ಆಷಾಢ ಏಕಾದಶಿ

ಪ್ರಕಾರ: ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ (ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ.

ಇತಿಹಾಸ: ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ ಏಕಾದಶಿಯಂದು ಅವರಿಗೆ ಉಪವಾಸ ಮಾಡಬೇಕಾಯಿತು. ಮಳೆಯ ನೀರಿನಲ್ಲಿ ಸ್ನಾನವಾಯಿತು. ಆಕಸ್ಮಿಕವಾಗಿ ಅವರೆಲ್ಲರ ಶ್ವಾಸದಿಂದ ಒಂದು ಶಕ್ತಿಯು ಉತ್ಪನ್ನವಾಯಿತು. ಆ ಶಕ್ತಿಯು ಗುಹೆಯ ಬಾಗಿಲಿನಲ್ಲಿ ಕಾಯುತ್ತಿದ್ದ ಮೃದುಮಾನ್ಯ ದೈತ್ಯನನ್ನು ವಧಿಸಿತು. ಈ ಶಕ್ತಿದೇವಿಯೇ ಏಕಾದಶಿಯ ದೇವತೆಯಾಗಿದ್ದಾಳೆ.

ಮಹತ್ವ
ಅ. ಆಷಾಢ ಏಕಾದಶಿ ವ್ರತದಲ್ಲಿ ಎಲ್ಲ ದೇವತೆಗಳ ತೇಜಸ್ಸು ಒಂದಾಗಿರುತ್ತದೆ.
ಆ. ಕಾಮಿಕಾ ಏಕಾದಶಿಯು ಮನೋಕಾಮನೆಯನ್ನು ಪೂರ್ಣಗೊಳಿಸುವ ಏಕಾದಶಿಯಾಗಿದೆ. ಇದು ಪುತ್ರದಾಯೀ ಏಕಾದಶಿಯಾಗಿದೆ.

ವ್ರತವನ್ನು ಮಾಡುವ ಪದ್ಧತಿ: ಮೊದಲನೆಯ ದಿನ ದಶಮಿಗೆ ಏಕಭುಕ್ತವಿರಬೇಕು. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ ವಿಷ್ಣುವಿನ ಪೂಜೆಯನ್ನು ಮಾಡಬೇಕು. ಪೂರ್ಣದಿವಸ ಉಪವಾಸ ಮಾಡಬೇಕು. ರಾತ್ರಿ ಹರಿಭಜನೆಯೊಂದಿಗೆ ಜಾಗರಣೆ ಮಾಡಬೇಕು. ಆಷಾಢ ಶುಕ್ಲ ದ್ವಾದಶಿಗೆ ವಾಮನನನ್ನು ಪೂಜಿಸಿ ಪಾರಣೆ ಮಾಡಬೇಕು. (೧೪)
ಈ ಎರಡೂ ದಿನಗಳಂದು ಶ್ರೀವಿಷ್ಣುವನ್ನು ‘ಶ್ರೀಧರ’ ಎನ್ನುವ ಹೆಸರಿನಿಂದ ಪೂಜಿಸಿ ಅಹೋರಾತ್ರಿ ತುಪ್ಪದ ದೀಪವನ್ನು ಉರಿಸುವ ವಿಧಿಯನ್ನು ಮಾಡುತ್ತಾರೆ.

ಪಂಢರಪುರದ ಯಾತ್ರೆ (ವಾರಿ): ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. ವಾರಕರಿ (ವಿಠಲನ ಭಕ್ತರು) ಸಂಪ್ರದಾಯವು ವೈಷ್ಣವ ಸಂಪ್ರದಾಯದಲ್ಲಿನ ಪ್ರಮುಖ ಸಂಪ್ರದಾಯವಾಗಿದೆ. ಈ ಸಂಪ್ರದಾಯದಲ್ಲಿ ವಾರ್ಷಿಕ, ಅರ್ಧವಾರ್ಷಿಕ ಹೀಗೆ ಪಡೆದಿರುವ ದೀಕ್ಷೆಯ ವಿಧಕ್ಕನುಸಾರವಾಗಿ ಯಾತ್ರೆಯನ್ನು ಮಾಡುತ್ತಾರೆ. ಈ ಯಾತ್ರೆಯನ್ನು ಕಾಲ್ನಡಿಗೆಯಿಂದ ಮಾಡಿದರೆ ಶಾರೀರಿಕ ತಪಸ್ಸಾಗುತ್ತದೆ ಎಂದು ನಂಬಲಾಗುತ್ತದೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ "ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು")

