ಶಾಂತ ನಿದ್ರೆಗಾಗಿ ಏನು ಮಾಡಬೇಕು?


ಇತ್ತೀಚೆಗೆ ಬಹಳಷ್ಟು ಜನರಿಗೆ ನಿದ್ರೆ ಮಾಡಿದಾಗ ಭಯಂಕರ ಕನಸುಗಳು ಬೀಳುವುದು, ನಿದ್ರೆಯಲ್ಲಿ ಕಿರುಚಾಡುವುದು, ನಿದ್ರೆ ಮಾಡಿದಾಗ ಸುತ್ತಮುತ್ತಲೂ ಯಾರದ್ದಾದರೂ ಸಂಚಾರವಿದೆ ಎಂದು ಅನಿಸುವುದು, ನೆರಳು ಕಾಣಿಸುವುದು, ನಿದ್ರೆಯಾದ ನಂತರವೂ ಉತ್ಸಾಹವೆನಿಸದಿರುವುದು ಮುಂತಾದ ಅನೇಕ ತೊಂದರೆಗಳಾಗುತ್ತವೆ. ಈ ಎಲ್ಲ ತೊಂದರೆಗಳಿಗೆ ಮಾನಸಿಕ ಕಾರಣಗಳೊಂದಿಗೆ ಶೇ.೮೦ರಷ್ಟು ಕಾರಣಗಳೂ ಆಧ್ಯಾತ್ಮಿಕವಾಗಿರುತ್ತವೆ. ಇದರಿಂದ ರಕ್ಷಣೆಯಾಗಿ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ಮಾಡಿ ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಓದಿ.

ಸುಖದಾಯಕ (ಶಾಂತ) ನಿದ್ರೆಯನ್ನು ಹೇಗೆ ಪಡೆಯಬೇಕು?

೧. ಮಲಗುವ ಕೋಣೆಯಲ್ಲಿ ಸಂಪೂರ್ಣ ಕತ್ತಲೆಯನ್ನು ಮಾಡಿ ಮಲಗಬೇಡಿರಿ.
೨. ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಿರಿ.
೩. ದಿನವಿಡೀ ನಮ್ಮಿಂದಾದ ಅಪರಾಧಗಳ ಬಗ್ಗೆ ದೇವರಲ್ಲಿ ಕ್ಷಮೆ ಯಾಚಿಸಿರಿ.
೪. ಉಪಾಸ್ಯದೇವತೆಗೆ, ‘ನಿನ್ನ ಸಂರಕ್ಷಣಾ-ಕವಚವು ನನ್ನ ಸುತ್ತಲೂ ಸತತವಾಗಿರಲಿ ಮತ್ತು ನಿದ್ರೆಯಲ್ಲಿಯೂ ನನ್ನ ನಾಮಜಪ ಅಖಂಡವಾಗಿ ನಡೆಯಲಿ’ ಎಂದು ಪ್ರಾರ್ಥನೆ ಮಾಡಿರಿ.
೫. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮತ್ತು ಆದಷ್ಟು ಎಡಮಗ್ಗುಲಾಗಿ ಮಲಗಿರಿ.
೬. ಅಂಕುಡೊಂಕಾಗಿ, ಅಂಗಾತ, ದಕ್ಷಿಣದಿಕ್ಕಿಗೆ ಕಾಲು ಮಾಡಿ ಹಾಗೂ ದೇವರ ಎದುರು ಅತೀ ಸಮೀಪ ಮಲಗಬೇಡಿರಿ.

ಮಲಗಿದ ಮೇಲೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಾರದೆಂದು ಮಲಗುವಾಗ ಮಾಡಬೇಕಾದ ಆಧ್ಯಾತ್ಮಿಕ ಉಪಾಯಗಳು

೧. ಸಾತ್ತ್ವಿಕ ಊದುಬತ್ತಿಗಳನ್ನು ಉರಿಸಿ ಮಲಗುವ ಕೋಣೆಯಲ್ಲಿ ಎಲ್ಲ ಕಡೆಗೆ ತಿರುಗಿಸಬೇಕು. ನಂತರ ಅವುಗಳನ್ನು ದಿಂಬಿನಿಂದ ಸ್ವಲ್ಪ ದೂರದಲ್ಲಿ ಇಡಬೇಕು.

೨. ತಲೆಯ ಬಳಿ ತುಪ್ಪದ ಅಥವಾ ಎಣ್ಣೆಯ (ಎಳ್ಳೆಣ್ಣೆ ಅಥವಾ ಒಳ್ಳೆಣ್ಣೆಯ) ದೀಪವನ್ನು ಮಂದ ಜ್ಯೋತಿಯಲ್ಲಿ ಹಚ್ಚಿಡಬೇಕು.

೩. ಮಲಗುವ ಮೊದಲು ಹಾಸಿಗೆಯ ಕೆಳಗೆ ಮತ್ತು ಹಾಸಿಗೆಯ ಮೇಲೆ ವಿಭೂತಿಯನ್ನು ಹಾಕಬೇಕು ಅಥವಾ ವಿಭೂತಿಯ ನೀರನ್ನು ಸಿಂಪಡಿಸಬೇಕು.

೪. ಕೈ-ಕಾಲುಗಳಿಗೆ ವಿಭೂತಿಯನ್ನು ಹಚ್ಚಿಕೊಳ್ಳಬೇಕು.

೫. ಹಾಸಿಗೆಯ ಸುತ್ತಲೂ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಬೇಕು. ತಲೆ ಮತ್ತು ಕಾಲುಗಳ ಬಳಿ ಶ್ರೀ ಗಣಪತಿ ಹಾಗೂ ಎಡ ಮತ್ತು ಬಲಬದಿಗೆ ಶ್ರೀಕೃಷ್ಣನ ನಾಮಪಟ್ಟಿಗಳನ್ನು ಇಡಬೇಕು. ಈ ನಾಮಜಪ-ಪಟ್ಟಿಗಳನ್ನು ಹಾಸಿಗೆಯ ಹೊರಗೆ, ಹಾಸಿಗೆಯ ಮೇಲೆ ಅಥವಾ ಹಾಸಿಗೆಯ ಕೆಳಗೆ ತಮಗೆ ಅನುಕೂಲವಿದ್ದಂತೆ ಇಡಬೇಕು.


(ಸನಾತನ ಸಂಸ್ಥೆಯು ಇಂತಹ ನಾಮಪಟ್ಟಿಗಳನ್ನು ತಯಾರಿಸಿದೆ. ಸ್ಪಂದನಶಾಸ್ತ್ರಕ್ಕನುಸಾರ ಯೋಗ್ಯ ಅಧ್ಯಯನ ಮಾಡಿ ಶ್ರೀ ಗಣಪತಿ, ಶ್ರೀಕೃಷ್ಣ, ಶ್ರೀರಾಮ, ಶ್ರೀ ದುರ್ಗಾದೇವಿ, ದತ್ತ, ಮಾರುತಿ, ಶಿವ ಈ ದೇವತೆಗಳ ನಾಮಪಟ್ಟಿಗಳನ್ನು ತಯಾರಿಸಲಾಗಿದೆ.)

ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಲು ಸಾಧ್ಯವಿಲ್ಲದಿದ್ದಲ್ಲಿ, ವಿಭೂತಿಯ ನೀರಿನ ಮಂಡಲವನ್ನು ಹಾಕಬೇಕು. ಈ ಮಂಡಲವನ್ನು ಹಾಸಿಗೆಯ ಮೇಲೆ ಕುಳಿತುಕೊಂಡು ಹಾಕಬೇಕು. ಇದಕ್ಕಾಗಿ ವಿಭೂತಿಮಿಶ್ರಿತ ನೀರಿನ ಪಾತ್ರೆಯನ್ನು ತೆಗೆದುಕೊಂಡು ಹಾಸಿಗೆಯ ಮೇಲೆ ಕುಳಿತುಕೊಳ್ಳಬೇಕು. ಉಪಾಸ್ಯದೇವತೆಗೆ ಪ್ರಾರ್ಥನೆಯನ್ನು ಮಾಡಿ ಹಾಸಿಗೆಯ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮೂರು ಸಲ ನೀರನ್ನು ಸಿಂಪಡಿಸಬೇಕು. ಅದರ ನಂತರ ಹಾಸಿಗೆಯ ಹೊರಗೆ ಹೋಗಬಾರದು; ಏಕೆಂದರೆ ಅದರಿಂದ ಮಂಡಲವು ಭಂಗವಾಗುತ್ತದೆ. ಯಾವುದಾದರು ಕಾರಣದಿಂದ ಹಾಸಿಗೆಯ ಹೊರಗೆ ಹೋಗಬೇಕಾಗಿದ್ದಲ್ಲಿ, ಹಾಸಿಗೆಗೆ ಹಿಂತಿರುಗಿ ಬಂದಾಗ ಪುನಃ ವಿಭೂತಿಮಿಶ್ರಿತ ನೀರಿನ ಮಂಡಲವನ್ನು ಹಾಕಬೇಕು.

ನಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಇದರ ಬಗ್ಗೆ ಪ್ರಸಾರ ಮಾಡಿದಾಗ, ನಾವು ಕೊಟ್ಟಂತೆ ಮಾಡಿದ್ದರಿಂದ ಓರ್ವ ಸದಸ್ಯರಿಗೆ ಬಂದ ಅನುಭೂತಿ ಮುಂದಿನಂತಿದೆ - 
ಎರಡು ವರ್ಷಗಳಿಂದ ನಾನೊಂದು ಸಮಸ್ಯೆಯನ್ನು ಎದುರಿಸುತ್ತಿದ್ದೆ. ಮಲಗಿಕೊಳ್ಳಲು ತುಂಬಾ ಭಯವಾಗುತ್ತಿತ್ತು. ಏಕೆಂದರೆ ಏನೋ ಒಂದು ಆತ್ಮ, ಏನೋ ಒಂದು ಬಂದು ಮೈಯೊಳಗೆ ಪ್ರವೇಶಿಸುತ್ತಿದೆಯೋ ಎನ್ನುವಹಾಗೆ ಎನಿಸಿ ಮೈಯಲ್ಲಾ ನೋವಾಗಿ ವಿಚಿತ್ರವನ್ನುಂಟಾಗಿ ಕಣ್ಣು ತೆರೆಯದೆ ಒದ್ದಾಡುವಂತಾಗಿ ಇನ್ನೇನು ಸಾಯುತ್ತೇನೆ ಎನ್ನುವಷ್ಟರಲ್ಲಿ ದೇವರ ಸ್ಮರಣೆಯನ್ನು ಮಾಡುತ್ತಲೇ ಪ್ರವೇಶಿಸುತ್ತಿರುವ ದುಷ್ಟ ಶಕ್ತಿಯು ನನ್ನಿಂದ ಹೊರ ಹೋಗುತ್ತಿತ್ತು. ಇದೇ ತರಹ ನಾನು ಎರಡು ವರ್ಷಗಳ ವರೆಗೆ ಅನುಭವಿಸುತ್ತಿದ್ದೆ. ಒಮ್ಮೆ ಫೇಸ್‌ಬುಕ್ ನಲ್ಲಿ ಶಾಂತ ನಿದ್ರೆಗಾಗಿ ಏನು ಮಾಡಬೇಕು? ಇದನ್ನು ಓದಿದಾಗ ಇದರ ಮಾಹಿತಿಯಂತೆ ನಾನು ಮನೆಯಲ್ಲಿ ದೇವರ ನಾಮಫಲಕಗಳನ್ನು ನಾಲ್ಕೂ ಕಡೆ ಇಟ್ಟು ಶ್ರೀ ರಾಘವೇಂದ್ರ ದೇವರ ಮಂತ್ರವನ್ನು ಜಪಿಸಿ ಮಲಗಿದಾಗ ಯಾವುದೇ ಭಯವುಂಟಾಗದೆ ಸುಖ ನಿದ್ರೆಯನ್ನು ಮಾಡುತ್ತಿದ್ದೇನೆ. ಸಧ್ಯ ನಾನು ಇದನ್ನೇ ಪಾಲಿಸುತ್ತಿದ್ದೇನೆ. ಸತ್ಯವಾಗಲು ಪ್ರಪಂಚದಲ್ಲಿ ದೇವರಿಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗಾಡುವುದಿಲ್ಲವೆಂಬುದು ಸತ್ಯವಾದದ್ದು. ನನಗೆ ದೇವರಿದ್ದಾನೆ ಎಂಬುದು ಅರಿವಾಯಿತು. ನಾನು ದೇವರನ್ನು ನಂಬುತ್ತಿದ್ದೆ ಆದರೆ ದೇವರ ಕೃಪೆ, ಅವರ ಶಕ್ತಿ ಇಲ್ಲಿಯವರೆಗೆ ಕಂಡಿರಲಿಲ್ಲ. ಅದ್ಭುತ ದೇವರು ಮಹಾತ್ಮನು. ಧನ್ಯವಾದಗಳು. - ಸುರೇಶ, ರಾಯಚೂರು.

