ಬಹಳಷ್ಟು ಜನರ ನಾಮಜಪವು ಏಕಾಗ್ರತೆಯಿಂದ ಆಗುವುದಿಲ್ಲ. ವಿಶೇಷವಾಗಿ ಕೆಟ್ಟ ಶಕ್ತಿಗಳ ತೊಂದರೆ ಇರುವವರಿಗಂತೂ ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಸಂಘರ್ಷ ಮಾಡಬೇಕಾಗುತ್ತದೆ; ಏಕೆಂದರೆ ತೊಂದರೆ ಇರುವುದರಿಂದ ನಾಮಜಪ ಮಾಡುವಾಗ ಮನಸ್ಸಿನಲ್ಲಿ ಬಹಳ ವಿಚಾರಗಳು ಬರುತ್ತವೆ ಅಥವಾ ವೇದನೆಯಾಗುವುದರತ್ತ ಹೆಚ್ಚು ಗಮನ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ನಾಮ ಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣವಾಗಿ ಆಗಲು ಮುಂದೆ ಹೇಳಿದ ಪ್ರಯತ್ನಗಳನ್ನು ಮಾಡಿ ನೋಡಬೇಕು. ಯಾವ ಪ್ರಯತ್ನದಲ್ಲಿ ತಮ್ಮ ಮನಸ್ಸು ಹೆಚ್ಚು ಸ್ಥಿರವಾಗಿರುವುದೋ, ಆ ಪ್ರಯತ್ನವನ್ನು ಹೆಚ್ಚು ಮಾಡಬೇಕು. ಈ ರೀತಿ ಪ್ರಯತ್ನಿಸುವಾಗ ಬದಲಾಯಿಸಿ ಬದಲಾಯಿಸಿ ಮಾಡಬಹುದು. ಈ ಪ್ರಯತ್ನ, ಅಂದರೆ ನಾಮಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಮಾಡಲು ಕೆಲವು ಉದಾಹರಣೆ ಮುಂದೆ ಕೊಡಲಾಗಿದೆ. ಈ ಪ್ರಯತ್ನದ ಜೊತೆ ದೇವರು ಸೂಚಿಸುವ ಪ್ರಯತ್ನವನ್ನೂ ಅವಶ್ಯವಾಗಿ ಮಾಡಬೇಕು.
ಏಕಾಗ್ರತೆಯನ್ನು ಸಾಧಿಸಲು ಕೆಲವು ಮಾರ್ಗಗಳು / ಆಲಂಬನೆ
ಅ. ಧ್ವನಿಮುದ್ರಿಕೆ/ಸಂಚಾರಿವಾಣಿ ಇವುಗಳಲ್ಲಿ ನಾಮಜಪದ ಧ್ವನಿ ಮುದ್ರಿಸಿ ಆ ನಾಮಜಪದ ಜೊತೆಯಲ್ಲಿಯೇ ಸ್ವತಃ ನಾಮಜಪ ಮಾಡಬೇಕು. ಸಾಧ್ಯವಾದರೆ ಸಂತರ ಹಾಗೂ ಉನ್ನತ ಸಾಧಕರ ಧ್ವನಿಯಲ್ಲಿ ಮುದ್ರಿಸಿಟ್ಟುಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಸ್ವತಃ ಧ್ವನಿ ಮುದ್ರಿಸಿಟ್ಟುಕೊಳ್ಳಬೇಕು.
ಆ. ನಾಮಜಪ ಮಾಡುವಾಗ ಪ.ಪೂ. ಭಕ್ತರಾಜ ಮಹಾರಾಜರ (ಸನಾತನ ಸಂಸ್ಥೆಯ ಪ್ರೇರಣಾಸ್ಥಾನ) ಭಜನೆ ಆಲಿಸಬೇಕು.
೧.ಭಜನೆಯಲ್ಲಿ ಅರ್ಥದ ಕಡೆಗೆ ಗಮನ ನೀಡಿ ನಾಮಜಪ ಮಾಡಬೇಕು.
೨.ಭಜನೆಯಲ್ಲಿ ಬಾಬಾರವರ ಸ್ಥಿತಿ ಸ್ವತಃ ಅನುಭವಿಸುತ್ತಿದ್ದೇನೆ, ಎಂಬ ಭಾವವಿಟ್ಟು ನಾಮಜಪ ಮಾಡಬೇಕು.
