ಕೆಟ್ಟ ಶಕ್ತಿಗಳ ಬಗ್ಗೆ ಪ್ರಾಥಮಿಕ ಮಾಹಿತಿ

ಆಧ್ಯಾತ್ಮಿಕ ದೃಷ್ಟಿಕೋನ
ಸನಾತನ ಸಂಸ್ಥೆಯ ಆಧ್ಯಾತ್ಮಿಕ ಸಂಶೋಧನೆಗಳ ಮೇಲಾಧಾರಿತ 'spiritualresearchfoundation.org' ಈ ಸಂಕೇತಸ್ಥಳದಲ್ಲಿ ಜೀವನದ ಅನೇಕ ಅಂಗಗಳ ಮತ್ತು ಸಮಸ್ಯೆಗಳ ಬಗ್ಗೆ ಸನಾತನವು ನಡೆಸಿದ ಆಧ್ಯಾತ್ಮಿಕ ಸಂಶೋಧನೆಗಳ ಸಂದರ್ಭದಲ್ಲಿನ ಮಾಹಿತಿಯನ್ನು ನೀಡಲಾಗುತ್ತಿದೆ. ಅದರಲ್ಲಿನ ಒಂದು ಅಂಕಣವೆಂದರೆ ‘`Spiritual causes of difficulties. ‘ನಮ್ಮ ಜೀವನದಲ್ಲಿ ಬರುವ ಅಡಚಣೆಗಳ ಆಧ್ಯಾತ್ಮಿಕ ಕಾರಣಗಳು’. ನಮ್ಮ ಜೀವನದಲ್ಲಿ ಬರುವ ಶೇ.೮೦ರಷ್ಟು ಸಮಸ್ಯೆಗಳ ಮೂಲ ಕಾರಣವು ಆಧ್ಯಾತ್ಮಿಕವಾಗಿರುತ್ತದೆ. ಆಧ್ಯಾತ್ಮಿಕ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ಅದರಲ್ಲಿನ ಒಂದು ಕಾರಣವೆಂದರೆ ‘ಕೆಟ್ಟ ಶಕ್ತಿಗಳು’. ಪ್ರಸ್ತುತ ಅಂಕಣದಲ್ಲಿ ಕೆಟ್ಟ ಶಕ್ತಿಗಳ ಬಗೆಗಿನ ಮಾಹಿತಿಯನ್ನು ನೀಡುತ್ತಿದ್ದೇವೆ

ಕೆಟ್ಟ ಶಕ್ತಿಗಳು

ಕೆಟ್ಟ ಶಕ್ತಿಗಳೆಂದರೇನು?: ಯಾವಾಗ ವ್ಯಕ್ತಿಯು ಮರಣ ಹೊಂದುತ್ತಾನೆಯೋ, ಆಗ ಅವನ ಲಿಂಗದೇಹವು ಸ್ಥೂಲದೇಹವನ್ನು ಬಿಟ್ಟು ಮುಂದಿನ ಲೋಕಕ್ಕೆ ಹೋಗುತ್ತದೆ. ಲಿಂಗದೇಹವು ಪಂಚಸೂಕ್ಷ್ಮ ಜ್ಞಾನೇಂದ್ರಿಯಗಳು, ಪಂಚಸೂಕ್ಷ್ಮಕರ್ಮೇಂದ್ರಿಯಗಳು, ಪಂಚಪ್ರಾಣ, ಮನಸ್ಸು (ಬಾಹ್ಯಮನಸ್ಸು), ಚಿತ್ತ (ಅಂತರಮನಸ್ಸು), ಬುದ್ಧಿ ಮತ್ತು ಅಹಂ ಇವುಗಳಿಂದ ಆಗಿರುತ್ತದೆ. ಜನರಿಗೆ ತೊಂದರೆಯನ್ನು ನೀಡುವುದೇ ಕೆಲವು ಲಿಂಗದೇಹಗಳ ಕಾರ್ಯವಾಗಿರುವುದರಿಂದ ಇಂತಹ ಲಿಂಗದೇಹಗಳಿಗೆ ‘ಕೆಟ್ಟ ಶಕ್ತಿಗಳು’ ಎಂದು ಕರೆಯುತ್ತಾರೆ.