೬. ರಾತ್ರಿಯಿಡೀ ನಾಮಜಪ ಅಥವಾ ಪ.ಪೂ.ಭಕ್ತರಾಜ ಮಹಾರಾಜರ (ಸಂತರ) ಭಜನೆಗಳನ್ನು (ಟಿಪ್ಪಣಿ ೧) ಹಾಕಿಡಬೇಕು.

೭. ಹಾಸಿಗೆಯ ಸುತ್ತಲೂ ಖಾಲಿ ಪೆಟ್ಟಿಗೆಗಳನ್ನು (ಟಿಪ್ಪಣಿ ೨) ಇಡಬೇಕು.

ಟಿಪ್ಪಣಿ ೧ - ಸನಾತನ ಸಂಸ್ಥೆಯ ಸ್ಫೂರ್ತಿಸ್ಥಾನವಾಗಿರುವ ಪ.ಪೂ.ಭಕ್ತರಾಜ ಮಹಾರಾಜರು ಈ ಭಜನೆಗಳನ್ನು ಸ್ವತಃ ಬರೆದಿದ್ದಾರೆ, ಸ್ವತಃ ಸಂಗೀತವನ್ನು ನೀಡಿದ್ದಾರೆ ಮತ್ತು ಸ್ವತಃ ಹಾಡಿದ್ದಾರೆ. ಅದರಲ್ಲಿನ ಚೈತನ್ಯವು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ.

ಟಿಪ್ಪಣಿ ೨ - ಖಾಲಿ ಪೆಟ್ಟಿಗೆಗಳಲ್ಲಿ ಟೊಳ್ಳು ಇರುತ್ತದೆ. ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ನಿರ್ಗುಣ ತತ್ತ್ವದಿಂದ ಕಪ್ಪು ಶಕ್ತಿಯು ನಾಶವಾಗುತ್ತದೆ.

ವಿಜ್ಞಾನಿಗಳು ಮಾಡಿದ ಆಧ್ಯಾತ್ಮಿಕ ಸಂಶೋಧನೆ!
ರಾತ್ರಿ ತಕ್ಷಣ ಹಾಸಿಗೆಯಲ್ಲಿ ಮಲಗುವುದಕ್ಕಿಂತ ೨ ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಪರಿಣಾಮಕಾರಿಯಾಗುವುದು

