Showing posts with label ಆಭರಣ. Show all posts
Showing posts with label ಆಭರಣ. Show all posts

ಆಭರಣಗಳ ಕುರಿತಾದ ಲೇಖನಗಳು

ಈ ಬ್ಲಾಗ್‌ನಲ್ಲಿರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ನಮ್ಮ ಅನುಮತಿ ಪಡೆದು, ಆಧಾರಗ್ರಂಥವನ್ನು ಉಲ್ಲೇಖಿಸಬೇಕು ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ - dharma.granth0@gmail.com

ಪ್ರತಿಯೊಬ್ಬ ಹಿಂದೂಗಳಿಗೆ ನಮ್ಮ ಧರ್ಮದ ವಿಷಯ ತಿಳಿಯಲೇಬೇಕು ಎಂಬುದೂ ನಮ್ಮ ಇಚ್ಛೆ, ಆದರೆ ನೀವು ಇಲ್ಲಿಂದ ತೆಗೆದುಕೊಂಡ ವಿಷಯಕ್ಕೆ ಆಧಾರ ಗ್ರಂಥದ ಹೆಸರನ್ನು ಹಾಕುವ ಉದ್ದೇಶ "ನಮಗೆ ಪ್ರಸಿದ್ಧಿ ಸಿಗಬೇಕು; ಹೆಸರುವಾಸಿಯಾಗಬೇಕು" ಎಂದಲ್ಲ, ಆಧಾರ ಗ್ರಂಥದ ಹೆಸರನ್ನು ತೆಗೆಯುವುದರಿಂದ ಜನರಿಗೆ ಆಯಾ ಧರ್ಮಶಿಕ್ಷಣದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಅಥವಾ ಅವರಿಗೆ ಬಂದ ಸಂದೇಹವನ್ನು ನಿವಾರಣೆ ಮಾಡಿಕೊಳ್ಳುವ ಒಂದು ದಾರಿಯನ್ನು ನೀವು ಮುಚ್ಚಿದಂತಾಗುತ್ತದೆ. ಧರ್ಮದ ವಿಷಯವನ್ನು ತಿಳಿದುಕೊಂಡ ನಂತರ ಜನರಿಗೆ ಮುಂದುಮುಂದಿನ ಹಂತದ ಆಧ್ಯಾತ್ಮಿಕ ಸಾಧನೆಯನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. - ಧರ್ಮಗ್ರಂಥ (ಸನಾತನ ಸಂಸ್ಥೆ)

ಆಭರಣಗಳ ಕುರಿತಾದ ಲೇಖನಗಳು
  1. ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
  2. ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
  3. ಮೂಗುತಿ ಧರಿಸುವುದರಿಂದಾಗುವ ಲಾಭಗಳು
  4. ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
  5. ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
  6. ಬಳೆಗಳು (ಕಂಕಣಗಳು)
  7. ಕಾಲುಂಗುರ - ಮಹತ್ವ ಮತ್ತು ಲಾಭ
  8. ಕಾಲ್ಗೆಜ್ಜೆಗಳು - ಮಹತ್ವ ಮತ್ತು ಲಾಭ

ಮೂಗುತಿ ಧರಿಸುವುದರಿಂದಾಗುವ ಲಾಭಗಳು


೧. ‘ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.’

೩. ‘ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.’

ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.

  • ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ! ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ.

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳನ್ನು ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ’)

ಸಂಬಂಧಿತ ವಿಷಯಗಳು
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
Dharma Granth

ಕಾಲ್ಗೆಜ್ಜೆಗಳು - ಮಹತ್ವ ಮತ್ತು ಲಾಭ


ಮಹತ್ವ ಮತ್ತು ಲಾಭಗಳು

೧. ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲುಗಳ ರಕ್ಷಣೆಯಾಗುತ್ತದೆ

ಅ. ‘ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತ ವಾಗುತ್ತವೆ. ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ತೇಜತತ್ತ್ವ ಮತ್ತು ಸಾತ್ತ್ವಿಕ ನಾದಲಹರಿಗಳಿಂದಾಗಿ, ಪಾತಾಳ ಮತ್ತು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲ್ಗೆಜ್ಜೆಗಳನ್ನು ಧರಿಸುವ ಜೀವದ ರಕ್ಷಣೆಯಾಗುತ್ತದೆ.’

ಆ. ‘ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ನಾದದಿಂದ ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಈಶ್ವರೀ ತತ್ತ್ವವು ಸ್ತ್ರೀಯರೆಡೆಗೆ ಆಕರ್ಷಿತವಾಗುತ್ತದೆ. ಇದರಿಂದ ಪಾತಾಳದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಸ್ತ್ರೀಯರ ರಕ್ಷಣೆಯಾಗಲು ಸಹಾಯವಾಗುತ್ತದೆ.’

೨. ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ: ‘ಕಾಲ್ಗೆಜ್ಜೆಯ ನಾದವು ಬ್ರಹ್ಮಾಂಡದಲ್ಲಿರುವ ಕ್ರಿಯಾಶಕ್ತಿಯನ್ನು ಆಕರ್ಷಿಸುವಂತಹದ್ದಾಗಿರುವುದ ರಿಂದ, ಕಾಲ್ಗೆಜ್ಜೆಗಳ ನಾದದಿಂದ ಪ್ರಕ್ಷೇಪಿತವಾಗುವ ಕ್ರಿಯೆಯ ಲಹರಿಗಳು ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ವಿರೋಧಿಸಿ ಅವುಗಳ ವಿಭಜನೆಯನ್ನು ಮಾಡಿ ಅವುಗಳಲ್ಲಿರುವ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ನಾದರೂಪೀ ಕ್ರಿಯಾಲಹರಿಗಳ ಈ ಲಹರಿಗಳು ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಿಸುತ್ತವೆ, ಹಾಗೆಯೇ ಈ ನಾದಲಹರಿಗಳಿಂದಾಗಿ ಸ್ತ್ರೀಯಲ್ಲಿನ ಶಕ್ತಿರೂಪೀ ರಜೋಗುಣಕ್ಕೆ ಗತಿ ಸಿಗುತ್ತದೆ ಮತ್ತು ಅವಳೇ ಒಂದು ಸ್ವಯಂಸಿದ್ಧಸ್ವರೂಪವಾಗುತ್ತಾಳೆ.

