ರಾಷ್ಟ್ರಧ್ವಜದ ಗೌರವ ಕಾಪಾಡಿ!

 ಭಾರತೀಯರೇ, ದೇಶದ ಪ್ರಾಣವಾಗಿರುವ ರಾಷ್ಟ್ರಧ್ವಜದ ಗೌರವವನ್ನು ಕಾಪಾಡಲು ತಕ್ಷಣ ಕೃತಿಶೀಲರಾಗಿ ಮತ್ತು ರಾಷ್ಟ್ರಕರ್ತವ್ಯವನ್ನು ನಿರ್ವಹಿಸಿ!

೨೬ ಜನವರಿ / ಆಗಸ್ಟ್ ೧೫ ಎಂದರೆ ರಾಷ್ಟ್ರೀಯ ಕರ್ತವ್ಯದ ಅರಿವು ಮಾಡಿಕೊಡುವ ರಾಷ್ಟ್ರೀಯ ಹಬ್ಬ! ರಾಷ್ಟ್ರೀಯ ಅಭಿಮಾನವನ್ನು ಜಾಗೃತಗೊಳಿಸುವ ಈ ದಿನ ನಾವೇನು ನೋಡುತ್ತೇವೆ? ರಾಷ್ಟ್ರಧ್ವಜದ ವಿಡಂಬನೆ, ರಾಷ್ಟ್ರಗೀತೆಯ ಅವಮಾನ ಇದನ್ನೇ ನೋಡುತ್ತೇವಲ್ಲ? ಈಗಲಾದರೂ ಈ ಅವಮಾನ ತಡೆಗಟ್ಟುವಿರೇ? ಭಾರತೀಯರೇ ಎದ್ದೇಳಿ! ರಾಷ್ಟ್ರಸಂಕೇತಗಳ ಅವಮಾನವನ್ನು ತಡೆಗಟ್ಟುವ ರಾಷ್ಟ್ರ ಕರ್ತವ್ಯವನ್ನು ಪಾಲಿಸಿ!

ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟಿ!
  • ರಾಷ್ಟ್ರಧ್ವಜದ ಬಣ್ಣವಿರುವ ಗಾಳಿಪಟವನ್ನು ಹಾರಿಸಬೇಡಿ!
  • ತಮ್ಮ ಮುಖ, ಬಟ್ಟೆಗಳ ಮೇಲೆ ರಾಷ್ಟ್ರಧ್ವಜವನ್ನು ಚಿತ್ರಿಸಬೇಡಿ!
  • ರಾಷ್ಟ್ರಧ್ವಜದ ಸ್ವರೂಪದ, ಬಣ್ಣವಿರುವ ‘ಕೇಕ್’ ಕತ್ತರಿಸಬೇಡಿ!
  • ರಾಷ್ಟ್ರಧ್ವಜ ಕಾಲಿನಡಿ ಬೀಳದಂತೆ, ಹರಿಯದಂತೆ ಎಚ್ಚರ ವಹಿಸಿ!
  • ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಪತಾಕೆ ಅಥವಾ ಅಲಂಕಾರಕ್ಕೆಂದು ಉಪಯೋಗಿಸಬೇಡಿ!
  • ಭಾರತೀಯರೇ, ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸುವ ಮತ್ತು ಅದನ್ನು ಸುಡುವ ರಾಷ್ಟ್ರದ್ರೋಹಿಗಳ ವಿರುದ್ಧ ಆರಕ್ಷಕರಲ್ಲಿ ದೂರನ್ನು ದಾಖಲಿಸಿ!

ಈ ವೀಡಿಯೋ ನೋಡಿ : ರಾಷ್ಟ್ರಧ್ವಜದ ಗೌರವ ಕಾಪಾಡಿ

 

ರಾಷ್ಟ್ರಧ್ವಜದ ಅವಮಾನ ತಡೆಗಟ್ಟಲು ಮತ್ತು ಗೌರವವನ್ನು ಕಾಪಾಡಲು ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಮಾಡಿದ ಆಂದೋಲನ ಮತ್ತು ಪ್ರಯತ್ನಗಳ ಬಗ್ಗೆ ಇಲ್ಲಿ ಓದಿ ಮತ್ತು ತಾವೂ ತಮ್ಮ ಸಮಯಾನುಸಾರ ಇದರಲ್ಲಿ ಪಾಲ್ಗೊಂಡು ತಮ್ಮ ರಾಷ್ಟ್ರ ಮತ್ತು ಧರ್ಮಕರ್ತವ್ಯವನ್ನು ನಿಭಾಯಿಸಿ.


