ರಾತ್ರಿಯ ಸಮಯದಲ್ಲಿ ಕೂದಲನ್ನು ಏಕೆ ಬಾಚಬಾರದು?

ರಾತ್ರಿಯ ಸಮಯದಲ್ಲಿ ವಾಯುಮಂಡಲದಲ್ಲಿ ತ್ರಾಸದಾಯಕ ಲಹರಿಗಳ ಪ್ರಮಾಣವು ಹೆಚ್ಚಿಗೆ ಇರುತ್ತದೆ. ವೇಗವಾಗಿ ಸಂಚರಿಸುವ ಈ ತ್ರಾಸದಾಯಕ ಲಹರಿಗಳಿಂದ ವಾತಾವರಣದಲ್ಲಿ ಉಷ್ಣ ಇಂಧನದ ನಿರ್ಮಿತಿಯಾಗುತ್ತಿರುತ್ತದೆ. ‘ಕೂದಲನ್ನು ಬಾಚುವ’ ಘರ್ಷಣಾತ್ಮಕ ಪ್ರಕ್ರಿಯೆಯಿಂದ ಹಾಗೂ ಕೂದಲಿನ ಚಲನವಲನದಿಂದ ನಿರ್ಮಾಣವಾಗುವ ನಾದಲಹರಿಗಳ ಕಡೆಗೆ ವಾಯುಮಂಡಲದಲ್ಲಿ ಸಂಚರಿಸುವ ತ್ರಾಸದಾಯಕ ಲಹರಿಗಳು ಆಕರ್ಷಿತವಾಗುತ್ತವೆ. ಕೂದಲುಗಳ ತುದಿಗಳಿಂದ ತ್ರಾಸದಾಯಕ ಲಹರಿಗಳು ಜೀವದ ದೇಹವನ್ನು ವೇಗವಾಗಿ ಪ್ರವೇಶಿಸುತ್ತವೆ. ಇದರಿಂದ ಜೀವಕ್ಕೆ ಅಸ್ವಸ್ಥವಾಗುವುದು, ಶರೀರ ಜಡವೆನಿಸುವುದು, ಕೆಟ್ಟ ಕನಸುಗಳು ಬೀಳುವುದು, ಜುಮ್ಮುಗಟ್ಟಿದಂತಾಗಿ ಶರೀರಕ್ಕೆ ಸ್ಪರ್ಶಜ್ಞಾನವಿಲ್ಲದಂತಾಗುವುದು ಮುಂತಾದ ತೊಂದರೆಗಳು ಆಗುತ್ತವೆ. ವೇಗವಾಗಿ ಸಂಕ್ರಮಿತವಾಗುವ ಈ ತ್ರಾಸದಾಯಕ ಲಹರಿಗಳಿಂದ ಕೆಲವೊಮ್ಮೆ ಯಾವುದಾದರೊಂದು ಕೆಟ್ಟ ಶಕ್ತಿಯು ದೇಹವನ್ನು ಪ್ರವೇಶಿಸಬಹುದು. ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ರಾತ್ರಿ ಸಮಯದಲ್ಲಿ ಕೂದಲನ್ನು ಬಾಚಬಾರದು.

(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಕೂದಲುಗಳಿಗೆ ತೆಗೆದುಕೊಳ್ಳುವ ಕಾಳಜಿ’)


ಆಚಾರಧರ್ಮದ ಬಗೆಗಿನ ಇತರ ಲೇಖನಗಳನ್ನು ಇಲ್ಲಿ ಓದಿ.

No comments:

Post a Comment