೩. ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ.

೪. ಕಾಲ್ಗೆಜ್ಜೆಗಳಲ್ಲಿರುವ ಘುಂಗುರುಗಳಲ್ಲಿನ ಸಾತ್ತ್ವಿಕ ನಾದಲಹರಿಗಳಿಂದ ವಾಯು ಮಂಡಲದ ಶುದ್ಧೀಕರಣವಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಸಂಬಂಧಿತ ವಿಷಯಗಳು
ಬಳೆಗಳು (ಕಂಕಣಗಳು)
ಕಾಲುಂಗುರ - ಮಹತ್ವ ಮತ್ತು ಲಾಭ
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

ಕಾಲುಂಗುರ - ಮಹತ್ವ ಮತ್ತು ಲಾಭ

ವಿವಾಹಿತ ಸ್ತ್ರೀಯರು ಕಾಲ್ಬೆರಳುಗಳಲ್ಲಿ ಕಾಲುಂಗುರಗಳನ್ನು ಧರಿಸುತ್ತಾರೆ. ಕಾಲುಂಗುರಗಳನ್ನು ಹೆಬ್ಬೆರಳಿನ ಹತ್ತಿರದ ಬೆರಳಿನಲ್ಲಿ ಧರಿಸುತ್ತಾರೆ.


ಮಹತ್ವ ಮತ್ತು ಲಾಭ

೧. ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ಸ್ತ್ರೀಧರ್ಮದ ಅರಿವಾಗುತ್ತದೆ: ಕಾಲುಂಗುರಗಳಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಸ್ತ್ರೀಧರ್ಮ, ಕರ್ತವ್ಯ ಮತ್ತು ನಿಯಮಗಳ ಅರಿವಾಗುತ್ತದೆ. ಇದರಿಂದ ಸ್ತ್ರೀಯರು ಸ್ವೇಚ್ಛಾಚಾರಿಗಳಾಗದೇ ಬಂಧನದಲ್ಲಿರುತ್ತಾರೆ ಮತ್ತು ಧರ್ಮ ಪಾಲನೆ ಮಾಡುತ್ತಾರೆ.

೨. ಕಾಲುಂಗುರಗಳಿಂದ ಸ್ತ್ರೀಯರ ಪ್ರಾಣದೇಹದ ಶುದ್ಧಿಯಾಗುತ್ತದೆ: ಕಾಲುಂಗುರಗಳ ಗೋಲಾಕಾರದಲ್ಲಿ ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ ಮತ್ತು ಸಂಗ್ರಹಿಸಿಡುವ ಕ್ಷಮತೆಯಿರುವುದರಿಂದ ಇಚ್ಛಾಶಕ್ತಿಯ ಲಹರಿಗಳ ಸ್ಪರ್ಶದಿಂದ ಸ್ತ್ರೀಯರ ಪ್ರಾಣ ದೇಹದ ಶುದ್ಧಿಯಾಗಲು ಸಹಾಯವಾಗುತ್ತದೆ.

೩. ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯಾಗುತ್ತದೆ: ಹೆಬ್ಬೆರಳಿನ ಸಮೀಪದ ಬೆರಳು ವಾಯುತತ್ತ್ವವನ್ನು ಪ್ರಕ್ಷೇಪಿಸುವಲ್ಲಿ ಅಗ್ರೇಸರವಾಗಿರುವುದರಿಂದ ಸ್ತ್ರೀಯರಲ್ಲಿನ ಜಾಗೃತ ಶಕ್ತಿತತ್ತ್ವವು ಅವಶ್ಯಕತೆಗನುಸಾರ ವಾಯುತತ್ತ್ವದ ಆಧಾರದಲ್ಲಿ ಕಾಲುಂಗುರಗಳ ಮಾಧ್ಯಮದಿಂದ ಕೆಟ್ಟ ಶಕ್ತಿಗಳ ನಿರ್ಮೂಲನೆಯ ಕಾರ್ಯವನ್ನು ಮಾಡುತ್ತದೆ. ಇದರಿಂದ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ಸ್ತ್ರೀಯರ ಕಾಲುಗಳಿಂದ ಅವರ ಶರೀರದಲ್ಲಿ ಪ್ರವೇಶಿಸುವ ಪ್ರಮಾಣವು ಹೆಚ್ಚುಕಡಿಮೆ ಶೇ.೧೦ರಷ್ಟು ಕಡಿಮೆಯಾಗುತ್ತದೆ.-ಓರ್ವ ವಿದ್ವಾಂಸರು, (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೩.೧೧.೨೦೦೫, ಮಧ್ಯಾಹ್ನ ೩.೧೯)

ಮಾಸೋಳಿ (ಮತ್ಸ್ಯಾಕಾರದ ಕಾಲುಂಗುರ)

ಅವಿವಾಹಿತ ಹುಡುಗಿಯರು ಕಾಲಿನ ನಾಲ್ಕನೆಯ ಬೆರಳಿನಲ್ಲಿ (ಕಿರುಬೆರಳಿನ ಸಮೀಪದ ಬೆರಳು) ಮಾಸೋಳಿಯನ್ನು ಧರಿಸುತ್ತಾರೆ. ಮಾಸೋಳಿಯು ಒಂದು ರೀತಿಯ ಕಾಲುಂಗುರವೇ ಆಗಿದೆ. ಅದರ ಆಕಾರವು ಮೀನಿನಂತಿರುತ್ತದೆ; ಆದುದರಿಂದ ಅದಕ್ಕೆ ಮಾಸೋಳಿ (ಮೀನು) ಎಂದು ಹೇಳುತ್ತಾರೆ.

