ಸೂರ್ಯೋದಯದ ಸಮಯದಲ್ಲಿ ದೇವತೆಗಳ ಲಹರಿಗಳ ಆಗಮನವಾಗುತ್ತಿರುವಾಗ ಪ್ರಕ್ಷೇಪಿತವಾಗುವ ತಾರಕ ಚೈತನ್ಯವನ್ನು ಸ್ವಾಗತಿಸಲು ಮತ್ತು ಸೂರ್ಯಾಸ್ತದ ಸಮಯದಲ್ಲಿ ರಜ-ತಮಾತ್ಮಕ ಲಹರಿಗಳ ಉಚ್ಚಾಟನೆಗಾಗಿ ಆರತಿಯನ್ನು ಮಾಡುವುದು: ಸೂರ್ಯೋದಯದ ಸಮಯದಲ್ಲಿ ರಾತ್ರಿಯ ರಜ-ತಮಾತ್ಮಕ ವಾತಾವರಣವು ಲಯವಾಗಿ ಬ್ರಹ್ಮಾಂಡದಲ್ಲಿ ದೇವತೆಗಳ ತೇಜತತ್ತ್ವದ ಲಹರಿಗಳ ಆಗಮನವಾಗುತ್ತದೆ. ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ದೇವತೆಗಳ ಲಹರಿಗಳ ಆಗಮನವಾಗುತ್ತಿರುವಾಗ, ಪ್ರಕ್ಷೇಪಿತವಾಗುವ ತಾರಕ ಚೈತನ್ಯವನ್ನು ಸ್ವಾಗತಿಸಲು ಆರತಿಯನ್ನು ಮಾಡಬೇಕು ಮತ್ತು ಸಾಯಂಕಾಲ ಸೂರ್ಯಾಸ್ತದ ಸಮಯದಲ್ಲಿ ರಜ-ತಮಾತ್ಮಕ ಲಹರಿಗಳ ಉಚ್ಚಾಟನೆಯನ್ನು ಮಾಡಲು ದೇವತೆಗಳ ಮಾರಕ ಚೈತನ್ಯದ (ಆವಾಹನಾತ್ಮಕ) ಆರಾಧನೆಯನ್ನು ಆರತಿಯ ಮಾಧ್ಯಮದಿಂದ ಮಾಡಬೇಕು. ಹೀಗೆ ಆರತಿಯನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ಎರಡು ಸಲ ಮಾಡಬೇಕು.
ಸೂರ್ಯಾಸ್ತದ ಸಮಯದಲ್ಲಿ ಆರತಿಯನ್ನು ಮಾಡುವುದರ ಹಿಂದಿನ ಶಾಸ್ತ್ರವೇನು? (ಸೂರ್ಯಾಸ್ತದ ಸಮಯದಲ್ಲಿ ಹೆಚ್ಚಾದ ಕೆಟ್ಟ ಶಕ್ತಿಗಳ ಸಂಚಾರದ ಮೇಲೆ ಹಿಡಿತವನ್ನು ಸಾಧಿಸಲು ದೇವತೆಗಳ ಲಹರಿಗಳ ಆಗಮನವಾಗ ಬೇಕೆಂದು ಆರತಿಯನ್ನು ಮಾಡುವುದು): ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕಿರಣಗಳಲ್ಲಿನ ತೇಜತತ್ತ್ವದ ಪ್ರಮಾಣವು ಕಡಿಮೆ ಆಗತೊಡಗುವುದರಿಂದ ವಾಯುಮಂಡಲದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ, ಅಲ್ಲದೇ ರಜ-ತಮಾತ್ಮಕ ಲಹರಿಗಳ ನಿರ್ಮಿತಿಯ ಪ್ರಮಾಣವು ಹೆಚ್ಚಾಗುತ್ತದೆ. ಇದರ ಲಾಭವನ್ನು ಪಡೆದುಕೊಂಡು ಕೆಟ್ಟ ಶಕ್ತಿಗಳು ವಾತಾವರಣದಲ್ಲಿ ತಮ್ಮ ಸಂಚಾರವನ್ನು ಹೆಚ್ಚಿಸುತ್ತವೆ. ಇಂತಹ ರಜ-ತಮಾತ್ಮಕ ವಾಯುಮಂಡಲದಿಂದ ತೊಂದರೆಯಾಗಬಾರದೆಂದು ಆರತಿಯ ಮಾಧ್ಯಮದಿಂದ ಪ್ರಕ್ಷೇಪಿತವಾಗುವ ನಾದಲಹರಿಗಳಿಂದ ದೇವತೆಗಳ ಲಹರಿಗಳನ್ನು ಆಹ್ವಾನಿಸಿ, ಅವುಗಳನ್ನು ಬ್ರಹ್ಮಾಂಡದ ಕಕ್ಷೆಯಲ್ಲಿ ತರುವುದು ಆವಶ್ಯಕವಾಗಿರುತ್ತದೆ. ಆರತಿಯಿಂದ ವಾಯುಮಂಡಲದಲ್ಲಿನ ದೇವತೆಗಳ ಚೈತನ್ಯಮಯ ಲಹರಿಗಳ ಪ್ರಮಾಣವು ಹೆಚ್ಚಾಗಿ ತ್ರಾಸದಾಯಕ ಸ್ಪಂದನಗಳ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಜೀವದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೫.೬.೨೦೦೫, ಸಾಯಂಕಾಲ೬.೩೩)
(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆಯ ಕಿರುಗ್ರಂಥ 'ಆರತಿಯನ್ನು ಹೇಗೆ ಮಾಡಬೇಕು?')
ಸಂಬಂಧಿತ ವಿಷಯಗಳು
ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
ಆಚಾರಧರ್ಮಕ್ಕೆ ಸಂಬಂಧಿತ ವಿಷಯಗಳು
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?
ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
No comments:
Post a Comment
Note: only a member of this blog may post a comment.