ಆಧ್ಯಾತ್ಮಿಕ ಸಾಧನೆ ಎಂದರೇನು?

ಅಧ್ಯಾತ್ಮಶಾಸ್ತ್ರದ ಎರಡು ಅಂಗಗಳಿವೆ. ಒಂದು ತಾತ್ತ್ವಿಕ ಅಂಗ ಮತ್ತು ಇನ್ನೊಂದು ಪ್ರಾಯೋಗಿಕ ಅಂಗ. ಭಗವದ್ಗೀತೆ, ಜ್ಞಾನೇಶ್ವರಿ, ದಾಸಬೋಧ ಇತ್ಯಾದಿ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುವುದು ಅಧ್ಯಾತ್ಮದ ತಾತ್ತ್ವಿಕ ಅಂಗವಾಗಿದೆ ಮತ್ತು ಶರೀರ, ಮನಸ್ಸು ಮತ್ತು ಬುದ್ಧಿಯಿಂದ ಏನಾದರೂ ಕೃತಿ ಮಾಡುವುದು ಪ್ರಾಯೋಗಿಕ ಅಂಗವಾಗಿದೆ. ಈ ಪ್ರಾಯೋಗಿಕ ಅಂಗವೇ ‘ಸಾಧನೆ’.

ನಮ್ಮ ಸುತ್ತಮುತ್ತಲಿನ ಜಗತ್ತು ಮಾಯೆಯಾಗಿದೆ. ಮಾಯೆಯಲ್ಲಿನ ಯಾವುದೇ ವಿಷಯದ ಗುಣಧರ್ಮವು ‘ಆನಂದ’ವಾಗಿಲ್ಲ. ಆನಂದಪ್ರಾಪ್ತಿಗಾಗಿ ‘ಆನಂದ’ದ ಗುಣಧರ್ಮವಿರುವ ಏನನ್ನಾದರೂ ಪ್ರಾಪ್ತಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಜಗತ್ತಿನಲ್ಲಿ ಕೇವಲ ಈಶ್ವರೀತತ್ತ್ವವೇ (ಈಶ್ವರ) ಆನಂದಮಯವಾಗಿದೆ. ಅಂದರೆ ಆನಂದಪ್ರಾಪ್ತಿಗಾಗಿ ನಮಗೆ ಈಶ್ವರಪ್ರಾಪ್ತಿಯನ್ನೇ ಮಾಡಿಕೊಳ್ಳಬೇಕು. ಈಶ್ವರಪ್ರಾಪ್ತಿ ಎಂದರೆ ಈಶ್ವರನೊಂದಿಗೆ ಏಕರೂಪವಾಗುವುದು, ಈಶ್ವರನ ಗುಣಗಳನ್ನು ನಮ್ಮಲ್ಲಿ ತರುವುದು. ಈಶ್ವರಪ್ರಾಪ್ತಿಗಾಗಿ ನಿಯಮಿತವಾಗಿ ಕನಿಷ್ಟಪಕ್ಷ ಎರಡು-ಮೂರು ಗಂಟೆಗಳಾದರೂ ಶರೀರ, ಮನಸ್ಸು ಮತ್ತು/ಅಥವಾ ಬುದ್ಧಿ ಇವುಗಳಿಂದ ಪ್ರಯತ್ನಿಸುವುದಕ್ಕೆ ‘ಸಾಧನೆ’ ಎನ್ನುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ 'ಗುರುಕೃಪಾಯೋಗಾನುಸಾರ ಸಾಧನೆ')

ಸಂಬಂಧಿತ ಲೇಖನಗಳು
ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ
‘ಗುರುಕೃಪಾಯೋಗ’ - ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!

No comments:

Post a Comment

Note: only a member of this blog may post a comment.