ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ


‘ಜಪ’ ಈ ಶಬ್ದದ ಅರ್ಥ ಮತ್ತು ವಿಧಗಳು

ವ್ಯುತ್ಪತ್ತಿ ಮತ್ತು ಅರ್ಥ

೧. ‘ಜಕಾರೋ ಜನ್ಮ ವಿಚ್ಛೇದಕಃ ಪಕಾರೋ ಪಾಪನಾಶಕಃ|’ ಇದರ ಅರ್ಥವೇನೆಂದರೆ, ಯಾವುದು ಪಾಪಗಳನ್ನು ನಾಶ ಮಾಡಿ ಜನ್ಮ-ಮೃತ್ಯುಗಳ ಚಕ್ರದಿಂದ ಬಿಡ್ಕುಗಡೆ ಮಾಡುತ್ತದೆಯೋ ಅದು ಜಪ.

೨. ಜಪವೆಂದರೆ ಯಾವುದಾದರೊಂದು ಅಕ್ಷರ, ಶಬ್ದ, ಮಂತ್ರ ಅಥವಾ ವಾಕ್ಯವನ್ನು ಪುನಃ ಪುನಃ ಉಚ್ಚರಿಸ್ಕುವುದು.

ವಿಧಗಳು

೧. ನಾಮಜಪ: ನಾಮಜಪವೆಂದರೆ ನಾಮವನ್ನು ಪುನಃ ಪುನಃ ಹೇಳುತ್ತಾ ಇರುವುದು.
೨. ಮಂತ್ರಜಪ: ಮಂತ್ರಜಪವೆಂದರೆ ಯಾವುದಾದರೊಂದು ಮಂತ್ರವನ್ನು ಪುನಃ ಪುನಃ ಹೇಳುತ್ತಾ ಇರುವುದು.

ನಾಮದ ವೈಶಿಷ್ಟ್ಯಗಳು

ಅ. ಅನಾದಿ ಮತ್ತು ಅನಂತ: ವಿಶ್ವದ ಉತ್ಪತ್ತಿಯ ಪ್ರಾರಂಭದಲ್ಲಿ ‘ನಾಮ’ ಇತ್ತು ಮತ್ತು ಅಂತ್ಯದಲ್ಲಿಯೂ ಅದು ಇರುವುದು; ಏಕೆಂದರೆ ಅದು ಸ್ವಯಂಭೂ ಆಗಿದೆ.

ಆ. ವೇದಗಳ ಉತ್ಪತ್ತಿಯು ನಾಮದಿಂದ ಆಗಿದೆ: ವೇದಗಳು ಹಿಂದೂ ಧರ್ಮದ ಮತ್ತು ಸಂಸ್ಕೃತಿಯ ಮೂಲ ಆಧಾರ ಮತ್ತು ಪ್ರಮಾಣ ಧರ್ಮಗ್ರಂಥಗಳಾಗಿವೆ. ಪರಮೇಶ್ವರನು ಸೃಷ್ಟಿಯ ನಿರ್ಮಿತಿಯನ್ನು ಮಾಡಿದನು ಮತ್ತು ಸೃಷ್ಟಿಯ ಕಲ್ಯಾಣಕ್ಕಾಗಿ ವೇದಗಳ ನಿರ್ಮಿತಿಯನ್ನೂ ಮಾಡಿದನು. ವೇದ ಮತ್ತು ನಾಮದ ತುಲನೆಯನ್ನು ಮಾಡುವಾಗ ಪ.ಪೂ.ಭಕ್ತರಾಜ ಮಹಾರಾಜರು, ‘ವೇದಕ್ಕಿಂತಲೂ ನಾಮವು ಶ್ರೇಷ್ಠವಾಗಿದೆ, ಏಕೆಂದರೆ ನಾಮದಿಂದಲೇ (ಓಂಕಾರದಿಂದಲೇ) ವೇದಗಳ ನಿರ್ಮಿತಿಯಾಗಿದೆ; ಆದುದರಿಂದ ವೇದ, ಉಪನಿಷತ್ತು, ಗೀತೆ ಇತ್ಯಾದಿಗಳ ಅಭ್ಯಾಸಕ್ಕಿಂತ ನಾಮದ ಅಭ್ಯಾಸ (ಜಪ) ಮಾಡುವುದು ಮಹತ್ವದ್ದಾಗಿದೆ’ ಎಂದು ಹೇಳಿದ್ದಾರೆ.

ಇ. ‘ವೇದಮಂತ್ರಗಳು ಓಂಕಾರದಿಂದಲೇ ಪ್ರಾರಂಭವಾಗುತ್ತವೆ, ಅಂದರೆ ವೇದಗಳ ಆರಂಭದಲ್ಲಿ ‘ನಾಮವೇ’ ಇರುತ್ತದೆ.

ಈ. ನಾಮದ ಬಗೆಗಿನ ವಿಕಲ್ಪವು ನಾಮದಿಂದಲೇ ದೂರವಾಗುವುದು: ‘ನಾಮದ ಬಗ್ಗೆ ಸಂಶಯ ಅಥವಾ ವಿಕಲ್ಪಗಳು ಬಂದರೂ, ಶ್ರದ್ಧೆಯಿಂದ ನಾಮಜಪ ಮಾಡಬೇಕು. ಆಗ ಎಲ್ಲ ಸಂಶಯಗಳು ತಾವಾಗಿಯೇ ದೂರವಾಗುತ್ತವೆ.’

ಉ. ಶ್ರದ್ಧೆಯಿಲ್ಲದಿದ್ದರೂ ಫಲ: ಶ್ರದ್ಧೆ ಇಲ್ಲದೆ ಮಾಡಿದ ಹೋಮ, ದಾನ, ತಪಸ್ಸು ಇತ್ಯಾದಿ ಕರ್ಮಗಳಿಗೆ ಫಲಪ್ರಾಪ್ತಿ ಆಗುವುದಿಲ್ಲವೆಂದು ಗೀತೆಯಲ್ಲಿ ಹೇಳಿದೆ (೧೭:೨೮). ನಾಮಜಪದಲ್ಲಿ ಶ್ರದ್ಧೆಯಿದ್ದರೆ ಅದು ದುಗ್ಧಶರ್ಕರಾಯೋಗ (ಹಾಲಿನಲ್ಲಿ ಸಕ್ಕರೆ ಹಾಕಿದಂತೆ) ವೆಂದು ಸಿದ್ಧವಾಗಬಹುದು; ಆದರೆ, ಶ್ರದ್ಧೆಯಿಲ್ಲದೇ ಮಾಡಿದ ನಾಮಜಪವೂ ವಿಫಲವಾಗುವುದಿಲ್ಲವೆಂದು ನಾರದ ಪುರಾಣದಲ್ಲಿ ಹೇಳಲಾಗಿದೆ.

    ಅಶ್ರದ್ಧಯಾಪಿ ಯನ್ನಾಮ್ನಿ ಕೀರ್ತಿತೇಥ ಸ್ಮ ತೇಪಿ ವಾ|
    ವಿಮುಕ್ತಃ ಪಾತಕೈರ್ಮರ್ತ್ಯೋ ಲಭತೇ ಪದಮವ್ಯಯಮ್||
    ಸಂಸಾರಘೋರಕಾಂತಾರ‍್ಕೃದ್ಕಾವಾಗ್ನಿರ್ಮಧುಸ್ಕೂದನಃ|
    ಸ್ಮರತಾಂ ಸರ್ವಪಾಪಾನಿ ನಾಶಯತ್ಯಾಶುಸತ್ತಮಃ ||