ಮರಣ ಹೊಂದಿದ ವ್ಯಕ್ತಿಗಳ ಯಾವುದಾದರೂ ಇಚ್ಛೆಯು ಪೂರ್ಣವಾಗದಿದ್ದರೆ ಅಥವಾ ಅವರು ಪಾಪಿಗಳಾಗಿದ್ದರೆ (ಪಾಪ ಮಾಡಿದ್ದರೆ) ಪ್ರಾಯಶ್ಚಿತ್ತವೆಂದು ಅವರಿಗೆ ಪೃಥ್ವಿಯ ಮೇಲೆ ಮತ್ತೆ ಜನ್ಮ ತಾಳಬೇಕಾಗುತ್ತದೆ ಮತ್ತು ಇಲ್ಲಿ ಸಾಧನೆ ಮಾಡಿದ ಮೇಲೆಯೇ ಅವರಿಗೆ ಮುಂದಿನ ಲೋಕಕ್ಕೆ ಹೋಗಲು ಬರುತ್ತದೆ. ಪೃಥ್ವಿಯ ಮೇಲೆ ಜನ್ಮ ತಾಳುವುದಕ್ಕಿಂತ ಮೊದಲು ಅವರು ಕನಿಷ್ಟ ಕೆಟ್ಟ ಶಕ್ತಿಗಳೆಂದು (ಭೂತಗಳು) ಭುವರ್ಲೋಕ, ಮೊದಲನೆಯ ಅಥವಾ ಎರಡನೆಯ ಪಾತಾಳ ಅಥವಾ ನರಕದಲ್ಲಿ ಇರುತ್ತಾರೆ. ಭುವರ್ಲೋಕ, ಮೊದಲನೆಯ ಅಥವಾ ಎರಡನೆಯ ಪಾತಾಳಗಳಿಂದ ಅವರು ಪೃಥ್ವಿಯ ಸಂಪರ್ಕದಲ್ಲಿರುತ್ತಾರೆ ಅಥವಾ ಪೃಥ್ವಿಯ ಮೇಲೆ ಸಂಚರಿಸುತ್ತಾರೆ.

