ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ

ಕರ್ಪೂರದೀಪವನ್ನು ಹಚ್ಚುವುದು: ಪಂಚೋಪಚಾರ ಪೂಜೆಯಲ್ಲಿ ‘ಕರ್ಪೂರದೀಪ ಹಚ್ಚುವ ಉಪಚಾರ’ ಇಲ್ಲದಿದ್ದರೂ, ಕರ್ಪೂರವು ಸಾತ್ತ್ವಿಕವಾಗಿರುವುದರಿಂದ ಕರ್ಪೂರದೀಪವನ್ನು ಹಚ್ಚುವುದರಿಂದ ಹೆಚ್ಚಿನ ಸಾತ್ತ್ವಿಕತೆ ಸಿಗಲು ಸಹಾಯವಾಗುತ್ತದೆ. ಇದಕ್ಕಾಗಿ ನೈವೇದ್ಯ ಅರ್ಪಿಸಿದ ನಂತರ ಕರ್ಪೂರದೀಪವನ್ನು ಹಚ್ಚಬಹುದು.

೧. ಲಾಭ: ‘ಕರ್ಪೂರದೀಪವನ್ನು ಹಚ್ಚುವುದರಿಂದ ಅಶ್ವಮೇಧ ಯಾಗದ ಪುಣ್ಯವು ಸಿಗುತ್ತದೆ.’ - ಭವಿಷ್ಯೋತ್ತರ ಪುರಾಣ

೨. ಅಶ್ವಮೇಧ ಯಾಗದ ವೈಶಿಷ್ಟ್ಯ: ‘ಅಶ್ವಮೇಧವು ಎಲ್ಲಕ್ಕಿಂತ ದೊಡ್ಡ ಯಾಗವಾಗಿದೆ. ಅಶ್ವವು (ಕುದುರೆ) ಶಕ್ತಿ ಮತ್ತು ವೇಗದ ಪ್ರತೀಕವಾಗಿದೆ. ‘ಪ್ರಜಾಪತಿಯ ಎಲ್ಲ ಶಕ್ತಿಯು ಅಶ್ವದಲ್ಲಿ ಒಟ್ಟುಗೂಡಿರುತ್ತದೆ’ ಎಂದು ಹೇಳುತ್ತಾರೆ. ಅಶ್ವಮೇಧ ಯಾಗದಿಂದ ಉತ್ಪನ್ನವಾಗುವ ಶಕ್ತಿಯನ್ನು ವಿರಾಟಪುರುಷರೂಪಿ ಶಿವರೂಪಿ ಈಶತತ್ತ್ವದೊಂದಿಗೆ ತುಲನೆ ಮಾಡಲಾಗುತ್ತದೆ. ಕರ್ಪೂರರೂಪೀ ದೀಪದಿಂದ ಸ್ವಯಂ ಶಿವರೂಪಿ ಪುರುಷಶಕ್ತಿಯು ಜಾಗೃತವಾಗುವುದರಿಂದ ಅದರ ಸಹವಾಸವು ನಮಗೆ ದೊರಕಿ ನಾವು ಬಲಶಾಲಿ ಮತ್ತು ಕ್ರಿಯೆಯಲ್ಲಿ ಅಶ್ವದಂತೆಯೇ ವೇಗವಂತರಾಗುತ್ತೇವೆ. ಈ ದೀಪದ ಸಹವಾಸದಿಂದ ಅಶ್ವಮೇಧ ಮಾಡಿದ ನಂತರ ಸಿಗುವ ಶಕ್ತಿಯಂತೆ ಪುಷ್ಟಿವರ್ಧಕ ಶಿವರೂಪಿ ಶಕ್ತಿಯು ಸಿಗುತ್ತದೆ; ಆದುದರಿಂದ ಕರ್ಪೂರದೀಪಕ್ಕೆ ಮಹತ್ವದ ಸ್ಥಾನ ನೀಡಿರುವುದು ಕಂಡುಬರುತ್ತದೆ.

೩. ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುವುದು ಮತ್ತು ಅತ್ಯಂತ ಕಡಿಮೆ ಕಾಲಾವಧಿಗಾಗಿ ಕಾರ್ಯನಿರತವಾಗುವ ಕರ್ಪೂರದೀಪವು ಅವ್ಯಕ್ತ ಭಾವದ ಸ್ತರದಲ್ಲಿನ ಜೀವಕ್ಕೇ ಲಾಭವಾಗುವುದು: ಕರ್ಪೂರದೀಪದ ಬಳಿ ಶಿವರೂಪಿ ವಿರಾಟ ಪುರುಷರೂಪಿ ತೇಜದ ವಾಸ್ತವ್ಯವಿರುವುದರಿಂದ, ಇಂತಹ ದೀಪದ ಸಾನ್ನಿಧ್ಯದಿಂದ ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುತ್ತದೆ. ಲಯವಾಗುವ ಪ್ರಕ್ರಿಯೆಯು ಪುನರ್‌ನಿರ್ಮಿತಿರಹಿತವಾಗಿರುವುದರಿಂದ ಈ ದೀಪದ ಸಾನ್ನಿಧ್ಯವು ವಿಶೇಷ ಲಾಭದಾಯಕವಾಗಿದೆ; ಆದರೆ ಕರ್ಪೂರದೀಪವು ಅತ್ಯಂತ ಕಡಿಮೆ ಕಾಲಾವಧಿಗಾಗಿ ಕಾರ್ಯನಿರತವಾಗುವುದರಿಂದ ಅದರಲ್ಲಿನ ಶಿವರೂಪಿ ತೇಜದ ಸಹವಾಸವನ್ನು ದೀರ್ಘಕಾಲ ಪಡೆದುಕೊಳ್ಳಲು ಅವ್ಯಕ್ತ ಭಾವದ ಸ್ತರದಲ್ಲಿರಬೇಕಾಗುತ್ತದೆ.’

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

ಸಂಬಂಧಿತ ಲೇಖನಗಳು

ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ

1 comment:

  1. ಪಚ್ಚ ಕರ್ಪೂರದ ಮಹತ್ವವನ್ನು ತಿಳಿಸಿ ಕೊಡಿ ...

    ReplyDelete

Note: only a member of this blog may post a comment.