ಇ. ನಾಮಜಪ ಮಾಡುವಾಗ ದೇವತೆ/ಪ.ಪೂ. ಭಕ್ತರಾಜ ಮಹಾರಾಜರ/ಪ.ಪೂ.ಡಾಕ್ಟರರ ರೂಪ ಕಣ್ಣೆದುರಿಗೆ ತರಬೇಕು.
ಈ. ನಾಮಜಪ ಮಾಡುವಾಗ ನಾಮಜಪದಲ್ಲಿನ ಅಕ್ಷರ ಕಣ್ಣೆದುರಿಗೆ ತಂದು ಅವನ್ನು ಓದಬೇಕು ಅಥವಾ ಅದರ ಮೇಲೆ ಗಮನ ವಿಡಬೇಕು. ನಾಮಜಪದ ಅಕ್ಷರಗಳ ಒಳಗೆ ಹಾಗೂ ‘ಓಂ’ನ ಒಳಗೆ ನಾವು ಹೋಗುತ್ತಿದ್ದೇವೆ/ಅದರೊಂದಿಗೆ ಏಕರೂಪವಾಗುತ್ತಿದ್ದೇವೆ, ಎಂದು ಕಲ್ಪನೆ ಮಾಡಬೇಕು.
ಉ. ನಾಮಜಪ ಒಂದೇ ಲಯದಲ್ಲಿ ಮಾಡಲು ಪ್ರಯತ್ನಿಸಬೇಕು. ಒಂದೇ ಸಮನಾಗಿ ಮಾಡುವಾಗ ಕೆಲವೊಮ್ಮೆ ಮನಸ್ಸು ಸ್ವಲ್ಪ ಪ್ರಮಾಣದಲ್ಲಿ ಬೇರೆ ಕಡೆಗೆ ಹೋಗುತ್ತದೆ.
ಊ. ನಾಮಜಪವನ್ನು ಶೀಘ್ರಗತಿಯಿಂದ ಮಾಡಲು ಪ್ರಯತ್ನಿಸಬೇಕು. ಇದರಿಂದ ನಾಮ ಜಪದ ಸಮಯದಲ್ಲಿ ಬೇರೆ ವಿಚಾರಗಳು ಮನಸ್ಸಿನಲ್ಲಿ ಬರಲು ಅವಕಾಶವೇ ಇರುವುದಿಲ್ಲ!
ಎ. ನಾಮರೂಪದ ಒಂದೊಂದು ಹೂ/ತುಳಸಿದಳ ನಾನು ಶ್ರೀಕೃಷ್ಣನ ಚರಣಕ್ಕೆ ಅರ್ಪಿಸುತ್ತಿದ್ದೇನೆ, ಎಂಬ ಭಾವ ಇಡಬೇಕು.
ಐ. ಒಂದೊಂದು ನಾಮಜಪ ಮಾಡುತ್ತ ನಾನು ಕೃಷ್ಣನ ಸಮೀಪ ಹೋಗುತ್ತಿದ್ದೇನೆ, ಎಂಬ ಭಾವವಿಡಬೇಕು.
ಓ. ಶ್ರೀಕೃಷ್ಣನು ನನ್ನ ತಲೆಯ ಮೇಲೆ ಕೈ ಇಟ್ಟಿದ್ದಾನೆ ಹಾಗೂ ಅಲ್ಲಿಂದ ನನ್ನ ಶರೀರದೊಳಗೆ ಚೈತನ್ಯ ಹೋಗುತ್ತಿದೆ, ಎಂಬ ಭಾವವಿಡಬೇಕು.
ಔ. ನಾಮಜಪ ಮಾಡುವಾಗ ನನ್ನ ದೇಹದಲ್ಲಿ ನಾಮರೂಪಿ ಚೈತನ್ಯ ತುಂಬುತ್ತಿದೆ, ಎಂಬ ಭಾವವಿಡಬೇಕು
ಅಂ. ಪ್ರತಿಯೊಂದು ನಾಮದೊಳಗಿನ ಚೈತನ್ಯ ನನ್ನ ಪ್ರತಿಯೊಂದು ಅವಯವದಲ್ಲಿ, ಕಣಕಣಗಳಲ್ಲಿ ಹೋಗುತ್ತಿವೆ, ಎಂಬ ಭಾವಇಡಬೇಕು.
ಕ. ನಾಮಜಪ ಮಾಡುವಾಗ ಮೊದಲಿಗೆ ಹೊಕ್ಕುಳಿನ ಜಾಗದಲ್ಲಿ ಮನಸ್ಸು ಏಕಾಗ್ರ ಮಾಡಿ ನಾಮಜಪದಲ್ಲಿನ ಮೊದಲ ಅಕ್ಷರ ಉಚ್ಚರಿಸುವುದು. ಹೊಕ್ಕುಳಿಗಿಂತ ಮೇಲೆ ಸಹಸ್ರಾರ ಚಕ್ರದ ವರೆಗೆ ಬರುತ್ತ ನಾಮಜಪದಲ್ಲಿನ ಮುಂದು ಮುಂದಿನ ಅಕ್ಷರ ಉಚ್ಚರಿಸಬೇಕು.
ಖ. ನಾಮಜಪ ಮಾಡುವಾಗ ಹೃದಯದಲ್ಲಿ ನಾನು ನಾಮಜಪದ ಸ್ಪಂದನವನ್ನು ಅನುಭವಿಸುತ್ತಿದ್ದೇನೆ, ಎಂಬ ಭಾವವಿಡಬೇಕು.
ಗ. ನಾಮಜಪ ಮಾಡುವಾಗ ನನ್ನೊಳಗೆ ದೇವತೆಯ ವಾಸವಿದೆ ಹಾಗೂ ದೇವತೆಯೇ ನನ್ನ ದೇಹದೊಳಗಿಂದ ನಾಮಜಪ ಮಾಡುತ್ತಿದ್ದಾರೆ, ಎಂಬ ಭಾವವಿಡಬೇಕು.
ಘ. ನಾಮವನ್ನು ಶ್ವಾಸಕ್ಕೆ ಜೋಡಿಸಿ ನಾಮಜಪ ಮಾಡುವ ಪ್ರಯತ್ನ ಮಾಡಬೇಕು, ಇದು ಕಠಿಣವಿದೆ; ಆದುದರಿಂದ ಮೊದಲು ಬೇರೆ ಪ್ರಯತ್ನಗಳಿಂದ ಯಶಸ್ಸು ದೊರಕಿದ ನಂತರವೇ ಈ ಪ್ರಯತ್ನ ಮಾಡಬೇಕು.
ನಾಮಜಪ ಏಕಾಗ್ರತೆಯಿಂದ ಆಗಲು ಪೂರಕ ವಿಚಾರ/ಭಾವ
ಅ. ನಾಮಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಆಗಲು ಆಗಾಗ ದೇವರಿಗೆ ಪ್ರಾರ್ಥನೆ ಮಾಡಬೇಕು.
ಆ. ನಾಮಜಪ ಮಾಡುವಾಗ ಆಗಾಗ ನಮಸ್ಕಾರದ ಮುದ್ರೆ ಮಾಡಬೇಕು. ಇದರಿಂದ ಶರಣಾಗತಿಯ ಭಾವ ನಿರ್ಮಾಣ ವಾಗುವುದರಿಂದ ನಾಮಜಪ ಭಾವಪೂರ್ಣ ವಾಗಲು ನೆರವಾಗುತ್ತದೆ.
ಇ. ನಾಮಜಪ ಮಾಡುವಾಗ ಆಗಾಗ ಬಾಬಾರವರ ಭಜನೆಯಲ್ಲಿನ ‘ಮನ ಗುಂಗೊ ನಾಮಾಪಾಯಿ | ಶರೀರಾಚೆ ಭಾನ ನಾ ರಾಹಿ || (ಮನಸ್ಸು ನಾಮದಲ್ಲಿ ರಮಿಸಲಿ | ಶರೀರದ ಅರಿವು ಇಲ್ಲದಿರಲಿ ||)’ ಎಂಬ ಸಾಲುಗಳನ್ನು ನೆನಪಿಸಬೇಕು. ಇದರಿಂದ ನಾಮಜಪ ಕೇವಲ ಮಾಡಬೇಕೆಂದು ಮಾಡದೇ, ನಾಮಜಪಿಸುವಾಗ ತನ್ನನ್ನು ಮರೆಯುವ ಧ್ಯೇಯದ ವರೆಗೆ ತಲುಪ ಬೇಕು’, ಎಂದು ಮನಸ್ಸಿನ ಮೇಲೆ ಬಿಂಬಿಸ ಬೇಕಾಗುತ್ತದೆ.
ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸುತ್ತಿರುವಾಗ ದೇವರು ಕೆಲವು ಅಂಶಗಳನ್ನು ಕಲಿಸಿದರು. ಆ ಅಂಶಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ದೇವರು ಪ್ರತಿಯೊಬ್ಬರಿಗೂ ಅವರವರ ಸಾಧನಾ ಮಾರ್ಗದಂತೆ ಮತ್ತು ಪ್ರಕೃತಿಯಂತೆ ಬೇರೆ ಬೇರೆ ಅಂಶಗಳನ್ನು ಕಲಿಸುತ್ತಿರುತ್ತಾನೆ. ಈ ಲೇಖನದಿಂದ ನಾಮಜಪ-ಸಾಧನೆಯ ಪ್ರವಾಸವು ಸಾಮಾನ್ಯವಾಗಿ ಹೇಗಿರುತ್ತದೆ, ಎಂಬುದರ ಕಲ್ಪನೆಯು ಬರುತ್ತದೆ. ‘ಈ ಲೇಖನದಿಂದ ವಿಶೇಷವಾಗಿ ತೊಂದರೆಯಿರುವ ಸಾಧಕರಿಗೆ ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಪ್ರೇರಣೆ ಮತ್ತು ದಿಶೆ ದೊರಕಲಿ,’ ಎಂದು ಪ.ಪೂ. ಡಾಕ್ಟರರ ಚರಣಗಳಲ್ಲಿ ಪ್ರಾರ್ಥನೆ.
೧. ನಾಮಜಪ ಏಕಾಗ್ರತೆಯಿಂದಾಗಲು ‘ಆಲಂಬನೆ’ ಮಾಡುವ ಹಂತಗಳು
‘ಆಲಂಬನೆ’ ಅಂದರೆ ಅನುಸಂಧಾನವಿಡುವ ಒಂದು ಮಾಧ್ಯಮ. ಕೇವಲ ನಾಮಜಪವನ್ನು ಮಾಡುವ ಬದಲು ಯಾವುದಾದರೊಂದು ‘ಆಲಂಬನೆ’ಯನ್ನಿಟ್ಟು ಅದರ ಆಧಾರದಲ್ಲಿ ಮಾಡಿದರೆ ಮನಸ್ಸು ನಾಮಜಪದಲ್ಲಿ ತಕ್ಷಣ ಏಕಾಗ್ರವಾಗುತ್ತದೆ.
ಹಂತ ೧
ಯಾವುದಾದರೊಂದು ಘಟಕದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ದೃಷ್ಟಿಯಿಟ್ಟು ಆಲಂಬನೆ ಮಾಡುವುದು : ಇಲ್ಲಿ ಆಲಂಬನೆಯಲ್ಲಿ ಯಾವುದಾದರೊಂದು ಘಟಕದ ಮೇಲೆ ದೃಷ್ಟಿ ಏಕಾಗ್ರ ಮಾಡಲು ಪ್ರಯತ್ನಿಸುವುದಿರುತ್ತದೆ. ದೃಷ್ಟಿ ಏಕಾಗ್ರ ವಾದರೆ ಮನಸ್ಸೂ ಏಕಾಗ್ರವಾಗುತ್ತದೆ. ಪ್ರತ್ಯಕ್ಷ ದೃಷ್ಟಿಯಿಟ್ಟು ಆಲಂಬನೆ ಮಾಡುವುದೆಂದರೆ ಕಣ್ಣು ತೆರೆದಿಟ್ಟು ಯಾವುದಾದರೊಂದು ಘಟಕಕ್ಕೆ ಉದಾ. ಓಂಅನ್ನು ನೋಡುವುದು. ಪರೋಕ್ಷ ದೃಷ್ಟಿಯಿಟ್ಟು ಆಲಂಬನೆ ಮಾಡುವುದೆಂದರೆ ಕಣ್ಮುಚ್ಚಿ ಯಾವುದಾದ ರೊಂದು ಘಟಕವನ್ನು ಉದಾ. ಓಂಅನ್ನು ನೋಡುವುದು, ಅಂದರೆ ಕಣ್ಣಿನ ದೃಷ್ಟಿಯೆದುರು ಓಂ ಅನ್ನು ತರಲು ಪ್ರಯತ್ನಿಸುವುದು.
ಹಂತ ೨
ಯಾವುದಾದರೊಂದು ಘಟಕದ ಮೇಲೆ ಆಲಂಬನೆ ಮಾಡುತ್ತಿದ್ದೇನೆ, ಎಂದು ಕೇವಲ ವಿಚಾರ ಮಾಡುವುದು: ಇದರಲ್ಲಿ ಯಾವುದಾದರೊಂದು ಘಟಕದ ಮೇಲೆ ದೃಷ್ಟಿಯಿಟ್ಟು ಮನಸ್ಸನ್ನು ಏಕಾಗ್ರ ಮಾಡಬೇಕೆಂದೇನಿಲ್ಲ, ಆದರೆ ಕೇವಲ ಮನಸ್ಸಿನಿಂದ ಆಲಂಬನೆಯ ವಿಚಾರ ಮಾಡಿದರೂ ಮನಸ್ಸು ಏಕಾಗ್ರವಾಗುತ್ತದೆ. ಇದರ ಒಂದು ಉದಾಹರಣೆಯೆಂದರೆ 'ಓಂ'ನೊಂದಿಗೆ ಏಕಾಗ್ರವಾಗಲಿಕ್ಕಿದೆ, ಎಂದು ಕೇವಲ ವಿಚಾರ ಮಾಡಿದರೂ ಮನಸ್ಸು ಏಕಾಗ್ರವಾಗುತ್ತದೆ.
ಹಂತ ೩
ಯಾವುದೇ ಆಲಂಬನೆಯ ಆಧಾರವಿಲ್ಲದೆ ಮನಸ್ಸನ್ನು ಏಕಾಗ್ರಗೊಳಿಸುವುದು: ಇದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಲು ಸ್ಥೂಲದಿಂದ ಆಲಂಬನೆ ಮಾಡುವುದು ಅಥವಾ ಮನಸ್ಸಿನಿಂದ ಆಲಂಬನೆಯ ವಿಚಾರ ಮಾಡುವುದು, ಇವುಗಳ ಆಧಾರ ಬೇಕೆಂದಿಲ್ಲ. ನಾಮಜಪ ಮಾಡಲು ಕುಳಿತರೆ ಮನಸ್ಸು ತನ್ನಿಂತಾನೆ ಏಕಾಗ್ರವಾಗುತ್ತದೆ.
೨. ನಾಮಜಪ ಏಕಾಗ್ರತೆಯಿಂದ ಮಾಡುವ ಪ್ರಕ್ರಿಯೆಯಲ್ಲಿನ ಹಂತಗಳು
೧. ಆಲಂಬನೆಯ ಸ್ಥಿತಿ: ತಾವು ಮನಸ್ಸಿನೊಂದಿಗೆ ನಿರ್ಧರಿಸಿದ ಆಲಂಬನೆಯ ಆಧಾರದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಬೇಕು.
೨. ಮನಸ್ಸಿನ ಏಕಾಗ್ರತೆಯ ಸ್ಥಿತಿ: ಆಲಂಬನೆಯ ಸಹಾಯದಿಂದ ನಾಮಜಪದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏಕಾಗ್ರತೆ ಸಾಧಿಸಲಾಗುತ್ತದೆ. ಈ ಸ್ಥಿತಿಯಲ್ಲಿ ಒಂದೆಡೆ ನಾಮಜಪ ಏಕಾಗ್ರತೆಯಿಂದ ಆಗುತ್ತಿರುವಾಗ ಇನ್ನೊಂದೆಡೆ ಬಾಹ್ಯಮನಸ್ಸಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಚಾರ ಬರುತ್ತದೆ. ಆದರೆ ಆ ವಿಚಾರಗಳು ಹೆಚ್ಚು ಸಮಯ ಉಳಿಯುವುದಿಲ್ಲ. ಅದರಿಂದ ನಾಮಜಪದ ಏಕಾಗ್ರತೆಯಲ್ಲಿ ವ್ಯತ್ಯಯವಾಗುವುದಿಲ್ಲ.
