ವಾಸ್ತುದೋಷ ಮತ್ತು ಅದರ ಶುದ್ಧಿಗಾಗಿ ನಾಮಜಪ

ಈಗ ಕಲಿಯುಗವಾಗಿರುವುದರಿಂದ ಹೆಚ್ಚಿನ ವಾಸ್ತುಗಳು ಕೆಟ್ಟ ಶಕ್ತಿಗಳಿಂದ ಪ್ರಭಾವಿತವಾಗುತ್ತವೆ. ಈ ತೊಂದರೆಯು ಮಂದ ಅಂದರೆ ಶೇ.೧-೨ರಿಂದ, ತೀವ್ರ ಅಂದರೆ ಶೇ.೬ ರಷ್ಟಿರಬಹುದು. ವಾಸ್ತುವಿನಲ್ಲಿ ತೀವ್ರ ತೊಂದರೆಯಿದ್ದರೆ ವಾಸ್ತುವನ್ನು ಬಿಟ್ಟು ಹೋಗುವುದು ಅಧಿಕ ಉಪಯುಕ್ತವಾಗಿದೆ. ಆದರೆ ಹೊಸ ವಾಸ್ತುವಿನಲ್ಲಿ ತೊಂದರೆಯಾಗುವುದಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ ಮತ್ತು ಇಂದು ವಾಸ್ತುವಿನ ಬಗ್ಗೆ ತಿಳಿಸುವ ತಜ್ಞ ವ್ಯಕ್ತಿ ಅಂದರೆ ಸಂತರು ಸಿಗುವುದೂ ಕಷ್ಟ. ಇಂತಹ ಸ್ಥಿತಿಯಲ್ಲಿ ವಾಸ್ತುದೋಷದ ಕೆಲವು ಲಕ್ಷಣಗಳನ್ನು ಗಮನದಲ್ಲಿಟ್ಟರೆ ವಾಸ್ತುದೋಷವಿದೆಯೋ ಅಥವಾ ಇಲ್ಲವೋ ಎಂದು ಅರಿಯಬಹುದು.

೧. ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆಯು ಉಂಟಾಗದಿರುವುದು, ತಂದೆ-ತಾಯಿಯ ಮಾತು ಕೇಳದಿರುವುದು, ಮನೆಯಲ್ಲಿ ನಿಯಮಿತ ಕಾರ್ಯವನ್ನು ಮಾಡದಿರುವುದು, ಬಹಳ ಹೊತ್ತಿನವರೆಗೂ ಮಲಗಿರುವುದು
೨. ಮನೆಯಲ್ಲಿ ನಾಮಜಪ ಅಥವಾ ಧ್ಯಾನ ಮುಂತಾದ ಸಾಧನೆ ಮಾಡಲು ಮನಸ್ಸಾಗದಿರುವುದು
೩. ಮನೆಯಲ್ಲಿ ವಿನಾಕಾರಣ ವಿವಾದವು ಉಂಟಾಗುವುದು
೪. ಔಷಧೋಪಚಾರ ಮಾಡಿದ ನಂತರವೂ ರೋಗ ದೂರವಾಗದಿರುವುದು

ಈ ಪ್ರಕಾರದ ಕೆಲವು ಲಕ್ಷಣಗಳು ನಮಗೆ ಕಂಡುಬಂದರೆ ಅವುಗಳನ್ನು ದೂರಗೊಳಿಸಲು ಇತರ ಉಪಾಯಗಳೊಂದಿಗೆ ವಾಸ್ತುಶುದ್ಧಿಗಾಗಿ ನಾಮಜಪ ಮಾಡುವುದೂ ಅತ್ಯಾವಶ್ಯಕವಿದೆ.

