ಎಡಗೈಯಿಂದ ಊಟ ಏಕೆ ಮಾಡಬಾರದು? ಬಲಗೈಯಿಂದ ಏಕೆ ಮಾಡಬೇಕು?


ಎಡಗೈಯಿಂದ ಊಟ ಏಕೆ ಮಾಡಬಾರದು?

೧. ಎಡಗೈಯಿಂದ ಊಟವನ್ನು ಮಾಡುವುದರಿಂದ, ಎಡಗೈಯಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಬ್ರಹ್ಮಾಂಡದಲ್ಲಿನ ಉಚ್ಚದೇವತೆಗಳ ಇಚ್ಛಾಶಕ್ತಿಗೆ ಸಂಬಂಧಿಸಿದ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ಜೀವದ ಶರೀರದಲ್ಲಿನ ಇಚ್ಛಾಶಕ್ತಿಯು ಕಾರ್ಯನಿರತವಾಗುತ್ತದೆ.

೨. ಎಡಗೈಯಿಂದ ಊಟವನ್ನು ಮಾಡುವುದರಿಂದ, ಜೀವದ ಚಂದ್ರನಾಡಿಯು ಜಾಗೃತವಾಗುವುದರಿಂದ ಈ ನಾಡಿಯ ಕಾರ್ಯಶಕ್ತಿಯಿಂದ ಉಪಪ್ರಾಣಗಳ ಕಾರ್ಯವು ಹೆಚ್ಚುತ್ತದೆ. ಉಪಪ್ರಾಣಗಳ ಕಾರ್ಯವು ಹೆಚ್ಚಾಗುವುದರಿಂದ ಅನ್ನವು ಸರಿಯಾಗಿ ಜೀರ್ಣವಾಗುವುದಿಲ್ಲ. ಎಡಗೈಯಿಂದ ಊಟವನ್ನು ಮಾಡುವುದರಿಂದ ಉಪಪ್ರಾಣಗಳು ಕಾರ್ಯನಿರತವಾಗಿ ಅನ್ನದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳ ಲಾಭವು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ರಾತ್ರಿ ೭.೫೭)

೩. ಬಲನಾಡಿಯು ಕ್ರಿಯಾಶೀಲ ಮತ್ತು ಮಾರಕತತ್ತ್ವವನ್ನು ಪ್ರತಿನಿಧಿಸುತ್ತದೆ; ಆದುದರಿಂದ ಶುಭಕಾರ್ಯವನ್ನು ಮಾಡಲು ಇದಕ್ಕೆ ಅಗ್ರಸ್ಥಾನವನ್ನು ಕೊಡಲಾಗಿದೆ. ಬಲನಾಡಿಯು ಕ್ರಿಯೆಯಲ್ಲಿ ಶಿವಸ್ವರೂಪವಾಗಿದೆ. ಎಡಗೈಯನ್ನು ಅಶುಭ ಕರ್ಮಗಳನ್ನು ಮಾಡುವುದರ ಪ್ರತೀಕವೆಂದು ಪರಿಗಣಿಸಲಾಗಿದೆ, ಏಕೆಂದರೆ ಎಡಗೈಯಿಂದ ಮಾಡುವ ಕೃತಿಗಳಿಂದ ದೇಹದಲ್ಲಿನ ಉಪಪ್ರಾಣಗಳು ಜಾಗೃತವಾಗಿ, ಅವುಗಳ ವೇಗವಾದ ತಳ್ಳುವಿಕೆಯಿಂದ ಶರೀರದಲ್ಲಿನ ಇತರ ತ್ಯಾಜ್ಯವಾಯುಗಳೂ ಜಾಗೃತವಾಗುತ್ತವೆ. ಇದರಿಂದ ದೇಹವು ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಹೋಗುತ್ತದೆ, ಆದುದರಿಂದ ಎಡಗೈಯಿಂದ ಊಟ ಮಾಡುವುದನ್ನು ನಿಷೇಧಿಸಲಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧೨.೦೬)