ಶೇ. ೨೩ ರಷ್ಟು ಜನರಿಗೆ ಮಲಗಿದಾಗ ಅಥವಾ ನಿದ್ರೆಯಲ್ಲಿರುವಾಗ ಹೃದಯಾಘಾತವಾಗುತ್ತದೆ, ಎಂಬುದು ಈಗ ಸಿದ್ಧವಾಗಿದೆ. ಇದರ ಕಾರಣವೆಂದರೆ, ದಿನವಿಡೀ ನಿಂತುಕೊಂಡಿರುವ ವ್ಯಕ್ತಿ ಮಲಗಿದಾಗ ಅವರ ಹೃದಯದ ಬಡಿತ ಅನಿಯಮಿತವಾಗುತ್ತದೆ. ಹೃದಯದ ಬಡಿತವನ್ನು ಸ್ಥಿರಗೊಳಿಸಲು ಹಾಸಿಗೆಯಲ್ಲಿ ಕುಳಿತು ೨ ನಿಮಿಷ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು ಶ್ರೇಯಸ್ಕರವೆಂದು ಸಿದ್ಧವಾಗಿದೆ. ಇದೇ ನಿಯಮವು ಹಾಸಿಗೆಯಿಂದ ಏಳುವಾಗಲೂ ಅನ್ವಯಿಸುತ್ತದೆ. (೧೦೮ ಸಲ ‘ನಾರಾಯಣಾಯ ನಮಃ’ ಎಂದು ಹೇಳಲು ೨ ನಿಮಿಷ ತಗಲುತ್ತದೆ) ಆದ್ದರಿಂದ ಮಲಗುವ ಮೊದಲು ಮತ್ತು ನಿದ್ರೆಯಿಂದ ಏಳುವಾಗ ಹಾಸಿಗೆಯಲ್ಲಿ ಕುಳಿತು ಪ್ರಾರ್ಥನೆ ಮಾಡಲು ಹೇಳಲಾಗುತ್ತದೆ.
(ಹಿಂದೂ ಧರ್ಮದಲ್ಲಿ ಬೆಳಗ್ಗೆ ಎದ್ದ ತಕ್ಷಣ ಪ್ರಾರ್ಥನೆ ಮತ್ತು ಶ್ಲೋಕ ಹೇಳುವುದು ಹಾಗೂ ರಾತ್ರಿ ಮಲಗುವಾಗ ದಿನವಿಡೀ ಆಗಿರುವ ತಪ್ಪುಗಳನ್ನು ದೇವರಿಗೆ ಆತ್ಮನಿವೇದನೆ ಮಾಡಿ ಆ ಬಗ್ಗೆ ಕ್ಷಮೆ ಯಾಚಿಸುವುದು ಹಾಗೂ ನಾಮಜಪವನ್ನು ಮಾಡುತ್ತಾ ಮಲಗುವುದು, ಇತ್ಯಾದಿ ಕೃತಿ ಮಾಡಲು ಹೇಳಲಾಗಿದೆ. ಇದರಿಂದ ಪ್ರತಿಯೊಂದು ಒಳ್ಳೆಯ ವಿಷಯದ ಮೂಲ ಹಿಂದೂ ಧರ್ಮದಲ್ಲಿಯೇ ಇದ್ದು ವಿಜ್ಞಾನಿಗಳು ಅಸ್ತಿತ್ವದಲ್ಲಿರುವುದನ್ನೇ ಸಂಶೋಧನೆ ಮಾಡಿ ಅದನ್ನು ‘ನಾವು ಕಂಡುಹಿಡಿದೆವು’ ಎಂದು ಜಗತ್ತಿಗೆ ಹೇಳುತ್ತಾರೆ, ಎಂಬುದು ಇದರಿಂದ ತಿಳಿಯುವುದು. - ಸಂಕಲನಕಾರರು)

(ವಿವರವಾದ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಶಾಂತ ನಿದ್ರೆಗಾಗಿ ಏನು ಮಾಡಬೇಕು?’)

ಸಂಬಂಧಿತ ಲೇಖನಗಳು
ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

No comments:

Post a Comment

Note: only a member of this blog may post a comment.