ರಾಷ್ಟ್ರೀಯ ಗೌರವದ ರಕ್ಷಣೆ ಮಾಡಲು ಮರೆತಿರುವ ದುರ್ದೈವೀ ಭಾರತೀಯ ಸಮಾಜ!

ರಾಷ್ಟ್ರಧ್ವಜದ ಗೌರವ ಕಾಪಾಡಿ ಅದನ್ನು ರಕ್ಷಿಸಲು ಲಕ್ಷಗಟ್ಟಲೆ ರಾಷ್ಟ್ರಭಕ್ತರು ತಮ್ಮ ಪ್ರಾಣವನ್ನು ಬಲಿದಾನ ಮಾಡಿಯೂ ಈ ರಾಷ್ಟ್ರೀಯ ಗೌರವವನ್ನು ರಕ್ಷಿಸುವ ಕಾರ್ಯವನ್ನು ಸಮಾಜ ಮರೆತಿರುವುದು ದೌರ್ಭಾಗ್ಯ: ಭಾರತದ ಪ್ರಜಾಪ್ರಭುತ್ವ ದಿನ ಹಾಗೂ ಸ್ವಾತಂತ್ರ್ಯ ದಿನಗಳನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನವು ಈ ದಿನ ಎಲ್ಲ ಭಾರತೀಯರಿಗೂ ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಸ್ವಾತಂತ್ರ್ಯವನ್ನು ನೀಡಿದೆ. ಅದೇ ರೀತಿ ಅಲ್ಲಲ್ಲಿ ಧ್ವಜ ವಂದನೆಯ ಕಾರ್ಯಕ್ರಮಗಳನ್ನು ಸಹ ಉತ್ಸಾಹದಿಂದ ನೆರವೇರಿಸಲಾಗುತ್ತದೆ. ಭಾರತೀಯ ರಾಷ್ಟ್ರಧ್ವಜದ ಗೌರವ ಹಾಗೂ ಅದರ ರಕ್ಷಣೆಗಾಗಿ ಇಂದಿನ ತನಕ ಲಕ್ಷಗಟ್ಟಲೆ ರಾಷ್ಟ್ರಭಕ್ತರು ತಮ್ಮ ಪ್ರಾಣವನ್ನು ಸಹ ಬಲಿದಾನ ಮಾಡಿದ್ದಾರೆ, ಎಂಬುದು ಹೆಚ್ಚಿನವರಿಗೆ ತಿಳಿದಂತಿಲ್ಲ. ಆದರೆ ಇಂದು ಸಮಾಜದಿಂದ ಇಂತಹ ರಾಷ್ಟ್ರೀಯ ಗೌರವದ ರಕ್ಷಣೆಯ ವಿಸ್ಮರಣೆಯಾಗುತ್ತಿದೆ, ಎಂಬುದನ್ನು ದೌರ್ಭಾಗ್ಯವೆಂದು ಹೇಳಬಹುದು.

ರಾಷ್ಟ್ರಧ್ವಜದ ಅವಮಾನದ ಕೆಲವು ಪ್ರಸಂಗ ಮತ್ತು ಸಮಾಜದ ಬೇಜವಾಬ್ದಾರಿ ವರ್ತನೆ

ಅ. ಆಗಸ್ಟ್ ೧೫ ಅಂದರೆ ಸ್ವಾತಂತ್ರ್ಯ ದಿನ ಮತ್ತು ಜನವರಿ ೨೬ ಅಂದರೆ ಪ್ರಜಾಪ್ರಭುತ್ವ ದಿನವನ್ನು ಅಭಿಮಾನದಿಂದ ಆಚರಿಸುವಂತಹ ಸಂದರ್ಭಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜಗಳು ಅದೇ ದಿನ ಮಧ್ಯಾಹ್ನದಿಂದಲೇ ಮಾರ್ಗಗಳಲ್ಲಿ ಹಾಗೂ ಚರಂಡಿಗಳಲ್ಲಿ ಛಿದ್ರ ವಿಛಿದ್ರವಾಗಿ ಅನಾಥವಾಗಿ ಬಿದ್ದಿರುವುದು ಕಂಡುಬರುತ್ತದೆ.

ಆ. ಪ್ಲಾಸ್ಟಿಕ್‌ನ ಧ್ವಜಗಳು ಬೇಗನೆ ನಶಿಸದಿರುವ ಕಾರಣ ಬಹಳ ದಿನಗಳ ತನಕ ನಾವೆಲ್ಲರೂ ರಾಷ್ಟ್ರಧ್ವಜದ ಅವಮಾನವನ್ನು ಅಸಹಾಯಕರಾಗಿ ಕಣ್ಣುಬಿಟ್ಟು ಕಾಣಬೇಕಾಗುತ್ತದೆ.

