ವಾಸ್ತುವಿನಲ್ಲಿ ಧೂಪ ಹೇಗೆ ತೋರಿಸಬೇಕು?

ದೇವರಪೂಜೆಯ ನಂತರ ದೇವರಿಗೆ ಧೂಪ ತೋರಿಸುವ ಪದ್ಧತಿಯಿದೆ. ಧೂಪ ತೋರಿಸಿದರೆ ವಾಸ್ತುವಿನ ಶುದ್ಧಿಯಾಗುತ್ತದೆ. ದೇವರಿಗೆ ಸುಗಂಧಿತ ಧೂಪವು ಪ್ರಿಯವಾದ್ದರಿಂದ ಧೂಪ ತೋರಿಸಿದಾಗ ದೇವರು ಪ್ರಸನ್ನರಾಗುತ್ತಾರೆ. ಪ್ರಾತಃಕಾಲದಲ್ಲಿ ಧೂಪ ತೋರಿಸುವುದು ಸಾಧ್ಯವಾಗದಿದ್ದಲ್ಲಿ, ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದ ನಂತರವೂ ಧೂಪ ತೋರಿಸಬಹುದು.

ಧೂಪಕ್ಕಾಗಿ ಬೇಕಾಗುವ ಸಾಮಗ್ರಿಗಳು

ಎಂಟು-ಹತ್ತು ಇದ್ದಿಲು ಅಥವಾ ಎರಡು ಹಸುವಿನ ಬೆರಣಿಗಳು, ಬೆಂಕಿಯನ್ನು ಹಚ್ಚಲು ಧೂಪ ಪಾತ್ರೆ, ಇದ್ದಿಲನ್ನು ಉರಿಸಲು ಕರ್ಪೂರ ಅಥವಾ ತುಪ್ಪ, ಬೆಂಕಿಪೆಟ್ಟಿಗೆ, ಧೂಪ ಮತ್ತು ಕಾರ್ಡ್ ಬೋರ್ಡ್.

ಪ್ರತ್ಯಕ್ಷ ಕೃತಿ

ಧೂಪದ ಪಾತ್ರೆಯಲ್ಲಿ ಇದ್ದಿಲು ಅಥವಾ ಬೆರಣಿಯನ್ನು ಇಡಿರಿ. ಕರ್ಪೂರದ ಮಾಧ್ಯಮದಿಂದ ಅದನ್ನು ಉರಿಸಿರಿ. ಪ್ರಜ್ವಲಿತ ಬೆಂಕಿಯ ಮೇಲೆ ಧೂಪ ಹಾಕಿರಿ. ಈಗ ಧೂಪದ ಪಾತ್ರೆಯನ್ನು ವಾಸ್ತುವಿನ ಎಲ್ಲ ಕಕ್ಷೆಗಳಿಗೆ ಒಯ್ಯಿರಿ. ಆದರೆ ಗಮನದಲ್ಲಿಡಿರಿ, ಧೂಪವನ್ನು ಕೈಯಿಂದ ಹರಡಲೇಬೇಡಿ.

ಕೋಣೆಯಲ್ಲಿ ಧೂಪ ತೋರಿಸುವುದು

೧. ಧೂಪದ ಪಾತ್ರೆಯನ್ನು ಎಡಗೈಯಲ್ಲಿ ಹಿಡಿದುಕೊಳ್ಳಿರಿ.
೨. ಬಲಗೈಯಲ್ಲಿ ಬೀಸಣಿಕೆ ಹಿಡಿದು ಹೊರ ದಿಕ್ಕಿಗೆ ಬೀಸುತ್ತಾ ಹೊಗೆ ಹರಡಿರಿ.

ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ; ಆದರೆ ಪ್ರತಿದಿನ ಧೂಪ ತೋರಿಸುವುದು ಸಾಧ್ಯವಾಗದಿದ್ದರೆ ವಾರದಲ್ಲಿ ಒಮ್ಮೆಯಾದರೂ ಅವಶ್ಯವಾಗಿ ಧೂಪ ತೋರಿಸಿರಿ.

ಬೇವಿನ ಎಲೆ ಮತ್ತು ಧೂಪ ಅಥವಾ ಊದುಬತ್ತಿಯಿಂದ ವಾಸ್ತುಶುದ್ಧಿ ಹೇಗೆ ಮಾಡಬೇಕು ಎಂದು ಈ ವೀಡಿಯೋದಲ್ಲಿ ನೋಡಿ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯು ಪ್ರಕಟಿಸಿದ ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು ಈ ಗ್ರಂಥವನ್ನು ಓದಿರಿ.)

ಸಂಬಂಧಿತ ವಿಷಯಗಳು
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ಹೇಗಿರಬೇಕು?
ವಾಸ್ತುಶಾಸ್ತ್ರ ಎಂದರೇನು?
ವಾಸ್ತುಶಾಂತಿಯ ಮಹತ್ವ
ವಾಸ್ತು ಆನಂದದಾಯಕವಾಗಲು ಏನು ಮಾಡಬೇಕು ?

No comments:

Post a Comment