ಕೆಟ್ಟ ಶಕ್ತಿಗಳ ಕೆಲವು ವಿಧಗಳು ಮತ್ತು ಅವುಗಳ ವೈಶಿಷ್ಟ್ಯಗಳು

ಸಾಮಾನ್ಯವಾಗಿ ನಾವು ಕೆಟ್ಟ ಶಕ್ತಿಗಳನ್ನು ‘ಭೂತ’ ಎಂದು ಕರೆಯುತ್ತೇವೆ. ಅವುಗಳ ಲಕ್ಷಾಂತರ ಜಾತಿ, ಉಪಜಾತಿ ಮತ್ತು ಲಘುಜಾತಿ (ಉಪ ಉಪಜಾತಿ)ಗಳಿವೆ. ಅದರಲ್ಲಿನ ಕೆಲವೊಂದು ಪ್ರಕಾರಗಳು ಮುಂದಿನಂತಿವೆ.
೧. ಭೂತಯೋನಿ: ಪುರುಷನಾಗಿದ್ದರೆ ಸ್ತ್ರೀಯರ ಉಪಭೋಗವನ್ನು ಮಾಡುತ್ತವೆ ಮತ್ತು ಸ್ತ್ರೀ ಆಗಿದ್ದರೆ ಪುರುಷರ ಉಪಭೋಗವನ್ನು ಮಾಡುತ್ತವೆ.
೨. ರಾಕ್ಷಸರು: ಸಾಮಾನ್ಯವಾಗಿ ಇವು ಭ್ರಷ್ಟಾಚಾರಿ ನೇತಾರರು, ಗೂಂಡಾಗಳು ಮುಂತಾದವರ ಮಾಧ್ಯಮದಿಂದ ಎಲ್ಲರಿಗೂ ತೊಂದರೆಗಳನ್ನು ಕೊಡುತ್ತವೆ. ಇವು ವಿಶೇಷವಾಗಿ ಯಾರು ಸಾಧನೆಯನ್ನು ಮಾಡುತ್ತಾರೆಯೋ ಅವರ ಸಾಧನೆಯಲ್ಲಿ ಅಡಚಣೆಯನ್ನು ನಿರ್ಮಾಣ ಮಾಡುತ್ತವೆ. ಸರ್ವಸಾಧಾರಣ ಭೂತಗಳು ಉನ್ನತರಿಗೆ ತೊಂದರೆಗಳನ್ನು ಕೊಡುವುದಿಲ್ಲ ಆದರೆ ರಾಕ್ಷಸರು ಅವರಿಗೆ ಬಹಳಷ್ಟು ತೊಂದರೆಗಳನ್ನು ಕೊಡುತ್ತಾರೆ.
೩. ಹಡಳ: ಇವು ಸೂಕ್ಷ್ಮರೂಪದಲ್ಲಿದ್ದು ಶರೀರದಲ್ಲಿ ಪ್ರವೇಶಿಸಬಹುದು. ಇವು ಶಬ್ದ ಮಾಡಿ ಜನರನ್ನು ಕರೆದು ಅಥವಾ ವಿಶಿಷ್ಟ ರೂಪಗಳನ್ನು ತಾಳಿ ದೂರದಿಂದಲೇ ಹೆದರಿಸುತ್ತವೆ.
೪. ಚೇಟಕಿಣ: ಇವಳು ಬಹಳಷ್ಟು ಶಕ್ತಿಶಾಲಿಯಾಗಿರುತ್ತಾಳೆ ಮತ್ತು ಯಾರ ಮಾತನ್ನೂ ಕೇಳುವುದಿಲ್ಲ. ಅವಳು ಯಾವುದೇ ಪ್ರಕಾರದ ಸುಂದರ ಸ್ತ್ರೀಯರ ರೂಪವನ್ನು ತಾಳಿ ಪುರುಷರನ್ನು ಮರುಳು ಮಾಡಿ ಹುಚ್ಚು ಹಿಡಿಸುತ್ತಾಳೆ.
೫. ಪಿಶಾಚಿ: ಇವು ಮನುಷ್ಯರ ರಕ್ತಪಾತವನ್ನು ಮಾಡುತ್ತವೆ.
೬. ಮಾಂತ್ರಿಕರ ಹಿಡಿತದಲ್ಲಿರುವ ಕೆಟ್ಟ ಶಕ್ತಿಗಳು: ಇವು ಅಲೆದಾಡುವ ಕೆಟ್ಟಶಕ್ತಿಗಳಾಗಿರುತ್ತವೆ. ಯಾವುದಾದರೊಂದು ವಾಸ್ತುವಿನಲ್ಲಿ ಅದ್ಭುತ ಮತ್ತು ಚಮತ್ಕಾರಗಳು ನಡೆಯುತ್ತಿದ್ದರೆ ಅವುಗಳನ್ನು ಈ ಕೆಟ್ಟಶಕ್ತಿಗಳು ಮಾಡುತ್ತಿರುತ್ತವೆ, ಉದಾ. ಹೆಜ್ಜೆಗಳ ಶಬ್ದ, ರಾತ್ರಿಯ ಸಮಯದಲ್ಲಿ ಗೋಡೆಗಳ ಮೇಲೆ ಓಡಾಡುವುದು ಅಥವಾ ಟೇಬಲ್ ಖುರ್ಚಿಗಳ ಶಬ್ದ ಮಾಡುವುದು ಇತ್ಯಾದಿ.

ಕೆಟ್ಟ ಶಕ್ತಿಗಳು ಎಲ್ಲಿ ಇರುತ್ತವೆ?

ಕೆಟ್ಟ ಶಕ್ತಿಗಳು ಮುಖ್ಯವಾಗಿ ಭೂಲೋಕ (ಪೃಥ್ವಿ), ಭುವರ್ಲೋಕ ಮತ್ತು ಪಾತಾಳಗಳಲ್ಲಿ ಇರುತ್ತವೆ. ಅವು ವಾಯುರೂಪದಲ್ಲಿ ಇರುವುದರಿಂದ ಕ್ಷಣಾರ್ಧದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು.

