ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ?

ಆಧ್ಯಾತ್ಮಿಕ ಸಂಶೋಧನೆ
ಸನಾತನ ಸಂಸ್ಥೆಯು ಅನೇಕ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡಿದೆ. (ಈ ಎಲ್ಲ ಸಂಶೋಧನೆಗಳನ್ನು ಆಂಗ್ಲ ಭಾಷೆಯಲ್ಲಿ http://spiritualresearchfoundation.org/ ಎಂಬ ಸಂಕೇತಸ್ಥಳದಲ್ಲಿ ಇಡಲಾಗಿದೆ.) ಅವುಗಳಲ್ಲಿ ಒಂದು ವಿಷಯವನ್ನು ನೋಡೋಣ. ಅದೇನೆಂದರೆ ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ವಿವಿಧ ರೀತಿಯಲ್ಲಿ ಇರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು’. ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ನೋಡೋಣ.

ಕೆಟ್ಟ ಶಕ್ತಿಗಳೆಂದರೇನು?
ಯಾವಾಗ ಒಬ್ಬ ವ್ಯಕ್ತಿಯು ಮರಣ ಹೊಂದುತ್ತಾನೆಯೋ ಆಗ ಅವನ ಲಿಂಗದೇಹವು ಅವನ ಸ್ಥೂಲದೇಹವನ್ನು ಬಿಟ್ಟು ಬ್ರಹ್ಮಾಂಡದಲ್ಲಿನ ಇತರ ಲೋಕಗಳಿಗೆ ಹೋಗುತ್ತದೆ. ಲಿಂಗದೇಹವು ಪಂಚಸೂಕ್ಷ್ಮಜ್ಞಾನೇಂದ್ರಿಯ, ಪಂಚಸೂಕ್ಷ್ಮಕರ್ಮೇಂದ್ರಿಯ, ಪಂಚಪ್ರಾಣ, ಮನಸ್ಸು (ಬಾಹ್ಯ ಮನಸ್ಸು), ಚಿತ್ತ (ಅಂತರ್ಮನಸ್ಸು), ಬುದ್ಧಿ ಮತ್ತು ಅಹಂ ಇವುಗಳಿಂದ ಆಗಿರುತ್ತದೆ. ಕೆಲವು ಲಿಂಗದೇಹಗಳ ಉದ್ದೇಶವು ಜನರಿಗೆ ತೊಂದರೆಗಳನ್ನು ಕೊಡುವುದೇ ಆಗಿರುವುದರಿಂದ ಅವುಗಳಿಗೆ ‘ಕೆಟ್ಟ ಶಕ್ತಿ’ ಎಂದು ಹೇಳುತ್ತಾರೆ.

