ಗ್ರಂಥ ಪರಿಚಯ - ನಮಸ್ಕಾರಗಳ ಯೋಗ್ಯ ಪದ್ಧತಿ

ದೇವರ ದರ್ಶನಕ್ಕೆ ಹೋದಾಗ ಅಥವಾ ಹಿರಿಯ ಹಾಗೂ ಸನ್ಮಾನನೀಯ ವ್ಯಕ್ತಿಗಳು ಭೇಟಿಯಾದಾಗ ನಮ್ಮ ಕೈಗಳು ನಮಗರಿವಿಲ್ಲದಂತೆಯೇ ಜೋಡಿಸಲ್ಪಡುತ್ತವೆ. ‘ನಮಸ್ಕಾರ’ವು ಹಿಂದೂಗಳ ಮನಸ್ಸಿನ ಮೇಲಿರುವ ಒಂದು ಸಾತ್ತ್ವಿಕ ಸಂಸ್ಕಾರವಾಗಿದೆ, ಸಮೃದ್ಧ ಹಿಂದೂ ಸಂಸ್ಕೃತಿಯ ವಂಶಪಾರಂಪರಿಕವಾಗಿ ಬಂದ ಒಂದು ಕೃತಿಯಾಗಿದೆ. ಭಕ್ತಿ ಭಾವ, ಪ್ರೇಮ, ಆದರ, ಲೀನತೆಗಳಂತಹ ದೈವೀಗುಣಗಳನ್ನು ವ್ಯಕ್ತಪಡಿಸುವ ಮತ್ತು ಈಶ್ವರೀ ಶಕ್ತಿಯನ್ನು ಪ್ರದಾನಿಸುವ ಒಂದು ಸಹಜ ಸುಲಭ ಧಾರ್ಮಿಕ ಕೃತಿಯೆಂದರೆ ನಮಸ್ಕಾರ.

ನಮಸ್ಕಾರದ ಅಧ್ಯಾತ್ಮಶಾಸ್ತ್ರೀಯ ಮಾಹಿತಿಯ ಅಭಾವದಿಂದ ಅಥವಾ ಹೆಚ್ಚುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಪ್ರಸ್ತುತ ಬಹಳಷ್ಟು ಜನರು ನಮಸ್ಕಾರದ ಬದಲು ಹಸ್ತಲಾಘವ (ಶೇಕ್‌ಹ್ಯಾಂಡ) ಮಾಡುತ್ತಾರೆ, ನಮಸ್ಕಾರ ಮಾಡಿದರೂ ಅದು ಕೇವಲ ಔಪಚಾರಿಕತೆಯಾಗಿರುತ್ತದೆ. ನಮಸ್ಕಾರವನ್ನು ಶ್ರದ್ಧೆಯಿಂದ ಮಾಡದಿದ್ದರೆ ನಮಸ್ಕಾರ ಮಾಡುವವರಿಗೆ ಅದರ ಲಾಭವು ಬಹಳ ಕಡಿಮೆ ಸಿಗುತ್ತದೆ. ಶ್ರದ್ಧೆಯೊಂದಿಗೆ ನಾವು ಮಾಡುವ ಧಾರ್ಮಿಕ ಕೃತಿಯು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದಲೂ ಯೋಗ್ಯವಾಗಿರುವುದು ಆವಶ್ಯಕವಾಗಿದೆ; ಏಕೆಂದರೆ ಇಂತಹ ಕೃತಿಯಿಂದಲೇ ನಮಗೆ ಪರಿಪೂರ್ಣ ಫಲ ಸಿಗುತ್ತದೆ. ಈ ಕಿರುಗ್ರಂಥದಲ್ಲಿನಮಸ್ಕಾರದ ವಿವಿಧ ಪದ್ಧತಿಗಳನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು, ಎಂದು ಹೇಳುವುದರ ಜೊತೆಗೆ ಅವುಗಳ ಹಿಂದಿನ ಶಾಸ್ತ್ರವನ್ನೂ ಹೇಳಲಾಗಿದೆ. ಶಾಸ್ತ್ರವು ತಿಳಿದರೆ ಕೃತಿಗೆ ಶ್ರದ್ಧೆಯ ಬಲಪ್ರಾಪ್ತವಾಗುತ್ತದೆ. ಇಂತಹ ಶ್ರದ್ಧಾಪೂರ್ಣ ಮತ್ತು ಯೋಗ್ಯ ಕೃತಿಯಿಂದ ಯೋಗ್ಯ ಫಲ ದೊರಕುತ್ತದೆ.

ನಮಸ್ಕಾರ ಮಾಡುವಾಗ ನಮ್ಮಿಂದ ತಪ್ಪುಗಳಾದರೆ ನಮಸ್ಕಾರದಿಂದ ಸಿಗುವ ಫಲಪ್ರಾಪ್ತಿಯು ಕಡಿಮೆಯಾಗುತ್ತದೆ. ಇದಕ್ಕಾಗಿ ನಮಸ್ಕಾರ ಮಾಡುವಾಗ ಏನು ಮಾಡಬಾರದು ಎಂಬುದನ್ನೂ ಈ ಕಿರುಗ್ರಂಥದಲ್ಲಿ ಶಾಸ್ತ್ರೀಯ ಕಾರಣ ಗಳೊಂದಿಗೆ ಹೇಳಲಾಗಿದೆ, ಹಾಗೆಯೇ ಯಾರಿಗೆ ನಮಸ್ಕಾರ ಮಾಡಬಾರದು ಎನ್ನುವುದರ ಬಗ್ಗೆಯೂ ಹೇಳಲಾಗಿದೆ.

ಈ ಕಿರುಗ್ರಂಥದಲ್ಲಿ ನೀಡಿರುವ ನಮಸ್ಕಾರದ ಪದ್ಧತಿಗಳು ಎಲ್ಲರಿಗೂ ಯೋಗ್ಯರೀತಿಯಲ್ಲಿ ತಿಳಿಯಲಿ ಮತ್ತು ಅವರಿಂದ ಅಂತಹ ಕೃತಿಗಳೇ ಆಗಲಿ, ಅದರಂತೆಯೇ ಮುಂದಿನ ಪೀಳಿಗೆಯ ಮೇಲೆಯೂ ಇದರ ಸಂಸ್ಕಾರವಾಗಲಿ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ. - ಸಂಕಲನಕಾರರು

No comments:

Post a Comment

Note: only a member of this blog may post a comment.