ಭುವರ್ಲೋಕ: ಭುವರ್ಲೋಕದಲ್ಲಿ ಪೃಥ್ವಿಯ ಮೇಲೆ ಮರಣ ಹೊಂದಿದ ಲಿಂಗದೇಹಗಳು ಇರುತ್ತವೆ. ಇಲ್ಲಿ ಗಾಳಿ ಇತ್ಯಾದಿ ಏನೂ ಇರುವುದಿಲ್ಲ, ಕೇವಲ ಲಿಂಗದೇಹಗಳಿಗೆ ವೇದನೆಯಾಗುವಂತಹ ವಾತಾವರಣವಿರುತ್ತದೆ. ಇದರ ಬಗೆಗಿನ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

ಪಾತಾಳ: ಇಲ್ಲಿರುವ ಲಿಂಗದೇಹಗಳಿಗೆ ಪೃಥ್ವಿಯ ಮೇಲಿನ ಜನರಿಗೆ ತೊಂದರೆಗಳನ್ನು ಕೊಡಲು ಬರುತ್ತದೆ ಮತ್ತು ಈ ಲಿಂಗದೇಹಗಳಿಗೂ ತೊಂದರೆಗಳನ್ನು ಭೋಗಿಸಬೇಕಾಗುತ್ತದೆ.

ನರಕ: ಮನುಷ್ಯಜನ್ಮದಲ್ಲಿ ಬಹಳಷ್ಟು ಪಾಪಗಳನ್ನು ಮಾಡಿದ ಕೆಲವು ಲಿಂಗದೇಹಗಳಿರುತ್ತವೆ. ಭುವರ್ಲೋಕದಲ್ಲಿ ಎಲ್ಲರಿಗೂ ಅವರವರ ಕರ್ಮಗಳಿಗನುಸಾರ ವೇದನೆಗಳನ್ನು ಭೋಗಿಸಬೇಕಾಗುತ್ತದೆ. ಸಮುದ್ರದಲ್ಲಿ ಅನೇಕ ವಿಧದ ಚಿಕ್ಕ-ದೊಡ್ಡ ಮೀನುಗಳಿರುತ್ತವೆ. ಅವುಗಳಲ್ಲಿ ದೊಡ್ಡ ಮೀನುಗಳು ಚಿಕ್ಕ ಮೀನುಗಳಿಗೆ ತೊಂದರೆಗಳನ್ನು ಕೊಡುತ್ತವೆ. ಅದೇ ರೀತಿ ಇಲ್ಲಿಯೂ ದೊಡ್ಡ ಕೆಟ್ಟಶಕ್ತಿಗಳು ಚಿಕ್ಕ ಕೆಟ್ಟಶಕ್ತಿಗಳಿಗೆ ತೊಂದರೆಗಳನ್ನು ಕೊಡುತ್ತವೆ. ಅವು ಇವುಗಳನ್ನು ಎಲ್ಲಿಯೂ ಸ್ಥಿರವಾಗಿರಲು ಬಿಡುವುದಿಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಕರ್ಮಗಳಿಗನುಸಾರ ಶಿಕ್ಷೆಯನ್ನು ಭೋಗಿಸಬೇಕಾಗುತ್ತದೆ. ಕೆಲವರಿಗೆ ಬೆಂಕಿಯ ಮತ್ತು ಇನ್ನು ಕೆಲವರಿಗೆ ಬೆಂಕಿಯ ಕೆಂಡಗಳಲ್ಲಿನ (ಸೂಕ್ಷ್ಮದಲ್ಲಿನ) ವೇದನೆಗಳನ್ನು ಅನುಭವಿಸಬೇಕಾಗುತ್ತದೆ. ಅನೇಕರಿಗೆ ಪೃಥ್ವಿಯ ಮೇಲೆ ಮಾಡಿದ ಪಾಪಗಳ ಪ್ರಾಯಶ್ಚಿತ್ತವೆಂದು ಇವೆಲ್ಲವುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಯಾರು ತಮ್ಮ ಕರ್ಮದ ಫಲವನ್ನು ವಿರೋಧ ಮಾಡದೇ ಭೋಗಿಸುತ್ತಾರೆಯೋ ಅವರನ್ನು ಮತ್ತೆ ಪೃಥ್ವಿಯ ಮೇಲೆ ಕಳುಹಿಸಿಕೊಡಲಾಗುತ್ತದೆ. ಆಮೇಲೆ ಅವರಿಗೆ ಮುಂದಿನ ಗತಿಯು ಪ್ರಾಪ್ತವಾಗುತ್ತದೆ. ವಿರೋಧ ಮಾಡುವವರಿಗೆ ಮೊದಲಿಗಿಂತಲೂ ಹೆಚ್ಚಿನ ಶಿಕ್ಷೆಯಾಗುತ್ತದೆ.

