ಹಿಂದೂಗಳ ಧಾರ್ಮಿಕ ಪರಂಪರೆಗಳ ವಿಷಯದಲ್ಲಿ ತೀರ್ಪು ನೀಡುವಾಗ ನ್ಯಾಯಾಲಯವು ಅದರ ಹಿಂದಿನ ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಬೇಕೆಂಬುದು ಹಿಂದೂಗಳ ಅಪೇಕ್ಷೆಯಾಗಿದೆ !
ಶವವನ್ನು ಪಾರಂಪರಿಕ ಪದ್ಧತಿಯಿಂದ ದಹನಸಂಸ್ಕಾರ ಮಾಡದೆ ಸಿ.ಎನ್.ಜಿ. ಅಥವಾ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಿಂದೂಗಳು ಕಳೆದ ಲಕ್ಷಗಟ್ಟಲೆ ವರ್ಷಗಳಿಂದ ಕಟ್ಟಿಗೆಯಿಂದ ಶವಸಂಸ್ಕಾರ ಮಾಡುತ್ತಿದ್ದಾರೆ; ಆದರೆ ಮಾಲಿನ್ಯದ ಸಮಸ್ಯೆ ಹಿಂದೆಂದೂ ನಿರ್ಮಾಣವಾಗಿಲ್ಲ. ಅದು ಕಳೆದ ೧೦೦ ವರ್ಷಗಳಲ್ಲಿ ನಿರ್ಮಾಣವಾಗಿದೆ, ಅಂದರೆ ಈ ಸಮಸ್ಯೆಯ ಮೂಲವು ಕಟ್ಟಿಗೆಯಿಂದ ಶವಸಂಸ್ಕಾರ ಮಾಡುವ ಹಿಂದೂಗಳ ಧರ್ಮಾಚರಣೆಯಲ್ಲಿರದೆ ಮಿತಿಮೀರಿದ ವಿಜ್ಞಾನದ ಉಪಯೋಗದಿಂದಾಗಿದೆ. ಹಿಂದೂ ಧರ್ಮದಲ್ಲಿನ ಶವಸಂಸ್ಕಾರವನ್ನು ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನದಿಂದ ವಿಚಾರ ಮಾಡಿದರೆ ಕಟ್ಟಿಗೆಯ ಚಿತೆಯ ಮೇಲಿನ ದಹನಸಂಸ್ಕಾರವನ್ನಲ್ಲ, ಇನ್ನಿತರ ಘಟಕಗಳಿಂದ (ಔದ್ಯೋಗಿಕ ಪ್ರದೂಷಣೆ, ತ್ಯಾಜ್ಯ ನೀರು ಇತ್ಯಾದಿ) ಆಗುವ ಪ್ರದೂಷಣೆಯನ್ನು ನಿಯಂತ್ರಿಸುವುದು ಆವಶ್ಯಕವಾಗಿದೆ. ಹೀಗಾದರೆ ಹಿಂದೂಗಳಿಗೆ ಅವರ ಧರ್ಮಪರಂಪರೆಯನ್ನು ಪಾಲಿಸುವುದು ಸುಲಭವಾಗಬಹುದು.
೧. ಮೃತದೇಹಕ್ಕೆ ಅಗ್ನಿ ನೀಡುವುದರ ಹಿಂದಿನ ಶಾಸ್ತ್ರವೇನು?