ವರ್ಷದ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ ಆಷಾಢ ಏಕಾದಶಿಯ ಮಹತ್ವವು ಮುಂದಿನಂತಿದೆ.
ಅ. ಈ ತಿಥಿಗೆ ಏಕಾದಶೀದೇವಿಯ ಉತ್ಪತ್ತಿಯಾಯಿತು.
ಆ. ಈ ತಿಥಿಯಂದು ಚಾತುರ್ಮಾಸವು ಪ್ರಾರಂಭವಾಗುತ್ತದೆ.
ಇ. ಇದೇ ದಿನ ಶ್ರೀವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಲೀನನಾಗುತ್ತಾನೆ.
ಈ. ಇದೇ ತಿಥಿಗೆ ಶ್ರೀ ವಿಠ್ಠಲನು ಭಕ್ತ ಪುಂಡಲೀಕನನ್ನು ಭೇಟಿಯಾಗಲು ಪಂಢರಪುರಕ್ಕೆ ಬಂದನು.

ಅ. ಆಷಾಢ ಏಕಾದಶಿಯಂದು ಚೈತನ್ಯವು ಅಪ್ರಕಟವಾಗಿರುವುದರಿಂದ ಬ್ರಹ್ಮಾಂಡಮಂಡಲದ ಮೇಲಿನ ಕೆಟ್ಟ ಶಕ್ತಿಗಳ ಪ್ರಭಾವ ತೋರಿಸುವ ಸೂಕ್ಷ್ಮಜ್ಞಾನದ ಚಿತ್ರ


೧. ‘ಸೂಕ್ಷ್ಮಜ್ಞಾನದ ಚಿತ್ರದ ಸತ್ಯತೆ: ಶೇ.೮೦
೨. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ತ್ರಾಸದಾಯಕ ಸ್ಪಂದನಗಳು: ಶೇ.೪’ - ಪ.ಪೂ.ಡಾ.ಆಠವಲೆ
೩. ‘ಸೂಕ್ಷ್ಮಜ್ಞಾನದ ಚಿತ್ರದಲ್ಲಿರುವ ಸ್ಪಂದನಗಳ ಪ್ರಮಾಣ: ಚೈತನ್ಯ ಶೇ.೨.೭೫, ಭೂಮಂಡಲದ ಸುತ್ತಲೂ ಇರುವ ತ್ರಾಸದಾಯಕ ಸ್ಪಂದನಗಳ ಪ್ರಮಾಣ ಶೇ.೩ ಮತ್ತು ತ್ರಾಸದಾಯಕ ಶಕ್ತಿ ಶೇ.೩

೪. ಇತರ ಅಂಶಗಳು

ಅ. ಆಷಾಢ ಏಕಾದಶಿಯು ಕಾಲಕ್ಕೆ ಸಂಬಂಧಿಸಿದೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿ ಈ ನಾಲ್ಕು ತಿಂಗಳುಗಳಲ್ಲಿ ದಕ್ಷಿಣಾಯನವು ನಡೆಯುತ್ತಿರುತ್ತದೆ. ಆದ್ದರಿಂದ ಈ ಕಾಲಾವಧಿಯು ದೇವತೆಗಳ ನಿದ್ರೆಯ ಕಾಲಾವಧಿಯಾಗಿದೆ ಎಂದು ಹೇಳುತ್ತಾರೆ.

ಆ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳ ಸಗುಣ-ನಿರ್ಗುಣ ತತ್ತ್ವಗಳ ಸ್ಪಂದನಗಳ ಪ್ರಕ್ಷೇಪಣೆಯ ಕಾರ್ಯವು ಅಪ್ರಕಟ ಸ್ವರೂಪದಲ್ಲಿರುತ್ತದೆ. ಆದುದರಿಂದ ಭೂಮಂಡಲದ ಕಡೆಗೆ ಅವುಗಳ ಪ್ರಕ್ಷೇಪಣೆಯ ಪ್ರಮಾಣವು ಕಡಿಮೆಯಿರುತ್ತದೆ.

