ಬ್ರಾಹ್ಮತೇಜದ ಮಹತ್ವ

(ಕ್ಷಾತ್ರತೇಜ ಮತ್ತು ಬ್ರಾಹ್ಮತೇಜದ ಶ್ರೇಷ್ಠ ಉದಾಹರಣೆ - ಪರಶುರಾಮ)

೧. ವಿಷಯಪ್ರವೇಶ

ಸಮಾಜಕ್ಕೆ ಧಾರ್ಮಿಕ ಕರ್ತವ್ಯಗಳ ಅರಿವು ಮಾಡಿಕೊಡುವುದು ಮತ್ತು ಧರ್ಮರಕ್ಷಣೆಯನ್ನು ಮಾಡುವುದು ಹಿಂದಿನ ರಾಜರ ಕರ್ತವ್ಯವಾಗಿತ್ತು; ಆದರೆ ಇಂದಿನ ರಾಜ್ಯದ ಮುಖಂಡರು ಧರ್ಮದ್ರೋಹಿಗಳಾಗಿರುವುದರಿಂದ ಎಲ್ಲ ಹಿಂದೂಗಳು ಸೇರಿ ಧರ್ಮರಕ್ಷಣೆಯ ಶಿವಧನುಸ್ಸನ್ನು ಎತ್ತಬೇಕಾಗಿದೆ. ಇಲ್ಲಿ ‘ಶಿವಧನುಷ್ಯ’ವೆಂದು ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಾಗಿದೆ; ಏಕೆಂದರೆ ಶಿವಧನುಷ್ಯವನ್ನು ಕೇವಲ ಬಾಹುಬಲದಿಂದ ಎತ್ತಲು ಸಾಧ್ಯವಿಲ್ಲ. ಅದಕ್ಕಾಗಿ ದೈವೀ ಸಾಮರ್ಥ್ಯದ ಆವಶ್ಯಕತೆಯಿದೆ. ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಕಾರ್ಯ ಮಾಡುವುದರಿಂದ ಧರ್ಮರಕ್ಷಣೆಯಾಗುವುದಿಲ್ಲ; ಆದರೆ ಆಧ್ಯಾತ್ಮಿಕ ಸ್ತರದಲ್ಲಿಯೂ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಅಂದರೆ ಧರ್ಮರಕ್ಷಣೆಯನ್ನು ಮಾಡಲು ಕ್ಷಾತ್ರತೇಜದೊಂದಿಗೆ ಬ್ರಾಹ್ಮತೇಜವೂ ಆವಶ್ಯಕವಾಗಿರುತ್ತದೆ. ಆ ದೃಷ್ಟಿಯಿಂದ ಬ್ರಾಹ್ಮತೇಜ ಅಂದರೇನು, ಹಿಂದೂಗಳ ಇತಿಹಾಸದಲ್ಲಿ ಬ್ರಾಹ್ಮತೇಜದ ಸ್ಥಾನವೇನಿದೆ, ಹಿಂದೂ ಸಂಘಟನೆಯ ಆವಶ್ಯಕತೆ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.

೨. ಬ್ರಾಹ್ಮತೇಜ ಮತ್ತು ಅದರ ಮಹತ್ವ!

೨ಅ. ಬ್ರಾಹ್ಮತೇಜ ಅಂದರೇನು?

ನಾವು ಪುರಾಣದ ಕಥೆಗಳಲ್ಲಿ ಋಷಿ-ಮುನಿಗಳು ಶಾಪಗಳನ್ನು ನೀಡಿದ ಉದಾಹರಣೆಗಳನ್ನು ಕೇಳುತ್ತೇವೆ. ಈ ಶಾಪವು ಅರ್ಥಾತ್ ಸಂಕಲ್ಪಸಾಮರ್ಥ್ಯವಾಗಿರುತ್ತದೆ. ಈ ಸಂಕಲ್ಪ ಸಾಮರ್ಥ್ಯವು ಸಾಧನೆಯ ಬಲದಿಂದಾಗಿ ಋಷಿ-ಮುನಿಗಳಿಗೆ ಪಾಪ್ತವಾಗಿರುತ್ತದೆ. ಧರ್ಮರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶಾರೀರಿಕ ಸ್ತರದ ಪ್ರಯತ್ನದಿಂದಲ್ಲ ಸಾಧನೆಯನ್ನು ಮಾಡಿ ಸಂಕಲ್ಪದ ಸಾಮರ್ಥ್ಯ ನಿರ್ಮಾಣ ಮಾಡಿ ಕಾರ್ಯ ಮಾಡುವ ಆವಶ್ಯಕವಿದೆ.

೨ಆ. ಬ್ರಾಹ್ಮತೇಜದ ಮಹತ್ವ:

೧. ಸಂತರ ಕಾರ್ಯಕ್ರಮದಲ್ಲಿ ಲಕ್ಷಗಟ್ಟಲೆ ಜನರು ಸ್ವೇಚ್ಛೆಯಿಂದ ಮತ್ತು ಶ್ರದ್ಧೆಯಿಂದ ಬರುತ್ತಾರೆ. ರಾಜಕೀಯ ಸಭೆಗಳಂತೆ ಅವರಿಗೆ ಹಣ ನೀಡಿ ಅಥವಾ ವಾಹನ ಸೌಕರ್ಯಗಳನ್ನು ನೀಡಿ ಕರೆಸಬೇಕಾಗುವುದಿಲ್ಲ. ಯೋಗಋಷಿ ರಾಮದೇವಬಾಬಾ ಇವರ ಕಾರ್ಯಕ್ರಮಕ್ಕೆ ಜನರು ಬೆಳಗ್ಗೆ ೫ ಗಂಟೆಗೂ ಬರುತ್ತಾರೆ.

೨. ಬ್ರಾಹ್ಮತೇಜ ಮತ್ತು ಕ್ಷಾತ್ರತೇಜವಿರುವುದರಿಂದ ಋಷಿಗಳು ರಾಜನಿಗೆ ಶಾಪವನ್ನು ನೀಡಬಲ್ಲರು.

೩. ವಿದೇಶದಲ್ಲಿ ಯಾವುದೇ ರಾಜಕೀಯ ಪಕ್ಷದ ಪ್ರಚಾರವಾಗುವುದಿಲ್ಲ; ಆದರೆ ಆಧ್ಯಾತ್ಮಿಕ ಸಂಸ್ಥೆಗಳ ಪ್ರಚಾರವಾಗುತ್ತದೆ; ಏಕೆಂದರೆ ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಆಧ್ಯಾತ್ಮಿಕ ತೇಜ ಅರ್ಥಾತ್ ಬ್ರಾಹ್ಮತೇಜವಿರುತ್ತದೆ.