ಅ. ಕಾಲ್ಬೆರಳುಗಳಲ್ಲಿ ಮಾಸೋಳಿಯನ್ನು ಧರಿಸುವುದರಿಂದ ಬಿಂದುಒತ್ತಡದ ಉಪಾಯವಾಗಿ ಕಪ್ಪು ಶಕ್ತಿಯು ನಾಶವಾಗುತ್ತದೆ: ಮಾಸೋಳಿಯ ವಿಶಿಷ್ಟ ಆಕಾರದಿಂದಾಗಿ ಆ ಸ್ಥಳದಲ್ಲಿರುವ ಬಿಂದುವಿನ ಮೇಲೆ ಒತ್ತಡವು ಬರುತ್ತದೆ, ಅಂದರೆ ಬಿಂದುಒತ್ತಡದ ಉಪಾಯ ವಾಗುತ್ತದೆ. ಇದರಿಂದ ಜೀವದ ತೊಂದರೆಗಳು ಕಡಿಮೆಯಾಗುತ್ತವೆ. ಆ ಸ್ಥಳದಲ್ಲಿ ಕೆಟ್ಟ ಶಕ್ತಿಯು ಸಂಗ್ರಹಿಸಿಟ್ಟಿರುವ ಕಪ್ಪು ಶಕ್ತಿಯೂ (ತೊಂದರೆದಾಯಕ ಶಕ್ತಿಯೂ) ನಾಶವಾಗುತ್ತದೆ. - ಓರ್ವ ಅಜ್ಞಾತ ಶಕ್ತಿ (ಕು.ರಂಜನಾ ಗಾವಸರವರ ಮಾಧ್ಯಮದಿಂದ, ೧೯.೮.೨೦೦೮ ಮಧ್ಯಾಹ್ನ ೪.೫೫)

ಆ. ಇತರ ಅಂಶಗಳು
೧. ಅವಿವಾಹಿತ ಯುವತಿಯರು ಕಾಲಿನ ಕಿರುಬೆರಳಿನ ಪಕ್ಕದ ಬೆರಳಿನಲ್ಲಿ ಮಾಸೋಳಿಯನ್ನು ಧರಿಸುತ್ತಾರೆ.
೨. ಮಾಸೋಳಿಯನ್ನು ಧರಿಸುವುದರಿಂದ ಕಿರುಬೆರಳಿನ ಪಕ್ಕದ ಬೆರಳಿನಲ್ಲಿನ ಅಪ್ರಕಟ ಸ್ವರೂಪದಲ್ಲಿನ ಆಪತತ್ತ್ವವು ಪ್ರಕಟವಾಗುತ್ತದೆ ಮತ್ತು ಮಾಸೋಳಿಯಲ್ಲಿನ ಸಗುಣತತ್ತ್ವದಿಂದ ಅದಕ್ಕೆ ಚಾಲನೆಯು ಸಿಗುತ್ತದೆ.
೩. ವ್ಯಕ್ತಿಯು ನಡೆದಾಡುವಾಗ ಮಾಸೋಳಿಯಲ್ಲಿನ ಸ್ಪಂದನಗಳು ಕಾರ್ಯನಿರತವಾಗುತ್ತವೆ. ನಡಿಗೆಯ ವೇಗದಿಂದ ಅವರಿಗೆ ಮಾರಕ ಮತ್ತು ತಾರಕ ಸ್ಪಂದನಗಳು ಸಿಗುತ್ತವೆ.
೪. ನಡೆದಾಡುವಾಗ ಭೂಮಿಯ ಮೇಲೆ ಬೀಳುವ ಒತ್ತಡ ಮತ್ತು ಭೂಮಿಗಾಗುವ ಸ್ಪರ್ಶದಿಂದ ಶಕ್ತಿಯ ಮಾರಕ ಸ್ಪಂದನಗಳು ನಿರ್ಮಾಣವಾಗಿ ಪ್ರಕ್ಷೇಪಿಸುತ್ತವೆ, ಇದರಿಂದ ಪಾತಾಳದಿಂದ ಆಕ್ರಮಣ ಮಾಡುವ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ.’
- ಕು.ಪ್ರಿಯಾಂಕಾ ಲೋಟಲೀಕರ, ಸನಾತನ ಸಂಸ್ಥೆ, ಗೋವಾ. ೬.೧೧.೨೦೦೯)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಕಾಲುಂಗುರದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನವೇನು?

ಭಾರತದಲ್ಲಿ ಸ್ತ್ರೀಯರು ಕಾಲುಂಗರ ಧರಿಸಿದರೆ ಅವರನ್ನು ವಿವಾಹಿತರು ಎಂದು ಗುರುತಿಸುತ್ತಾರೆ. ಬಹುತೇಕ ಭಾರತೀಯ ನಾರಿಯರು, ವಿವಾಹವಾದ ಬಳಿಕ ಕಾಲುಂಗುರವನ್ನು ಧರಿಸುತ್ತಾರೆ. ಇದು ಕೇವಲ ಸ್ತ್ರೀಯೋರ್ವಳು ವಿವಾಹಿತೆ ಎಂಬುದರ ಸೂಚಕವಷ್ಟೇ ಅಲ್ಲ, ಇದಕ್ಕೆ ವೈಜ್ಞಾನಿಕ ಕಾರಣವೂ ಕೂಡ ಇದೆ.

ಭಾರತೀಯ ವೇದಶಾಸ್ತ್ರಗಳ ಪ್ರಕಾರ (Vedham, ಅಥವಾ vedam), ಎರಡೂ ಪಾದಗಳಲ್ಲಿ ಕಾಲುಂಗುರಗಳನ್ನು ಧರಿಸುವುದರಿಂದ, ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು, ಸಮರ್ಪಕವಾದ ಅಂತರದಲ್ಲಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ.

ಇದು ವಿವಾಹಿತ ಸ್ತ್ರೀಯರಿಗೆ, ಗರ್ಭ ಧರಿಸಲು ಉತ್ತಮ ವೇದಿಕೆಯನ್ನುಂಟು ಮಾಡುತ್ತದೆ. ಮಾತ್ರವಲ್ಲದೇ, ನಿರ್ದಿಷ್ಟ ನರವೊಂದು ಕಾಲಿನ ಎರಡನೆಯ ಬೆರಳನ್ನು ಗರ್ಭಾಶಯಕ್ಕೆ ಸಂಪರ್ಕಿಸುವಾಗ, ಅದು ಹೃದಯದ ಮೂಲಕ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ. ಅದ್ದರಿಂದ, ಕಾಲುಂಗುರಗಳನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೆಯ ಬೆರಳುಗಳಿಗೇ ಧರಿಸಿರುವುದನ್ನು ನೀವು ಗಮನಿಸಿರಬಹುದು. ಇದು ಗರ್ಭಾಶಯವನ್ನು ನಿಯಂತ್ರಿಸುತ್ತದೆ ಮತ್ತು ಗರ್ಭಾಶಯಕ್ಕೆ ಸಮಪ್ರಮಾಣದ, ಸಂತುಲಿತ ರಕ್ತದೊತ್ತಡವನ್ನು ನಿರ್ವಹಿಸುವುದರ ಮೂಲಕ ಅದರ ಆರೋಗ್ಯವನ್ನು ಕಾಪಾಡುತ್ತದೆ.