ವಾಸ್ತುಶುದ್ಧಿಗಾಗಿ ನಾಮಜಪ ಮಾಡಿ

ನಾಮಜಪ ಮಾಡುವುದು ವಾಸ್ತುಶುದ್ಧಿಗಾಗಿ ಅತ್ಯಂತ ಲಾಭದಾಯಕ ಉಪಚಾರವಾಗಿದೆ. ಆದ್ದರಿಂದ ಪ್ರತಿದಿನ ಪೂಜೆ- ಅರ್ಚನೆಯಂತಹ ಧರ್ಮಾಚರಣೆಯ ಕೃತಿಗಳೊಂದಿಗೆ ನಾಮಜಪ-ಸಾಧನೆಯನ್ನು ಅಗತ್ಯವಾಗಿ ಮಾಡಬೇಕು. ಈ ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡುವುದರಿಂದ ವ್ಯಕ್ತಿಯ ಸಾತ್ತ್ವಿಕತೆಯಲ್ಲಿ ವೃದ್ಧಿಯಾಗುತ್ತದೆ. ವ್ಯಕ್ತಿಯಿಂದ ಈ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾಸ್ತುಶುದ್ಧಿಯಾಗುತ್ತದೆ.

ವೈಖರಿಯಲ್ಲಿ ನಾಮಜಪ ಮಾಡಿ

ವೈಖರಿಯಲ್ಲಿ (ಏರುಧ್ವನಿಯಲ್ಲಿ) ನಾಮಜಪ ಮಾಡುವುದೂ ವಾಸ್ತುಶುದ್ಧಿಗೆ ಲಾಭದಾಯಕವಾಗುತ್ತದೆ. ಎತ್ತರಧ್ವನಿಯಲ್ಲಿ ನಾಮಜಪ ಮಾಡುವುದರಿಂದ ಜಪಿಸುವ ವ್ಯಕ್ತಿಯ ಮುಖದಿಂದ ಈಶ್ವರೀಯ ಶಕ್ತಿಯ ಪ್ರಕ್ಷೇಪಣೆಯಾಗುತ್ತದೆ ಮತ್ತು ಇದರಿಂದ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ದೂರವಾಗುತ್ತವೆ. ಆದ್ದರಿಂದ ವಾಸ್ತುಶುದ್ಧಿಗಾಗಿ ಪ್ರತಿದಿನ ಸ್ವಲ್ಪ ಸಮಯ ವೈಖರಿಯಲ್ಲಿ ನಾಮಜಪವನ್ನು ಮಾಡಬೇಕು.

ಯಾವ ದೇವತೆಯ ನಾಮಜಪ ಮಾಡಬೇಕು ?

ಸಾಮಾನ್ಯವಾಗಿ ವಾಸ್ತುಶುದ್ಧಿಗಾಗಿ ನಮ್ಮ ಕುಲದೇವತೆಯ ನಾಮವನ್ನು ಜಪಿಸಬೇಕು. ಆದರೆ ಯಾರ ಮನೆಯಲ್ಲಿ ಪೂರ್ವಜರ ತೊಂದರೆಯು ಅಧಿಕವಿದೆಯೋ, ಉದಾಹರಣೆಗೆ ಮದುವೆಯಾಗಲು ಅಡ್ಡಿಯುಂಟಾಗುವುದು, ಮದುವೆಯ ನಂತರ ಗಂಡ-ಹೆಂಡತಿಯಲ್ಲಿ ಹೊಂದಾಣಿಕೆ ಆಗದಿರುವುದು, ಅಪಮೃತ್ಯು ಅಥವಾ ಅಪಘಾತದಿಂದ ಮೃತ್ಯುವಾಗುವುದು ಇತ್ಯಾದಿ. ಅಂತಹವರು ‘ಶ್ರೀ ಗುರುದೇವ ದತ್ತ |’ ಎಂದು ಜಪಿಸಬೇಕು. ವಾಸ್ತುವಿಗಾಗಿ ಪ್ರತಿದಿನ ಅರ್ಧ ಗಂಟೆ ನಾಮಜಪ ಮಾಡಬೇಕು.

1 comment:

  1. Can i get this book,plz send me the address or mail me the details praveenkumar909@gmail.com

    ReplyDelete

Note: only a member of this blog may post a comment.