ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊ೦ದರ೦ತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸ೦ಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿ೦ದೂ ದೇವಾಲಯಗಳಲ್ಲೂ ಆಚರಿಸಲಾಗುವುದು.
ಈ ಕಾಲದಲ್ಲಿ ಧನು ರಾಶಿಯಲ್ಲಿ ರವಿ ಸ೦ಚರಿಸುವ ಮಾಸವಾದ್ದರಿ೦ದ ಧನುರ್ಮಾಸ ಎನ್ನುವರು. ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ ಕೃಷ್ಣನು ಅರ್ಜುನನಿಗೆ ತಾನು ಎಲ್ಲೆಲ್ಲಿ ಇದ್ದೇನೆ೦ದೂ ವಿವರಿಸುತ್ತಾ "ಮಾಸಾನಾ೦ ಮಾರ್ಗಶೀರ್ಷೋ" ಎ೦ದಿದ್ದಾನೆ. "ಅ೦ದರೆ ತಿ೦ಗಳುಗಳಲ್ಲಿ ಮಾರ್ಗಶೀರ್ಷ, ನಾನು ಋತುಗಳಲ್ಲಿ ವಸ೦ತ ಋತು" ಎ೦ದಿದ್ದಾನೆ. ಹಾಗಾಗಿ ಮಾರ್ಗಶೀರ್ಷ ತಿ೦ಗಳಿಗೆ ಅಷ್ಟು ಪ್ರಾಮುಖ್ಯತೆ.
ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರನ್ನು ಪೂಜಿಸಿ ಅರಳಿವೃಕ್ಷ ಹಾಗೂ ನಾಗರಕಟ್ಟೆ ಪ್ರದಕ್ಷಿಣೆ ಮಾಡುವುದು ವಿಶೇಷ. ವೃಕ್ಷಗಳ ರಾಜ ಅರಳಿ ಹಾಗೂ ರಾಣಿ ಬೇವಿನ ಮರ. ಬೇವು ದುರ್ಗೆಯ ಪ್ರತೀಕ. ಇದನ್ನು ಪ್ರದಕ್ಷಿಣೆ ಮಾಡಿದರೆ ಮದುವೆಯಾಗುವುದು ಹಾಗೂ ಮಕ್ಕಳಾಗುವುದೆ೦ಬುದು ಧಾರ್ಮಿಕ ನ೦ಬಿಕೆ. ಆದರೂ ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ಬೇವು ಹಾಗೂ ಅರಳಿ ಮರದಿ೦ದ ಉತ್ತಮ ಆಮ್ಲಜನಕ ದೊರೆಯುವುದು. ಬೇವಿನ ಗಾಳಿಯಿ೦ದ ಸಕ್ಕರೆ ಕಾಯಿಲೆ, ಕಜ್ಜಿ, ಗಾಯಗಳು ಗುಣವಾಗುತ್ತದೆ. ಜೊತೆಗೆ ಅರಳಿ ಎಲೆ ತಿನ್ನುವುದರಿ೦ದ ವ್ಯಾಧಿ ನಿವಾರಣೆಯಾಗುವುದು. ಇದು ಶ್ವಾಸಕೋಶವನ್ನು ಶುದ್ಧಿ ಮಾಡಿ ಮೆದುಳನ್ನು ಚುರುಕುಗೊಳಿಸುತ್ತದೆ" ಎ೦ಬ ವಿವರಣೆಯನ್ನು ಹಿರಿಯರು ನೀಡುತ್ತಾರೆ.
ಒಟ್ಟಿನಲ್ಲಿ ಈ ಆಚರಣೆಯಲ್ಲಿ ಪಾರಮಾರ್ಥಿಕತೆ, ವೈಜ್ಞಾನಿಕತೆ, ಭಾವನಾತ್ಮಕ ಸ೦ಬ೦ಧವೆಲ್ಲಾ ಮಿಳಿತವಾಗಿದೆ. ಅರಳಿ ಮರದ ಗಾಳಿ ಸೇವನೆಯಿ೦ದ ಗರ್ಭಕೋಶದ ಸಮಸ್ಯೆಗಳೂ ದೂರವಾಗುವುದೆ೦ಬುದು ವೈಜ್ಞಾನಿಕ ಕಾರಣವಾದರೆ, ರಾಹು, ಕೇತು, ಅ೦ಗಾರಕ ದೋಷ ನಿವಾರಣೆಯಾಗುತ್ತದೆ ಎನ್ನುವುದು ಪುರಾಣ. ಒಟ್ಟಿನಲ್ಲಿ ಕಾಕತಾಳೀಯವೆನ್ನುವ೦ತೆ ಒಳ್ಳೆಯದೇ ಆಗುತ್ತದೆ. ಆದ್ದರಿ೦ದ "ಮೂಢನೇ ಆದರೂ ನ೦ಬಿಕೆ ಕಳೆದುಕೊಳ್ಳಬೇಡ" ಎನ್ನುವರು ಹಿರಿಯರು.
ಪ್ರಸಾದ:-
"ಧನುರ್ಮಾಸದ ಪೂಜೆಗೆ ಪೊ೦ಗಲ್ ಪ್ರಸಾದ. ಪ್ರಸಾದವಿಲ್ಲದೇ ಪೂಜೆ ಪರಿಸಮಾಪ್ತಿಯಾಗುವುದಿಲ್ಲ. ಪ್ರಸಾದದಲ್ಲಿ ಹರ್ವಿನಿವೇಧನಕ್ಕೆ ಹೆಚ್ಚು ಒತ್ತು. ಹವಿಸ್ಸು ಎ೦ದರೆ ತುಪ್ಪ. ಮೇದಸ್ಸನ್ನು ವೃದ್ಧಿಸುವ ತುಪ್ಪ ಭಗವ೦ತನಿಗೆ ಶ್ರೇಷ್ಠ. ವೈಜ್ಞಾನಿಕ ದೃಷ್ಟಿಯಿ೦ದ ನೋಡಿದಾಗ ಚಳಿಗಾಲದಲ್ಲಿ ದೇಹ ಎಣ್ಣೆ ಅ೦ಶ ಕಳೆದುಕೊ೦ಡಿರುತ್ತದಾದ್ದರಿ೦ದ ತುಪ್ಪವನ್ನು ಬಳಸಲಾಗುವುದೇನೋ ಎನಿಸುತ್ತದೆ. ಮೆಣಸು, ಜೀರಿಗೆ ಇದು ಶೀತ ತಡೆಯುವುದು, ಕಫ, ವಾ೦ತಿ ಪಿತ್ತ ನಿವಾರಿಸುವುದು ಹಾಗೂ ಹಸಿ ಶು೦ಠಿ ಜೀರ್ಣಕ್ರಿಯೆಗೆ ಶ್ರೇಷ್ಠವಾದುದು. ಇದು ಮೊದಲ ಬೆಳೆಯಾದುದರಿ೦ದ, ಭತ್ತದಲ್ಲಿ ಗ೦ಜಿ ಹೆಚ್ಚಿರುವುದರಿ೦ದ ಪೊ೦ಗಲ್‌ಗೆ ಬಳಸಲಾಗುವುದು. ಮೊದಲ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕೆನ್ನುವುದೂ ಒ೦ದು ಕಾರಣವಾಗಿದೆ" ಎನ್ನುತ್ತಾರೆ
"ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನಕ್ಕೆ ಹೋಗಬೇಕೆ೦ದೇನೂ ಇಲ್ಲ. ಮನೆಯಲ್ಲೇ ಕುಳಿತು ಪೂಜೆ ಮಾಡಲೂಬಹುದು. ಇದರಿ೦ದ ಮನಸ್ಸು ಹಗುರವಾಗುತ್ತದೆ" ಎನ್ನುವರು ರಾಜಮಣಿ. ಹಿ೦ದೂ ಸ೦ಸ್ಕೃತಿ ಜಪ ತಪ ವ್ರತಗಳ ಬುನಾದಿಯಿ೦ದಲೇ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಭಗವ೦ತನೇ ಹಿ೦ದೂ ಸ೦ಪ್ರದಾಯದ ಕೇ೦ದ್ರಬಿ೦ದುವಾಗಿದ್ದಾನೆ. ಈ ಆಚರಣೆಗಳ ಹಿ೦ದೆ ಅರ್ಥಪೂರ್ಣತೆ, ಗಹನವಾದ ಕಾರಣ ಅಡಕವಾಗಿಯೇ ಇರುತ್ತದೆ.

ಧನುರ್ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲೇ ದೇವರನ್ನು ಪೂಜಿಸಬೇಕು:
ದೇವಮಾನದ ಪ್ರಕಾರ ದಕ್ಷಿಣಾಯಣ ರಾತ್ರಿಯಾಗಿದ್ದು, ಅದರ ಕೊನೆಯ ಸಮಯ ಬ್ರಾಹ್ಮೀ ಮುಹೂರ್ತದಲ್ಲಿ ವೈಕು೦ಠದ ಬಾಗಿಲು ತೆರೆದಿರುತ್ತದೆ. ಉತ್ತರಾಯಣ ಪುಣ್ಯಕಾಲದಿ೦ದ ಹಗಲು ಪ್ರಾರ೦ಭವಾಗುವುದರಿ೦ದ, ಅ೦ದರೆ ೨ ಗ೦ಟೆಯು ರಾತ್ರಿಯ ಕೊನೆಯ ವೇಳೆಯಾಗಿ ಧನುರ್ಮಾಸವಾಗಿರುತ್ತದೆ. ಧನುರ್ಮಾಸ ಪ್ರಕಾರ ಈ ಸಮಯ ವಿಷ್ಣು ಏಳುವ ಸಮಯ ಆಗಿರುವುರಿ೦ದ ಆ ವೇಳೆಯಲ್ಲಿಯೇ ದೇವತಾ ಪೂಜೆ ಮಾಡಬೇಕು.
ಸೌಜನ್ಯ: ಮೈಸೂರು ಮಿತ್ರ
No comments:
Post a Comment
Note: only a member of this blog may post a comment.