೪. ಎಡಗೈಯಿಂದ ಮಾಡಿದ ಕೃತಿಗಳನ್ನು ಅಶುಭದ ಪ್ರತೀಕವೆಂದು ತಿಳಿಯಲಾಗಿದೆ, ಏಕೆಂದರೆ ಎಡಗೈಯಿಂದ ಮಾಡಿದ ಕೃತಿಗಳಲ್ಲಿ ತೇಜತತ್ತ್ವದ ಅಧಿಷ್ಠಾನವು ಬಲಗೈಯ ತುಲನೆಯಲ್ಲಿ ಕಡಿಮೆ ಇರುವುದರಿಂದ, ಈ ಕೃತಿಗಳಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪವಾಗುವ ಪ್ರಮಾಣವು ಹೆಚ್ಚಿರುತ್ತದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜೇಷ್ಠ ಶುಕ್ಲ ಅಷ್ಟಮಿ, ಕಲಿಯುಗ ವರ್ಷ ೫೧೧೨ ೪.೭.೨೦೧೦ ಬೆಳಗ್ಗೆ ೧೧.೧೯)

ಬಲಗೈಯಿಂದ ಏಕೆ ಊಟವನ್ನು ಮಾಡಬೇಕು?

೧. ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ನಾಭಿಯ ಸುತ್ತಲೂ ಇರುವ ಪಂಚಪ್ರಾಣಗಳು ಕಾರ್ಯನಿರತವಾಗುತ್ತವೆ. ಈ ಪಂಚಪ್ರಾಣಗಳ ಕಾರ್ಯದಿಂದ ಪ್ರಾಣಶಕ್ತಿಯು ಹೆಚ್ಚಾಗಲು ಸಹಾಯವಾಗುತ್ತದೆ. ಇದರಿಂದ ಅನ್ನವು ಸೂಕ್ಷ್ಮ-ಸ್ತರದಲ್ಲಿ ಚೆನ್ನಾಗಿ ಜೀರ್ಣವಾಗಿ ಜೀವದ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ. ಆದುದರಿಂದ ಎಡಗೈಗಿಂತ ಬಲಗೈಯಿಂದ ಊಟವನ್ನು ಮಾಡುವುದು ಹೆಚ್ಚು ಫಲದಾಯಕವಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೨.೨೦೦೫, ರಾತ್ರಿ ೭.೫೭)

೨. ಬಲಗೈಯಿಂದ ಊಟವನ್ನು ಮಾಡುವಾಗ ಜೀವಕ್ಕೆ ಬಲ, ಅಂದರೆ ಸೂರ್ಯನಾಡಿಯಿಂದ ಕಾರ್ಯನಿರತವಾದ ತೇಜತತ್ತ್ವದ ಸ್ಪಂದನಗಳ ಲಾಭವಾಗಲು ಸಹಾಯವಾಗುತ್ತದೆ. ಬೆರಳುಗಳಿಂದ ಪ್ರಕ್ಷೇಪಿತವಾಗುವ ತೇಜದ ಸ್ಪರ್ಶದಿಂದ ಅನ್ನದ ತುತ್ತುಗಳಲ್ಲಿನ ರಜ-ತಮಯುಕ್ತ ಸ್ಪಂದನಗಳು ನಾಶವಾಗುತ್ತವೆ. ಈ ರೀತಿಯಲ್ಲಿ ತುತ್ತು ಹೊಟ್ಟೆಯಲ್ಲಿ ಹೋಗುವುದಕ್ಕಿಂತ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧವಾಗಲು ಸಹಾಯವಾಗುತ್ತದೆ, ಆದುದರಿಂದ ಬಲಗೈಯಿಂದ ಊಟವನ್ನು ಮಾಡಬೇಕೆಂದು ಹೇಳಲಾಗಿದೆ. ಇದು ಯೋಗ್ಯ ಆಚಾರವಾಗಿದೆ. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಅಧಿಕ ವೈಶಾಖ ಕೃಷ್ಣ ಪಕ್ಷ ಅಷ್ಟಮಿ, ಕಲಿಯುಗ ವರ್ಷ ೫೧೧೨ (೬.೫.೨೦೧೦) ಮಧ್ಯಾಹ್ನ ೪.೨೭)

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

ಆಹಾರಕ್ಕೆ ಸಂಬಂಧಿತ ವಿಷಯಗಳು
ತಟ್ಟೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಏಕೆ ಊಟವನ್ನು ಮಾಡಬಾರದು?
Dharma Granth

No comments:

Post a Comment

Note: only a member of this blog may post a comment.