ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವ

ಅ. ಮಹತ್ವ

೧. ಕಲಿಯುಗದಲ್ಲಿ ಕಿವಿಗಳಲ್ಲಿ ಆಭರಣಗಳನ್ನು ಧರಿಸುವುದು ಅವಶ್ಯಕವಾಗಿದೆ: ‘ಹಿಂದಿನ ಕಾಲದಲ್ಲಿ ಕಿವಿಚುಚ್ಚುವ ಅಚಾರವು ಹಿಂದೂ ಧರ್ಮದಲ್ಲಿದ್ದರೂ, ಸತ್ಯಯುಗದ ಜೀವಗಳಲ್ಲಿ ಸಾಧನೆಯಿಂದ ಮತ್ತು ಆಚಾರಧರ್ಮದ ಪಾಲನೆಯಿಂದ ತೇಜದ ವೃದ್ಧಿಯಾಗಿದ್ದರಿಂದ ಕಿವಿಗಳಲ್ಲಿ ಆಭರಣಗಳನ್ನು ಧರಿಸುವ ಅವಶ್ಯಕತೆ ನಿರ್ಮಾಣವಾಗಲಿಲ್ಲ. ಆ ರಂಧ್ರಗಳಿಂದ ಅಲ್ಪ ಪ್ರಮಾಣದಲ್ಲಿ ಹೊರಬೀಳುವ ರಜ-ತಮಾತ್ಮಕ ಲಹರಿಗಳು ಅವರ ದೇಹದಲ್ಲಿನ ಸಾಧನೆಯ ತೇಜದಿಂದ ಅಲ್ಲಿಯೇ ವಿಘಟನೆಯಾಗುತ್ತಿದ್ದವು; ಆದರೆ ಕಲಿಯುಗದಲ್ಲಿ ತೇಜವನ್ನು ನಿರ್ಮಿಸುವ ಮತ್ತು ಹೆಚ್ಚಿಸುವ ಕ್ಷಮತೆಯು ನರದೇಹದಲ್ಲಿ ಉಳಿಯದಿರುವುದರಿಂದ ಅವರಿಗೆ ವಿವಿಧ ಆಭರಣಗಳನ್ನು ಧರಿಸುವ ಅವಶ್ಯಕತೆಯು ನಿರ್ಮಾಣವಾಯಿತು.’ - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೧.೧೨.೨೦೦೭, ಮಧ್ಯಾಹ್ನ ೪.೩೪)
೨. ‘ಕಿವಿಗಳಲ್ಲಿನ ಆಭರಣಗಳಿಂದ ಕಿವಿಯ ಪಟಲದ (ಹಾಲೆಯ) ಮೇಲೆ ಒತ್ತಡವಾಗಿ ಬಿಂದುಒತ್ತಡದ (ಅಕ್ಯುಪ್ರೆಶರ್) ಉಪಚಾರವಾಗುತ್ತದೆ.
೩. ಕಿವಿಗಳಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿಗಳ ಸಾತ್ತ್ವಿಕತೆಯು ಹೆಚ್ಚಾಗಿ ಸೂಕ್ಷ್ಮನಾದವನ್ನು ಗ್ರಹಿಸುವ ಕ್ಷಮತೆಯೂ ಹೆಚ್ಚಾಗುತ್ತದೆ.
೪. ಕಿವಿಗಳಲ್ಲಿ ಧರಿಸುವ ಆಭರಣಗಳಿಂದ ಕಿವಿಗಳ ಸುತ್ತಲೂ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಾಗದಂತೆ ನಾದಲಹರಿಗಳ ಸಹಾಯದಿಂದ ಕಿವಿಗಳ ರಕ್ಷಣೆಯಾಗುತ್ತದೆ.
೫. ಕಿವಿಗಳಲ್ಲಿ ಧರಿಸುವ ಕೆಲವು ಆಭರಣಗಳ ಚಲನವಲನದಿಂದ ಸೂಕ್ಷ್ಮನಾದವು ನಿರ್ಮಾಣವಾಗಿ ಕಿವಿಯ ತಮಟೆ (ಪರದೆ) ಮತ್ತು ಒಳಗಿನ ಯಂತ್ರಗಳ ಮೇಲೆ ಉಪಚಾರವಾಗಿ ಕೆಟ್ಟ ಶಕ್ತಿಗಳ ತೊಂದರೆಯು ಕಡಿಮೆಯಾಗುತ್ತದೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೨.೧೧.೨೦೦೭, ರಾತ್ರಿ ೮.೧೫)