ಮೃತದೇಹಕ್ಕೆ ಮಂತ್ರೋಚ್ಚಾರಸಹಿತ ಕಟ್ಟಿಗೆಯ ಚಿತೆಯಲ್ಲಿ ಅಗ್ನಿ ನೀಡಿದ ನಂತರ ಮೃತದೇಹದಿಂದ ಗರಿಷ್ಠ ಪ್ರಮಾಣದಲ್ಲಿ ಅಶುದ್ಧ ವಾಯು ಉತ್ಸರ್ಜಿತವಾಗಿ ಅದು ಅಗ್ನಿಯಲ್ಲಿ ವಿಘಟನೆಯಾಗುತ್ತದೆ. ಅಗ್ನಿಯು ತೇಜತತ್ತ್ವಕ್ಕೆ ಸಂಬಂಧಿಸಿದೆ, ಅಂತ್ಯವಿಧಿಯ ಸಮಯದಲ್ಲಿ ಮಾಡಿದ ಮಂತ್ರೋಚ್ಚಾರದಿಂದ ನಿರ್ಮಾಣವಾಗುವ ನಾದಶಕ್ತಿಯ ಆಧಾರದಲ್ಲಿ ಅಗ್ನಿಯಿಂದ ಪ್ರಕ್ಷೇಪಣೆಯಾಗುವ ಲಹರಿಗಳು ಗತಿಮಾನವಾಗುತ್ತವೆ. ಇದರಿಂದ ತೇಜತತ್ತ್ವಕ್ಕೆ ಆಕಾಶತತ್ತ್ವವು ಜೋಡಿಸಲ್ಪಟ್ಟು ಉತ್ಪನ್ನವಾಗುವ ಸಂಯುಕ್ತ ಲಹರಿಗಳು ಮೃತದೇಹದ ಸುತ್ತಲೂ ತಮ್ಮ ಅಭೇದ್ಯವಾದ ಸೂಕ್ಷ ್ಮ ಕವಚವನ್ನು ನಿರ್ಮಾಣ ಮಾಡುತ್ತವೆ. ಇದರಿಂದ ಲಿಂಗದೇಹವು ವಾತಾವರಣ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವಾಗಲೇ ಅದಕ್ಕೆ ಕೆಟ್ಟ ಶಕ್ತಿಯಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ ಹಾಗೂ ಸಂಯುಕ್ತ ಲಹರಿಗಳಿಂದ ಸೂಕ ಇಂಧನವು ನಿರ್ಮಾಣವಾಗಿ ಲಿಂಗದೇಹಕ್ಕೆ ಅಲ್ಪಾವಧಿಯಲ್ಲಿ ಪೃಥ್ವಿಯ ವಾತಾವರಣ ಕಕ್ಷೆಯನ್ನು ಭೇದಿಸಿ ಮುಂದೆ ಹೋಗಲು ಸಾಧ್ಯವಾಗುತ್ತದೆ. ಮೃತ ವ್ಯಕ್ತಿಯನ್ನು ಹೂಳುವುದು ಅಥವಾ ಇನ್ನಿತರ ಮಾರ್ಗಗಳನ್ನು ಅವಲಂಬಿಸುವುದಕ್ಕಿಂತ ಅದನ್ನು ದಹನ ಮಾಡಿದರೆ ಆ ಜೀವಕ್ಕೆ ಕೆಟ್ಟ ಶಕ್ತಿಯ ತೊಂದರೆಯಾಗುವುದಿಲ್ಲ. ಅದರ ಮುಂದಿನ ಪ್ರವಾಸಕ್ಕೂ ದಹನಸಂಸ್ಕಾರವು ಪೂರಕವಾಗಿರುತ್ತದೆ; ಆದ್ದರಿಂದ ಮಂತ್ರೋಪಚಾರಸಹಿತ ಕಟ್ಟಿಗೆಯ ಚಿತೆಯಲ್ಲಿ ನೀಡುವ ಅಗ್ನಿಗೆ ಅತ್ಯಂತ ಮಹತ್ವವಿದೆ. - ಶ್ರೀ ಗುರುತತ್ತ್ವ (೨೪.೬.೨೦೦೫, ಮಧ್ಯಾಹ್ನ ೪.೦೩) (ಪೂಜ್ಯ (ಸೌ.) ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ, ಶ್ರೀ ಗುರುತತ್ತ್ವ ಈ ಬರಹನಾಮದಿಂದಲೂ ಲೇಖನಗಳನ್ನು ಬರೆಯುತ್ತಾರೆ.)
೨. ಶಾಸ್ತ್ರಕ್ಕನುಸಾರ ಮೃತದೇಹಕ್ಕೆ ಕಟ್ಟಿಗೆಯ ಚಿತೆಯಲ್ಲಿಯೇ ಅಗ್ನಿ ನೀಡುವುದು ಏಕೆ ಯೋಗ್ಯವಾಗಿದೆ ?
ವೈಜ್ಞಾನಿಕ ಪ್ರಗತಿಯ ಅತಿರೇಕದಿಂದ ಹಿಂದೂ ಸಮಾಜವು ಅಮೂಲ್ಯವಾದ ಅನೇಕ ಪ್ರಾಚೀನ ಶಾಸ್ತ್ರಗಳನ್ನು ತ್ಯಾಗ ಮಾಡಿದೆ. ಅದರಿಂದ ಅದು ಈಶ್ವರನಿಂದ ದೂರ ಹೋಗಿದೆ. ಅಂತ್ಯಸಂಸ್ಕಾರದ ವಿಧಿಯಲ್ಲಿಯೂ ವಿಜ್ಞಾನವು ನುಸುಳಿದೆ; ಲಕ್ಷಗಟ್ಟಲೆ ವರ್ಷಗಳಿಂದ ಕಟ್ಟಿಗೆ, ಬೆರಣಿ, ನೀರು ಇತ್ಯಾದಿ ಸಾತ್ತ್ವಿಕ ಘಟಕಗಳ ಮೂಲಕ ಆಗುವ ಅಂತ್ಯಸಂಸ್ಕಾರವು ಇಂದು ವಿದ್ಯುತ್, ಪೆಟ್ರೋಲಿಯಮ್ ಗ್ಯಾಸ್, ಸೀಮೆ ಎಣ್ಣೆ , ಡೀಸೆಲ್ ಇತ್ಯಾದಿ ಘಟಕಗಳ ಮೂಲಕ ಮಾಡಲ್ಪಡುತ್ತಿದೆ. ಹಿಂದೂ ಧರ್ಮದಲ್ಲಿ ಒಲೆಯಲ್ಲಿ ಅಡುಗೆ ಮಾಡುವುದು, ಯಜ್ಞಯಾಗ ಇತ್ಯಾದಿಗಳಿಂದ ಅಂತ್ಯಸಂಸ್ಕಾರದವರೆಗಿನ ಎಲ್ಲ ಪ್ರಸಂಗಗಳಲ್ಲಿಯೂ ಕಟ್ಟಿಗೆಗೆ ಧಾರ್ಮಿಕದೃಷ್ಟಿಯಿಂದ ಮಹತ್ವ ನೀಡಲಾಗಿದೆ; ಏಕೆಂದರೆ ಕಟ್ಟಿಗೆ ಸತ್ತ್ವಗುಣಿಯಾಗಿದೆ; ಆದ್ದರಿಂದ ಅಂತ್ಯಸಂಸ್ಕಾರದ ಸಮಯದಲ್ಲಿ ಆತ್ಮಕ್ಕೆ ಗತಿ(ಚಾಲನೆ)ಸಿಗಬೇಕೆಂದು ಕಟ್ಟಿಗೆಯನ್ನೇ ಉಪಯೋಗಿಸಬೇಕು.
೩. ಕಟ್ಟಿಗೆಯಲ್ಲಿನ ಸೂಕ್ಷ್ಮ ಸ್ವರೂಪದ ಅಗ್ನಿಯಿಂದ ಆತ್ಮಕ್ಕೆ ಸದ್ಗತಿ ಸಿಗುವುದು !
ಕಟ್ಟಿಗೆಯಲ್ಲಿ ಸೂಕ್ಷ್ಮ ಸ್ವರೂಪದಲ್ಲಿ ಅಗ್ನಿತತ್ತ್ವವು ಇದ್ದೇ ಇರುತ್ತದೆ; ಆದ್ದರಿಂದ ಕಟ್ಟಿಗೆಯು ಮೂಲತಃ ಶುದ್ಧಿಕಾರಕವಾಗಿದೆ. ಮೃತದೇಹಕ್ಕೆ ಕಟ್ಟಿಗೆಯ ಚಿತೆಯಲ್ಲಿ ಅಗ್ನಿ ನೀಡುವುದರಿಂದ ಕಟ್ಟಿಗೆಯಲ್ಲಿನ ಸೂಕ್ಷ್ಮ ಸ್ವರೂಪದ ಅಗ್ನಿಯು ಮೃತದೇಹದ ಅಶುದ್ಧತೆಯನ್ನು (ರಜ-ತಮ) ನಾಶಗೊಳಿಸುತ್ತದೆ. ಆದ್ದರಿಂದ ಮೃತದೇಹವು ಹಗುರವಾಗಿ ಅದಕ್ಕೆ ಸದ್ಗತಿ ದೊರೆಯಲು ಸಹಾಯವಾಗುತ್ತದೆ.
೪. ವಿದ್ಯುತ್, ಡೀಸೆಲ್ ಇತ್ಯಾದಿ ಘಟಕಗಳ ಮೂಲಕ ಮೃತದೇಹಕ್ಕೆ ಅಗ್ನಿಯನ್ನು ನೀಡುವುದರಿಂದ ಆತ್ಮಕ್ಕೆ ದುರ್ಗತಿ ಪ್ರಾಪ್ತಿಯಾಗುವುದು !