ಬೆಳ್ಳಿಯು ಒಂದು ಉತ್ತಮ ವಾಹಕವಾಗಿದ್ದು, ಅದರಿಂದ ಮಾಡಲ್ಪಟ್ಟ ಕಾಲುಂಗುರಗಳು, ಭೂಮಿಯ ಧ್ರುವ ಶಕ್ತಿಗಳನ್ನು ಹೀರಿ ಶರೀರಕ್ಕೆ ವರ್ಗಾಯಿಸುತ್ತವೆ ಹಾಗೂ ತನ್ಮೂಲಕ ಸಂಪೂರ್ಣ ದೈಹಿಕ ವ್ಯವಸ್ಥೆಗೆ ಹೊಸ ಚೈತನ್ಯವನ್ನು ಒದಗಿಸುತ್ತವೆ.

ಮಹಾನ್ ಭಾರತೀಯ ಕಾವ್ಯವಾದ ರಾಮಾಯಣದಲ್ಲಿ ಕಾಲುಂಗುರವು ಮಹತ್ವದ ಪಾತ್ರವಹಿಸುತ್ತದೆ. ಸೀತೆಯು ರಾವಣನಿಂದ ಅಪಹರಿಸಲ್ಪಟ್ಟಾಗ, ಆಕೆಯು ಕಾಲುಂಗುರಗಳನ್ನು (kaniazhi) ಮಾರ್ಗದ ಮೇಲೆ, ಭಗವಾನ್ ಶ್ರೀರಾಮನ ಅವಗಾಹನೆಗಾಗಿ, ಅಪಹರಣಕ್ಕೆ ತಾನು ಗುರಿಯಾಗಿ ಈ ಮಾರ್ಗದ ಮೂಲಕ ಒಯ್ಯಲ್ಪಟ್ಟಿರುವೆನೆಂದು ಶ್ರೀರಾಮನು ಗುರುತಿಸಲೆಂದು ಎಸೆಯುತ್ತಾಳೆ. ಕಾಲುಂಗುರಗಳು ಅತಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದವು ಎಂಬುದನ್ನು ಇದು ಸೂಚಿಸುತ್ತದೆ. (kannada.boldsky.com)

ಕಾಲ್ಗೆಜ್ಜೆ, ಕಾಲುಂಗುರ ಮತ್ತು ಮಾಸೋಳಿ (ಮೀನಿನ ಆಕಾರದ ಕಾಲುಂಗುರ) ಇವುಗಳನ್ನು ಬೆಳ್ಳಿಯಿಂದಲೇ ಏಕೆ ತಯಾರಿಸುತ್ತಾರೆ?

ಪಾತಾಳದಿಂದ ಪ್ರಕ್ಷೇಪಿತವಾಗುವ ಕನಿಷ್ಠಲಹರಿಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಸೊಂಟದಲ್ಲಿನ ಮತ್ತು ಕಾಲುಗಳಲ್ಲಿನ ಆಭರಣಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ: ‘ಸಾಮಾನ್ಯವಾಗಿ ಸ್ತ್ರೀಯರ ಸೊಂಟದಲ್ಲಿ ಮತ್ತು ಕಾಲುಗಳಲ್ಲಿ ಧರಿಸುವ ಆಭರಣಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ. ರಜೋಗುಣೀ ಮತ್ತು ಚೈತನ್ಯಯುಕ್ತ ಇಚ್ಛಾಲಹರಿಗಳನ್ನು ಗ್ರಹಿಸುವ ಕ್ಷಮತೆಯು ಬೆಳ್ಳಿಯಲ್ಲಿ ಹೆಚ್ಚಿರುವುದರಿಂದ ಆಯಾ ಕಾರ್ಯಕ್ಕೆ ಪೂರಕವಾಗಿರುವ ಲೋಹದ ಆಭರಣಗಳನ್ನು ಆಯಾಯ ಅವಯವಗಳಿಗಾಗಿ ಉಪಯೋಗಿಸಲಾಗುತ್ತದೆ. ವೇಗದಿಂದ ಆಘಾತ ಮಾಡುವುದು ರಜೋಗುಣದ ವೈಶಿಷ್ಟ್ಯವಾಗಿರುವುದರಿಂದ ಬೆಳ್ಳಿಯ ಲೋಹದ ಆಭರಣಗಳನ್ನು ಪಾತಾಳದಿಂದ ಪ್ರಕ್ಷೇಪಿತವಾಗುವ ಪೃಥ್ವಿ ಮತ್ತು ಆಪತತ್ತ್ವಯುಕ್ತ ತೊಂದರೆದಾಯಕ ಆಘಾತದಾಯಕ ಲಹರಿಗಳಿಂದ ರಕ್ಷಣೆ ಪಡೆಯಲು ವಿಶೇಷವಾಗಿ ಉಪಯೋಗಿಸಲಾಗುತ್ತದೆ.’ - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೧೨.೨೦೦೫, ಮಧ್ಯಾಹ್ನ ೧.೦೨)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಸಂಬಂಧಿತ ವಿಷಯಗಳು
ಬಳೆಗಳು (ಕಂಕಣಗಳು)
ಕಾಲ್ಗೆಜ್ಜೆಗಳು - ಮಹತ್ವ ಮತ್ತು ಲಾಭ
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?

