ಜೀವನದಲ್ಲಿ ಫಟಿಸುವ ವಿಷಯಗಳು ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ ಎಂಬ ಎರಡು ವಿಧಗಳಿಂದ ಫಟಿಸುತ್ತಿರುತ್ತವೆ.
ಅ. ಕ್ರಿಯಮಾಣಕರ್ಮ:
ಯಾವುದಾದರೊಂದು ಪ್ರಸಂಗದಲ್ಲಿ ಏನು ವಿಚಾರ ಮಾಡಬೇಕು, ಹೇಗೆ ವರ್ತಿಸಬೇಕು ಏನು ಮಾತನಾಡಬೇಕು ಇತ್ಯಾದಿಗಳು ಯಾವಾಗ ಪೂರ್ಣತಃ ನಮ್ಮ ಕೈಯ್ಯಲ್ಲಿಯೇ ಇರುತ್ತವೆಯೋ, ಆಗ ಮನುಷ್ಯನು ತನ್ನ ಮನಸ್ಸಿನಂತೆ ಅಥವಾ ಬುದ್ಧಿಯಂತೆ ವರ್ತಿಸುತ್ತಾನೆ. ಇದಕ್ಕೆ ‘ಕ್ರಿಯಮಾಣ’ ಕರ್ಮ ಎನ್ನುತ್ತಾರೆ. ಕಲಿಯುಗದಲ್ಲಿನ ಸದ್ಯದ ಕಾಲದಲ್ಲಿ ಒಟ್ಟು ಕರ್ಮದ ಪೈಕಿ ಶೇ. ೩೫ ರಷ್ಟು ಕರ್ಮವು ಕ್ರಿಯಮಾಣ ಕರ್ಮವಾಗಿದೆ.
ಆ. ಪ್ರಾರಬ್ಧ ಕರ್ಮ:
ಯಾವುದಾದರೊಂದು ಪ್ರಸಂಗದಲ್ಲಿ ಏನು ವಿಚಾರ ಮಾಡಬೇಕು, ಹೇಗೆ ವರ್ತಿಸಬೇಕು, ಏನು ಮಾತನಾಡಬೇಕು ಇತ್ಯಾದಿಗಳು ಯಾವಾಗ ನಮ್ಮ ಕೈಯ್ಯಲ್ಲಿ ಇರುವುದಿಲ್ಲವೋ ಮತ್ತು ಈ ವಿಷಯಗಳು ನಮ್ಮಿಂದ ತಾವಾಗಿಯೇ ಘಟಿಸುತ್ತವೆಯೋ, ಆಗ ಅವುಗಳಿಗೆ ‘ಪ್ರಾರಬ್ಧಕರ್ಮ’ ಎನ್ನುತ್ತಾರೆ. ಸದ್ಯದ ಕಾಲದಲ್ಲಿ ಒಟ್ಟು ಕರ್ಮದ ಪೈಕಿ ಶೇ.೬೫ ರಷ್ಟು ಕರ್ಮವು ಪ್ರಾರಬ್ಧಕರ್ಮವಾಗಿದೆ.
ಇ. ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ ಇವುಗಳಲ್ಲಿನ ವ್ಯತ್ಯಾಸ ತಿಳಿಯದಿರುವುದು: ಯಾವುದಾದರೊಂದು ವರ್ತನೆಯು ಕ್ರಿಯಮಾಣ ಕರ್ಮದಿಂದಾಗುತ್ತಿದೆಯೋ ಅಥವಾ ಪ್ರಾರಬ್ಧಕರ್ಮದಿಂದಾಗುತ್ತಿದೆಯೋ ಎಂಬುದು ಆಧ್ಯಾತ್ಮಿಕ ಉನ್ನತಿ ಹೊಂದಿದ ನಂತರ ಸೂಕ್ಷ್ಮ ವಿಷಯಗಳು ಅಂದರೆ, ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ವಿಷಯ ತಿಳಿಯತೊಡಗಿದ ನಂತರವೇ ತಿಳಿಯುತ್ತದೆ. ಸಾಮಾನ್ಯ ವ್ಯಕ್ತಿಗೆ ಕ್ರಿಯಮಾಣ ಕರ್ಮ ಮತ್ತು ಪ್ರಾರಬ್ಧ ಕರ್ಮಗಳಲ್ಲಿನ ವ್ಯತ್ಯಾಸ ತಿಳಿಯದಿರುವುದರಿಂದ ಅವನು ಎಲ್ಲ ವಿಷಯಗಳೂ ಕ್ರಿಯಮಾಣ ಕರ್ಮದಿಂದಲೇ ಫಟಿಸುತ್ತವೆ ಎಂದು ಭಾವಿಸುತ್ತಾನೆ. ಕ್ರಿಯಮಾಣ ಕರ್ಮ ಮತ್ತು ಪ್ರಾರಬ್ಧ ಕರ್ಮಗಳಲ್ಲಿನ ವ್ಯತ್ಯಾಸವು ತಿಳಿಯದೇ ಇರುವುದರಿಂದ, ಸಾಧಕರು ಯಾರಿಗೂ ದೋಷವನ್ನು ಕೊಡದೇ ಎಲ್ಲ ಫಟನೆಗಳನ್ನು ಸಾಕ್ಷೀಭಾವದಿಂದ ನೋಡುವುದೇ ಯೋಗ್ಯವಾಗಿದೆ. ಈಶ್ವರನೂ, ಸರ್ವeನಿ ಹಾಗೂ ಸರ್ವಶಕ್ತಿವಂತನಾಗಿರುವಾಗಲೂ ಹೆಚ್ಚಿನ ಎಲ್ಲ ಫಟನೆಗಳನ್ನು ಸಾಕ್ಷೀಭಾವದಿಂದಲೇ ನೋಡುತ್ತಾನೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ ಕರ್ಮ’)
No comments:
Post a Comment
Note: only a member of this blog may post a comment.