೩. ಹಿಂದೂಗಳ ಇತಿಹಾಸದಲ್ಲಿ ಬ್ರಾಹ್ಮತೇಜದ ಸ್ಥಾನ

ಹಿಂದೂಗಳ ಪೂರ್ವ ಇತಿಹಾಸದಲ್ಲಿ ಅವತಾರಿ ಪುರುಷರು ಮತ್ತು ಮಹಾಪುರುಷರು ಕ್ಷಾತ್ರತೇಜ ಮತ್ತು ಬ್ರಾಹ್ಮತೇಜವನ್ನು ಧಾರಣೆ ಮಾಡಿ ಧರ್ಮರಕ್ಷಣೆಯನ್ನು ಮಾಡಿದ ಅನೇಕ ಉದಾಹರಣೆಗಳು ಕಂಡುಬರುತ್ತವೆ. ಭಗವಾನ ಪರಶುರಾಮನು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಬಲದಲ್ಲಿ ೨೧ ವೇಳೆ ಪೃಥ್ವಿಯನ್ನು ನಿಃಕ್ಷತ್ರಿಯ (ಕ್ಷತ್ರಿಯರಹಿತ) ಅಂದರೆ ದುರ್ಜನ ರಾಜರನ್ನು ನಾಶ ಮಾಡಿದನು. ಅರ್ಜುನನು ಉತ್ತಮ ಧನುರ್ಧರನಿದ್ದನು ಅದರೊಂದಿಗೆ ಅವನು ಶ್ರೀಕೃಷ್ಣನ ಭಕ್ತನೂ ಆಗಿದ್ದನು. ಅವನು ಯಾವಾಗಲೂ ಶ್ರೀಕೃಷ್ಣನ ನಾಮವನ್ನು ಜಪಿಸಿಯೇ ಬಾಣವನ್ನು ಬಿಡುತ್ತಿದ್ದನು. ಅದರಿಂದಾಗಿ ಅವನ ಬಾಣಗಳ ಗುರಿಯು ತನ್ನಿಂದತಾನೇ ತಲುಪುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಕುಲದೇವತೆ ಶ್ರೀ ಭವಾನಿದೇವಿಯ ನಿಸ್ಸೀಮ ಭಕ್ತರಾಗಿದ್ದರು. ಅವರ ಬಾಯಿಯಲ್ಲಿ ಸದಾ ‘ಜಗದಂಬಾ ಜಗದಂಬಾ’ ಎಂಬ ನಾಮಜಪವಿರುತ್ತಿತ್ತು. ಅವರ ಸೇನೆಯೂ ಹೋರಾಡುವಾಗ ‘ಹರ ಹರ ಮಹಾದೇವ’ ಎಂಬ ಜಯಘೋಷವನ್ನು ಮಾಡುತ್ತಿತ್ತು. ಇದರಿಂದಾಗಿ ಮನುಷ್ಯಬಲ ಮತ್ತು ಸಾಧನಸಾಮಗ್ರಿ ಅಲ್ಪವಿದ್ದರೂ ಅವರಿಗೆ ಐದು ಬಲಶಾಲಿ ಮತಾಂಧ ರಾಜ್ಯಾಡಳಿತಗಳನ್ನು ಮೆಟ್ಟಿ ‘ಹಿಂದವೀ ಸ್ವರಾಜ್ಯ’ವನ್ನು ಸ್ಥಾಪಿಸಲು ಸಾಧ್ಯವಾಯಿತು.
ನಾಮಸ್ಮರಣೆಯಿಂದ, ಭಕ್ತಿಯಿಂದ ದೈವೀ ಶಕ್ತಿಯ ಸಹಾಯವು ಸಿಗುತ್ತದೆ ಹಾಗೂ ನಾವು ಕೈಗೆತ್ತಿಕೊಂಡಿರುವ ಕಾರ್ಯದಲ್ಲಿ ಸಫಲತೆ ಸಿಗುತ್ತದೆಯೆಂಬುದಕ್ಕೆ ಇವು ಉತ್ತಮ ಉದಾಹರಣೆಯಾಗಿವೆ.

೪. ಹಿಂದುತ್ವವಾದಿಗಳು ತಮ್ಮಲ್ಲಿ ಬ್ರಾಹ್ಮತೇಜವನ್ನು ನಿರ್ಮಿಸುವ ಅರ್ಥಾತ್ ಸಾಧನೆ ಮಾಡುವುದರ ಮಹತ್ವ

೪ಅ. ಪ್ರತಿಕೂಲ ಪ್ರಸಂಗಗಳಲ್ಲಿ ರಕ್ಷಣೆಗಾಗಿ ಈಶ್ವರನ ಭಕ್ತನಾಗಬೇಕು!: ಧರ್ಮರಕ್ಷಣೆಗಾಗಿ ಹೋರಾಡುವಾಗ ಮಾರಣಾಂತಿಕ ಪ್ರಸಂಗಗಳನ್ನು ಎಲ್ಲರೂ ಅನುಭವಿಸಿರಬಹುದು. ನೀವು ಈಶ್ವರನ ಭಕ್ತರಾಗಿದ್ದಲ್ಲಿ ದೊಡ್ಡ ದೊಡ್ಡ ಸಂಕಟಗಳಿಂದ ನೀವು ಸುಖವಾಗಿ ಹೊರಬರಬಹುದು. ಅರಗಿನ ಮನೆಯಿಂದ ಪಾಂಡವರ ಬಿಡುಗಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಅಫ್ಝಲಖಾನ ಭೇಟಿ, ಅವರ ಆಗ್ರಾದಿಂದ ಬಿಡುಗಡೆ ಇತ್ಯಾದಿ ಪ್ರಸಂಗಗಳನ್ನು ನೆನಪಿಸಿಕೊಳ್ಳಬಹುದು.

