ಪ್ರಾರ್ಥನೆಯ ಅರ್ಥ ಮತ್ತು ಮಹತ್ವ


ಉತ್ಪತ್ತಿ ಮತ್ತು ಅರ್ಥ

ಅ. ವ್ಯುತ್ಪತ್ತಿ: ‘ಪ್ರಾರ್ಥನೆ’ ಶಬ್ದವು ‘ಪ್ರ’ (ಅಂದರೆ ಪ್ರಕರ್ಷವಾಗಿ) ಮತ್ತು ‘ಅರ್ಥ’ (ಅಂದರೆ ಯಾಚಿಸುವುದು) ಈ ಶಬ್ದಗಳಿಂದ ತಯಾರಾಗಿದೆ.

ಆ. ಅರ್ಥ: ದೇವರೆದುರು ನಮ್ರವಾಗಿ ಇಚ್ಛಿತ ವಿಷಯ ಗಳನ್ನು ತಳಮಳದಿಂದ ಬೇಡುವುದಕ್ಕೆ ‘ಪ್ರಾರ್ಥನೆ’ ಎನ್ನುತ್ತಾರೆ. ಪ್ರಾರ್ಥನೆಯಲ್ಲಿ ಆದರ, ಪ್ರೇಮ, ವಿನಯಭಾವ (ನಮ್ರತೆ), ಶ್ರದ್ಧೆ ಮತ್ತು ಭಕ್ತಿಭಾವವಿರುತ್ತದೆ. ಪ್ರಾರ್ಥನೆಯನ್ನು ಮಾಡುವಾಗ ಭಕ್ತನ ಅಸಾಮರ್ಥ್ಯ ಮತ್ತು ಶರಣಾಗತಿ ವ್ಯಕ್ತವಾಗುತ್ತಿರುತ್ತದೆ ಮತ್ತು ಅವನು ಕರ್ತೃತ್ವವನ್ನು ಈಶ್ವರನಿಗೆ ನೀಡುತ್ತಿರುತ್ತಾನೆ.
- ಪೂಜ್ಯ ಡಾ.ವಸಂತ ಬಾಳಾಜಿ ಆಠವಲೆ, ಚೆಂಬೂರು, ಮುಂಬೈ (೧೯೮೦)

ಪ್ರಾರ್ಥನೆಯ ಮಹತ್ವ

ಅ. ದೇವತೆಗಳ ಬಗ್ಗೆ ಪ್ರೇಮ ಮತ್ತು ಆದರ ನಿರ್ಮಾಣವಾಗುತ್ತದೆ: ಈಶ್ವರ ಮತ್ತು ದೇವತೆಗಳೊಂದಿಗೆ ಆತ್ಮೀಯತೆಯನ್ನು ಸಾಧಿಸಲು, ಹಾಗೆಯೇ ಅವರ ಬಗ್ಗೆ ಪ್ರೇಮ ಮತ್ತು ಆದರಭಾವ ನಿರ್ಮಾಣವಾಗಲು ಪ್ರಾರ್ಥನೆಯನ್ನು ಮಾಡಬೇಕು. ‘ಈಶ್ವರ, ದೇವತೆಗಳು ಮತ್ತು ಗುರುಗಳು ನಮ್ಮಿಂದ ಎಲ್ಲವನ್ನೂ ಮಾಡಿಸಿಕೊಳ್ಳುವವರಿದ್ದಾರೆ’ ಎಂಬುದು ಪ್ರಾರ್ಥನೆಯಿಂದ ಅರಿವಾಗುತ್ತದೆ.

ಆ. ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ: ಮಾಡಬೇಕಾದ ಕಾರ್ಯವನ್ನು ದೇವತೆಗೆ ಪ್ರಾರ್ಥಿಸಿ ಮಾಡುವುದರಿಂದ, ಆ ಕಾರ್ಯಕ್ಕೆ ದೇವತೆಯ ಆಶೀರ್ವಾದ ಸಿಗುತ್ತದೆ. ಹಾಗೆಯೇ ಪ್ರಾರ್ಥನೆಯಿಂದ ಆತ್ಮಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಕಾರ್ಯವು ಉತ್ತಮ ರೀತಿಯಲ್ಲಾಗಿ ಯಶಸ್ಸು ಸಿಗುತ್ತದೆ.

ಇ. ಮನಃಶಾಂತಿ ದೊರೆಯುತ್ತದೆ: ಪ್ರಾರ್ಥನೆಯನ್ನು ಮಾಡಿ ಕೃತಿಯನ್ನು ಮಾಡುವಾಗ ಮನಃಶಾಂತಿ ದೊರೆಯುತ್ತದೆ ಮತ್ತು ಶಾಂತ ಮತ್ತು ಸ್ಥಿರ ಮನಸ್ಸಿನಿಂದ ಮಾಡಿದ ಕೃತಿಯು ಉತ್ತಮ ವಾಗಿ ಆಗುತ್ತದೆ. - ಕು.ಅನುರಾಧಾ ವಾಡೇಕರ, ಸನಾತನ ಸಂಸ್ಥೆ

ಈ. ಉಪಾಸಕನನ್ನು ‘ಸ್ಥೂಲದಿಂದ ಸೂಕ್ಷ್ಮದೆಡೆಗೆ’ ಕೊಂಡೊಯ್ಯುವ ಒಂದು ಸುಲಭ ಉಪಾಸನಾಪದ್ಧತಿ: ದೈನಂದಿನ ಧಾವಂತದ ಜೀವನದಲ್ಲಿ ಮನಃಶಾಂತಿ ಸಿಗಬೇಕು ಹಾಗೂ ನಿಧಾನವಾಗಿ ಈಶ್ವರನ ಕಡೆಗೆ ಮಾರ್ಗಕ್ರಮಣವಾಗ ಬೇಕೆಂದು ಜನರು ಈಶ್ವರನ ಉಪಾಸನೆಯನ್ನು ಮಾಡುತ್ತಾರೆ. ಹೆಚ್ಚಿನ ಜನರು ತಮ್ಮ ಜೀವನವಿಡೀ ಪೂಜಾರ್ಚನೆ, ಧಾರ್ಮಿಕ ವಿಧಿ ಇತ್ಯಾದಿಗಳನ್ನು, ಅಂದರೆ ಕರ್ಮಕಾಂಡಕ್ಕನುಸಾರ ಮಾಡುವ ಉಪಾಸನೆಯನ್ನೇ ಮಾಡುತ್ತಿರುತ್ತಾರೆ. ಕರ್ಮಕಾಂಡಕ್ಕನುಸಾರ ಮಾಡುವ ಉಪಾಸನೆಯು ಸ್ಥೂಲ ಉಪಾಸನೆಯಾಗಿದೆ. ಈಶ್ವರನ ಸ್ವರೂಪವು ಸೂಕ್ಷ್ಮವಾಗಿದೆ. ಈಶ್ವರಪ್ರಾಪ್ತಿಯಾಗಲು ಉಪಾಸನೆಯೂ ‘ಸ್ಥೂಲದಿಂದ ಸೂಕ್ಷ್ಮಕ್ಕೆ’ ಕೊಂಡೊಯ್ಯುವಂತಹದ್ದಾಗಿರಬೇಕು. ದೇವರಿಗೆ ಪ್ರಾರ್ಥನೆಯನ್ನು ಮನಸ್ಸಿನಿಂದ ಮಾಡಬೇಕಾಗುತ್ತದೆ. ಹಾಗಾಗಿ ಅದು ಸ್ಥೂಲದಿಂದ ಸೂಕ್ಷ್ಮದೆಡೆಗೆ ಕೊಂಡೊಯ್ಯುವ ಒಂದು ಸುಲಭ ಉಪಾಸನೆಯ ಪದ್ಧತಿಯಾಗಿದೆ.

ಉ. ಈಶ್ವರನೊಂದಿಗೆ ಅನುಸಂಧಾನ ಸಾಧಿಸುವ ಸುಲಭ ಮಾರ್ಗ: ಸಾಧನೆಯನ್ನು ಮಾಡುವಾಗ ಈಶ್ವರನ ಅನುಸಂಧಾನ ದಲ್ಲಿರುವುದು ಮಹತ್ವದ್ದಾಗಿದೆ. ಸ್ವಲ್ಪ-ಸ್ವಲ್ಪ ಸಮಯವನ್ನು ಬಿಟ್ಟು ಪ್ರಾರ್ಥನೆಯನ್ನು ಮಾಡಿದರೆ ಈಶ್ವರನೊಂದಿಗೆ ಅನುಸಂಧಾನವನ್ನು ಸಾಧಿಸಲು ಸುಲಭವಾಗುತ್ತದೆ.

ಊ. ದೇವತೆಗಳ ಬಗ್ಗೆ ಶ್ರದ್ಧೆ ಮತ್ತು ಭಾವ ನಿರ್ಮಾಣವಾಗುತ್ತದೆ: ಪ್ರಾರ್ಥನೆಯಿಂದ ದೇವತೆಗಳ ಕೃಪೆಯಾಗಿ ಅನುಭೂತಿಗಳು ಬರುತ್ತವೆ. ಇದರಿಂದ ದೇವತೆಗಳ ಬಗ್ಗೆ ಶ್ರದ್ಧೆ ಮತ್ತು ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.

ಎ. ಸಾಮೂಹಿಕ ಪ್ರಾರ್ಥನೆಯ ಮಹತ್ವ: ಮಕ್ಕಳು ಸಾಮೂಹಿಕ ಪ್ರಭುವಂದನೆ ಮತ್ತು ಸಂಕೀರ್ತನೆಯನ್ನು ಮಾಡುವುದರಿಂದ ಒಂದೇ ಸ್ವರದಲ್ಲಿ ನಿರ್ಮಾಣವಾಗುವ ತುಮುಲ (ವಿಶಿಷ್ಟ) ಧ್ವನಿಯು ವಾತಾವರಣದಲ್ಲಿ ಪವಿತ್ರ ಲಹರಿಗಳನ್ನು ನಿರ್ಮಿಸುತ್ತದೆ. ಆ ಸಮಯದಲ್ಲಿ ಮನಸ್ಸು ಧ್ವನಿಯ ಮೇಲೆ ಏಕಾಗ್ರವಾಗುತ್ತದೆ. ಇದರಿಂದ ಸ್ಮರಣಶಕ್ತಿ ಮತ್ತು ಶ್ರವಣಶಕ್ತಿಯ ವಿಕಾಸವಾಗುತ್ತದೆ; ಹಾಗಾಗಿ ಶಾಲೆಗಳಲ್ಲಿ ಸಾಮೂಹಿಕ ಭಗವದ್ ಪ್ರಾರ್ಥನೆಗೆ ಮಹತ್ವವನ್ನು ಕೊಡಲಾಗಿದೆ.

ಸೂಚನೆ - ಪ್ರಾರ್ಥನೆಯ ಅನೇಕ ಉದಾಹರಣೆಗಳನ್ನು ಕಿರುಗ್ರಂಥದಲ್ಲಿ ವಿವರವಾಗಿ ಕೊಡಲಾಗಿದೆ.

ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಮೊದಲೇ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶೀಯರಿಗೆ ಇತ್ತೀಚೆಗೆ ಅರಿವಾಗುವುದು

ಅ. ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಉತ್ತಮ ಪರಿಣಾಮವಾಗುತ್ತದೆ: ಜಪಾನಿನ ವಿಜ್ಞಾನಿ ಡಾ.ಮಾಸಾರೂ ಇಮೋಟೋ ಇವರು, ‘ಪ್ರಾರ್ಥನೆ, ಸಂಗೀತ, ಉತ್ತಮ ಶಬ್ದ, ನಾಮಜಪ ಮತ್ತು ವಾತಾವರಣದಿಂದ ನೀರು ಮತ್ತು ಆಹಾರದ ಮೇಲೆ ಏನು ಪರಿಣಾಮವಾಗುತ್ತದೆ’ ಎಂಬುದರ ಅಧ್ಯಯನವನ್ನು ಮಾಡಿದರು. ಅವುಗಳ ಛಾಯಾಚಿತ್ರಗಳನ್ನೂ ತೆಗೆದರು. ಅದರಲ್ಲಿ ಪ್ರಾರ್ಥನೆಯನ್ನು ಮಾಡದೇ ಮತ್ತು ಪ್ರಾರ್ಥನೆಯನ್ನು ಮಾಡಿದ ನಂತರ, ಪಾಶ್ಚಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಹಾಗೂ ಕೆಟ್ಟ ಶಬ್ದ ಮತ್ತು ಒಳ್ಳೆಯ ಶಬ್ದಗಳ ಪರಿಣಾಮಗಳ ಅಧ್ಯಯನವನ್ನು ಮಾಡಿದರು. ಅವರಿಗೆ ಆಗ ಪ್ರಾರ್ಥನೆ, ಶಾಸ್ತ್ರೀಯ ಸಂಗೀತ, ಉತ್ತಮ ಶಬ್ದ ಹಾಗೂ ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಬಹಳ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು. ನಮ್ಮ ಶರೀರದ ರಚನೆಯಲ್ಲ್ಲಿ ಶೇ.೭೨ರಷ್ಟು ನೀರಿರುತ್ತದೆ. ಇದರಿಂದ ಕೆಟ್ಟ ಶಬ್ದಗಳಿಗಿಂತ ಒಳ್ಳೆಯ ಶಬ್ದಗಳನ್ನು ಉಪಯೋಗಿಸಿದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವಾಗುತ್ತದೆ.

ಆ. ಡಾ.ಮಾಸಾರೋ ಇಮೋಟೋ ಇವರಿಗೆ ಚಿಕ್ಕಂದಿನಿಂದ ಅವರ ತಾಯಿಯು ಊಟದ ಮೊದಲು ಪ್ರಾರ್ಥನೆಯನ್ನು ಮಾಡಲು ಕಲಿಸಿದ್ದರು. ಪ್ರಾರ್ಥನೆಯು ಕೇವಲ ಒಳ್ಳೆಯದೆನಿಸಲು ಮಾಡುವ ವಿಷಯವಾಗಿರದೇ ಅದರಿಂದ ತುಂಬಾ ಲಾಭವಾಗುತ್ತದೆ ಎಂಬುದು ಅವರ ಹೇಳಿಕೆಯಾಗಿದೆ.

ಇ. ನಾವು ಬಹಳಷ್ಟು ಜನರಿಗೆ ಅವರ ಹುಟ್ಟುಹಬ್ಬದ ದಿನ, ಯಶಸ್ಸು ಪ್ರಾಪ್ತವಾದಾಗ, ಹಬ್ಬಹರಿದಿನಗಳಂದು, ಸಮಾರಂಭ ದಂದು, ಪರೀಕ್ಷೆಗೆ ಹೋಗುವಾಗ ಮುಂತಾದ ಪ್ರಸಂಗಗಳಲ್ಲಿ ಒಳ್ಳೆಯ ಸಕಾರಾತ್ಮಕ ಶಬ್ದಗಳಲ್ಲಿ ಶುಭೇಚ್ಛೆಗಳನ್ನು ನೀಡುತ್ತೇವೆ. ಅದು ಇದಕ್ಕಾಗಿಯೇ ಇದೆ ಎಂದೂ ಡಾ.ಮಾಸಾರೂ ಇಮೋಟೋ ಹೇಳುತ್ತಾರೆ. - ಶ್ರೀ.ನಂದೂ ಮುಳ್ಯೆ, ಸನಾತನ ಆಶ್ರಮ, ದೇವದ, ಪನವೇಲ.
(ಹಿಂದೂ ಧರ್ಮಶಾಸ್ತ್ರದ ಪರ್ಯಾಯವಾಗಿ ಹಿಂದೂ ಧರ್ಮದ ಮಹಾತ್ಮೆಯು ಈ ವಿವೇಚನೆಯಿಂದ ಗಮನಕ್ಕೆ ಬರುತ್ತದೆ. - ಸಂಕಲನಕಾರರು)

ಪ್ರಾರ್ಥನೆಯ ಜೊತೆಗೆ ಸರ್ವತೋಮುಖ ಸಾಧನೆಯನ್ನು ಮಾಡಿರಿ,
ಆಗಲೇ ಜೀವನದಲ್ಲಿ ಸತತವಾಗಿ ಆನಂದ ಸಿಗುವುದು
ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗು ತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ರತಿದಿನ ಕುಲದೇವರ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆಯಾದರೂ ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು. ಹಾಗೆಯೇ ಪೂರ್ವಜರ ಅತೃಪ್ತ ಲಿಂಗದೇಹಗಳ ತೊಂದರೆಗಳಿಂದ ರಕ್ಷಣೆಯನ್ನು ಪಡೆಯಲು ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪವನ್ನು ತೊಂದರೆಯ ತೀವ್ರತೆಗನುಸಾರ ಪ್ರತಿದಿನ ೨ರಿಂದ ೬ ಗಂಟೆ ಮಾಡಬೇಕು. ಸಮಾಜದಲ್ಲಿ ಅಧ್ಯಾತ್ಮದ ಪ್ರಚಾರವಾಗಲು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇರಿಕೊಂಡು ಸತ್ಸೇವೆಯನ್ನು ಮಾಡಬೇಕು. ಇಂತಹ ವಿವಿಧ ಪ್ರಯತ್ನಗಳಿಂದ ಸಾಧನೆಯನ್ನು ಮಾಡಬೇಕು. (ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಗ್ರಂಥಸಂಪತ್ತು ಹಾಗೂ ಸನಾತನದ ಸತ್ಸಂಗಗಳ ಲಾಭವನ್ನು ಪಡೆಯಿರಿ.)

(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಕಿರುಗ್ರಂಥ ‘ಪ್ರಾರ್ಥನೆಯ ಮಹತ್ವ ಮತ್ತು ಉದಾಹರಣೆಗಳು’)

ಸಂಬಂಧಿತ ವಿಷಯಗಳು
ಪ್ರಾರ್ಥನೆಯ ವೈಜ್ಞಾನಿಕತೆ
ಪ್ರಾರ್ಥನೆಯ ವಿಧಗಳು
ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
ಪ್ರಾರ್ಥನೆಯನ್ನು ಯಾರಿಗೆ ಮಾಡಬೇಕು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

No comments:

Post a Comment

Note: only a member of this blog may post a comment.