ಅರ್ಥ: ಶ್ರದ್ಧೆಯಿಲ್ಲದೆಯೂ ಭಗವಂತನ ನಾಮಸಂಕೀರ್ತನ ಅಥವಾ ನಾಮಸ್ಮರಣೆಯನ್ನು ಮಾಡ್ಕಿದರೆ, ಮನುಷ್ಯನು ಪಾತಕಗಳಿಂದ ಮುಕ್ತನಾಗಿ ಅವ್ಕಿನಾಶೀಪದವನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಶ್ರೀಹರಿಯು ಈ ಸಂಸಾರರೂಪೀ ಘೋರ ಅರಣ್ಯದ ದಾವಾಗ್ನಿಯಾಗಿದ್ದಾನೆ. ಆ ಸರ್ವಶ್ರೇಷ್ಠ ಪುರುಷೋತ್ತಮನು ನಾಮಸ್ಮರಣೆ ಮಾಡುವ ಮನುಷ್ಯನ ಎಲ್ಲಾ ಪಾಪಗಳನ್ನು ನಾಶ ಮಾಡುತ್ತಾನೆ.’

ನಾಮಜಪದಿಂದಾಗುವ ಲಾಭಗಳು
ಮನಃಶಾಸ್ತ್ರದ ದೃಷ್ಟಿಯಿಂದ :

೧. ನಾಮಜಪ ನಡೆಯುತ್ತಿರುವಾಗ ಅಷ್ಟು ಸಮಯಕ್ಕಾದರೂ ಚಿತ್ತದ ಮೇಲೆ ಇತರ ವಿಷಯಗಳ ಸಂಸ್ಕಾರಗಳು ಆಗುವುದಿಲ್ಲ. ಚಿತ್ತದ ಮೇಲೆ ಇತರ ಸಂಸ್ಕಾರಗಳು ಆಗಬಾರದೆಂದು ಜಾಗೃತಾವಸ್ಥೆಯ ಸರ್ವೋತ್ತಮ ಮಾರ್ಗವೆಂದರೆ ನಾಮಸ್ಮರಣೆ.

೨. ನಾಮಸ್ಮರಣೆ ನಡೆಯುತ್ತಿರುವಾಗ ಚಿತ್ತದಲ್ಲಿರುವ ವಾಸನೆಯ ಕೇಂದ್ರ, ಇಷ್ಟ-ಅನಿಷ್ಟ ಕೇಂದ್ರ, ಸ್ವಭಾವಕೇಂದ್ರ ಇತ್ಯಾದಿಗಳಲ್ಲಿರುವ ಸಂಸ್ಕಾರಗಳಿಂದ ಬರುವ ಸಂವೇದನೆಗಳನ್ನು ಬಾಹ್ಯ ಮನವು ಸ್ವೀಕರಿಸುವುದಿಲ್ಲ. ಹೀಗೆ ಸತತವಾಗಿ ಬಹಳಷ್ಟು ಸಮಯ ನಡೆಯುತ್ತಿದ್ದರೆ ಈ ಕೇಂದ್ರಗಳಲ್ಲಿರುವ ಸಂಸ್ಕಾರಗಳು ಕಡಿಮೆಯಾಗುತ್ತಾ ಹೋಗುತ್ತವೆ.

೩.  ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ.

ಆಧ್ಯಾತ್ಮಿಕದೃಷ್ಟಿಯಿಂದ :

೧. ಯಾವುದಾದರೊಂದು ದೇವತೆಯ ಜಪ ಮಾಡಿದರೆ ಆ ದೇವತೆಯು ಪ್ರಸನ್ನಳಾಗುತ್ತಾಳೆ.

೨. ಯಾವುದಾದರೊಂದು ವಿಶಿಷ್ಟ ಜಪವನ್ನು ಮಾಡಿದರೆ ವಿಶಿಷ್ಟ ತತ್ತ್ವದ ಮೇಲೆ ಉದಾ. ಗಾಯಂತ್ರಿ ಜಪದಿಂದ ತೇಜತತ್ತ್ವದ ಮೇಲೆ ಹತೋಟಿಯನ್ನು ಪಡೆದುಕೊಳ್ಳಬಹುದು. ಅದಕ್ಕನುಸಾರ ಸಿದ್ಧಿಗಳು ಪ್ರಾಪ್ತವಾಗುತ್ತವೆ.