ಮೃತ್ಯುವಿನ ನಂತರ  ಪ್ರತಿಯೊಂದು ದೇಹವು ಏನಾಗುತ್ತದೆ?
ಅ. ಸ್ಥೂಲದೇಹವು ಪೃಥ್ವಿಯ ಮೇಲೆಯೇ ಉಳಿಯುತ್ತದೆ. (ಕೆಲವರು ಅದನ್ನು ಸುಡುತ್ತಾರೆ ಮತ್ತು ಇನ್ನು ಕೆಲವರು ಅದನ್ನು ಹೂಳುತ್ತಾರೆ)
ಆ. ಮೃತ್ಯುವಿನ ಸಮಯದಲ್ಲಿ ಸ್ಥೂಲದೇಹ(ಶರೀರ)ದ ಕಾರ್ಯವು ನಿಂತುಹೋಗುವುದರಿಂದ ಸ್ಥೂಲದೇಹದ ಕಾರ್ಯಕ್ಕಾಗಿ ಉಪಯೋಗಿಸಲ್ಪಡುವ ಪ್ರಾಣಶಕ್ತಿಯು ಮುಕ್ತವಾಗುತ್ತದೆ ಮತ್ತು ಪ್ರಾಣದೇಹದಲ್ಲಿನ ಪ್ರಾಣಶಕ್ತಿಯು ಬ್ರಹ್ಮಾಂಡದಲ್ಲಿ ವಿಲೀನವಾಗುತ್ತದೆ.
ಇ. ಮೃತ್ಯುವಿನ ನಂತರ ಮುಕ್ತವಾಗುವ ಪ್ರಾಣಶಕ್ತಿಯಿಂದಾಗಿ ಲಿಂಗದೇಹವು ಭೂಲೋಕದಿಂದ ವಿಶ್ವದಲ್ಲಿ ದೂರದವರೆಗೆ ಎಸೆಯಲ್ಪಡುತ್ತದೆ. ಒಂದು ಅಗ್ನಿಬಾಣವು (Rocket) ಉಪಗ್ರಹವನ್ನು ಅಂತರಿಕ್ಷದಲ್ಲಿ ಎಷ್ಟು ದೂರದವರೆಗೆ ಕೊಂಡೊಯ್ಯಬಹುದು ಎಂಬುದು ಆ ಉಪಗ್ರಹದ ತೂಕದ ಮೇಲೆ ಅವಲಂಬಿಸಿರುತ್ತದೆ. ಅದೇ ರೀತಿ ಶರೀರದಿಂದ ಹೊರಬೀಳುವ ಲಿಂಗದೇಹವು ವಿಶ್ವದಲ್ಲಿ ಎಷ್ಟು ದೂರದವರೆಗೆ ಹೋಗಬಹುದು ಎಂಬುದು ಆ ಲಿಂಗದೇಹದ ಭಾರದ ಮೇಲೆ ಅವಲಂಬಿಸಿರುತ್ತದೆ, ಅಂದರೆ ಅದರ ತಮೋಗುಣದ ಪ್ರಮಾಣದ ಮೇಲೆ (ಪಾಪ-ಪುಣ್ಯಗಳ ಮೇಲೆ) ಅವಲಂಬಿಸಿರುತ್ತದೆ. ತಮೋಗುಣದ ಪ್ರಮಾಣವು ಲಿಂಗದೇಹದಲ್ಲಿ ಹೆಚ್ಚಿಗಿದ್ದರೆ ಲಿಂಗದೇಹದ ಭಾರವು ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ಲಿಂಗದೇಹಕ್ಕೆ ಭುವರ್ಲೋಕದ ಆಚೆಗೆ ಹೋಗಲು ಸಾಧ್ಯವಾಗುವುದಿಲ್ಲ. ತದ್ವಿರುದ್ಧವಾಗಿ ಲಿಂಗದೇಹದಲ್ಲಿ ತಮೋಗುಣದ ಪ್ರಮಾಣವು ಕಡಿಮೆಯಿದ್ದರೆ ಅದರ ಭಾರವು ಕಡಿಮೆಯಾಗಿ ಅದು ಸ್ವರ್ಗ, ಮಹಾ, ಜನ ಇತ್ಯಾದಿ ಲೋಕಗಳವರೆಗೆ ಹೋಗಬಹುದು.
ಈ. ವಾಸನಾದೇಹ ಮತ್ತು ಮನೋದೇಹ ಹಾಗೂ ಕಾರಣದೇಹ ಮತ್ತು ಮಹಾಕಾರಣದೇಹ ಇವು ಲಿಂಗದೇಹದ ಸುತ್ತಲೂ ಇರುತ್ತವೆ.