ಮುಂದಿನ ಗತಿ ಪಡೆಯಲು ಮಾಡಬೇಕಾದ ಅವಶ್ಯಕ ಕೃತಿ

ಕೆಟ್ಟ ಶಕ್ತಿಗಳ ಆಧ್ಯಾತ್ಮಿಕ ಮಟ್ಟವು ಶೇ.೩೦ಕ್ಕಿಂತಲೂ ಕಡಿಮೆ ಇದ್ದರೆ ಅವುಗಳಿಗೆ ಸಾಧನೆಯನ್ನು ಮಾಡಲು ಬರುವುದಿಲ್ಲ. ಶೇ.೩೦ಕ್ಕಿಂತ ಹೆಚ್ಚು ಮಟ್ಟವಿರುವ ಕೆಟ್ಟಶಕ್ತಿಗಳು ಸಾಧನೆ ಮಾಡಬಹುದು, ಆದರೆ ಅವರಲ್ಲಿ ಅತೃಪ್ತ ಇಚ್ಛೆ-ಆಕಾಂಕ್ಷೆಗಳು ಪ್ರಬಲವಾಗಿರುವುದರಿಂದ ಅವರು ಸಾಧನೆಯಿಂದ ಸಹಜವಾಗಿ ದೂರ ಹೋಗುವ ಸಾಧ್ಯತೆಯಿರುತ್ತದೆ. ವರಿಷ್ಠ (ದೊಡ್ಡ) ಕೆಟ್ಟ ಶಕ್ತಿಗಳು ಇಂತಹವರ ಅತೃಪ್ತ ಇಚ್ಛೆಗಳನ್ನು ಪೂರ್ಣ ಮಾಡಿ ತಮ್ಮ ಬಂಧನದಲ್ಲಿ ಇಟ್ಟುಕೊಳ್ಳುತ್ತವೆ ಮತ್ತು ಅವುಗಳನ್ನು ಕೆಟ್ಟ ಕೆಲಸಗಳಿಗಾಗಿ ಉಪಯೋಗಿಸಿಕೊಳ್ಳುತ್ತವೆ. ಕೆಳಗೆ ನೀಡಿದಂತಹ ಎರಡು ಪದ್ಧತಿಗಳಿಂದ ಕೆಟ್ಟ ಶಕ್ತಿಗಳಿಗೆ ಮುಂದಿನ ಗತಿ ಸಿಗಲು ಸಾಧ್ಯವಿದೆ.
೧. ಸಾಧನೆ ಮಾಡುವ ಸಾಧಕರಿಂದ ಸಾಧನೆಯ ಫಲವನ್ನು ತೆಗೆದುಕೊಂಡು ತಮ್ಮ ಗತಿಗಾಗಿ ಆ ಫಲವನ್ನು ಉಪಯೋಗಿಸಿಕೊಳ್ಳುವುದು.
. ಕೆಲವು ಲಿಂಗದೇಹಗಳು ಸಂತರ ಸೇವೆ ಮಾಡಿ ಅವರ ಕೃಪೆಯಿಂದ ಗತಿ ಪ್ರಾಪ್ತಮಾಡಿಕೊಳ್ಳುತ್ತವೆ.

ಹೀಗಿರುವಾಗಲೂ, ಕೆಟ್ಟಶಕ್ತಿಗಳಿಂದ ಮೇಲಿನಂತೆ ಕೃತಿಯಾಗುವುದಿಲ್ಲ. ಇದರ ಕಾರಣವೇನೆಂದರೆ ಅವರಲ್ಲಿರುವ ಅತೃಪ್ತ ಇಚ್ಛೆಗಳು ಮತ್ತು ಅವುಗಳನ್ನು ತಮ್ಮ ಬಂಧನದಲ್ಲಿಡುವ ವರಿಷ್ಠ ಕೆಟ್ಟ ಶಕ್ತಿಗಳು. ಆದುದರಿಂದಲೇ ಕೆಟ್ಟ ಶಕ್ತಿಗಳು ನೂರಾರು ಅಥವಾ ಸಾವಿರಾರು ವರ್ಷಗಳ ಕಾಲ ಅದೇ ಯೋನಿಯಲ್ಲಿ ಸಿಲುಕಿಕೊಂಡಿರುತ್ತವೆ.

ವೈಶಿಷ್ಟ್ಯಗಳು

ಆಹಾರ
. ಕೆಟ್ಟ ಶಕ್ತಿಗಳು ಸೂಕ್ಷ್ಮರೂಪದಲ್ಲಿದ್ದರೂ ಮಾಂಸ-ರಕ್ತ ಮುಂತಾದವುಗಳ ವಾಸನೆಯಿಂದ ಅವು ತೃಪ್ತವಾಗುತ್ತವೆ.
೨. ಕೆಟ್ಟ ಶಕ್ತಿಗಳು ಮನುಷ್ಯರ ಶರೀರದಲ್ಲಿದ್ದರೆ ಅವು ಆ ವ್ಯಕ್ತಿಯ ಮನೋದೇಹವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅವರ ಕಡೆಯಿಂದ ತಮ್ಮ ಅಪೂರ್ಣವಾದ ಕುಡಿಯುವ-ತಿನ್ನುವ ಇಚ್ಛೆಗಳನ್ನು ಪೂರ್ಣಗೊಳಿಸಿಕೊಳ್ಳುತ್ತವೆ. ವ್ಯಕ್ತಿಗೆ ಆ ರೀತಿ ಮಾಡುವ ಇಚ್ಛೆ ಇಲ್ಲದಿದ್ದರೂ ಅವುಗಳು ಆ ರೀತಿಯಲ್ಲಿ ಮಾಡಿಸಿಕೊಳ್ಳುತ್ತವೆ. ಉದಾ: ಮದ್ಯಪಾನ ಮಾಡುವುದು
೨ಆ. ದುಃಖಮಯ ಜೀವನ: ಕೆಟ್ಟ ಶಕ್ತಿಗಳು ದುಃಖಿಗಳಾಗಿರುತ್ತವೆ, ಮತ್ತು ಯಾವಾಗಲೂ ಚಡಪಡಿಸುತ್ತಿರುತ್ತವೆ; ಆದುದರಿಂದಲೇ ಅವು ಎಲ್ಲರಿಂದಲೂ ಮುಂದಿನ ಗತಿ ಪಡೆಯಲು ಪ್ರಯತ್ನಿಸುತ್ತಿರುತ್ತವೆ.

ಅ. ಮಾಂತ್ರಿಕರು ವಿವಿಧ ಕಾರಣಗಳಿಗಾಗಿ ಕೆಟ್ಟ ಶಕ್ತಿಗಳನ್ನು ಉಪಯೋಗಿಸುವುದು: ಕೆಟ್ಟಶಕ್ತಿಗಳು ನೀಡಿದ ವಚನವನ್ನು ಮುರಿಯುವುದಿಲ್ಲ; ಆದುದರಿಂದ ಮಾಂತ್ರಿಕರು ಮತ್ತು ಸಂತರು ಅವರನ್ನು ವಚನದಲ್ಲಿ ಬಂಧಿಸುತ್ತಾರೆ ಮತ್ತು ಅವರಿಂದ ಯಾವುದಾದರೊಂದು ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ ಉದಾ.
೧. ಖಜಾನೆಯನ್ನು ಹುಡುಕುವುದು
೨. ಕೆಟ್ಟ ಶಕ್ತಿಗಳಲ್ಲಿ ಬಹಳಷ್ಟು ಶಕ್ತಿಯು ಇರುವುದರಿಂದ ಅವುಗಳಿಂದ ಯಾವುದಾದರೊಂದು ಬಲಿಷ್ಠ ಕಾರ್ಯವನ್ನು ಮಾಡಿಸಿಕೊಳ್ಳುವುದು.
೩. ಕೆಟ್ಟ ಶಕ್ತಿಗಳ ಬುದ್ಧಿಯು ಪ್ರಗಲ್ಭವಾಗಿರುತ್ತದೆ; ಆದುದರಿಂದಲೇ ಅವುಗಳಿಗೆ ‘ಸೈತಾನಿ ಖೋಪಡಿ’ ಎಂದು ಹೇಳುತ್ತಾರೆ. ಮಾಂತ್ರಿಕರು ಅವುಗಳನ್ನು ರಾಜಕಾರಣಿ ಮತ್ತು ಗೂಂಡಾಗಳ ಕೆಲಸಗಳಿಗಾಗಿ ಉಪಯೋಗಿಸುತ್ತಾರೆ.
೨ಇ. ಅಪಾರ ಮಾಹಿತಿ: ಯಾವ ವಾಸ್ತುವು ಯಾವುದರಿಂದ ಪೀಡಿತವಾಗಿದೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೆಟ್ಟ ಶಕ್ತಿಗಳು ಹೇಗೆ ತೊಂದರೆಗಳನ್ನು ಕೊಡುತ್ತವೆ, ಯಾವ ಮನುಷ್ಯನಿಗೆ ಯಾವ ರೀತಿಯ ತೊಂದರೆ ಇದೆ, ಯಾವ ಜಾಗವು ದೂಷಿತವಾಗಿದೆ, ಯಾವ ಸಾಧಕರ ಪ್ರಗತಿಯು ಎಲ್ಲಿ ಮತ್ತು ಏಕೆ ನಿಂತಿದೆ, ಆ ಸಾಧಕನಲ್ಲಿ ಯಾವುದರ ಕೊರತೆ ಇದೆ, ಇವುಗಳು  ಅವರಿಗೆ ತಕ್ಷಣವೇ ತಿಳಿಯುತ್ತದೆ. ಎಲ್ಲಿ ಏನು ಘಟಿಸಿತು ಎಂಬುದನ್ನು ಅವರಿಗೆ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ವಿಚಾರಿಸಿದರೂ ಅದನ್ನು ಅವರು ತಪ್ಪಿಲ್ಲದೇ ಹೇಳುತ್ತಾರೆ. ಪ್ರಸ್ತುತ ಮನುಷ್ಯರಿಗಿಂತ ಕಂಪ್ಯೂಟರ (ಸಂಗಣಕ) ಗಳು ಬುದ್ಧಿಶಾಲಿ ಎಂದು ಪರಿಗಣಿಸಲಾಗುತ್ತದೆ. ಅವುಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಬುದ್ಧಿಶಕ್ತಿ ಮತ್ತು ಸ್ಮರಣಶಕ್ತಿಯನ್ನು ಕೆಟ್ಟ ಶಕ್ತಿಗಳು ಹೊಂದಿರುತ್ತವೆ. ಕೆಲವು ಮಾಹಿತಿಗಳನ್ನು ಅವು ಚಿತ್ರಗಳ ಮೂಲಕವೂ ಕೊಡುತ್ತವೆ.
ವರಿಷ್ಠ ಮಾಂತ್ರಿಕರಿಗೆ ಜ್ಞಾನ ಸಿದ್ಧಿ, ಎಂದರೆ ಎಲ್ಲ ಶಾಸ್ತ್ರಗಳ ಮತ್ತು ವಿಷಯಗಳ ಮಾಹಿತಿಯಿರುತ್ತದೆ. ಎಲ್ಲಿ ಏನು ನಡೆದಿದೆ, ಅದರ ಕಾರಣಗಳೇನು ಇವೆಲ್ಲವುಗಳನ್ನು ಅವುಗಳು ಸೂಕ್ಷ್ಮಕಾರಣಗಳ ಸಹಿತ ಹೇಳಬಹುದು.

ಕೆಟ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಮಾಡಬೇಕಾದ ಉಪಾಯಗಳು

ನಾವು ಕೆಟ್ಟ ಶಕ್ತಿಗಳ ವಿಷಯಗಳಿಂದ ದೂರವಿದ್ದರೆ ನಮಗೆ ಕೆಟ್ಟ ಶಕ್ತಿಗಳ ತೊಂದರೆಯೇ ಆಗುವುದಿಲ್ಲ ಎಂದು ಕೆಲವರಿಗೆ ಅನಿಸುತ್ತದೆ. ಆದರೆ ಕೆಟ್ಟ ಶಕ್ತಿಗಳ ಅಸ್ತಿತ್ವದ ಬಗ್ಗೆ ಮತ್ತು ‘ಅವುಗಳಿಂದ ರಕ್ಷಣೆಯನ್ನು ಪಡೆಯುವುದರ’ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಆವಶ್ಯಕವಾಗಿದೆ. ಇದರ ಬಗೆಗಿನ ಅಜ್ಞಾನದಿಂದ ಅಥವಾ ಉಷ್ಟ್ರಪಕ್ಷಿಯಂತಹ ವೃತ್ತಿಯಿಂದ ಕೆಟ್ಟ ಶಕ್ತಿಗಳಿಂದ ನಮಗೆ ಹಾನಿಯಾಗುತ್ತದೆ. ಅಂದರೆ ‘ಕೆಟ್ಟ ಶಕ್ತಿಗಳಿಂದ ನಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬುದರ ಮಾಹಿತಿ ಇಲ್ಲದಿರುವುದರಿಂದ ಮತ್ತು ಆ ದೃಷ್ಟಿಯಲ್ಲಿ ಪ್ರಯತ್ನಗಳನ್ನೂ ಮಾಡದಿರುವುದರಿಂದ ಇಂತಹ ವ್ಯಕ್ತಿಗಳಿಗೆ ತೊಂದರೆ ಕೊಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ.

ನಿಯಮಿತವಾಗಿ ಸಾಧನೆಯನ್ನು ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯು ಹೆಚ್ಚುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ನಮ್ಮ ರಕ್ಷಣೆಯಾಗುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇರುವ ಜಾಗವನ್ನು ಪ್ರವೇಶಿಸುವ ಮೊದಲು ‘ನನ್ನ ರಕ್ಷಣೆಯಾಗಲಿ’ ಎಂದು ಈಶ್ವರನಿಗೆ ಪ್ರಾರ್ಥನೆಯನ್ನು ಮಾಡುವುದು ಆವಶ್ಯಕವಾಗಿದೆ. ಅದರೊಂದಿಗೆ ಸತತ ನಾಮಜಪ ಮಾಡುತ್ತಿದ್ದರೆ ನಮ್ಮ ಸುತ್ತಲೂ ಈಶ್ವರನ ರಕ್ಷಾಕವಚವು ನಿರ್ಮಾಣವಾಗುತ್ತದೆ.

ಸಂಬಂಧಿತ ವಿಷಯಗಳು
ಮೃತ್ಯುವಿನ ನಂತರ ಲಿಂಗದೇಹವು ಕೆಟ್ಟ ಶಕ್ತಿಯಾಗಿ ಹೇಗೆ ರೂಪಾಂತರಗೊಳ್ಳುತ್ತದೆ?
ಪೃಥ್ವಿಯ ಮೇಲೆ ಕೆಟ್ಟ ಶಕ್ತಿಗಳಿರುವ ಸಂಭಾವ್ಯ ಸ್ಥಳಗಳು

No comments:

Post a Comment

Note: only a member of this blog may post a comment.