ಅಧ್ಯಾತ್ಮದ ಬಗ್ಗೆ ವೈಜ್ಞಾನಿಕ ಸಂಶೋಧನೆ!


ಸಮಾರಂಭವೊಂದರಲ್ಲಿ ಡಾ.ಗೋಪಾಲಕೃಷ್ಣನ್ (ಇಂಡಿಯನ್ ಕೌನ್ಸಿಲ್ ಆಫ್ ಸೈನ್ಸ್ ರಿಸರ್ಚ್), ಐ.ಎಸ್.ಆರ್.ಒ. ಭಾಗ್ಯನಗರ (ಹೈದರಾಬಾದ) ಈ ಸಂಸ್ಥೆಯ ಡಾ. ಶಶಿಕುಮಾರ ಮತ್ತು ಅನುಜನ ಭಟ್ಟಾಥಿರೀಪಾದ ಇವರು ಈ ಮುಂದಿನ ನಿಷ್ಕರ್ಷವನ್ನು ಸ್ಪಷ್ಟಪಡಿಸಿದರು.

೧. ಒಳ್ಳೆಯ ಶಕ್ತಿಯನ್ನು ಅಳೆಯುವ ಉಪಕರಣವನ್ನು ಮೊತ್ತಮೊದಲು ರಷ್ಯಾದವರು ಕಂಡುಹಿಡಿದರು !

ಭೂಮಿಯ ಅಡಿಯಲ್ಲಿರುವ ಜಲವಾಹಿನಿಯ ನಕಾಶೆ ಕಳೆದು ಹೋಗಿರುವುದರಿಂದ ಅವರು ‘ಎಲ್’ ಈ ಆಂಗ್ಲ ಅಕ್ಷರದ ಆಕಾರದ ೨ ಸರಳುಗಳಿರುವ ಯಂತ್ರವನ್ನು ಕಂಡುಹಿಡಿದರು. ಈ ಯಂತ್ರವನ್ನು ಒಳ್ಳೆಯ ಶಕ್ತಿಯಿರುವ ಸ್ಥಳಕ್ಕೆ ಒಯ್ದಾಗ ಆ ಸರಳುಗಳು ಪರಸ್ಪರ ದೂರವಾಗುತ್ತವೆ. ಹರಿಯುವ ನೀರಿನಲ್ಲಿ ಒಳ್ಳೆಯ ಶಕ್ತಿಯಿರುವುದರಿಂದ ರಷ್ಯಾದ ಜನರಿಗೆ ಈ ಯಂತ್ರದ ಮೂಲಕ ಭೂಮಿಯ ಕೆಳಗಿರುವ ಜಲವಾಹಿನಿಯನ್ನು ಕಂಡು ಹಿಡಿಯಲು ಸುಲಭವಾಯಿತು. ಆದ್ದರಿಂದ ಒಳ್ಳೆಯ ಶಕ್ತಿಯನ್ನು ಅಳೆಯಲು ಇದೊಂದು ಒಳ್ಳೆಯ ಉಪಕರಣವಾಗಿದೆಯೆಂದು ರಷ್ಯಾದ ಸರಕಾರ ಪ್ರಮಾಣಪತ್ರ ನೀಡಿದೆ.
ಆಧಾರ: www.greencrosssociety.com/positive_energy.htm

೨. ನಾಮಜಪ ಮತ್ತು ಪ್ರಾರ್ಥನೆಯಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುವುದರಿಂದ ವ್ಯಕ್ತಿಯ ಪ್ರಭಾಮಂಡಲವೂ (ಪ್ರಭಾವಳಿ) ಹೆಚ್ಚಾಗುವುದು

ನಮ್ಮ ಶರೀರದ ಸುತ್ತಲಿರುವ ಅನೇಕ ವಲಯಗಳಿಂದ ಪ್ರಭಾಮಂಡಲ ತಯಾರಾಗುತ್ತದೆ. ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ನಾವು ಈ ಪ್ರಭಾಮಂಡಲವನ್ನು ಅಳೆಯಬಹುದು. ಒಬ್ಬ ವ್ಯಕ್ತಿಯ ಪ್ರಭಾಮಂಡಲವನ್ನು ಅಳತೆ ಮಾಡಿದ ನಂತರ ಅದರ ತ್ರಿಜ್ಯ (ರೇಡಿಯಸ್) ಒಂದು ಅಡಿಯಷ್ಟಿತ್ತು. ಅನಂತರ ಆ ವ್ಯಕ್ತಿಗೆ ಕೆಲವು ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡಲು ಹೇಳಲಾಯಿತು. ಅನಂತರ ಪುನಃ ಪ್ರಭಾಮಂಡಲವನ್ನು ಅಳತೆ ಮಾಡಿದಾಗ, ಅವನ ತ್ರಿಜ್ಯದಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ ಅದು ಎರಡು ಅಡಿಗಳಷ್ಟಾಗಿತ್ತು. ಇದರಿಂದ ಪ್ರಾರ್ಥನೆ ಮತ್ತು ನಾಮಜಪದಿಂದ ಸಾತ್ತ್ವಿಕ ಶಕ್ತಿಯು ಹೆಚ್ಚಾಗುತ್ತದೆ, ಎಂಬುದು ಸಿದ್ಧವಾಗುತ್ತದೆ.
ಆಧಾರ: www.greencrosssociety.com/positive_energy.htm