ಇ. ದೊಡ್ಡದೊಡ್ಡ ಕ್ರೀಡಾಕೂಟಗಳಲ್ಲಿ ಹಾಗೂ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾಪಟುಗಳಿಂದಲೂ, ಕ್ರೀಡಾಭಿಮಾನಿಗಳಿಂದಲೂ ರಾಷ್ಟ್ರಧ್ವಜವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಎಳೆದಾಡುವುದು, ಬೀಸುವುದು, ಮೈಗೆ ಹೊದ್ದುಕೊಳ್ಳುವುದು, ಅದರಿಂದ ಬೆವರೊರೆಸುವುದು, ಮುಖದ ಮೇಲೆ ರಾಷ್ಟ್ರಧ್ವಜವನ್ನು ಹೋಲುವಂತೆ ಬಣ್ಣ ಬಳಿದುಕೊಳ್ಳುವುದು ಇತ್ಯಾದಿ ಹೀನ ಕೃತ್ಯಗಳಾಗುತ್ತವೆ.

ಈ. ರಾಷ್ಟ್ರಧ್ವಜವನ್ನು ಸರಕಾರಿ ಕಾರ್ಯಕ್ರಮಗಳಲ್ಲಿ ತಲೆ ಕೆಳಗಾಗಿ ಅರಳಿಸುವುದು ಎಷ್ಟೋ ಸಂದರ್ಭಗಳಲ್ಲಿ ಕಂಡುಬರುತ್ತದೆ!
ಹೀಗಿದ್ದರೂ ಸರಕಾರವು ಅವುಗಳನ್ನು ತಡೆಯಲು ಏನೂ ಮಾಡುತ್ತಿಲ್ಲ! ಇದರಿಂದ ಅದರ ಬಗ್ಗೆ ನಾವೆಷ್ಟು ಬೇಜವಾಬ್ದಾರರಾಗಿ ದ್ದೇವೆ ಎಂಬುದು ತಿಳಿದುಬರುತ್ತದೆ.

ರಾಷ್ಟ್ರಧ್ವಜದ ಅವಮಾನವೆಂದರೆ ದೇಶದ ದೌರ್ಭಾಗ್ಯ!

‘ರಾಷ್ಟ್ರಧ್ವಜದ ಗೌರವ ಕಾಪಾಡಿ’, ಎಂದು 66 ವರ್ಷಗಳ ನಂತರವೂ ಆಡಳಿತವನ್ನು ಎಚ್ಚರಿಸಬೇಕಾಗುತ್ತದೆ. ಇದು ದೇಶದ ದೌರ್ಭಾಗ್ಯವಾಗಿದೆ. ಭಾರತದ ವಿಶಾಲವಾದ ಪ್ರದೇಶವು ದೇಶದ ಶರೀರವಾದರೆ, ರಾಷ್ಟ್ರಧ್ವಜವು ಅದರ ಪ್ರಾಣವಾಗಿದೆ. ಪ್ರಾಣವಿರುವ ಶರೀರವು ಶಿವನ ಆಲಯವಾದರೆ ಪ್ರಾಣವಿಲ್ಲದ ಶರೀರವು ‘ಶವ’ವಾಗುತ್ತದೆ ಎಂಬುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ‘ಹಿಂದೂ ಜನಜಾಗೃತಿ ಸಮಿತಿ’ಯ ಕೃತಿಶೀಲ ಪ್ರಯತ್ನ

