆದುಕೊಳ್ಳಬೇಕು, ನಮ್ಮ ಮೇಲೆ ಸತತವಾಗಿ ಬರುವ ತ್ರಾಸದಾಯಕ ಶಕ್ತಿಯ ಆವರಣದೊಂದಿಗೆ ಹೋರಾಡಲು ಈ ಉಪಾಯವನ್ನು ನಡೆದಾಡುವಾಗ, ಇತರರೊಂದಿಗೆ ಚರ್ಚೆ ಮಾಡುವಾಗ, ಸಭೆ / ಸತ್ಸಂಗ ಇವುಗಳಲ್ಲಿಯೂ ಮಾಡಬಹುದು.
ಆ. ವೈದ್ಯಕೀಯ ಉಪಚಾರವನ್ನು ಮಾಡಿಯೂ ಶರೀರ ತುರಿಸುವುದು, ಶರೀರದ ಮೇಲೆ ಗುಳ್ಳೆ ಅಥವಾ ಪರಚಿದ ಗುರುತುಗಳು ಮೂಡುವುದು, ಶರೀರದ ಉಷ್ಣತೆ ಹೆಚ್ಚಾಗುವುದು, ಹಾಗೆಯೇ ತಲೆನೋವು, ಏನೂ ಹೊಳೆಯದಿರುವುದು ಮುಂತಾದ ತೊಂದರೆಯಾಗುತ್ತಿದ್ದಲ್ಲಿ ಆಜ್ಞಾಚಕ್ರದ ಮೇಲೆ ಅಥವಾ ಶಾರೀರಿಕ ತೊಂದರೆಯ ಅರಿವಾಗುತ್ತಿರುವ ಸ್ಥಳದ ಮೇಲೆ ‘ಸನಾತನದ ಕರ್ಪೂರ’ದ ತುಂಡನ್ನು ಹಚ್ಚಿಕೊಳ್ಳಬೇಕು. ಸಾಮಾನ್ಯವಾಗಿ ಆಧ್ಯಾತ್ಮಿಕ ತೊಂದರೆಯಿದ್ದಲ್ಲಿ ಆ ತುಂಡು ತಾನಾಗಿಯೇ ಅಂಟಿಕೊಳ್ಳುತ್ತದೆ ಮತ್ತು ತೊಂದರೆ ಕಡಿಮೆಯಾದ ನಂತರ ಕೆಳಗೆ ಬೀಳುತ್ತದೆ.
ಇ. ಶರೀರ ಅಥವಾ ತಲೆಗೆ ಎಣ್ಣೆಯಿಂದ ಮರ್ದನ (ಮಾಲೀಶ್) ಮಾಡುವ ಮೊದಲು ಒಂದು ಕೈಯಲ್ಲಿ ಕರ್ಪೂರದ ಸ್ವಲ್ಪ ಪುಡಿ ಮಾಡಬೇಕು; ಅದರಲ್ಲಿ ಎಣ್ಣೆ ಹಾಕಿ ಅನಂತರ ಮರ್ದನ (ಮಾಲೀಶ್) ಮಾಡಬೇಕು. ಇದರಿಂದ ಕರ್ಪೂರದಲ್ಲಿನ ಶಿವತತ್ತ್ವರೂಪೀ ಗಂಧದಿಂದ ನಮಗೆ ಅತ್ಯಧಿಕ ಪ್ರಮಾಣದಲ್ಲಿ ಆಧ್ಯಾತ್ಮಿಕ ಲಾಭ ಸಿಗಲು ಸಹಾಯವಾಗುತ್ತದೆ. - ಪೂ. (ಸೌ.) ಅಂಜಲಿ ಗಾಡಗೀಳ (೨೫.೧೧.೨೦೧೦)
ಈ. ರಾತ್ರಿ ಮಲಗುವಾಗ ಹಾಸಿಗೆಯ ಮೇಲೆ ಕರ್ಪೂರದ ಪುಡಿಯನ್ನು ಹರಡಬೇಕು

ಈ. ಅನುಭೂತಿ

೧. ‘ಸನಾತನ ಕರ್ಪೂರ’ದ ಸುಗಂಧ ತೆಗೆದುಕೊಂಡ ನಂತರ ಶೀತ (ನೆಗಡಿ) ದೂರವಾಗುವುದು : ೧೭.೧೦.೨೦೦೭ರಂದು ಬೆಳಗ್ಗಿನಿಂದ ನನಗೆ ನೆಗಡಿಯಿಂದ ತೊಂದರೆಯಾಗುತ್ತಿತ್ತು. ನಾನು ‘ಸನಾತನ ಕರ್ಪೂರ’ದ ತುಂಡನ್ನು ಕೈಯಲ್ಲಿ ತೆಗೆದುಕೊಂಡೆ. ಶ್ರೀಕೃಷ್ಣನಲ್ಲಿ ಪ್ರಾರ್ಥನೆ ಮಾಡಿ ಆ ಕರ್ಪೂರದ ಪುಡಿ ಮಾಡಿ ಅದರ ಸುಗಂಧವನ್ನು ತೆಗೆದುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ನನ್ನ ನೆಗಡಿ ನಿಂತಿತು. - ಶ್ರೀ.ದತ್ತಾತ್ರೇಯ ಅಣ್ಣಪ್ಪ ಲೋಹಾರ, ಖಡಕೆವಾಡಾ, ನಿಪ್ಪಾಣಿ ತಾಲೂಕು, ಬೆಳಗಾವಿ ಜಿಲ್ಲೆ.
೨. ಕರ್ಪೂರದ ಉಪಾಯ ಮಾಡಿದ ನಂತರ ಶರೀರ ತುರಿಸುವುದು ನಿಂತಿತು : ಒಂದು ಸಲ ನನಗೆ ಹಾಸಿಗೆಯ ಮೇಲೆ ಮಲಗಿದ ಕೂಡಲೆ ಶರೀರ ತುರಿಸಲು ಪ್ರಾರಂಭವಾಯಿತು. ನಾನು ‘ಸನಾತನ ಕರ್ಪೂರ’ದ ಪುಡಿಯನ್ನು ಕೈಯಲ್ಲಿ ತೆಗೆದುಕೊಂಡು ಪ್ರಾರ್ಥನೆಯನ್ನು ಮಾಡಿ ಶರೀರದ ಮೇಲೆ ಹಚ್ಚಿದೆ. ಕೂಡಲೇ ತುರಿಸುವುದು ನಿಂತಿತು. ಹೀಗೆ ಸತತವಾಗಿ ಮೂರು ದಿನ ಮಾಡಿದ ಮೇಲೆ ನಾಲ್ಕನೆಯ ದಿನದಿಂದ ತುರಿಸಲೇ ಇಲ್ಲ.
- ಕು.ವತ್ಸಲಾ ರೆವಂಡಕರ, ಮಾಝಗಾವ, ಮುಂಬೈ (ಜೂನ್ ೨೦೦೯)

ಸಂಬಂಧಿತ ವಿಷಯಗಳು
‘ಆಧ್ಯಾತ್ಮಿಕ ತೊಂದರೆ’ಗಳು ಎಂದರೇನು?
ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವ
'ಸನಾತನ ಅತ್ತರ್'ನಿಂದ ಮಾಡಬೇಕಾದ ಆಧ್ಯಾತ್ಮಿಕ ಉಪಾಯ
Dharma Granth

No comments:

Post a Comment

Note: only a member of this blog may post a comment.