ಪುರುಷರೇ, ಸಾತ್ತ್ವಿಕ ಕಡಗ ಧರಿಸಿ!

‘ಫ್ರೆಂಡ್‌ಶಿಪ್ ಬ್ಯಾಂಡ್’ನ್ನು ಕಟ್ಟುವುದು ಮತ್ತು ಕಡಗವನ್ನು ಧರಿಸುವುದರಿಂದ ಪುರುಷರ ಮೇಲಾಗುವ ಸೂಕ್ಷ್ಮದಲ್ಲಿನ ಪರಿಣಾಮಗಳು: ಸದ್ಯ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರಸ್ಪರ ಗೆಳೆತನವನ್ನು ಬೆಳೆಸಲು ಮತ್ತು ಗೆಳೆತನದ ಸಂಕೇತವೆಂದು ‘ಫ್ರೆಂಡ್‌ಶಿಪ್ ಬ್ಯಾಂಡ್’ನ್ನು ಕಟ್ಟುತ್ತಾರೆ. ಕೈಯಲ್ಲಿ ‘ಫ್ರೆಂಡ್‌ಶಿಪ್ ಬ್ಯಾಂಡ್’ ಕಟ್ಟುವುದು ಒಂದು ರೂಢಿಯೇ ಆಗಿದೆ. ಆದುದರಿಂದ ಅನೇಕ ಹುಡುಗರು ಅದನ್ನು ಪೇಟೆಯಿಂದ ಖರೀದಿಸಿ ಸ್ವತಃ ತಾವೇ ತಮ್ಮ ಕೈಗೆ ಕಟ್ಟಿಕೊಳ್ಳುತ್ತಾರೆ. ‘ಫ್ರೆಂಡ್‌ಶಿಪ್ ಬ್ಯಾಂಡ್’ನ್ನು ಕಟ್ಟುವುದರಿಂದ ವ್ಯಕ್ತಿಗೆ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಸ್ತರದಲ್ಲಿ ಯಾವುದೇ ಲಾಭವಾಗುವುದಿಲ್ಲ. ಪುರುಷರಿಗೆ ಕೈಯಲ್ಲಿ ಏನಾದರೂ ಧರಿಸುವುದಿದ್ದರೆ ಅವರು ತಾಮ್ರದ ಕಡಗವನ್ನು ಧರಿಸುವುದು ಉತ್ತಮ. ಏಕೆಂದರೆ ಅದು ಸಾತ್ತ್ವಿಕವಾಗಿರುತ್ತದೆ;

ಇತರ ಅಂಶಗಳು
೧. ‘ಫ್ರೆಂಡ್‌ಶಿಪ್ ಬ್ಯಾಂಡ್’
ಅ.ಇದನ್ನು ಕಟ್ಟುವುದರಿಂದ ವ್ಯಕ್ತಿಯಲ್ಲಿ ಅಹಂ ನಿರ್ಮಾಣವಾಗುತ್ತದೆ.
ಆ.ಇದನ್ನು ಕಟ್ಟುವುದು ಮಾನಸಿಕ, ಹಾಗೆಯೇ ಭಾವನಿಕ ಸ್ತರದ್ದಾಗಿದೆ ಮತ್ತು ‘ಅದರಿಂದ ಗೆಳೆತನ ನಿರ್ಮಾಣವಾಗುತ್ತದೆ’, ಎಂಬುದು ಒಂದು ಅಂಧಶ್ರದ್ಧೆಯೇ ಆಗಿದೆ.

೨. ಕಡಗ
ಅ.ಇದು ತಾಮ್ರದ್ದಾಗಿರುತ್ತದೆ. ಆದುದರಿಂದ ಇದರಲ್ಲಿ ಮಾರಕ ಶಕ್ತಿ ನಿರ್ಮಾಣವಾಗುತ್ತದೆ, ಹಾಗೆಯೇ ತಾಮ್ರವು ಸಾತ್ತ್ವಿಕವಾಗಿರುವುದರಿಂದ ಕಡಗದಲ್ಲಿ ತಾರಕ ಶಕ್ತಿ ಮತ್ತು ಕೆಲವು ಪ್ರಮಾಣದಲ್ಲಿ ಚೈತನ್ಯವಿರುತ್ತದೆ.
ಆ.ಇದನ್ನು ಧರಿಸುವುದರಿಂದ ವ್ಯಕ್ತಿಯ ಶರೀರಸ್ವಾಸ್ಥ ವು ಉತ್ತಮವಾಗಿರುತ್ತದೆ.’
- ಸೌ.ಯೋಯಾ ವಾಲೆ, ಯುರೋಪ್, ಎಸ್.ಎಸ್.ಆರ್.ಎಫ್. (ಕಾರ್ತಿಕ ಶು.೮, ಕಲಿಯುಗ ವರ್ಷ ೫೧೧೩ ೩.೧೧.೨೦೧೧)

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಆಭರಣಗಳ ಶಾಸ್ತ್ರ')

No comments:

Post a Comment