೩. ರಾತ್ರಿ ತಕ್ಷಣ ಹಾಸಿಗೆಯಲ್ಲಿ ಮಲಗುವುದಕ್ಕಿಂತ ೨ ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಪರಿಣಾಮಕಾರಿಯಾಗುವುದು

ಶೇ. ೨೩ ರಷ್ಟು ಜನರಿಗೆ ಮಲಗಿದಾಗ ಅಥವಾ ನಿದ್ರೆಯಲ್ಲಿರುವಾಗ ಹೃದಯಾಘಾತವಾಗುತ್ತದೆ, ಎಂಬುದು ಈಗ ಸಿದ್ಧವಾಗಿದೆ. ಇದರ ಕಾರಣವೆಂದರೆ, ದಿನವಿಡೀ ನಿಂತುಕೊಂಡಿರುವ ವ್ಯಕ್ತಿ ಮಲಗಿದಾಗ ಅವರ ಹೃದಯದ ಬಡಿತ ಅನಿಯಮಿತವಾಗುತ್ತದೆ. ಹೃದಯದ ಬಡಿತವನ್ನು ಸ್ಥಿರಗೊಳಿಸಲು ಹಾಸಿಗೆಯಲ್ಲಿ ಕುಳಿತು ೨ ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಶ್ರೇಯಸ್ಕರವೆಂದು ಸಿದ್ಧವಾಗಿದೆ. ಇದೇ ನಿಯಮವು ಹಾಸಿಗೆಯಿಂದ ಏಳುವಾಗಲೂ ಅನ್ವಯಿಸುತ್ತದೆ. (೧೦೮ ಸಲ ‘ನಾರಾಯಣಾಯ ನಮಃ’ ಎಂದು ಹೇಳಲು ೨ ನಿಮಿಷ ತಗಲುತ್ತದೆ) ಆದ್ದರಿಂದ ಮಲಗುವ ಮೊದಲು ಮತ್ತು ನಿದ್ರೆ ಯಿಂದ ಏಳುವಾಗ ಹಾಸಿಗೆಯಲ್ಲಿ ಕುಳಿತು ಪ್ರಾರ್ಥನೆ ಮಾಡಲು ಹೇಳಲಾಗುತ್ತದೆ.
(ಹಿಂದೂ ಧರ್ಮದಲ್ಲಿ ಬೆಳಗ್ಗೆ ಎದ್ದ ತಕ್ಷಣ ಪ್ರಾರ್ಥನೆ ಮತ್ತು ಶ್ಲೋಕ ಹೇಳುವುದು ಹಾಗೂ ರಾತ್ರಿ ಮಲಗುವಾಗ ದಿನವಿಡೀ ಆಗಿರುವ ತಪ್ಪುಗಳನ್ನು ದೇವರಿಗೆ ಆತ್ಮನಿವೇದನೆ ಮಾಡಿ ಆ ಬಗ್ಗೆ ಕ್ಷಮೆ ಯಾಚಿಸುವುದು ಹಾಗೂ ನಾಮಜಪವನ್ನು ಮಾಡುತ್ತಾ ಮಲಗುವುದು, ಇತ್ಯಾದಿ ಕೃತಿ ಮಾಡಲು ಹೇಳಲಾಗಿದೆ. ಇದರಿಂದ ಪ್ರತಿಯೊಂದು ಒಳ್ಳೆಯ ವಿಷಯದ ಮೂಲ ಹಿಂದೂ ಧರ್ಮದಲ್ಲಿಯೇ ಇದ್ದು ವಿಜ್ಞಾನಿಗಳು ಅಸ್ತಿತ್ವದಲ್ಲಿರುವುದನ್ನೇ ಸಂಶೋಧನೆ ಮಾಡಿ ಅದನ್ನು ‘ನಾವು ಕಂಡುಹಿಡಿದೆವು’ ಎಂದು ಜಗತ್ತಿಗೆ ಹೇಳುತ್ತಾರೆ, ಎಂಬುದು ಇದರಿಂದ ತಿಳಿಯುವುದು. - ಸಂಕಲನಕಾರರು)

ಆಧಾರ : ವಾರಪತ್ರಿಕೆ 'ಸನಾತನ ಪ್ರಭಾತ'

1 comment:

Note: only a member of this blog may post a comment.