೬. ಕಿವಿಗಳಲ್ಲಿ ಆಭರಣಗಳಿರುವುದರಿಂದ ಮಲಮೂತ್ರ ವಿಸರ್ಜನೆಯ ಸಮಯದಲ್ಲಿ ಸ್ತ್ರೀಯರು ಕೇವಲ ನಾಮಜಪ ಮಾಡಿದರೆ ಕೆಟ್ಟಶಕ್ತಿಗಳಿಂದ ಅವರ ರಕ್ಷಣೆಯಾಗುತ್ತದೆ: ‘ಮಲಮೂತ್ರ ವಿಸರ್ಜನೆ ಮಾಡುವಾಗ ಪುರುಷರು ಜನಿವಾರವನ್ನು ಬಲಕಿವಿಯ ಮೇಲೆ ಇಟ್ಟುಕೊಳ್ಳುವ ಹಾಗೆ ಸ್ತ್ರೀಯರು ಏನೂ ಮಾಡಬೇಕಾದ ಅವಶ್ಯಕತೆಯಿರುವುದಿಲ್ಲ; ಏಕೆಂದರೆ ಸ್ತ್ರೀಯರ ಕಿವಿಗಳ ಪಟಲದ ಮೇಲಿರುವ ಕರ್ಣಾಭರಣಗಳಿಂದ ಬಿಂದುಒತ್ತಡ ಪದ್ಧತಿಯಿಂದ ಅವರ ದೇಹದಲ್ಲಿ ತೇಜತತ್ತ್ವದ ಲಹರಿಗಳ ಸಂಗ್ರಹವಾಗುತ್ತಿರುತ್ತದೆ. ಆದುದರಿಂದ ರಜೋಗುಣಿ ಸ್ತ್ರೀಯರಿಗೆ ತೇಜದ ಪ್ರವಾಹವನ್ನು ಜಾಗೃತವಾಗಿಡಲು ಅಡಚಣೆಗಳುಂಟಾಗುವುದಿಲ್ಲ. ಇಂದಿನ ಕಲಿಯುಗದ ಸ್ತ್ರೀಯರು ಮಾತ್ರ ಈ ಸಮಯದಲ್ಲಿ ಮೌನವನ್ನು ಪಾಲಿಸಿ, ವೃತ್ತಿಯನ್ನು ಅಂತರ್ಮುಖಗೊಳಿಸಿ ನಾಮಜಪದ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ ಕರ್ಣಾಭರಣಗಳಂತಹ ಆಭರಣಗಳಲ್ಲಿರುವ ತೇಜತತ್ತ್ವವು ಅವರಿಗಾಗಿ ಜಾಗೃತವಾಗಿದ್ದು ಅವರನ್ನು ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಿಸಬಲ್ಲದು. - ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಫಾಲ್ಗುಣ ಕೃಷ್ಣ ಏಕಾದಶಿ ೨.೪.೨೦೦೮ ರಾತ್ರಿ ೮.೦೧)

ಕೆಳಗೆ ಚಿತ್ರದಲ್ಲಿ ತೋರಿಸಿರುವಂತಹ ಅಸುರೀ ವಿನ್ಯಾಸಗಳ ಕರ್ಣಾಭರಣಗಳನ್ನು ಧರಿಸಬೇಡಿ!


ಕರ್ಣಾಭರಣಗಳಿಂದ ಮೇಲೆ ಕೊಟ್ಟಿರುವಂತಹ ಲಾಭಗಳಿರುವಾಗ ಜೇಡ, ಚೇಳು, ಬಾವಲಿ, ಓತಿಕೇತದಂತಹ ಅಸಾತ್ತ್ವಿಕ ಆಕಾರಗಳಿರುವ ಕರ್ಣಾಭರಣಗಳನ್ನು ಧರಿಸುವುದರಿಂದ ಮೇಲಿನ ಲಾಭ ಸಿಗುವುದಂತೂ ದೂರದ ಮಾತು, ಅದರ ಬದಲು ಇಂತಹ ಆಭರಣಗಳಿಂದ ಅಸಾತ್ತ್ವಿಕ, ಅಸುರೀ ಸ್ಪಂದನಗಳು ಆಕರ್ಷಣೆಯಾಗಿ, ಅದನ್ನು ಧರಿಸಿದವರಿಗೆ ಖಂಡಿತ ಹಾನಿಯಾಗುವುದು.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಆಭರಣಗಳು)’)

ವಿಷಯದಲ್ಲಿರುವ ಕೊಟ್ಟಿರುವ ಆಧ್ಯಾತ್ಮಿಕ ಶಬ್ದಗಳನ್ನು ಅರ್ಥಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸಂಬಂಧಿತ ವಿಷಯಗಳು
ಮೂಗುತಿ ಧರಿಸುವುದರಿಂದಾಗುವ ಲಾಭಗಳು 
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ವಿಧವೆಯರು ಆಭರಣಗಳನ್ನು ಏಕೆ ಧರಿಸಬಾರದು?
Dharma Granth

2 comments:

 1. ಆಭರಣಧಾರಣೆಯ ಫಲ
  ಋಗ್ವೇದದ ಖಿಲಸೂಕ್ತಗಳಲ್ಲಿ ಸ್ವರ್ಣಾಭರಣಗಳ ಅಲಂಕಾರ ಧಾರಣೆಯ ವಿನಿಯೋಗಾರ್ಥವಾಗಿ ಹಿರಣ್ಯಸೂಕ್ತ ಎಂದು ಹೆಸರಾಗಿರುವ ಈ ಮಂತ್ರವನ್ನು ಪಠಿಸುವ ಪದ್ಧತಿಯುಂಟು.

  ಆಯುಷ್ಯಂ ವರ್ಚಸ್ಯಂ ರಾಯಸ್ಟೋಷಮೌದ್ಭಿದ್ಯಂ |
  ಇದಂ ಹಿರಣ್ಯಂ ವರ್ಚಸ್ವಂ........................
  ....................... ಯಾಮಾಮಿಂದ್ರ ಸಂಸೃಜ ||

  ಈ ಮಂತ್ರದ ತಾತ್ಪರ್ಯವು ಇಂತಿದೆ -
  ಆಯುಷ್ಯ, ವರ್ಚಸ್ಸು, ಸರ್ವವಿಧವಾದ ಧನಗಳಿಗೂ ಮೂಲವಾಗಿರುವ ಕೀರ್ತಿಯನ್ನು ತಂದುಕೊಡುವಂತಹ ಹಿರಣ್ಯವು ನಮ್ಮನ್ನು ಪ್ರವೇಶಿಸಲಿ. ಧೃಢವಾಗಿ ಶತ್ರುಗಳನ್ನು ಜಯಿಸುವ ಸಕಲ ಐಶ್ವರ್ಯಗಳು ಈ ಹಿರಣ್ಯದೇವನನ್ನು ಆಶ್ರಹಿಸಿಕೊಂಡಿವೆ. ಎಲೈ ಹಿರಣ್ಯವೇ ತಂದೆಯನ್ನು ಸ್ಮರಿಸುವಂತೆ ನಿನ್ನನ್ನು ಸ್ಮರಿಸುತ್ತಿದ್ದೇನೆ. ನನ್ನನ್ನು ಸೂರ್ಯನಂತೆ ತೇಜಶ್ಶಾಲಿಯನ್ನಾಗಿ ಮಾಡು. ಜನರಿಗೆ ನನ್ನನ್ನು ಪ್ರಿಯನನ್ನಾಗಿ ಮಾಡು. ನನ್ನನ್ನು ವಿರಾಟನನ್ನಾಗಿ ಯಾವ ಲಕ್ಷ್ಮಿಯಿಂದ ನೀನು ಮಾಡಿಸುತ್ತಿರುವೆಯೋ ಆ ಲಕ್ಷ್ಮಿಯು ನನ್ನ ಗೃಹಕ್ಕೆ ಅಭಿಮುಖಳಾಗಿರುವಂತೆ ಮಾಡುವಂತಹವನಾಗು.


  ಈ ಸೂಕ್ತದ ದ್ರಷ್ಟಾರ ಋಷಿಗಳು ಸಾನಗಾದಿಗಳು. ದೇವತೆ ಹಿರಣ್ಯ. ಈ ಸೂಕ್ತವನ್ನು ಸುವರ್ಣಾಲಂಕಾರವನ್ನು ಧರಿಸುವಾಗ ಪಠಿಸಬೇಕು. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಸುವರ್ಣಾಲಂಕಾರ ಧಾರಣೆಯಿಂದಲೇ ಧರಿಸಿದವನಿಗೆ ಐಶ್ವರ್ಯಸಿದ್ಧಿಯುಂಟಾಗುವ ಅವಕಾಶವಿದೆ ಎಂಬ ಮಹತ್ತ್ವದ ವಿಷಯ.

  ReplyDelete

Note: only a member of this blog may post a comment.