ಮೃತ್ಯುವಿನ ನಂತರ ನಾವು ಯಾವ ಲೋಕಕ್ಕೆ ಹೋಗುತ್ತೇವೆ ಎಂಬುದು ಈ ವಿಷಯಗಳ ಮೇಲೆ ಅವಲಂಬಿಸಿರುತ್ತದೆ
೧. ಚಿತ್ತದ ಮೇಲಿನ ಸಂಸ್ಕಾರಗಳು: ನಾವು ಯಾವ ರೀತಿಯ ಜೀವನವನ್ನು ನಡೆಸಿರುತ್ತೇವೆಯೋ ಅವುಗಳಿಗನುಸಾರ ನಮ್ಮ ಚಿತ್ತದ ಮೇಲೆ ಸಂಸ್ಕಾರಗಳು ನಿರ್ಮಾಣವಾಗಿರುತ್ತವೆ. ಅವುಗಳ ವಿಧಗಳು ಮತ್ತು ಪ್ರಮಾಣಗಳ ಮೇಲೆ ನಾವು ಯಾವ ಲೋಕಕ್ಕೆ ಹೋಗಬೇಕು ಎಂಬುದು ನಿರ್ಧರಿಸಲ್ಪಡುತ್ತದೆ.
೨. ಅಹಂ: ಇಲ್ಲಿ ನಾವು ‘ಅಹಂ’ ಈ ಶಬ್ದವನ್ನು ಪ್ರತಿದಿನ ಉಪಯೋಗಿಸುವ ‘ಕೇವಲ ತಮ್ಮ ವಿಚಾರವನ್ನು ಮಾಡುವುದು’ ಅಥವಾ ‘ಅಹಂಕಾರ’ ಈ ಅರ್ಥದಲ್ಲಿ ಉಪಯೋಗಿಸಿಲ್ಲ. ಅದನ್ನು ಇಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯೋಗಿಸಲಾಗಿದೆ. ‘ಅಹಂ’ ಎಂದರೆ ನಮ್ಮ ಸ್ಥೂಲದೇಹದಿಂದಾಗಿ ಅಥವಾ ಲಿಂಗದೇಹದಲ್ಲಿನ ವಿವಿಧ ಸಂಸ್ಕಾರ ಕೇಂದ್ರಗಳಲ್ಲಿನ ಸಂಸ್ಕಾರಗಳಿಂದಾಗಿ ತನ್ನನ್ನು ತಾನು ಇತರರಿಗಿಂತ ಮತ್ತು ಈಶ್ವರನಿಗಿಂತ ಬೇರೆ ಎಂದು ತಿಳಿಯುವುದು.
೩. ಕರ್ಮ: ಜೀವಂತವಿದ್ದಾಗ ನಾವು ಮಾಡಿದ ಕರ್ಮಗಳು
೪. ಸಾಧನೆ: ಜೀವಂತವಿದ್ದಾಗ ನಾವು ಮಾಡಿದ ಸಾಧನೆ, ಅದರ ತೀವ್ರತೆ ಮತ್ತು ವಿಧಗಳು
೫. ಮೃತ್ಯು: ನೈಸರ್ಗಿಕ (Natural) ಮತ್ತು ಶಾಂತರೀತಿಯಲ್ಲಿ ಅಥವಾ ಅಪಘಾತದಿಂದ ಅಥವಾ ತ್ರಾಸದಾಯಕ ಮರಣ
೬. ಪ್ರಾರಬ್ಧ

ಮೃತ್ಯುವಿನ ನಂತರ ವ್ಯಕ್ತಿಯ ಲಿಂಗದೇಹವು ಕೆಟ್ಟ ಶಕ್ತಿಯಾಗಿ ರೂಪಾಂತರಗೊಳ್ಳುವುದು
ಮೃತ್ಯುವಿನ ನಂತರ ಸರ್ವಸಾಮಾನ್ಯ ವ್ಯಕ್ತಿಗಳ ಲಿಂಗದೇಹಗಳು ಕೆಟ್ಟ ಶಕ್ತಿಗಳಾಗಿ ರೂಪಾಂತರವಾಗುವುದರ ಪ್ರಮಾಣವು ಬಹಳಷ್ಟು ಹೆಚ್ಚಿಗೆ ಇರುತ್ತದೆ.
೧. ತಮ್ಮ ಇಚ್ಛೆಗಳನ್ನು ಪೂರ್ತಿಗೊಳಿಸಲು ಕೆಟ್ಟ ಶಕ್ತಿಗಳು ಕೆಟ್ಟ ಕೃತಿಗಳನ್ನು ಮಾಡುತ್ತಾ ಹೋಗುತ್ತವೆ ಮತ್ತು ಇದರಿಂದ ಅವು ಹೆಚ್ಚೆಚ್ಚು ಕಪ್ಪಾಗುತ್ತಾ ಹೋಗುತ್ತವೆ.
೨. ಕೆಟ್ಟ ಶಕ್ತಿಗಳು ಕಪ್ಪು ಬಣ್ಣದ್ದಾಗಿರುತ್ತವೆ; ಏಕೆಂದರೆ ಅವು ಕಪ್ಪುಬಣ್ಣದ ತಮೋಗುಣದಿಂದ ತುಂಬಿಕೊಂಡಿರುತ್ತವೆ.
೩. ಕೆಟ್ಟ ಶಕ್ತಿಗಳ ಆತ್ಮವು ತಮೋಗುಣ ಮತ್ತು ಕಪ್ಪು ಶಕ್ತಿಯ ಆವರಣದಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತದೆ.