೪ಆ. ಹಿಂದೂ ಸಂಘಟನೆಯಲ್ಲಿ ಅಡಚಣೆಯಾಗಿರುವ ಅಹಂಕಾರವನ್ನು ನಿರ್ಮೂಲನೆ ಮಾಡಲು ಸಾಧನೆ ಉಪಯುಕ್ತವಾಗಿರುವುದು: ಹಿಂದುತ್ವವಾದಿಗಳಲ್ಲಿರುವ ಅಹಂಕಾರವು ಹಿಂದೂಐಕ್ಯದಲ್ಲಿ ಪ್ರಮುಖ ಅಡಚಣೆಯಾಗಿರುತ್ತದೆ. ಸಾಧನೆ ಮಾಡುವುದರಿಂದ ಅಹಂಕಾರವು ದೂರವಾಗುತ್ತದೆ, ನಮ್ರತೆ ಬೆಳೆಯುತ್ತದೆ ಹಾಗೂ ಇತರರೊಂದಿಗೆ ಹೊಂದಾಣಿಕೆ ಮಾಡಲು ಸುಲಭವಾಗುತ್ತದೆ. ಸಾಧನೆಯಿಂದಾಗಿ ಈಶ್ವರೀ ಗುಣಗಳು ಬೆಳೆಯುತ್ತವೆ. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಸನಾತನ ಸಂಸ್ಥೆಯ ಸಾಧಕರು ಪ್ರತಿದಿನ ಸಾಧನೆಯನ್ನು ಮಾಡುತ್ತಾರೆ. ಆದುದರಿಂದ ಇತರರೊಂದಿಗೆ ಅವರು ಬೇಗನೇ ಹೊಂದಿಕೊಳ್ಳುತ್ತಾರೆ.

೫. ಯಾವ ಸಾಧನೆಯನ್ನು ಮಾಡಬೇಕು?

೫ಅ. ಪ್ರತಿದಿನ ಕಡಿಮೆಪಕ್ಷ ೧ ಗಂಟೆ ಕುಲದೇವತೆಯ ಅಥವಾ ಇಷ್ಟದೇವತೆಯ ನಾಮಜಪವನ್ನು ಮಾಡಬೇಕು: ಪೂಜೆ-ಅರ್ಚನೆ, ಸ್ತೋತ್ರಪಠಣ, ಉಪವಾಸ ಇತ್ಯಾದಿಗಳನ್ನು ಮಾಡುವುದರೊಂದಿಗೆ ಭಗವಂತನ ನಾಮಜಪವನ್ನೂ ಸದಾಕಾಲ ಮಾಡುತ್ತಿರಬೇಕು. ನಾಮಜಪದ ಮಾಧ್ಯಮದಿಂದ ಮನಸ್ಸಿನಿಂದ ನಿರಂತರವಾಗಿ ಭಗವಂತನ ಸಮೀಪದಲ್ಲಿರಲು ಸಾಧ್ಯವಾಗುತ್ತದೆ. ಮೊದಲಿಂದಲೂ ಯಾವುದಾದರೂ ದೇವತೆಯ ಅಥವಾ ಗುರುಗಳ ಮೂಲಕ ನೀಡಲಾದ ನಾಮಜಪವನ್ನು ಮಾಡುತ್ತಿದ್ದಲ್ಲಿ ಅದನ್ನು ಅಖಂಡವಾಗಿ ಮಾಡಲು ಪ್ರಯತ್ನವನ್ನು ಮಾಡಬೇಕು.

೫ಆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿದಿನ ಪ್ರಾರ್ಥನೆಯನ್ನು ಮಾಡುವುದು: ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಯಾವುದೇ ಇತರ ಸಂಘಟನೆಯ ಉಪಕ್ರಮ ಮತ್ತು ಆಂದೋಲನವಾಗುತ್ತಿದ್ದರೆ ಅದರ ಯಶಸ್ಸಿಗಾಗಿ ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು. ಅದಕ್ಕನುಸಾರ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿದಿನ ಪ್ರಾರ್ಥನೆಯನ್ನು ಮಾಡಬೇಕು.

೬. ಧರ್ಮಾಭಿಮಾನ ನಿರ್ಮಾಣವಾಗಲು ಧರ್ಮಾಚರಣೆಯನ್ನೂ ಮಾಡಬೇಕು !