ಇ. ಈ ಕಾಲಾವಧಿಯಲ್ಲಿ ದೇವತೆಗಳ ತತ್ತ್ವಗಳು ಅಪ್ರಕಟ ಸ್ವರೂಪದಲ್ಲಿರುವುದರಿಂದ ವಾಯುಮಂಡಲ ಮತ್ತು ಬ್ರಹ್ಮಾಂಡ ಮಂಡಲಗಳಲ್ಲಿ, ಹಾಗೆಯೇ ಭೂಮಿಯ ಮೇಲೆ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಇದರ ಪರಿಣಾಮವು ಭೂಮಿಯ ಮೇಲಿನ ಸಜೀವ ಸೃಷ್ಟಿಯ ಮೇಲೂ ಆಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ಉಪವಾಸ, ಪೂಜಾವಿಧಿ, ವ್ರತ ಮುಂತಾದವುಗಳನ್ನು ಮಾಡುವುದರಿಂದ ಜೀವದ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ಕಡಿಮೆಯಾಗುತ್ತದೆ.

ಈ. ಆಷಾಢ ಶುಕ್ಲ ಏಕಾದಶಿಯ ದಿನ ಶ್ರೀವಿಷ್ಣುವಿಗೆ ಪಾರ್ಥನೆ ಮತ್ತು ಅವನನ್ನು ಪೂಜಿಸುವುದರಿಂದ, ಹಾಗೆಯೇ ಇಡೀರಾತ್ರಿ ಅವನ ಎದುರಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಕೆಟ್ಟ ಶಕ್ತಿಗಳಿಂದ ವಾಸ್ತುವಿನ ರಕ್ಷಣೆಯಾಗುತ್ತದೆ.’
- ಕು.ಪ್ರಿಯಾಂಕಾ ಲೋಟಲೀಕರ, ಸನಾತನ ಸಂಸ್ಥೆ (ಕಾರ್ತಿಕ ಶು.೭, ಕಲಿಯುಗ ವರ್ಷ ೫೧೧೨ (೧೩.೧೧.೨೦೧೦))

(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಶ್ರೀ ವಿಠ್ಠಲ")

ಸಂಬಂಧಿತ ವಿಷಯಗಳು
ಕಾರ್ತಿಕ ಏಕಾದಶಿ
ಸಹೋದರ ಬಿದಿಗೆ (ಯಮದ್ವಿತೀಯಾ)
ಬಲಿಪಾಡ್ಯ (ದೀಪಾವಳಿ ಪಾಡ್ಯ)
ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ
ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)
ಆಶ್ವಯುಜ ಕೃಷ್ಣ ತ್ರಯೋದಶಿ - ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ
ದೀಪಾವಳಿ
ಗೋವತ್ಸ ದ್ವಾದಶಿ
ವ್ರತಗಳ ವಿಧಗಳು
ಶ್ರೀ ಗಣೇಶ : ಚತುರ್ಥಿ ಮಹತ್ವ
ಮಕರ ಸಂಕ್ರಾಂತಿ
ಗಣೇಶ ಜಯಂತಿ
ಮಹಾಶಿವರಾತ್ರಿ
ಹೋಳಿ ಉತ್ಸವ ಆಚರಿಸುವ ಪದ್ಧತಿ
ಹಿಂದೂಗಳ ಹೊಸ ವರ್ಷಾರಂಭ - ಯುಗಾದಿ
ಯುಗಾದಿಯಂದು ಏರಿಸುವ ಬ್ರಹ್ಮಧ್ವಜ
ಬೇವಿನ ಪ್ರಸಾದ
ಶ್ರೀರಾಮನವಮಿ
ಅಕ್ಷಯ ತೃತೀಯಾ (ತದಿಗೆ)
Dharma Granth

1 comment:

Note: only a member of this blog may post a comment.