ಮೃತ್ಯುವಿನ ನಂತರ ವ್ಯಕ್ತಿಯ ಲಿಂಗದೇಹವು ಕೆಟ್ಟ ಶಕ್ತಿಯಾಗುವುದರ ಕಾರಣಗಳು
ಅ. ಮೃತ್ಯುವಿನ ಸಮಯದಲ್ಲಿ ವ್ಯಕ್ತಿಯ ಅನೇಕ ಇಚ್ಛೆಗಳು ಅತೃಪ್ತವಾಗಿರುವುದು. 
ಆ. ಮೃತ್ಯುವಿನ ಸಮಯದಲ್ಲಿ ವ್ಯಕ್ತಿಗೆ ಬಹಳ ಸಿಟ್ಟು ಬರುವುದು, ದ್ವೇಷ ಬರುವುದು ಮುಂತಾದ ದೋಷಗಳಿರುವುದು.
ಇ. ವ್ಯಕ್ತಿಯ ಮೇಲೆ ಅನೇಕ ಕೆಟ್ಟ ಸಂಸ್ಕಾರಗಳಾಗಿರುವುದು.
ಈ. ತುಂಬಾ ‘ಅಹಂಭಾವ’ ಇರುವುದು.
ಉ. ಜೀವಂತವಿರುವಾಗ ಇತರರಿಗೆ ಬಹಳಷ್ಟು ತೊಂದರೆಗಳನ್ನು ಕೊಟ್ಟಿರುವುದು. 
ಊ. ಈಶ್ವರಪ್ರಾಪ್ತಿಗಾಗಿ ಹಂತಹಂತವಾಗಿ ಮನಸ್ಸು ಮತ್ತು ಬುದ್ಧಿಯನ್ನು ತ್ಯಾಗ ಮಾಡಿ ಸಾಧನೆಯನ್ನು ಮಾಡದಿರುವುದು.

ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಕೆಟ್ಟ ಶಕ್ತಿಗಳು ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಲಿಂಗದೇಹಗಳನ್ನು ಕೆಟ್ಟ ಶಕ್ತಿಗಳನ್ನಾಗಿ ಪರಿವರ್ತಿಸುವುದು: ಯಾವುದಾದರೊಬ್ಬ ಒಳ್ಳೆಯ ವ್ಯಕ್ತಿಯು ಸಾಧನೆಯನ್ನು ಮಾಡದೇ ಇದ್ದರೆ (ಅವನಲ್ಲಿ ಆಧ್ಯಾತ್ಮಿಕ ಬಲವು ಇಲ್ಲದಿದ್ದರೆ) ಕೆಟ್ಟ ಶಕ್ತಿಯಾಗುವ ಸಾಧ್ಯತೆಯು ಬಹಳಷ್ಟು ಇರುತ್ತದೆ. ಏಕೆಂದರೆ ಮೃತ್ಯುವಿನ ನಂತರ ಇಂತಹ ಲಿಂಗದೇಹಗಳನ್ನು ಕೆಟ್ಟ ಶಕ್ತಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೆ ಮತ್ತು ಅವುಗಳ ಮನಸ್ಸಿನ ವಿರುದ್ಧ ಕೆಟ್ಟ ಕೃತಿಗಳನ್ನು ಮಾಡಿಸಿಕೊಳ್ಳುತ್ತವೆ. ಸಮಯ ಕಳೆದಂತೆ ಒಳ್ಳೆಯ ವ್ಯಕ್ತಿಗಳ ಲಿಂಗದೇಹಗಳೂ ಕೆಟ್ಟ ಶಕ್ತಿಗಳಾಗಿ ರೂಪಾಂತರಗೊಳ್ಳುತ್ತವೆ ಮತ್ತು ಇತರರಿಗೆ ತೊಂದರೆಗಳನ್ನು ಕೊಟ್ಟು ಅಥವಾ ತಮ್ಮ ಇಚ್ಛೆಗಳನ್ನು ಪೂರ್ಣ ಮಾಡಿಕೊಂಡು ಸುಖ ಪಡೆಯುತ್ತವೆ.