ಹಂತ ೨
೧. ತ್ರಾಟಕದ ಸ್ಥಿತಿ : ಹಂತ ಒಂದರಲ್ಲಿ ಆಲಂಬನೆಯ ಆಧಾರದಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾದ ನಂತರ ದೇವರು ಮುಂದುಮುಂದಿನ ಆಲಂಬನೆಯನ್ನು ಸೂಚಿಸುತ್ತಾನೆ, ಉದಾ. ನಾಮಜಪ ಮಾಡುವಾಗ ಯಾವುದಾದರೊಂದು ಬಿಂದು ಅಥವಾ ಪ್ರಕಾಶ ಕಾಣುತ್ತದೆ ಅಥವಾ ಯಾವುದಾದರೊಂದು ಅನುಭೂತಿ ಬರುತ್ತದೆ, ಉದಾ.‘ದೈವೀ ನಾದ ಕೇಳಿಸುತ್ತದೆ’, ಹೀಗಾದರೆ ಆ ಹೊಸ ಆಲಂಬನೆಯಲ್ಲಿ ಗಮನವಿರಿಸಬೇಕು. ಆಲಂಬನೆಯ ಬಗ್ಗೆ ದೇವರೇ ಮುಂದಿನ ಮಾರ್ಗ ತೋರಿಸುತ್ತಿರುವುದರಿಂದ ಅದರ ಮೇಲೆ ಶ್ರದ್ಧೆಯಿಟ್ಟು ಮುಂದಿನ ಪ್ರವಾಸ ಮಾಡಬೇಕು.
೨. ಮನಸ್ಸಿನ ಏಕಾಗ್ರತೆಯ ಸ್ಥಿತಿ : ದೇವರ ಕೃಪೆಯಿಂದ ಮುಂದಿನ ಆಲಂಬನೆಯ ಮೇಲೆ ಗಮನವಿರಿಸುವುದರಿಂದ ಏಕಾಗ್ರತೆ ದೃಢವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸಿನಲ್ಲಿ ವಿಚಾರವೂ ಬರುವುದಿಲ್ಲ. ಕೆಲವೊಮ್ಮೆ ತಾವೇ ನಿರ್ವಾತ ಟೊಳ್ಳಾಗಿದ್ದೇವೆ’, ಎಂಬಂತಹ ಅನುಭೂತಿ ಬಂದು ತಮ್ಮ ಸ್ವಂತದ ಅಸ್ತಿತ್ವವನ್ನೇ ಮರೆಯುತ್ತೇವೆ.
ವಿಶ್ಲೇಷಣೆ : ನಿರ್ವಾತ ಟೊಳ್ಳಿನಂತೆ ಅನುಭವಿಸುವುದು ಅಂದರೆ, ‘ಶಿವದಶೆ (ಎಲ್ಲವೂ ಶೂನ್ಯವಿದೆ)’ ಎಂದು ಅನುಭವಿಸುವುದು. ಪ.ಪೂ.ಭಕ್ತರಾಜ ಮಹಾರಾಜರು (ಬಾಬಾ) ಸಹಜಸ್ಥಿತಿಯಲ್ಲಿರುವಾಗ ಶೇ.೯೦ ರಷ್ಟು ಸಮಯ ಶಿವದಶೆಯಲ್ಲಿ ಇರುತ್ತಿದ್ದರು. ಪ.ಪೂ. ಡಾಕ್ಟರರು ಶೇ.೫೦ ರಷ್ಟು ಸಮಯ ಶಿವದಶೆಯಲ್ಲಿರುತ್ತಾರೆ ಮತ್ತು ಶೇ.೫೦ ರಷ್ಟು ಸಮಯ ಅವರು ಕಾರ್ಯಕ್ಕಾಗಿ ಜೀವದಶೆಗೆ ಬರಬೇಕಾಗುತ್ತದೆ. ನಾಮಜಪ ಏಕಾಗ್ರತೆಯಿಂದ ಮಾಡುವಾಗ ತಮಗೆ ಕೆಲವೊಮ್ಮೆ ಧ್ಯಾನಾವಸ್ಥೆ ಪ್ರಾಪ್ತವಾಗುವುದರಿಂದ ಕೇವಲ ಸ್ವಲ್ಪ ಸಮಯ ಶಿವದಶೆ ಅನುಭವಿಸಲು ಸಾಧ್ಯವಾಗುತ್ತದೆ. ಪ.ಪೂ. ಡಾಕ್ಟರರಿಗೆ ಸಹಜ ಸ್ಥಿತಿಯಲ್ಲಿಯೂ ಅಖಂಡವಾಗಿ ಶಿವದಶೆ ಅನುಭವಿಸಲು ಸಾಧ್ಯವಿದೆ, ಇದರಿಂದ ಅವರ ಮಹಿಮೆಯ ಇನ್ನೊಂದು ಹಂತ ಗಮನಕ್ಕೆ ಬರುತ್ತದೆ. - ಪೂಜ್ಯ ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಸಂಬಂಧಿತ ವಿಷಯಗಳು
ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!
while doing japa i will feel like i am going to a black space after few mintutes i feel afraid i will open my eyes.. i feel like some people are there in my back why this will happen
ReplyDelete