ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?

ಹೂವುಗಳಲ್ಲಿ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಜೀವವು ಹೂವಿನ ಪರಿಮಳ ತೆಗೆದುಕೊಂಡಾಗ ಜೀವದ ಗಂಧರೂಪದ ವಾಸನೆಗೆ ಸಂಬಂಧಿಸಿದ ಇಚ್ಛಾಶಕ್ತಿಯು ಉಚ್ಛ್ವಾಸದೊಂದಿಗೆ ಹೂವಿನ ಸೂಕ್ಷ್ಮ-ಕಕ್ಷೆಯಲ್ಲಿ ಪ್ರವೇಶಿಸುವುದರಿಂದ ಹೂವಿನ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಪರಿಮಳ ತೆಗೆದುಕೊಂಡಂತಹ ಇಂತಹ ಹೂವುಗಳಲ್ಲಿ ನೈಸರ್ಗಿಕವಾಗಿರುವ ಸತ್ತ್ವವೂ ಕಡಿಮೆಯಾಗುತ್ತದೆ. ಜೀವವು ಪರಿಮಳ ತೆಗೆದುಕೊಂಡ ಹೂವನ್ನು ಮೂರ್ತಿಗೆ ಅರ್ಪಿಸುವುದರಿಂದ ಮೂರ್ತಿಯು ರಜ-ತಮದಿಂದ ತುಂಬಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಭಕ್ತರಿಗಾಗಿ ಮೂರ್ತಿಯಲ್ಲಿ ಬಂದಿರುವ ಚೈತನ್ಯಕಣಗಳ ಪ್ರಕ್ಷೇಪಣೆಗೆ ಅಡಚಣೆಯಾಗುತ್ತದೆ. ಇದರ ಪರಿಣಾಮದಿಂದ (ಸಮಷ್ಟಿಯಲ್ಲಿ) ಚೈತನ್ಯವು ಕಡಿಮೆ ಪ್ರಕ್ಷೇಪಣೆಯಾಗುತ್ತದೆ. ಇದೇ ಕಾರಣದಿಂದ ದೇವತೆಗಳಿಗೆ ಅರ್ಪಿಸುವ ಹೂವುಗಳ ಪರಿಮಳ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಅಪರಾಧವಾಗಿದೆ.

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)
 
ಸಂಬಂಧಿತ ವಿಷಯಗಳು

No comments:

Post a Comment

Note: only a member of this blog may post a comment.