ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು

ಪುಷ್ಪದ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು. ಸಾತ್ತ್ವಿಕ ಪುಷ್ಪಗಳಿಂದ ಪ್ರಕ್ಷೇಪಿತವಾಗುವ ದೇವತಾತತ್ತ್ವದ ಪವಿತ್ರಕಗಳ ಕಾರಣದಿಂದ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಅವುಗಳ ತಮಪ್ರಧಾನ ಶಕ್ತಿ ಅಂದರೆ ಕಪ್ಪು ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ ಅಥವಾ ನಾಶವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಸಾತ್ತ್ವಿಕ ಪುಷ್ಪ, ದೇವತಾತತ್ತ್ವದ ತರಂಗಗಳನ್ನು ಪ್ರಕ್ಷೇಪಿಸಿ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಒಂದು ಪ್ರಕಾರ ಯುದ್ಧವನ್ನೇ ಮಾಡುತ್ತದೆ.

ಪೂಜೆಯಲ್ಲಿ ನಿಷಿದ್ಧ ಪುಷ್ಪಗಳು
೧. ಅಪವಿತ್ರ ಸ್ಥಳದಲ್ಲಿ ಬೆಳೆದ ಪುಷ್ಪ
೨. ಅರಳದಿರುವ ಪುಷ್ಪ ಅಂದರೆ ಮೊಗ್ಗು
೩. ಎಸುಳುಗಳು ಉದುರಿದ ಪುಷ್ಪ
೪. ಗಂಧವಿಲ್ಲದ ಅಥವಾ ಉಗ್ರ ಗಂಧದ ಪುಷ್ಪ
೫. ಆಘ್ರಾಣಿಸಿದ ಪುಷ್ಪ
೬. ನೆಲದ ಮೇಲೆ ಬಿದ್ದ ಹೂವು
೭. ಎಡಗೈಯಿಂದ ತಂದಿರುವ
. ಬೇರೆಯವರನ್ನು ಅಪ್ರಸನ್ನಗೊಳಿಸಿ ತರಲಾದ ಪುಷ್ಪಗಳನ್ನು ದೇವತೆಗೆ ಅರ್ಪಿಸುವುದು ನಿಷಿದ್ಧವಾಗಿದೆ.

ಪುಷ್ಪ ನಿಷೇಧದ ಕೆಲವು ಅಪವಾದಗಳು
೧. ದೇವತೆಗೆ ಮೊಗ್ಗುಗಳನ್ನು ಅರ್ಪಿಸುವುದಿಲ್ಲ, ಆದರೆ ಈ ನಿಷೇಧವು ಕಮಲಕ್ಕೆ ಅನ್ವಯಿಸುವುದಿಲ್ಲ.
೨. ಹೂವುಗಳನ್ನು ನೀರಿನಲ್ಲಿ ಮುಳುಗಿಸಿ ತೊಳೆಯುವುದಿಲ್ಲ. ಆದರೆ ಹೂವುಗಳ ಮೇಲೆ ನೀರನ್ನು ಸಿಂಪಡಿಸಬಹುದು.

ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು ?
ಸೂರ್ಯಾಸ್ತದ ನಂತರ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವು ಹೆಚ್ಚಾಗುತ್ತದೆ. ಇದರಿಂದ ವಾತಾವರಣದಲ್ಲಿ ತೊಂದರೆದಾಯಕ ತರಂಗಗಳು ಹೆಚ್ಚಾಗುತ್ತವೆ. ಇದರಿಂದ  ಮೊಗ್ಗುಗಳಲ್ಲಿ ರಜ-ತಮ ಕಣಗಳು ಆವೇಶಿತವಾಗುತ್ತವೆ. ದೇವತೆಗಳ ತತ್ತ್ವವನ್ನು ಆಕರ್ಷಿಸುವ ಅವುಗಳ ಕ್ಷಮತೆಯು ಕಡಿಮೆಯಾಗುತ್ತದೆ. ಆದುದರಿಂದ ಆದಷ್ಟು ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಕೀಳಬಾರದು.

ಪುಷ್ಪ ಕೀಳುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು
೧. ಸ್ನಾನ ಮಾಡದೆ ಪುಷ್ಪಗಳನ್ನು ಕೀಳಬಾರದು.
೨. ಪಾದರಕ್ಷೆಗಳನ್ನು ಧರಿಸಿ ಪೂಜೆಗಾಗಿ ಪುಷ್ಪ ಕೀಳಬಾರದು.
೩. ಪುಷ್ಪವನ್ನು ಕೀಳುವ ಮೊದಲು, ಯಾವ ಗಿಡದ ಪುಷ್ಪ ಕೀಳುವುದಿದೆಯೋ ಅದಕ್ಕೆ ಕೃತಜ್ಞತೆ ವ್ಯಕ್ತಪಡಿಸಬೇಕು.
೪. ಪೂಜಾವಿಧಿಗೆ ಪುಷ್ಪ ಆರಿಸುವಾಗ, ಪುಷ್ಪವನ್ನು ಅರ್ಪಿಸುವ ಉದ್ದೇಶವು ಸಫಲವಾಗಲಿ ಎಂದು ಪ್ರಾರ್ಥನೆ ಮಾಡಬೆಕು.
೫. ನಮ್ಮ ಇಷ್ಟದೇವರ ನಾಮಜಪ ಮಾಡುತ್ತಾ ಪುಷ್ಪ ಕೀಳಬೇಕು.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಪೂಜಾಸಾಮಗ್ರಿಗಳ ಮಹತ್ವ' ಮತ್ತು 'ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ')

10 comments:

 1. Replies
  1. Uttama vicharagalu mattu adakke artha vivarane tumbaa chennagide.Dharmgranthdinda naanu bahalastu prerepitanaagiddene, dhanyavaadagalu.

   Delete
  2. @ramesh, nimma abhiprayakke tumba dhanyavadagalu

   Delete
  3. One of my friend introduced.This is first time i entered this web today. It is realy treasure. I like it.Thanks. I shall regularly go through it.
   Ramesh Kulkarni

   Delete
 2. ತುಂಬಾ ಉಪಯೋಗವಾಯಿತು

  ReplyDelete

 3. Can I know why Marigold/Chandu hoovu not to be used for pooja....??

  ReplyDelete
  Replies
  1. ನಮಸ್ಕಾರ, ಕೆಲವರಲ್ಲಿ ತಪ್ಪು ಅಭಿಪ್ರಾಯವಿದೆ ಅಷ್ಟೇ. ಚೆಂಡು/ಗೊಂಡೆ ಹೂವನ್ನು ಶ್ರೀ ಲಕ್ಷ್ಮೀದೇವಿಗೆ ಉಪಯೋಗಿಸುತ್ತಾರೆ.
   ಧನ್ಯವಾದಗಳು.

   Delete
 4. Very useful information on this website. Sending this link to all my friends who should also get benefitted after learning from these.
  Sathish

  ReplyDelete

Note: only a member of this blog may post a comment.