ಕೆಟ್ಟ ಶಕ್ತಿಗಳ ವೈಶಿಷ್ಟ್ಯಗಳು
೧. ಕೆಟ್ಟ ಶಕ್ತಿಗಳು ಸೂಕ್ಷ್ಮವಾಗಿದ್ದು ಭುವರ್ಲೋಕ ಅಥವಾ ಸಪ್ತಪಾತಾಳದಲ್ಲಿ ಇರುತ್ತವೆ.
೨. ತಮ್ಮ ಇಚ್ಛೆಯಂತೆ ಅವು ಭುವರ್ಲೋಕ ಮತ್ತು ಸಪ್ತ ಪಾತಾಳಗಳಿಂದ (ಸೂಕ್ಷ್ಮಲೋಕದಿಂದ) ಭೂಲೋಕಕ್ಕೆ ಬರುತ್ತವೆ. ಆದುದರಿಂದ ಅವುಗಳ  ಅಸ್ತಿತ್ವವು ಭೂಲೋಕದಲ್ಲಿಯೂ ಇರುತ್ತದೆ.
೩. ಸ್ವರ್ಗ, ಮಹಾ, ಜನ, ತಪ, ಸತ್ಯ ಇತ್ಯಾದಿ ಉಚ್ಚಲೋಕಗಳಲ್ಲಿ  ಅವು ಇರುವುದಿಲ್ಲ.
೪. ಅವುಗಳ ಕಾಮವಾಸನೆ, ಸರಾಯಿ ಕುಡಿಯುವುದು, ಸೇಡು ತೀರಿಸುವುದು ಇತ್ಯಾದಿ ವಾಸನೆಗಳು ಅತೃಪ್ತವಾಗಿರುತ್ತವೆ.
. ಮಾನವರ ಮೇಲೆ ಅಥವಾ ಲಿಂಗದೇಹಗಳ ಮೇಲೆ ಹಿಡಿತವನ್ನು ಸಾಧಿಸಿ ಅವರಿಗೆ ತೊಂದರೆಗಳನ್ನು ಕೊಟ್ಟು ಅವು ಸುಖ ಪಡೆಯುತ್ತವೆ.
೬. ಸಮಾಜದಲ್ಲಿ ಅಧರ್ಮವನ್ನು ಹೆಚ್ಚಿಸುವುದೇ ಅವುಗಳ ಉದ್ದೇಶವಾಗಿರುತ್ತದೆ.

ಸಾಧಕರ ಲಿಂಗದೇಹಗಳು ಮತ್ತು ಇತರರ ಲಿಂಗದೇಹಗಳು: ಸಾಧನೆಯನ್ನು ಮಾಡಿ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು (ಟಿಪ್ಪಣಿ ೧) ತಲುಪಿದ ಮತ್ತು ಕಡಿಮೆ ಅಹಂಭಾವವಿರುವ ವ್ಯಕ್ತಿಗಳ ಲಿಂಗದೇಹಗಳು ಮೃತ್ಯುವಿನ ನಂತರ ಶ್ರೇಷ್ಠ ಸ್ವರ್ಗಲೋಕಕ್ಕೆ ಅಥವಾ ಅದರ ಮುಂದಿನ ಉಚ್ಚಲೋಕಗಳಿಗೆ ಹೋಗುತ್ತವೆ. ಆದುದರಿಂದ ಅವು ಕೆಟ್ಟ ಶಕ್ತಿಗಳಾಗುವುದಿಲ್ಲ. ಮೃತ್ಯುವಿನ ನಂತರ ಇತರ ಎಲ್ಲ ವ್ಯಕ್ತಿಗಳ ಲಿಂಗದೇಹಗಳು ಭುವರ್ಲೋಕಕ್ಕೆ ಅಥವಾ ಪಾತಾಳಕ್ಕೆ ಹೋಗುತ್ತವೆ. ಭುವರ್ಲೋಕದಲ್ಲಿನ ಲಿಂಗದೇಹಗಳು ಕೆಟ್ಟ ಶಕ್ತಿಗಳಾಗಿ ರೂಪಾಂತರಗೊಳ್ಳುವ ಸಾಧ್ಯತೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪಾತಾಳದಲ್ಲಿನ ಎಲ್ಲ ಲಿಂಗದೇಹಗಳು ಕೆಟ್ಟ ಶಕ್ತಿಗಳೇ ಆಗಿರುತ್ತವೆ.