ಸಾಧನೆಯ ಜೊತೆಗೆ ಧರ್ಮಾಚರಣೆಯನ್ನು ಮತ್ತು ಆಚಾರಧರ್ಮವನ್ನು ಪಾಲಿಸುವುದೂ ಮಹತ್ವದ್ದಾಗಿದೆ. ಹಿಂದೂ ಸಂಸ್ಕೃತಿಯ ಉಪಾಸನಾಮಾರ್ಗ, ಹಬ್ಬ-ಹರಿದಿನಗಳು, ಆಹಾರ-ವಿಹಾರ ಪದ್ಧತಿಯಿಂದ ಮಾತ್ರವಲ್ಲ, ದೈನಂದಿನ ಜೀವನದ ಪ್ರತಿಯೊಂದು ಕೃತಿಯಿಂದ ಸತ್ತ್ವಗುಣ ಹೆಚ್ಚಾಗುವಂತೆ ಅಂದರೆ ಸಾಧನೆಯಾಗುವಂತಹ ಯೋಜನೆಯು ಹಿಂದೂ ಧರ್ಮದಲ್ಲಿದೆ. ಇದು ಹಿಂದೂ ಧರ್ಮದ ಅದ್ವಿತೀಯ ವೈಶಿಷ್ಟ್ಯವಾಗಿದೆ. ದೈನಂದಿನ ಧಾರ್ಮಿಕ ಕೃತಿಗಳು, ಉದಾ. ಪೂಜೆ-ಅರ್ಚನೆ, ಆರತಿ, ಪ್ರಾಸಂಗಿಕ ಮತ್ತು ಉತ್ಸವ ಇತ್ಯಾದಿಗಳನ್ನು ಶಾಸ್ತ್ರಾನುಸಾರ ಅರ್ಥ ಮಾಡಿಕೊಂಡು ಆಚರಿಸುವುದು; ಅದರಂತೆ ಕುಲಾಚಾರಗಳ ಪಾಲನೆ, ಕುಲದ ರೂಢಿ-ರೀತಿಗಳನ್ನು ಮತ್ತು ಪರಂಪರೆಗಳನ್ನು ಆಚರಿಸುವುದು, ಇವುಗಳಿಗೆ ‘ಧರ್ಮಾಚರಣೆ’ ಎಂದು ಹೇಳುತ್ತಾರೆ. ಉದಾ. ಹಸ್ತಲಾಘವ (ಶೆಕ್-ಹ್ಯಾಂಡ್) ಮಾಡದೆ ಕೈಜೋಡಿಸಿ ನಮಸ್ಕಾರ ಮಾಡುವುದು, ಜನ್ಮದಿನವನ್ನು ದಿನಾಂಕಾನುಸಾರವಲ್ಲ, ತಿಥಿಗನುಸಾರ ಮತ್ತು ಆರತಿ ಬೆಳಗಿ ಆಚರಿಸುವುದು, ಸ್ತ್ರೀಯರು ಪ್ರತಿದಿನ ಗೋಲಾಕಾರವಾಗಿ ಕುಂಕುಮ ಮತ್ತು ಪುರುಷರು ಕುಂಕುಮದ ತಿಲಕವನ್ನು ಹಚ್ಚಿ ಮನೆಯ ಹೊರಗೆ ಹೋಗುವುದು ಇತ್ಯಾದಿ.

೭. ಹಿಂದುತ್ವವಾದಿ ಕಾರ್ಯಕರ್ತರಿಗೂ ಸಾಧನೆ ಮಾಡಲು ಪ್ರವೃತ್ತಗೊಳಿಸಿ!

ಸಾಧನೆಯಿಂದ ಆತ್ಮಬಲವು ಜಾಗೃತವಾಗುತ್ತದೆ ಮತ್ತು ಆತ್ಮಬಲವು ಜಾಗೃತವಾದ ವ್ಯಕ್ತಿಯಿಂದ ಪರಿಣಾಮಕಾರಿ ಧರ್ಮಕಾರ್ಯವಾಗುತ್ತದೆ. ಇದರಿಂದಾಗಿ ಸಂಘಟನೆಯ ಕಾರ್ಯಕರ್ತರಿಗೂ ಸಾಧನೆಯನ್ನು ಮಾಡಲು ಪ್ರವೃತ್ತಗೊಳಿಸಬೇಕು.

ಇದಕ್ಕಾಗಿ ಸಂಘಟನೆಯ ಸ್ತರದಲ್ಲಿ ಮುಂದೆ ಕೊಟ್ಟಿರುವಂತಹ ಪ್ರಯತ್ನಗಳನ್ನು ಮಾಡಬಹುದು.