ವಿದ್ಯುತ್, ಪೆಟ್ರೋಲಿಯಮ್ ಗ್ಯಾಸ್, ಡೀಸೆಲ್ ಇತ್ಯಾದಿಗಳನ್ನು ಉಪಯೋಗಿಸುವ ಚಿತಾಗಾರಗಳು ರಜ-ತಮಯುಕ್ತವಾಗಿರುವುದರಿಂದ ಮೃತದೇಹವು ದಹನವಾಗುವಾಗ ಅದರಿಂದ ರಜ-ತಮವು ಪ್ರಕ್ಷೇಪಣೆಯಾಗುತ್ತದೆ. ಅದರಿಂದ ವಾಯುಮಂಡಲ ಮತ್ತು ಮೃತದೇಹವೂ ಕಲುಷಿತವಾಗುತ್ತದೆ. ಇಂತಹ ಕಲುಷಿತ ಮೃತದೇಹದ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುತ್ತವೆ ಹಾಗೂ ಆ ಮೃತದೇಹವನ್ನು ವಶಪಡಿಸಿಕೊಳ್ಳುತ್ತವೆ. ಆದ್ದರಿಂದ ಆತ್ಮಕ್ಕೆ ಮುಂದಿನ ಗತಿ ಸಿಗದೆ ಅದು ಭುವರ್ಲೋಕದಲ್ಲಿಯೇ ಸಿಲುಕುತ್ತದೆ. ಅಲ್ಲಿ ಅದು ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಆತ್ಮಕ್ಕೆ ಸದ್ಗತಿ ಸಿಗದೆ ದುರ್ಗತಿಯೇ ಸಿಗುತ್ತದೆ !
೫. ಬಾಂಧವರೇ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಿ !
ಅ. ವ್ಯಕ್ತಿ ಜೀವಂತ ಇರುವಾಗ ಮಾತ್ರವಲ್ಲ, ಮೃತ್ಯುವಿನ ನಂತರವೂ ಅವನ ಮುಂದಿನ ಪ್ರವಾಸವು ಸುಖವಾಗಿ ಆಗಲಿ ಎಂಬುದಕ್ಕಾಗಿ ಹಿಂದೂ ಧರ್ಮದಲ್ಲಿ ವಿವಿಧ ವಿಧಿಗಳನ್ನು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಹೇಳಿದಂತೆ ಅಗ್ನಿಸಂಸ್ಕಾರ ಮಾಡಿ ಮೃತ ವ್ಯಕ್ತಿಯ ಮರಣದ ನಂತರದ ಪ್ರವಾಸವನ್ನು ಸುಖದಾಯಕಗೊಳಿಸುವುದು, ಆ ಮೃತ ವ್ಯಕ್ತಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿಯಾಗುತ್ತದೆ !
ಆ. ಪೆಟ್ರೋಲಿಯಮ್ ಗ್ಯಾಸ್, ಬಾಯೋ-ಗ್ಯಾಸ್, ವಿದ್ಯುತ್ ಇತ್ಯಾದಿ ಕೃತಕ ಘಟಕಗಳನ್ನು ಅಗ್ನಿಸಂಸ್ಕಾರಕ್ಕಾಗಿ ಉಪಯೋಗಿಸುವುದೆಂದರೆ, ಒಂದು ರೀತಿಯಲ್ಲಿ ಮೃತ ದೇಹದ ಸುತ್ತಲೂ ರಜ-ತಮದ ಆಚ್ಛಾದನೆಯನ್ನು ಹಾಕಿದಂತೆ ಆಗಿದೆ ! ಹೀಗೆ ಮಾಡಿ ನಮ್ಮವರಿಗೇ ಮರಣದ ನಂತರದ ಪ್ರವಾಸದಲ್ಲಿ ಅಡಚಣೆಯನ್ನುಂಟು ಮಾಡುವಂತಹ ಪಾಪದಲ್ಲಿ ಪಾಲುದಾರರಾದಂತಾಗುತ್ತದೆ.
ಇತರ ಘಟಕಗಳ ತುಲನೆಯಲ್ಲಿ ಹಿಂದೂಗಳ ದಹನಸಂಸ್ಕಾರದಲ್ಲಿ ಬೇಕಾಗುವ ಕಟ್ಟಿಗೆಯ ಹಾಗೂ ಅದರಿಂದ ಆಗುವ ಮಾಲಿನ್ಯದ ಪ್ರಮಾಣವು ಅತ್ಯಲ್ಪ, ಬಹುಶಃ ನಗಣ್ಯವೆನ್ನಬಹುದು, ಆದರೂ ಹಿಂದೂಗಳ ದಹನಸಂಸ್ಕಾರದ ವಿಷಯದಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಇದರಿಂದ ಜಾತ್ಯತೀತತೆಯ ರಾಜ್ಯಪದ್ಧತಿಯಿಂದ ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಧರ್ಮಾಚರಣೆ ಮಾಡುವುದು ಎಷ್ಟು ಕಠಿಣವಾಗಬಹುದು, ಎಂಬುದು ಅರಿವಾಗುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಆವಶ್ಯಕವಾಗಿದೆ !
- ಪ.ಪೂ. ಡಾ. ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ.
- ಪ.ಪೂ. ಡಾ. ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ.
No comments:
Post a Comment
Note: only a member of this blog may post a comment.