ಟಿಪ್ಪಣಿ ೧ - ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿರುತ್ತವೆ. ವ್ಯಕ್ತಿಯು ಸಾಧನೆ, ಅಂದರೆ ಈಶ್ವರಪ್ರಾಪ್ತಿಗಾಗಿ ಪ್ರಯತ್ನವನ್ನು ಪ್ರಾರಂಭಿಸಿದ ನಂತರ ಅವನಲ್ಲಿನ ರಜ-ತಮ ಗುಣಗಳ ಪ್ರಮಾಣವು ಕಡಿಮೆಯಾಗತೊಡಗುತ್ತದೆ ಮತ್ತು ಸತ್ತ್ವಗುಣದ ಪ್ರಮಾಣ ಹೆಚ್ಚಾಗತೊಡಗುತ್ತದೆ. ಸತ್ತ್ವಗುಣದ ಪ್ರಮಾಣದ ಮೇಲೆ ಆಧ್ಯಾತ್ಮಿಕ ಮಟ್ಟವು ಅವಲಂಬಿಸಿರುತ್ತದೆ. ಸತ್ತ್ವಗುಣದ ಪ್ರಮಾಣವು ಎಷ್ಟು ಹೆಚ್ಚಿರುತ್ತದೆಯೋ, ಆಧ್ಯಾತ್ಮಿಕ ಮಟ್ಟವು ಅಷ್ಟೇ ಹೆಚ್ಚಿರುತ್ತದೆ. ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೨೦ರಷ್ಟಿರುತ್ತದೆ. ಸಾಧನೆ ಮಾಡಿ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ವ್ಯಕ್ತಿಗೆ ಮಹರ್ಲೋಕದಲ್ಲಿ ಸ್ಥಾನ ಸಿಗುತ್ತದೆ. ಶೇ.೬೦ ಮತ್ತು ಅದರ ಮುಂದಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ವ್ಯಕ್ತಿಗೆ ಮೃತ್ಯುವಿನ ನಂತರ ಪುನರ್ಜನ್ಮವಿರುವುದಿಲ್ಲ. ಇಂತಹ ವ್ಯಕ್ತಿಯು ಮುಂದಿನ ಸಾಧನೆಗಾಗಿ ಅಥವಾ ಮಾನವಜಾತಿಯ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯಲ್ಲಿ ಜನಿಸಬಲ್ಲನು. ಶೇ.೭೦ರ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಗಳನ್ನು ಸಂತರೆಂದು ಪರಿಗಣಿಸಲಾಗುತ್ತದೆ. ಅವರಿಗೆ ಜನಲೋಕ ಪ್ರಾಪ್ತವಾಗುತ್ತದೆ. ಮೋಕ್ಷಕ್ಕೆ ಹೋದ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ.೧೦೦ರಷ್ಟಿರುತ್ತದೆ ಮತ್ತು ಆಗ ಅವನು ತ್ರಿಗುಣಾತೀತನಾಗುತ್ತಾನೆ.

ಮೃತ್ಯುವಿನ ನಂತರ ನಾವು ಕೆಟ್ಟ ಶಕ್ತಿಗಳಾಗಬಾರದೆಂದು ಏನು ಮಾಡಬೇಕು?
೧. ಈಶ್ವರಪ್ರಾಪ್ತಿಯ ಧ್ಯೇಯವನ್ನಿಟ್ಟುಕೊಂಡು ಸಾಧನೆಯನ್ನು ಮಾಡಬೇಕು.
೨. ಚಿತ್ತದ ಮೇಲೆ ಆದಷ್ಟು ಕಡಿಮೆ ಸಂಸ್ಕಾರಗಳಾಗುವಂತೆ ನೋಡಿಕೊಳ್ಳಬೇಕು.
೩. ಸ್ವಭಾವದೋಷ ಮತ್ತು ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಬೇಕು.
೪. ಸಾಧನೆಯನ್ನು ಮಾಡಿ ಕನಿಷ್ಟ ಶೇ.೬೦ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಬೇಕು.

ಇಂತಹ ವ್ಯಕ್ತಿಗಳ ಲಿಂಗದೇಹಗಳು ಮೃತ್ಯುವಿನ ನಂತರ ಸ್ವರ್ಗಲೋಕ ಮತ್ತು ಅದರ ಮುಂದಿನ ಉಚ್ಚಲೋಕಗಳಿಗೆ ಹೋಗುತ್ತವೆ. ಆಧ್ಯಾತ್ಮಿಕ ಬಲ ಮತ್ತು ಈಶ್ವರನ ಸಂರಕ್ಷಣೆಯಿಂದಾಗಿ ಕೆಟ್ಟ ಶಕ್ತಿಗಳಿಗೆ ಇಂತಹ ವ್ಯಕ್ತಿಗಳ ಲಿಂಗದೇಹಗಳ ಮೇಲೆ ಹಿಡಿತವನ್ನು ಸಾಧಿಸಲು ಆಗುವುದಿಲ್ಲ.