೧. ಸೌಭಾಗ್ಯಲಯವಾದರೆ ವೈರಾಗ್ಯಭಾವನೆಯು ಉದಯಿಸುತ್ತದೆ: ಯಾವಾಗ ಸೌಭಾಗ್ಯವು ಲಯವಾಗುತ್ತದೆಯೋ, ಆಗ ನಿಜವಾದ ಅರ್ಥದಲ್ಲಿ ಸ್ತ್ರೀಯರಲ್ಲಿನ ಉತ್ಪತ್ತಿಗೆ ಸಂಬಂಧಿಸಿದ ತೇಜದ ಬೀಜವು ಲೋಪವಾಗುತ್ತದೆ ಮತ್ತು ಆ ಸ್ಥಳದಲ್ಲಿ ವೈರಾಗ್ಯಭಾವನೆಯು ಉದಯಿಸುತ್ತದೆ. ತೇಜದ ಲಯವಾಗುವುದೆಂದರೆ ಆಭರಣಗಳ ಶೃಂಗಾರವನ್ನು ತ್ಯಜಿಸಿ ವೈರಾಗ್ಯದ ಜೀವನವನ್ನು ಪ್ರಾರಂಭಿಸುವುದು.

೨. ಸ್ತ್ರೀಯಲ್ಲಿ ವೈರಾಗ್ಯಭಾವವು ಬೇಗನೇ ನಿರ್ಮಾಣವಾಗಬೇಕೆಂದು ಕಲಿಯುಗದಲ್ಲಿ ಆಭರಣಗಳ ತ್ಯಾಗದ ಸಂಕಲ್ಪನೆಯು ದೃಢವಾಯಿತು: ಸ್ತ್ರೀಯರಲ್ಲಿ ವೈರಾಗ್ಯಭಾವವು ಬೇಗನೇ ನಿರ್ಮಾಣವಾಗಬೇಕೆಂದು ಕಲಿಯುಗದಲ್ಲಿ ಆಭರಣಗಳ ತ್ಯಾಗದ ಸಂಕಲ್ಪನೆಯು ದೃಢವಾಯಿತು. ಹಿಂದಿನ ಕಾಲದಲ್ಲಿ ಸ್ತ್ರೀಯರು ತೇಜತತ್ತ್ವದ ಸಾಧನೆಯಿಂದ ಪರಿಪಕ್ವವಾಗಿರುತ್ತಿದ್ದರು. ಇದರಿಂದ ಸಾಧನೆಯ ಮುಂದುಮುಂದಿನ ಹಂತಗಳಲ್ಲಿ ಅವರಲ್ಲಿ ವೈರಾಗ್ಯಭಾವ ನಿರ್ಮಾಣವಾಗುತ್ತಿತ್ತು. ಆದರೆ ಈಗ ಸಾಧನೆಯ ಅಭಾವದಿಂದಾಗಿ ಆಭರಣಗಳ ತ್ಯಾಗದಿಂದ ವಿಧವೆಯರಲ್ಲಿ ವೈರಾಗ್ಯಭಾವವು ನಿರ್ಮಾಣವಾಗಬೇಕು ಮತ್ತು ಅವರ ಪ್ರಯಾಣವು ಮೋಕ್ಷಪ್ರಾಪ್ತಿಯೆಡೆಗೆ ಆಗಬೇಕೆಂದು ವಿಧವಾ ಸ್ತ್ರೀಯರಿಗೆ ಶರೀರದ ಮೇಲಿನ ಸೌಂದರ್ಯದ ಆಭರಣಗಳನ್ನು ತ್ಯಜಿಸುವ ಅವಶ್ಯಕತೆಯು ನಿರ್ಮಾಣವಾಯಿತು. ಆಭರಣಗಳಿಂದ ಸ್ತ್ರೀಯರಲ್ಲಿನ ರಜೋಗುಣವು ಸತತವಾಗಿ ಜಾಗೃತವಾಗಿರುತ್ತದೆ ಮತ್ತು ಆಭರಣಗಳು ಇಲ್ಲದಿದ್ದರೆ ರಜೋಗುಣವು ಬೇಗನೇ ಲಯವಾಗಿ ವೈರಾಗ್ಯಭಾವವು ಮೂಡಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೮, ಮಧ್ಯಾಹ್ನ ೫.೦೬)

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಆಭರಣಗಳ ಶಾಸ್ತ್ರ’)

ಆದರೆ ಈಗಿನ ಆಧುನಿಕ ಕಾಲದಲ್ಲಿ ವಿಧವಾ ಸ್ತ್ರೀಯರು ಆಭರಣಗಳನ್ನು ಧರಿಸದಿದ್ದರೆ ಅವರಿಗಾಗುವ ಆಧ್ಯಾತ್ಮಿಕ ಲಾಭಗಳ ಉದಾತ್ತ ವಿಚಾರವನ್ನು ಮಾಡುವುದಿಲ್ಲ. ಅದರ ಬದಲಾಗಿ ವಿಧವೆಯರೂ ಆಭರಣಗಳನ್ನು ಧರಿಸಬೇಕು, ಹಳೆಯ ಕಾಲದ ಗೊಡ್ಡು ಸಂಪ್ರದಾಯಗಳನ್ನು ಬಿಡಬೇಕು ಎಂಬಂತಹ ಧರ್ಮದ್ರೋಹಿ ವಿಚಾರಗಳನ್ನು ಪಸರಿಸಿ, ಎಲ್ಲರನ್ನೂ ಆಧ್ಯಾತ್ಮಿಕ ಲಾಭದಿಂದ ವಂಚಿತರನ್ನಾಗಿಸುತ್ತಿದ್ದಾರೆ. ಅದೇ ರೀತಿ ಇಂತಹ ಧರ್ಮದ್ರೋಹಿ ವಿಚಾರಗಳನ್ನು ಸಮಾಜವು ಯಾವುದೇ ವಿವೇಕಬುದ್ಧಿಯಿಂದ ಶಾಸ್ತ್ರವನ್ನು ಅರಿತುಕೊಳ್ಳದೇ ತಕ್ಷಣ ಸ್ವೀಕರಿಸುತ್ತದೆ. ಹಾಗಾಗಿ ಹಿಂದೂಗಳೇ, ನಮ್ಮ ಮಹಾನ್ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಿ, ಮತ್ತು ಪ್ರತಿಯೊಬ್ಬರಿಗೂ ಇದರ ಶಾಸ್ತ್ರವನ್ನು ತಿಳಿಸಿ ಹೇಳಿ.

ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ

ಅ. ಮಹತ್ವ

೧. ಕಲಿಯುಗದಲ್ಲಿ ಕಿವಿಗಳಲ್ಲಿ ಆಭರಣಗಳನ್ನು ಧರಿಸುವುದು ಅವಶ್ಯಕವಾಗಿದೆ: ‘ಹಿಂದಿನ ಕಾಲದಲ್ಲಿ ಕಿವಿಚುಚ್ಚುವ ಅಚಾರವು ಹಿಂದೂ ಧರ್ಮದಲ್ಲಿದ್ದರೂ, ಸತ್ಯಯುಗದ ಜೀವಗಳಲ್ಲಿ ಸಾಧನೆಯಿಂದ ಮತ್ತು ಆಚಾರಧರ್ಮದ ಪಾಲನೆಯಿಂದ ತೇಜದ ವೃದ್ಧಿಯಾಗಿದ್ದರಿಂದ ಕಿವಿಗಳಲ್ಲಿ ಆಭರಣಗಳನ್ನು ಧರಿಸುವ ಅವಶ್ಯಕತೆ ನಿರ್ಮಾಣವಾಗಲಿಲ್ಲ. ಆ ರಂಧ್ರಗಳಿಂದ ಅಲ್ಪ ಪ್ರಮಾಣದಲ್ಲಿ ಹೊರಬೀಳುವ ರಜ-ತಮಾತ್ಮಕ ಲಹರಿಗಳು ಅವರ ದೇಹದಲ್ಲಿನ ಸಾಧನೆಯ ತೇಜದಿಂದ ಅಲ್ಲಿಯೇ ವಿಘಟನೆಯಾಗುತ್ತಿದ್ದವು; ಆದರೆ ಕಲಿಯುಗದಲ್ಲಿ ತೇಜವನ್ನು ನಿರ್ಮಿಸುವ ಮತ್ತು ಹೆಚ್ಚಿಸುವ ಕ್ಷಮತೆಯು ನರದೇಹದಲ್ಲಿ ಉಳಿಯದಿರುವುದರಿಂದ ಅವರಿಗೆ ವಿವಿಧ ಆಭರಣಗಳನ್ನು ಧರಿಸುವ ಅವಶ್ಯಕತೆಯು ನಿರ್ಮಾಣವಾಯಿತು.’ - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೧.೧೨.೨೦೦೭, ಮಧ್ಯಾಹ್ನ ೪.೩೪)
೨. ‘ಕಿವಿಗಳಲ್ಲಿನ ಆಭರಣಗಳಿಂದ ಕಿವಿಯ ಪಟಲದ (ಹಾಲೆಯ) ಮೇಲೆ ಒತ್ತಡವಾಗಿ ಬಿಂದುಒತ್ತಡದ (ಅಕ್ಯುಪ್ರೆಶರ್) ಉಪಚಾರವಾಗುತ್ತದೆ.
೩. ಕಿವಿಗಳಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿಗಳ ಸಾತ್ತ್ವಿಕತೆಯು ಹೆಚ್ಚಾಗಿ ಸೂಕ್ಷ್ಮನಾದವನ್ನು ಗ್ರಹಿಸುವ ಕ್ಷಮತೆಯೂ ಹೆಚ್ಚಾಗುತ್ತದೆ.
೪. ಕಿವಿಗಳಲ್ಲಿ ಧರಿಸುವ ಆಭರಣಗಳಿಂದ ಕಿವಿಗಳ ಸುತ್ತಲೂ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಾಗದಂತೆ ನಾದಲಹರಿಗಳ ಸಹಾಯದಿಂದ ಕಿವಿಗಳ ರಕ್ಷಣೆಯಾಗುತ್ತದೆ.
೫. ಕಿವಿಗಳಲ್ಲಿ ಧರಿಸುವ ಕೆಲವು ಆಭರಣಗಳ ಚಲನವಲನದಿಂದ ಸೂಕ್ಷ್ಮನಾದವು ನಿರ್ಮಾಣವಾಗಿ ಕಿವಿಯ ತಮಟೆ (ಪರದೆ) ಮತ್ತು ಒಳಗಿನ ಯಂತ್ರಗಳ ಮೇಲೆ ಉಪಚಾರವಾಗಿ ಕೆಟ್ಟ ಶಕ್ತಿಗಳ ತೊಂದರೆಯು ಕಡಿಮೆಯಾಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)

೬. ಕಿವಿಗಳಲ್ಲಿ ಆಭರಣಗಳಿರುವುದರಿಂದ ಮಲಮೂತ್ರ ವಿಸರ್ಜನೆಯ ಸಮಯದಲ್ಲಿ ಸ್ತ್ರೀಯರು ಕೇವಲ ನಾಮಜಪ ಮಾಡಿದರೆ ಕೆಟ್ಟಶಕ್ತಿಗಳಿಂದ ಅವರ ರಕ್ಷಣೆಯಾಗುತ್ತದೆ: ‘ಮಲಮೂತ್ರ ವಿಸರ್ಜನೆ ಮಾಡುವಾಗ ಪುರುಷರು ಜನಿವಾರವನ್ನು ಬಲಕಿವಿಯ ಮೇಲೆ ಇಟ್ಟುಕೊಳ್ಳುವ ಹಾಗೆ ಸ್ತ್ರೀಯರು ಏನೂ ಮಾಡಬೇಕಾದ ಅವಶ್ಯಕತೆಯಿರುವುದಿಲ್ಲ; ಏಕೆಂದರೆ ಸ್ತ್ರೀಯರ ಕಿವಿಗಳ ಪಟಲದ ಮೇಲಿರುವ ಕರ್ಣಾಭರಣಗಳಿಂದ ಬಿಂದುಒತ್ತಡ ಪದ್ಧತಿಯಿಂದ ಅವರ ದೇಹದಲ್ಲಿ ತೇಜತತ್ತ್ವದ ಲಹರಿಗಳ ಸಂಗ್ರಹವಾಗುತ್ತಿರುತ್ತದೆ. ಆದುದರಿಂದ ರಜೋಗುಣಿ ಸ್ತ್ರೀಯರಿಗೆ ತೇಜದ ಪ್ರವಾಹವನ್ನು ಜಾಗೃತವಾಗಿಡಲು ಅಡಚಣೆಗಳುಂಟಾಗುವುದಿಲ್ಲ. ಇಂದಿನ ಕಲಿಯುಗದ ಸ್ತ್ರೀಯರು ಮಾತ್ರ ಈ ಸಮಯದಲ್ಲಿ ಮೌನವನ್ನು ಪಾಲಿಸಿ, ವೃತ್ತಿಯನ್ನು ಅಂತರ್ಮುಖಗೊಳಿಸಿ ನಾಮಜಪದ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ ಕರ್ಣಾಭರಣಗಳಂತಹ ಆಭರಣಗಳಲ್ಲಿರುವ ತೇಜತತ್ತ್ವವು ಅವರಿಗಾಗಿ ಜಾಗೃತವಾಗಿದ್ದು ಅವರನ್ನು ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಿಸಬಲ್ಲದು. - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಫಾಲ್ಗುಣ ಕೃಷ್ಣ ಏಕಾದಶಿ ೨.೪.೨೦೦೮ ರಾತ್ರಿ ೮.೦೧)

