ಸಮರ್ಥ ಭಾರತಕ್ಕಾಗಿ 1800 ವರ್ಷಗಳ ನಂತರ ನಡೆಯಲಿರುವ "ಅಶ್ವಮೇಧ ಮಹಾಸೋಮಯಾಗ"

ವೇದಮಂತ್ರಗಳ ಘೋಷಣೆಯಿಂದ | ಸಂತ-ಮಹಾತ್ಮರ ವರದಹಸ್ತದಿಂದ| ರಾಷ್ಟ್ರಸಮೃದ್ಧಿಯ ಸಂಕಲ್ಪ||
ಸನಾತನ ಆಶ್ರಮ, ರಾಮನಾಥಿ, ಗೋವಾದಲ್ಲಿ ‘ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ’ದ ಸಂಕಲ್ಪ ಮತ್ತು ಯಜ್ಞದ ಅಶ್ವದ ಪೂಜೆ !
ಸನಾತನ ಆಶ್ರಮ, ರಾಮನಾಥಿ : ಮಹಾರಾಷ್ಟ್ರದ ಸೋಲಾಪೂರ ಜಿಲ್ಲೆಯ ಬಾರ್ಶಿ ತಾಲೂಕಿನ ಕಾಸಾರವಾಡಿ ಎಂಬಲ್ಲಿನ ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ಸಂಸ್ಥಾಪಕರಾದ ಆಹಿತಾಗ್ನಿ ಸೋಮಯಾಜಿ ಶ್ರೀ. ನಾರಾಯಣ (ನಾನಾ) ಕಾಳೆಗುರೂಜಿ (೮೦ ವರ್ಷ) ಇವರು ‘ಭಾರತ ದೇಶ ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ದೇಶದಲ್ಲಿ ಸನಾತನ ನೈತಿಕ ಮೌಲ್ಯಗಳ ಮೇಲಾಧಾರಿತ ಅತ್ಯಂತ ಸಮರ್ಥ ಮತ್ತು ಆದರ್ಶ ಸರಕಾರ ನಿರ್ಮಾಣವಾಗಬೇಕು’ ಎಂಬ ಸಂಕಲ್ಪವಿಟ್ಟುಕೊಂಡು ‘ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ’ವನ್ನು ಆಯೋಜಿಸಿದ್ದಾರೆ. ೨೫ ಏಪ್ರಿಲ್ ೨೦೧೩ ರಿಂದ ೩೧ ಜುಲೈ ೨೦೧೪ ಹೀಗೆ ೧೫ ತಿಂಗಳ ತನಕ ಈ ಯಜ್ಞ ನಡೆಯಲಿದೆ. ಈ ಯಜ್ಞದ ಸಂಕಲ್ಪ ಮತ್ತು ಯಜ್ಞದ ಅಶ್ವಪೂಜೆಯನ್ನು ನಾಶಿಕ ಎಂಬಲ್ಲಿನ ಶಕ್ತಿಪಾತ ಯೋಗದ ಅಧಿಕಾರಿ ಪ.ಪೂ. ನಾರಾಯಣರಾವ ಢೇಕಣೆ ಮಹಾರಾಜರ ಉತ್ತರಾಧಿಕಾರಿ ಪ.ಪೂ. ಶರದರಾವ ಜೋಶಿ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆಯವರ ಸಿದ್ಧಹಸ್ತದಿಂದ ಕಾರ್ತಿಕ ಕೃಷ್ಣ ಪಕ್ಷ ದ್ವಾದಶಿ, ಸೋಮವಾರ, ೧೦ ಡಿಸೆಂಬರ್ ೨೦೧೨ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ನೆರವೇರಿಸಲಾಯಿತು.

ಆರಂಭದಲ್ಲಿ ಯಜ್ಞದ ಅಶ್ವದ ಆಗಮನವಾಯಿತು. ಅದರ ನಂತರ ಪ.ಪೂ. ಶರದರಾವ ಜೋಶಿ ಮತ್ತು ಪ.ಪೂ. ಡಾ. ಜಯಂತ ಆಠವಲೆಯವರ ಶುಭಹಸ್ತದಲ್ಲಿ ಅಶ್ವದ ಕುತ್ತಿಗೆಗೆ ಕಟ್ಟಲಾದ ಚಿನ್ನದ ಗೋಲಾಕೃತಿಯ ಅಲಂಕಾರದಿಂದ ಕೂಡಿದ ಕೆಂಪು ದಾರದಿಂದ ಅಶ್ವಮೇಧ ಯಜ್ಞಕ್ಕಾಗಿ ಅಶ್ವವನ್ನು ಕಟ್ಟಿದರು. ನಂತರ ಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾಪೂಜೆ, ನಾಂದಿಶ್ರಾದ್ಧ, ಅಶ್ವಪೂಜೆ, ಆಚಾರ್ಯವರಣ, ಆಶೀರ್ವಚನ, ಋತ್ವಿಜರಿಗೆ ಸತ್ಕಾರ ಮತ್ತು ಕೊನೆಗೆ ಶಾಂತಿ ಮಂತ್ರಗಳನ್ನು ಪಠಿಸಿ ವಿಧಿಯನ್ನು ಸಂಪನ್ನಗೊಳಿಸಲಾಯಿತು. ವಿಧಿಯ ಯಜಮಾನರಾದ ಪ.ಪೂ. ಡಾಕ್ಟರರ ವತಿಯಿಂದ ಸನಾತನದ ರಾಮನಾಥಿ ಆಶ್ರಮದ ಸಾಧಕರಾದ ಶ್ರೀ. ಭಾನು ಪುರಾಣಿಕ ಮತ್ತು ಅವರ ಧರ್ಮಪತ್ನಿ ಸೌ. ಆರತಿ ಪುರಾಣಿಕ ಇವರು ನಡೆಸಿಕೊಟ್ಟರು. ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ಸಂಸ್ಥಾಪಕರಾದ ‘ಆಹಿತಾಗ್ನಿ ಸೋಮಯಾಜಿ’ ಶ್ರೀ. ನಾರಾಯಣ (ನಾನಾ) ಕಾಳೆಗುರೂಜಿಯವರ ಮಾರ್ಗದರ್ಶನದಂತೆ ವಾಜಪೇಯಿಯಾಜಿ ಶ್ರೀ. ಕೇತನ ಕಾಳೆ ಮತ್ತು ