೧. ಗ್ರಹಗಳಿಂದ ನಿರ್ಮಾಣವಾಗುವ ವಿದ್ಯುತ್ ಚುಂಬಕೀಯ ಪ್ರವಾಹ ಮತ್ತು ಭೌತಿಕ ಘಟನಾವಳಿಗಳ ಮೇಲೆ ಅವುಗಳಿಂದಾಗುವ ಪರಿಣಾಮಗಳು
ಆಧುನಿಕ ವಿಜ್ಞಾನಿಗಳ ಹೇಳಿಕೆಗನುಸಾರ ಆಕಾಶಮಾರ್ಗದಲ್ಲಿ ಸಂಚರಿಸುವ ಎಲ್ಲ ಗ್ರಹಗಳು (ಚಂದ್ರ ಸಹಿತ) ವಿದ್ಯುತ್ ಚುಂಬಕೀಯ ಪ್ರಭಾವವನ್ನು ನಿರ್ಮಾಣ ಮಾಡುತ್ತಾ ಹೋಗುತ್ತವೆ. ಅದರಿಂದ ಭೌತಿಕ ಘಟನಾವಳಿಗಳ ಮೇಲೆ ಪರಿಣಾಮವಾಗುತ್ತದೆ. ಮುಂದೆ ನೀಡಿದ ಉದಾಹರಣೆಗಳಿಂದ ಗ್ರಹಗಳ ಚಲನವಲನಗಳು ಮಾನವನ ಮೇಲೆ ಎಷ್ಟು ಪ್ರಭಾವ ಬೀರು ತ್ತವೆ ಎಂಬುದು ಗಮನಕ್ಕೆ ಬರುತ್ತವೆ.
ಅ. ಗ್ರಹ-ನಕ್ಷತ್ರಗಳ ಕಂಪನದಿಂದ ಪೃಥ್ವಿ ಮತ್ತು ಅದರ ಮೇಲಿನ ಚೇತನ-ಅಚೇತನ ವಸ್ತುಗಳ ಮೇಲೆ ಶುಭ-ಅಶುಭ ಪರಿಣಾಮವಾಗುತ್ತದೆ.
ಆ. ಈ ಕಂಪನಗಳಿಂದ ಜ್ಞಾನತಂತು ಮತ್ತು ನರತಂತುಗಳ ಮೇಲೆ ಪರಿಣಾಮವಾಗುತ್ತದೆ. ಜ್ಞಾನತಂತುಗಳ ಸ್ವರೂಪ ಕಂಪನಾತ್ಮಕವಾಗಿರುವುದರಿಂದ ವಿಚಾರ ಮತ್ತು ಭಾವನೆಗಳು ಉತ್ಪನ್ನವಾಗುತ್ತವೆ. ಅವು ಮಾನವನನ್ನು ಕಾರ್ಯಪ್ರವೃತ್ತಗೊಳಿಸುತ್ತವೆ.
ಇ. ಶುಭಕಂಪನಗಳಿಂದ ಶುಭ ಕ್ರಿಯೆಗಳು ಘಟಿಸುತ್ತವೆ ಮತ್ತು ಅಶುಭ ಕಂಪನಗಳಿಂದ ಅಶುಭ ಘಟನೆಗಳು ಘಟಿಸುತ್ತವೆ ಅಥವಾ ರೋಗಗಳನ್ನು ನಿರ್ಮಾಣ ಮಾಡುತ್ತವೆ.
೨. ಕಂಪನಗಳ ಶುಭ-ಅಶುಭ ಪರಿಣಾಮ ಮತ್ತು ಅವುಗಳ ಅಪಾಯಕಾರಿ ಪರಿಣಾಮಗಳನ್ನು ಕಡಿಮೆಗೊಳಿಸುವಲ್ಲಿ ವೈದಿಕ ವಿಧಿಗಳ ಮಹತ್ವ
೨ಅ. ಅಮೇರಿಕಾದ ಆಕಾಶವಾಣಿ ವಿಭಾಗದ ಓರ್ವ ಪ್ರಮುಖ ತಂತ್ರಜ್ಞರಾದ ಜೆ.ಎಸ್. ನೆಲ್ಸನ್ ಇವರು ಇದರ ಸಾಕ್ಷಿಯನ್ನೇ ನೀಡಿದ್ದಾರೆ. ಅವರು ಚಂದ್ರ ಮತ್ತು ನಕ್ಷತ್ರಗಳ ಯೋಗವಾದೊಡನೆ ಇವೆರಡರ ಶಕ್ತಿಯಿಂದಾಗಿ ವಲಯ ನಿರ್ಮಾಣವಾಗಿ ಶುಭಾಶುಭ ಪರಿಣಾಮಗಳಾಗುತ್ತವೆ ಎಂದು ಹೇಳಿದ್ದಾರೆ.
೨ಆ. ನಮ್ಮ ವಿಜ್ಞಾನಿಗಳು ಸಹ ಚಂದ್ರ ಮತ್ತು ನಕ್ಷತ್ರಗಳು ಹಾಗೂ ಚಂದ್ರ ಮತ್ತು ಇತರ ಗ್ರಹಗಳ ಯೋಗಕ್ಕೆ ಮಹತ್ವ ನೀಡಿದ್ದು ಅವುಗಳ ಇಷ್ಟಾನಿಷ್ಟ ಫಲಗಳನ್ನು ವರ್ಣಿಸಿದ್ದಾರೆ. ಕೆಟ್ಟ ಯೋಗದ ಅಪಾಯಕಾರಿ ಪರಿಣಾಮಗಳು ಕಡಿಮೆಯಾಗಬೇಕು ಅಥವಾ ನಾಶವಾಗ ಬೇಕೆಂದು ಶುಭಕಂಪನಗಳನ್ನು ನಿರ್ಮಿಸುವ ವೈದಿಕ ವಿಧಿಗಳಿಗೆ (ಜಪ-ತಪ-ಹೋಮ- ಹವನ ಇತ್ಯಾದಿಗಳಿಗೆ) ಮಹತ್ವವು ದೊರಕಿದೆ. ಅವುಗಳಿಗೆ ಅಜ್ಞಾನ ಮತ್ತು ಅಂಧಶ್ರದ್ಧೆ ಎಂದು ತಿಳಿದು ತಿರಸ್ಕರಿಸುವುದು ತಪ್ಪಾಗಿದೆ.
೩. ಜಗತ್ತಿನಲ್ಲಿ ಭೂಕಂಪ, ಜ್ವಾಲಾಮುಖಿ, ಚಂಡಮಾರುತ ಅಥವಾ ದೊಡ್ಡ ಅಪಘಾತ ಮುಂತಾದ ಘಟನೆಗಳು ಹುಣ್ಣಿಮೆ ಅಥವಾ ಅಮಾವಾಸ್ಯೆಯ ತಿಥಿಗಳಂದೇ ನಡೆದಿವೆ ಎಂದು ವಿಜ್ಞಾನಿಗಳಿಗೆ ತಿಳಿದು ಬಂದಿರುವುದು
ಭೂಕಂಪ, ಜ್ವಾಲಾಮುಖಿಗಳ ಅಧ್ಯಯನ ಮಾಡುವ ವಿಜ್ಞಾನಿಗಳಿಗೆ ಜಗತ್ತಿನಲ್ಲಿ ಭೂಕಂಪ, ಜ್ವಾಲಾಮುಖಿ, ಚಂಡಮಾರುತ ಅಥವಾ ದೊಡ್ಡ ಅಪಘಾತದ ಘಟನೆಗಳು ಹುಣ್ಣಿಮೆ ಅಥವಾ ಅಮಾವಾಸ್ಯೆ ತಿಥಿಗಳ ಸಮಯದಲ್ಲಿ ಆಗಿವೆ ಎಂದು ಕಂಡುಬಂದಿದೆ ಉದಾ. ೪.೪.೧೯೦೫ರಂದು ಕಾಗ್ರಾ, ೩೧.೫.೧೯೩೫ರಂದು ಕ್ವೆಟಾ ಮತ್ತು ೧೫.೮.೧೯೫೦ ರಂದು ಅಸ್ಸಾಂನಲ್ಲಾದ ಪ್ರಸಿದ್ಧ ಭೂಕಂಪಗಳು ಅಮಾವಾಸ್ಯೆಯಂದೇ ಆಗಿವೆ. ಕೆಲವು ಭೂಕಂಪಗಳು ಶನಿ, ಚಂದ್ರ, ರವಿ ಮತ್ತು ಮಂಗಳ ಇವುಗಳ ಕೇಂದ್ರಯೋಗದ ಮೇಲಾಗಿದ್ದವು.
೪. ಯುವಕರೇ, ಪ್ರತಿಯೊಂದು ಭಾರತೀಯ ವಿಷಯ, ರೂಢಿ ಮತ್ತು ಆಚಾರಗಳ ಮೇಲೆ ಮಿಥ್ಯಾರೋಪ ಮಾಡುವ ಹಾಗೂ ತಮ್ಮನ್ನು ಪ್ರಗತಿಪರ ಹಾಗೂ ಬುದ್ಧಿನಿಷ್ಠರೆಂದು ಮೆರೆಯುವ ಅರೆಜ್ಞಾನಿ ಮತ್ತು ತೋರಿಕೆಯ ಪಂಡಿತರ ಹಿಂದೆ ಬಿದ್ದು ತಮ್ಮ ಸ್ವಾಭಿಮಾನವನ್ನು ಮರೆಯಬೇಡಿ!
ಯಾವುದೇ ವಿಷಯದ ಸೂಕ್ಷ್ಮ, ಆಳವಾದ ಮತ್ತು ಶಾಸ್ತ್ರೀಯ ವಿಚಾರ ಮಾಡದೇ ಪ್ರತಿಯೊಂದು ಭಾರತೀಯ ವಿಷಯ, ರೂಢಿ ಮತ್ತು ಆಚಾರಗಳ ಮೇಲೆ ಮಿಥ್ಯಾರೋಪವನ್ನು ಮಾಡುವ ಚಟವು ನಮ್ಮ ಕೆಲವು ಭಾರತೀಯ ಪಂಡಿತರಲ್ಲಿ ನಿರ್ಮಾಣವಾಗಿದೆ. ಇದರಿಂದ ಜನ ಸಾಮಾನ್ಯರ ಬುದ್ಧಿ ಭ್ರಷ್ಟವಾಗುತ್ತದೆ. ಇದಕ್ಕೆ ತಡೆಯೊಡ್ಡಬೇಕು ಮತ್ತು ಯುವಪೀಳಿಗೆಯು ತಮ್ಮನ್ನು ಪ್ರಗತಿಪರ ಮತ್ತು ಬುದ್ಧಿನಿಷ್ಠರೆಂದು ಮೆರೆಯುವ ಅರೆಜ್ಞಾನಿ ಮತ್ತು ತೋರಿಕೆಯ ಪಂಡಿತರ ಹಿಂದೆ ಬಿದ್ದು ಆತ್ಮಾಭಿಮಾನ ಶೂನ್ಯರಾಗಬಾರದು, ತಮ್ಮ ಅಸ್ಮಿತೆಯನ್ನು ಮರೆಯಬಾರದು ಎಂಬ ಉದ್ದೇಶದಿಂದ ಈ ಲೇಖನವನ್ನು ಬರೆಯಲಾಗಿದೆ.
(ಆಧಾರ: ಪ್ರಜ್ಞಾಲೋಕ, ಜುಲೈ ೧೯೮೧)
(Dur)buddi jeevigalige arthavaguvudilla
ReplyDelete