೩. ಅಕರ್ಮ ಕರ್ಮ: ಕರ್ಮವನ್ನು ನಾಮಜಪ ಸಹಿತ ಮಾಡಿದರೆ ಆ ಕರ್ಮವು ಅಕರ್ಮಕರ್ಮವಾಗುತ್ತದೆ; ಅಂದರೆ ಆ ಕರ್ಮಕ್ಕೆ ಫಲ ಇರುವುದಿಲ್ಲ, ಆದುದರಿಂದ ಪಾಪ-ಪುಣ್ಯ ಉದ್ಭವಿಸುವುದಿಲ್ಲ. ಇಂತಹ ಕರ್ಮಗಳಿಂದ ಸಂಚಿತವು ನಿರ್ಮಾಣವಾಗದೆ ನಮ್ಮ ಪ್ರಾರಬ್ಧ ಭೋಗಗಳು ಬೇಗನೇ ಮುಗಿದು ಜನ್ಮ ಮೃತ್ಯುಗಳ ಚಕ್ರದಿಂದ ಬಿಡುಗಡೆಯಾಗುತ್ತೇವೆ. ಜನ್ಮದ ಸಮಯದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಪ್ರಾರಬ್ಧ ಭೋಗವು ೧೦೦ಘಟಕಗಳಷ್ಟು (ಯೂನಿಟ್) ಇದೆ ಎಂದು ತಿಳಿದರೆ, ಸಾಧಾರಣವಾಗಿ ಒಂದು ಜನ್ಮದಲ್ಲಿ ೬ ಘಟಕಗಳಷ್ಟು ಕರ್ಮವು ಅನುಭವಿಸಿ ಮುಗಿದು ಹೋಗುತ್ತದೆ. ಹೀಗಾದರೆ ೧೬ರಿಂದ ೧೭ ಜನ್ಮಗಳಲ್ಲಿ ಮನುಷ್ಯನಿಗೆ ಮುಕ್ತಿ ಸಿಗಬೇಕು; ಆದರೆ ಹೀಗಾಗುವುದಿಲ್ಲ. ಏಕೆಂದರೆ ಸಂಚಿತದ ೬ ಘಟಕಗಳನ್ನು ಅನುಭವಿಸಿ ಮುಗಿಸುತ್ತಿರುವಾಗ, ಕ್ರಿಯಮಾಣ ಕರ್ಮದಿಂದ ಸಂಚಿತದಲ್ಲಿ ಇನ್ನೂ ೧೦ ಘಟಕಗಳಷ್ಟು ಕರ್ಮ ಸೇರಿರುತ್ತದೆ. ಇದರಿಂದ ಇನ್ನೂ ಹೆಚ್ಚು ಹೆಚ್ಚು ಜನ್ಮ ಮೃತ್ಯುವಿನ ಚಕ್ರದಲ್ಲಿ ಸಿಕ್ಕಿಕೊಳ್ಳುತ್ತಾನೆ. ಹೀಗಾಗದಿರಲು ಅಕರ್ಮಕರ್ಮವಾಗಬೇಕು.

ನಾಮಸ್ಮರಣೆಯ ಮಹತ್ವ ತಿಳಿದುಕೊಂಡಿರಲ್ಲ? ಹಾಗಿದ್ದರೆ ಈಗ ಯಾವ ನಾಮಜಪ ಮಾಡಬೇಕು? ಎಷ್ಟು ಸಮಯ ಮಾಡಬೇಕು? ಹೇಗೆ ಮಾಡಬೇಕು? ಇತ್ಯಾದಿ ವಿಷಯಗಳನ್ನು ಈ ಕೊಂಡಿಯಲ್ಲಿ ಓದಿರಿ.

ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ "ನಾಮಸಂಕೀರ್ತನಯೋಗ"

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಗುರುಗಳ ಮಹತ್ವ
ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿ
ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ?
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ
Dharma Granth

1 comment:

Note: only a member of this blog may post a comment.