ಹಿಂದೂ ಜನಜಾಗೃತಿ ಸಮಿತಿಯು ಕಳೆದ ೧೨ ವರ್ಷಗಳಿಂದ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಪ್ರಯತ್ನಿಸುತ್ತಿದೆ.
ಅ. ಜನರನ್ನು ಮೊದಲೇ ಜಾಗೃತಗೊಳಿಸುವುದು.
ಆ. ಮಾರ್ಗಗಳಲ್ಲಿ ಹಾಗೂ ಚರಂಡಿಗಳಲ್ಲಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಅವುಗಳ ಅವಮಾನವಾಗದಂತೆ ಮೊದಲೇ ಜನರಿಗೆ ಕರೆ ನೀಡುವುದು.
ಇ. ೨೬ ಜನವರಿ ಮತ್ತು ೧೫ ಆಗಸ್ಟ್ ಬರುವ ಕೆಲವು ದಿನಗಳ ಮೊದಲೇ ಸರಕಾರಕ್ಕೆ ಪ್ರತಿಯೊಂದು ಜಿಲ್ಲೆಯಿಂದ ಮನವಿ ನೀಡುವುದು.
ಈ. ಭಿತ್ತಿಪತ್ರ ಹಚ್ಚುವುದು, ಕರಪತ್ರ ವಿತರಿಸುವುದು.
ಉ. ಅಲ್ಲಲ್ಲಿ ಜನಜಾಗೃತಿ ಮಾಡಲು ಮೆರವಣಿಗೆಗಳನ್ನು ನಡೆಸಿ ಸಮಾಜ ಮತ್ತು ಆಡಳಿತವನ್ನು ಜಾಗೃತಗೊಳಿಸುವುದು.
ಊ. ಅಲ್ಲಲ್ಲಿ ಸಮವಿಚಾರಿ ಸಂಘಟನೆಗಳೊಂದಿಗೆ ಬೀದಿನಾಟಕಗಳನ್ನು ಆಯೋಜಿಸುವುದು ಹಾಗೂ ಇತರ ಅನೇಕ ಮಾಧ್ಯಮಗಳಿಂದ ರಾಷ್ಟ್ರಧ್ವಜದ ವಿಷಯದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುವುದು.
ಎ. ಜನರಲ್ಲಿ ವ್ಯಾಪಕ ಜಾಗೃತಿಯಾಗಲು ನಿಯತಕಾಲಿಕೆಗಳ ಮಾಧ್ಯಮದಿಂದ ಜನರಿಗೆ ಕರೆ ನೀಡುತ್ತಿರುವುದು.
ಇವೆಲ್ಲವನ್ನು ಸಮಿತಿಯು ನಿರಂತರವಾಗಿ ಮಾಡುತ್ತಿರುತ್ತದೆ. ಆದರೆ ಸರಕಾರದಿಂದ ರಾಷ್ಟ್ರಧ್ವಜದ ಅವಮಾನವನ್ನು ತಡೆಯುವುದಕ್ಕಾಗಿ ಮತ್ತು ಅದರ ಗೌರವವನ್ನು ರಕ್ಷಿಸುವುದಕ್ಕಾಗಿ ಯಾವುದೇ ಯೋಗ್ಯವಾದ ಕೃತಿ ಮಾಡುತ್ತಿರುವುದು ಕಂಡು ಬರುತ್ತಿಲ್ಲ ಎಂಬುದು ಕಳವಳಕಾರಿಯಾಗಿದೆ.

೫. ಕೇಂದ್ರೀಯ ಗೃಹಖಾತೆಯ ಆದೇಶದಂತೆ ‘ರಾಷ್ಟ್ರಧ್ವಜ ಮತ್ತು ಬಿಲ್ಲೆಗಳಿಗಾಗಿ ಪ್ಲಾಸ್ಟಿಕ್ ಉಪಯೋಗಿಸಬಾರದು’ ಎಂಬ ನಿಯಮವಿದೆ. ಈ ನಿರ್ಣಯವನ್ನು ಯೋಗ್ಯ ರೀತಿಯಲ್ಲಿ ಇಂದು ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ. ಅಲ್ಲದೆ ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವುದು ಭಾರತೀಯ ಸಂವಿಧಾನದಲ್ಲಿನ ಕಲಂ ೫೧(ಅ)ರ ಅನುಸಾರ ನಾಗರಿಕ ಹಾಗೂ ಸರಕಾರದ ಮೂಲಭೂತ ಕರ್ತವ್ಯವಾಗಿದೆ.

ಆ. ರಾಷ್ಟ್ರೀಯ ಗೌರವದ ಲಾಂಛನಗಳ ದುರುಪಯೋಗವನ್ನು ತಡೆಯುವ ಕಾಯ್ದೆ ೧೯೫೦ಕಲಂ ೨ಮತ್ತು ೫ಕ್ಕನುಸಾರ ಹಾಗೂ ‘ರಾಷ್ಟ್ರ ಗೌರವ ಅವಮಾನ ನಿರ್ಬಂಧ’ ಅಧಿನಿಯಮ ೧೯೭೧ರ ಕಲಂ ೨ಕ್ಕನುಸಾರ ಹಾಗೂ ಬೋಧಚಿಹ್ನೆ ಹಾಗೂ ಹೆಸರುಗಳನ್ನು (ಅಯೋಗ್ಯವಾಗಿ ಉಪಯೋಗಿಸಲು ನಿರ್ಬಂಧ) ಅಧಿನಿಯಮ ೧೯೫೦ ಕಾಯಿದೆಗಳಿಗನುಸಾರ ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ವಿಡಂಬನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಸರಕಾರ ಇನ್ನಾದರೂ ಕ್ರಮಕೈಗೊಳ್ಳಬೇಕು!

ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರಧ್ವಜದ ಅವಮಾನವಾಗಬಾರದೆಂದು ಸರಕಾರವು ಮುಂದಿನ ಕೃತಿ ಮಾಡಬೇಕು.
ಅ. ಪ್ಲಾಸ್ಟಿಕ್‌ನ ರಾಷ್ಟ್ರಧ್ವಜ, ಬಿಲ್ಲೆ ಹಾಗೂ ಇತರ ವಸ್ತುಗಳನ್ನು ಉತ್ಪಾದಿಸುವ ಉತ್ಪಾದಕರ, ವಿತರಕರ ಮತ್ತು ಮಾರಾಟಗಾರರ ಮೇಲೆ ಆರಕ್ಷಕರ ಸಹಾಯದಿಂದ ದಾಳಿ ಮಾಡಿ ಅವರ ವಸ್ತುಗಳನ್ನು ಜಪ್ತಿ ಮಾಡಬೇಕು.
ಆ. ಕಾಯಿದೆಯ ಉಲ್ಲಂಘನೆ ಮಾಡುವವರ ವಿರುದ್ಧವೂ ಕಾನೂನು ಪ್ರಕಾರ ಕಾರ್ಯಾಚರಣೆ ನಡೆಸುವುದು ಇಂದಿನ ಅವಶ್ಯಕತೆಯಾಗಿದೆ.
ಇ. ಮಾತ್ರವಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಸೂಕ್ತ ಶಿಸ್ತುಕ್ರಮ ಜರಗಿಸಬೇಕಾಗಿದೆ.
- ಬಿ.ರಾಮಭಟ್, ನಿವೃತ್ತ ಉಪ ತಹಶೀಲ್ದಾರರು, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ಸುಳ್ಯ.

7 comments:

  1. ಒಳ್ಳೆಯ ವೀಡಿಯೋ ಹಾಕಿದ್ದೀರಿ ಆದರೆ ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುವುದು ಒಳಿತು

    ReplyDelete
    Replies
    1. ನಮಸ್ಕಾರ ಶ್ಯಾಮಾಚಾರ್‌ರವರೇ, ರಾಷ್ಟ್ರಧ್ವಜದ ಗೌರವ ಕಾಪಾಡಲು ನಾವು ಯಾವ ಯಾವ ಕ್ರಮ ಕೈಗೊಂಡಿದ್ದೇವೆ, ಯಾವ್ಯಾವ ಅಭಿಯಾನ ಮಾಡಿದ್ದೇವೆ ಎಂಬ ಎಲ್ಲ ವಿವರಗಳು ಈ ಲಿಂಕ್‌ನಲ್ಲಿವೆ. ಒಂದು ಸಲ ಓದಿ ಮತ್ತು ತಾವೂ ಸಹ ರಾಷ್ಟ್ರಕರ್ತವ್ಯವೆಂದು ತಮ್ಮ ಶಕ್ತ್ಯಾನುಸಾರ ಪಾಲ್ಗೊಳ್ಳಿ. http://www.hindujagruti.org/activities/campaigns/national/respect-flag/

      Delete
  2. First ban the plastic flags. Before this, avoid using this combination of colours iin the flag or any where by the political party.
    Rajendra Prasad

    ReplyDelete
  3. nijvagi prathi obba barathiyaru nodale bekadha video

    ReplyDelete
  4. ನಮ್ಮ ಗೌರವ ನಮ್ಮ ಕೈಯಲ್ಲಿದೇ.. ದಯವಿಟ್ಟು ಯಾರು ನಮ್ಮ ರಾಷ್ಟ್ರಕ್ಕೆ ಹಾಗೂ ರಾಷ್ಟ್ರ ದ್ವಜಕ್ಕೆ ಅವಮಾನ ಮಾಡಬೇಡಿ.. ಈ ವಿಡಿಯೋ ದೃಶ್ಯವನ್ನು ಎಲ್ಲಾ ಕನ್ನಡಿಗರು / ಭಾರತೀಯರು ನೋಡಿ., ಅವಮಾನ ಮಾಡುವುದನ್ನು ತಪ್ಪಿಸಿ.......! ಜೈ ಹಿಂದ್.....!

    ReplyDelete
  5. Dayavittu namma rastravannu mattu namma rastra dvajavannu capadikollona banni ella voggattagi serona.... Jai Hind....!

    ReplyDelete
  6. nijavagiyu idanna rathiyorva ratstreeya prajeyu madalebkada amsha adare modalu shaleyalli bike galalli araduva a dwajagalige swalpa kadivana akabeku embudu nana kalpane

    ReplyDelete

Note: only a member of this blog may post a comment.