ಆಧ್ಯಾತ್ಮಿಕ ಮಟ್ಟ ಮತ್ತು ಕೆಟ್ಟ ಶಕ್ತಿಗಳು
ಉಚ್ಚಮಟ್ಟದ ಕೆಟ್ಟ ಶಕ್ತಿಗಳಲ್ಲಿ ಬಹಳಷ್ಟು ಆಧ್ಯಾತ್ಮಿಕ ಶಕ್ತಿ ಇರುತ್ತದೆ. ಅನೇಕ ವರ್ಷಗಳ ಕಾಲ ತೀವ್ರ ಸಾಧನೆ ಮತ್ತು ತಪಶ್ಚರ್ಯವನ್ನು ಮಾಡಿ ಅವು ಈ ಶಕ್ತಿಯನ್ನು ಪ್ರಾಪ್ತಮಾಡಿಕೊಂಡಿರುತ್ತವೆ. ಆಧ್ಯಾತ್ಮಿಕ ಶಕ್ತಿಯು ಹೆಚ್ಚಿಗಿದ್ದು ಅವು ಕೆಟ್ಟ ಶಕ್ತಿಗಳಾಗಿವೆ ಎಂದು ಹೇಳಿದರೆ ಅದು ಸತ್ಯವೆನಿಸುವುದಿಲ್ಲ. ಆದರೆ ಇದು ಸತ್ಯವಾಗಿದೆ. ಶೇ.೭೦ರ ಮಟ್ಟದ ಸಂತರ ಮತ್ತು ೫ನೇ ಪಾತಾಳದ ಮಾಂತ್ರಿಕರ ಆಧ್ಯಾತ್ಮಿಕ ಶಕ್ತಿಯು ಒಂದೇ ಆಗಿರುತ್ತದೆ.
ಶೇ. ೭೦ ರಷ್ಟು ಮಟ್ಟದ ಸಂತರ ಮತ್ತು ೫ ನೇ ಪಾತಾಳದ ಮಾಂತ್ರಿಕರ ನಡುವಿನ ವ್ಯತ್ಯಾಸವನ್ನು ಕೆಳಗಿನ ಕೋಷ್ಟಕದಲ್ಲಿ ಸ್ಪಷ್ಟಪಡಿಸಲಾಗಿದೆ.


ಕೆಟ್ಟ ಶಕ್ತಿಗಳು ತಮ್ಮ ಇಚ್ಛೆಯಂತೆ ಸೂಕ್ಷ್ಮಲೋಕಗಳಲ್ಲಿ ಎಲ್ಲಿ ಬೇಕಾದರೂ ಸಂಚರಿಸಬಹುದು
ಅ. ಕೆಟ್ಟ ಶಕ್ತಿಗಳಿಗೆ ಸ್ಥೂಲದೇಹವು ಇಲ್ಲದಿರುವುದರಿಂದ, ಭೂಲೋಕದಲ್ಲಿ ನಮಗೆ ಅತೀದೂರವಾಗಿರುವ ಅಂತರಗಳನ್ನು ಅವು ಕ್ಷಣಾರ್ಧದಲ್ಲಿ ಕ್ರಮಿಸಬಹುದು.
ಆ. ಭೂಲೋಕ ಮತ್ತು ಇತರ ಸೂಕ್ಷ್ಮಲೋಕಗಳ ನಡುವಿನ ಅತಿ ದೂರದ ಅಂತರವನ್ನೂ ಸಹ ಅವು ಕೆಲವೇ ಸೆಕೆಂಡುಗಳಲ್ಲಿ ಕ್ರಮಿಸಬಹುದಾಗಿದೆ.
ಇ. ಕೆಟ್ಟ ಶಕ್ತಿಗಳು ತಾವು ನೆಲೆಸಿರುವ ಸೂಕ್ಷ್ಮಲೋಕಗಳಿಗಿಂತ (ಬ್ರಹ್ಮಾಂಡದಲ್ಲಿನ ಸೂಕ್ಷ್ಮಲೋಕಗಳು) ಕಡಿಮೆ ಕ್ರಮಾಂಕದ ಸೂಕ್ಷ್ಮ ಅಥವಾ ಸ್ಥೂಲ ಲೋಕದವರೆಗೆ (ಭೂಲೋಕ) ತಮ್ಮ ಇಚ್ಛೆಯಂತೆ ಹೋಗಬಹುದು. ಉದಾ. ಮೂರನೆಯ ಪಾತಾಳದ ಕೆಟ್ಟ ಶಕ್ತಿಗಳು ಅತ್ಯಂತ ಸಹಜವಾಗಿ ಎರಡನೆಯ ಮತ್ತು ಮೊದಲನೆಯ ಪಾತಾಳ ಹಾಗೆಯೇ ಭುರ್ವರ್ಲೋಕ ಮತ್ತು ಭೂಲೋಕಗಳಿಗೆ ಹೋಗಬಹುದು.

ಕೆಟ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಮಾಡಬೇಕಾದ ಉಪಾಯಗಳು
ನಾವು ಕೆಟ್ಟ ಶಕ್ತಿಗಳ ವಿಷಯಗಳಿಂದ ದೂರವಿದ್ದರೆ ನಮಗೆ ಕೆಟ್ಟ ಶಕ್ತಿಗಳ ತೊಂದರೆಯೇ ಆಗುವುದಿಲ್ಲ ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಕೆಟ್ಟ ಶಕ್ತಿಗಳ ಅಸ್ತಿತ್ವದ ಬಗ್ಗೆ ಮತ್ತು ‘ಅವುಗಳಿಂದ ರಕ್ಷಣೆಯನ್ನು ಪಡೆಯುವುದರ’ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಆವಶ್ಯಕವಾಗಿದೆ. ಇದರ ಬಗೆಗಿನ ಅಜ್ಞಾನದಿಂದ ಅಥವಾ ಉಷ್ಟ್ರಪಕ್ಷಿಯಂತಹ ವೃತ್ತಿಯಿಂದ ಕೆಟ್ಟ ಶಕ್ತಿಗಳಿಂದ ನಮಗೆ ಹಾನಿಯಾಗುತ್ತದೆ. ಅಂದರೆ ‘ಕೆಟ್ಟ ಶಕ್ತಿಗಳಿಂದ ನಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬುದರ ಮಾಹಿತಿ ಇಲ್ಲದಿರುವುದರಿಂದ ಮತ್ತು ಆ ದೃಷ್ಟಿಯಲ್ಲಿ ಪ್ರಯತ್ನಗಳನ್ನೂ ಮಾಡದಿರುವುದರಿಂದ ಇಂತಹ ವ್ಯಕ್ತಿಗಳಿಗೆ ತೊಂದರೆ ಕೊಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.

ನಿಯಮಿತವಾಗಿ ಸಾಧನೆಯನ್ನು ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯು ಹೆಚ್ಚುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ನಮ್ಮ ರಕ್ಷಣೆಯಾಗುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗವನ್ನು ಪ್ರವೇಶಿಸುವ ಮೊದಲು ‘ನನ್ನ ರಕ್ಷಣೆಯಾಗಲಿ’ ಎಂದು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುವುದು ಆವಶ್ಯಕವಾಗಿದೆ. ಅದರೊಂದಿಗೆ ಸತತ ನಾಮಜಪ ಮಾಡುತ್ತಿದ್ದರೆ ನಮ್ಮ ಸುತ್ತಲೂ ಈಶ್ವರನ ರಕ್ಷಾಕವಚವು ನಿರ್ಮಾಣವಾಗುತ್ತದೆ.

ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಮಾಡಬೇಕಾದ ಆಧ್ಯಾತ್ಮಿಕ ಪರಿಹಾರೋಪಾಯಗಳು ಮತ್ತು ನಾಮಜಪದ ಬಗ್ಗೆ ಇದೇ ಬ್ಲಾಗ್‌ನ ವಿವಿಧ ಅಂಕಣಗಳಲ್ಲಿ ಓದಿ ಮತ್ತು ಅದೇ ರೀತಿ ಸಾಧನೆಯನ್ನು ಮಾಡಿ.

ಸಂಬಂಧಿತ ವಿಷಯಗಳು
ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು
ಕೆಟ್ಟ ಶಕ್ತಿಗಳ ಬಗ್ಗೆ ಪ್ರಾಥಮಿಕ ಮಾಹಿತಿ

3 comments:

  1. Really helpful... we always wonder what is happening whenever we experience such instances,...
    thanks a lot

    ReplyDelete
  2. hegella ediya.....................oh my god.........hmm

    ReplyDelete

Note: only a member of this blog may post a comment.