ಅ. ಸಂಘಟನೆಯ ಕಾರ್ಯಕರ್ತರಿಗೆ ನಾಮಜಪದ ಸಾಧನೆ ಮಾಡಲು ಹೇಳಿರಿ.

ಆ. ಸಂಘಟನೆಗಳ ಸಭೆಗಳಲ್ಲಿ ಯಾವ ರೀತಿಯಲ್ಲಿ ಉಪಕ್ರಮಗಳ ವರದಿಯನ್ನು ತೆಗೆದುಕೊಳ್ಳಲಾಗುತ್ತದೆಯೋ ಅದರಂತೆ ಸ್ವಲ್ಪ ಸಮಯ ತಡೆದು ಪ್ರತಿಯೊಬ್ಬ ಕಾರ್ಯಕರ್ತರಿಂದ ವಾರವಿಡೀ ಸಾಧನೆಗಾಗಿ ಯಾವ ಪ್ರಯತ್ನಗಳು ಆಗಿವೆ ಎಂಬುದರ ವರದಿಯನ್ನು ತೆಗೆದುಕೊಳ್ಳಿರಿ.

ಇ. ಸಂಘಟನೆಗಳ ಕಾರ್ಯಕರ್ತರಿಗೆ ಧರ್ಮಶಿಕ್ಷಣ ಸಿಗಬೇಕು ಎಂದು ಅಭ್ಯಾಸವರ್ಗಗಳನ್ನು ತೆಗೆದುಕೊಳ್ಳಬೇಕು. ಅವರಿಗೆ ಧರ್ಮಶಿಕ್ಷಣ ನೀಡುವ ಗ್ರಂಥಗಳು, ಧ್ವನಿಚಿತ್ರಮುದ್ರಿಕೆಗಳನ್ನು ಒದಗಿಸಿಕೊಡಿ. ಹಿಂದುತ್ವವಾದಿಗಳಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ಅರಿವಾದಾಗ ಅವರು ಧರ್ಮದ್ರೋಹಿ, ನಾಸ್ತಿಕರ ಮತ್ತು ಇತರ ಧರ್ಮ ಪ್ರಸಾರಕರ ಹಿಂದೂವಿರೋಧಿ ವಿಚಾರಗಳನ್ನು ಬೌದ್ಧಿಕ ಸ್ತರದಲ್ಲಿ ಖಂಡಿಸಬಲ್ಲರು.

ಈ. ಹಿಂದೂ ಸಂಘಟನೆಯಲ್ಲಿ ಹಾನಿಕರವಾಗಿರುವಂತಹ ದೋಷಗಳನ್ನು ಕಾರ್ಯಕರ್ತರಿಗೆ ಅರಿವು ಮಾಡಿಕೊಡಬೇಕು ಹಾಗೂ ಆ ದೋಷಗಳನ್ನು ದೂರ ಮಾಡಲು ಅವರಿಗೆ ಸಹಾಯವನ್ನು ಮಾಡಬೇಕು.

ಸಾಧನೆ ಮಾಡುವ ವ್ಯಕ್ತಿಯ ಜೀವನವು ಕ್ರಮೇಣ ನೀತಿವಂತ ಮತ್ತು ಚಾರಿತ್ರ್ಯಸಂಪನ್ನವಾಗುತ್ತದೆ. ಇದರಿಂದಾಗಿ ಅವರಲ್ಲಿ ದುಶ್ಚಟಗಳು, ಅಹಂಕಾರಿ ವೃತ್ತಿ, ಉದ್ಧಟತನದಂತಹ ದೋಷಗಳಿದ್ದರೆ ಅವು ಸಹ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತವೆ ಮತ್ತು ಕಾರ್ಯಕರ್ತರ ವೃತ್ತಿಯಲ್ಲಿಯೂ ಬದಲಾವಣೆಯಾಗುತ್ತಿದೆ ಎಂದು ಅನುಭವಕ್ಕೆ ಬರುತ್ತದೆ.

ಆಧಾರ - ಕನ್ನಡ ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ"

ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ
ಗುರುಗಳ ಮಹತ್ವ
ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿ
ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ?
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ
Dharma Granth

1 comment:

  1. Good information.........Please keep up this good work....All the very best

    ReplyDelete

Note: only a member of this blog may post a comment.