ಕೆಳಗೆ ಚಿತ್ರದಲ್ಲಿ ತೋರಿಸಿರುವಂತಹ ಅಸುರೀ ವಿನ್ಯಾಸಗಳ ಕರ್ಣಾಭರಣಗಳನ್ನು ಧರಿಸಬೇಡಿ!


ಕರ್ಣಾಭರಣಗಳಿಂದ ಮೇಲೆ ಕೊಟ್ಟಿರುವಂತಹ ಲಾಭಗಳಿರುವಾಗ ಜೇಡ, ಚೇಳು, ಬಾವಲಿ, ಓತಿಕೇತದಂತಹ ಅಸಾತ್ತ್ವಿಕ ಆಕಾರಗಳಿರುವ ಕರ್ಣಾಭರಣಗಳನ್ನು ಧರಿಸುವುದರಿಂದ ಮೇಲಿನ ಲಾಭ ಸಿಗುವುದಂತೂ ದೂರದ ಮಾತು, ಅದರ ಬದಲು ಇಂತಹ ಆಭರಣಗಳಿಂದ ಅಸಾತ್ತ್ವಿಕ, ಅಸುರೀ ಸ್ಪಂದನಗಳು ಆಕರ್ಷಣೆಯಾಗಿ, ಅದನ್ನು ಧರಿಸಿದವರಿಗೆ ಖಂಡಿತ ಹಾನಿಯಾಗುವುದು.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಆಭರಣಗಳು)’)

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳನ್ನು ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸಂಬಂಧಿತ ವಿಷಯಗಳು
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

ಬಳೆಗಳು (ಕಂಕಣಗಳು)

ಬಳೆಗಳನ್ನು ಕುಮಾರಿಯರ ಹಾಗೂ ಮುತ್ತೈದೆಸ್ತ್ರೀಯರ ಮಹತ್ವದ ಅಲಂಕಾರಗಳೆಂದು ತಿಳಿದುಕೊಳ್ಳಲಾಗುತ್ತದೆ. ವಿಧವಾಸ್ತ್ರೀಯರು ಬಳೆಗಳನ್ನು ಧರಿಸುವುದು ನಿಷಿದ್ಧವಾಗಿದೆ. ವಿವಿಧ ಲೋಹ, ಗಾಜು, ಶಂಖ, ಆರಗು ಮತ್ತು ಆನೆಯ ದಂತಗಳಿಂದ ಬಳೆಗಳನ್ನು ತಯಾರಿಸುವುದು ನಮ್ಮ ಪ್ರಾಚೀನ ಪದ್ಧತಿಯಾಗಿದೆ. ಪಂಜಾಬಿನಲ್ಲಿ ಆನೆದಂತದ ಮತ್ತು ಬಂಗಾಲದಲ್ಲಿ ಶಂಖದಿಂದ ತಯಾರಿಸಿದ ಬಳೆಗಳಿಗೆ ವಿಶೇಷ ಮಹತ್ವವಿದೆ.

ಅ. ಮಹತ್ವ
೧. ‘ಹಸಿರು ಬಳೆಗಳನ್ನು ಧರಿಸುವುದು ಮುತ್ತೈದೆಯರ ಪಾತಿವ್ರತ್ಯದ ಪ್ರಕಟ ಶಕ್ತಿರೂಪದ ಅಲಂಕಾರಸಹಿತ ಪೂಜೆಯನ್ನು ಮಾಡುವುದರ ಪ್ರತೀಕವಾಗಿದೆ’. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೬.೮.೨೦೦೬, ಸಾಯಂ. ೬.೪೬)
೨. ಬಳೆಗಳಲ್ಲಿ ಕಾರ್ಯನಿರತ ದೇವಿತತ್ತ್ವದ ಶಕ್ತಿಲಹರಿಗಳು ಮಣಿಕಟ್ಟಿನಲ್ಲಿ ಆಕರ್ಷಿಸಿ, ಸಂಪೂರ್ಣ ಕೈಯಲ್ಲಿ ಪಸರಿಸುವುದರಿಂದ ಕೈಗಳಿಗೆ ಕಾರ್ಯವನ್ನು ಮಾಡಲು ಶಕ್ತಿಯು ಸಿಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)
೩. ಬಳೆಗಳು ಸ್ತ್ರೀಯರನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತವೆ
೩ಅ. ಬಳೆಗಳಲ್ಲಿರುವ ಸಾತ್ತ್ವಿಕತೆ, ದೇವಿತತ್ತ್ವ ಮತ್ತು ಚೈತನ್ಯದಿಂದಾಗಿ ಮಣಿಕಟ್ಟು ಮತ್ತು ಬೆರಳುಗಳ ಸುತ್ತಲೂ ರಕ್ಷಣಾಕವಚವು ನಿರ್ಮಾಣವಾಗಿ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಣೆಯಾಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)

ಗಾಜಿನ ಬಳೆಗಳು


೧. ಗಾಜಿನ ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದಾಗುವ ಲಾಭಗಳು
೧ಅ. ‘ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ-ಶಸ್ತ್ರಾಸ್ತ್ರಗಳ ಮೂಲಕ (ಮಾರಕ ಶಕ್ತಿಯ ಮೂಲಕ) ಇಂದ್ರಿಯಗಳ ರಕ್ಷಣೆಯಾಗಿ ಆಯಾಯ ಇಂದ್ರಿಯಗಳ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.’
೧ಆ. ಬಳೆಗಳಿಂದ ಸ್ತ್ರೀಯರಲ್ಲಿರುವ ಕ್ರಿಯಾಶಕ್ತಿಯು ಜಾಗೃತವಾಗಿ ಸ್ತ್ರೀಯರ ದೇಹಕೋಶಗಳ ಶುದ್ಧಿಯಾಗುತ್ತದೆ, ಕೆಟ್ಟ ಶಕ್ತಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ ಮತ್ತು ವಾಸ್ತುಶುದ್ಧಿಯಾಗುತ್ತದೆ.

ಅ. ಬಳೆಗಳ ಚಲನವಲನದಿಂದ ರಜೋಗುಣವು ನಿರ್ಮಾಣವಾಗುತ್ತದೆ. ಈ ರಜೋಗುಣವು ಸ್ತ್ರೀಯರ ದೇಹದಲ್ಲಿನ ಆದಿಶಕ್ತಿಯ ತತ್ತ್ವವನ್ನು ಕಾರ್ಯನಿರತಗೊಳಿಸಲು ಪೂರಕವಾಗಿರುತ್ತದೆ. ಬಳೆಗಳಲ್ಲಿರುವ ಕ್ರಿಯಾಲಹರಿಗಳು ಒಂದಾಗುವುದರಿಂದ ಅವು ಕ್ರಿಯಾಶಕ್ತಿಯ ಲಹರಿಗಳಿಂದ ತುಂಬಿಕೊಳ್ಳುತ್ತವೆ.
 ಆ. ಜಾಗೃತವಾದ ಶಕ್ತಿತತ್ತ್ವದಿಂದ ಸ್ತ್ರೀಯರ ಪ್ರಾಣಮಯ ಮತ್ತು ಮನೋಮಯಕೋಶಗಳ ಶುದ್ಧಿಯಾಗಲು ಸಹಾಯವಾಗುತ್ತದೆ.
ಇ. ಕ್ರಿಯಾಶಕ್ತಿಯ ಲಹರಿಗಳು ದೇಹಕ್ಕೆ ಸ್ಪರ್ಶವಾಗುವುದರಿಂದ ಜೀವದ ಸೂರ್ಯನಾಡಿಯು ಕಾರ್ಯನಿರತವಾಗಿ ಶಕ್ತಿಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ.
ಈ. ಬಳೆಗಳಿಂದ ಪ್ರಕ್ಷೇಪಿತವಾಗುವ ಕ್ರಿಯಾಶಕ್ತಿಯ ಲಹರಿಗಳಿಂದ ಜೀವದ ಸುತ್ತಲೂ ರಜೋಲಹರಿಗಳ ಗತಿಮಾನ ಕವಚವು ನಿರ್ಮಾಣವಾಗುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆಯಾಗುತ್ತದೆ.
ಉ.ಆದಿಶಕ್ತಿಯ ಲಹರಿಗಳು ವಾಸ್ತುವಿನಲ್ಲಿ ಹರಡುವುದರಿಂದ ವಾಸ್ತುವಿನಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾಸ್ತುವಿನ ಶುದ್ಧಿಯಾಗುತ್ತದೆ, ಇದರಿಂದಾಗಿ ಬಳೆಗಳ ಆಘಾತದಾಯಕ ನಾದಕ್ಕೆ ಕೆಟ್ಟ ಶಕ್ತಿಗಳು ಹೆದರುತ್ತವೆ.
- ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧೧.೨೦೦೫, ಮಧ್ಯಾಹ್ನ ೧.೫೯)

ನಾದವನ್ನು ನಿರ್ಮಿಸುವ ಬಳೆಗಳಿಂದ ಮೇಲಿನ ಲಾಭಗಳಾಗುತ್ತವೆ. ಆದುದರಿಂದ ನಾದ ಲಹರಿಗಳನ್ನು ನಿರ್ಮಾಣ ಮಾಡದಿರುವ ಪ್ಲಾಸ್ಟಿಕ್ ಬಳೆಗಳನ್ನು ಉಪಯೋಗಿಸಬಾರದು.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)

ಸಂಬಂಧಿತ ವಿಷಯಗಳು
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!

ಕಿವಿಯ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದ, ತೇಜದ ರೂಪದಲ್ಲಿರುವ ಶಕ್ತಿಯು ವ್ಯರ್ಥವಾಗುತ್ತದೆ. ಇದರಿಂದ ಕಿವಿಯ ಸುತ್ತಲಿರುವ ಸಂರಕ್ಷಣಾಕವಚದ ಅಂಚು ಭಂಗವಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳು ಕಿವಿಗಳ ಟೊಳ್ಳುಗಳಿಂದ ದೇಹದಲ್ಲಿ ಕಪ್ಪು ಶಕ್ತಿಯನ್ನು ಸಂಗ್ರಹಿಸಿಡುವ ಪ್ರಮಾಣವು ಹೆಚ್ಚಾಗಿ ತಲೆಯ, ಕುತ್ತಿಗೆಯ ಮತ್ತು ಗಂಟಲಿನ ವ್ಯಾಧಿಗಳು ಹೆಚ್ಚಾಗುತ್ತವೆ. ಸ್ವಲ್ಪದರಲ್ಲಿ ಹೇಳುವುದಾದರೆ ಕಿವಿಯ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂದ್ರಗಳನ್ನು ಮಾಡಿ ಅವುಗಳಲ್ಲಿ ಮೂಗುಬಟ್ಟಿನಂತಹ ಆಭರಣಗಳನ್ನು ಧರಿಸುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಪ್ರಮಾಣದಲ್ಲಾಗುತ್ತದೆ.’

 (ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಆಭರಣಗಳು)’)

ಸಂಬಂಧಿತ ಲೇಖನಗಳು
ಮೂಗುತಿ ಧರಿಸುವುದರಿಂದಾಗುವ ಲಾಭಗಳು
ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth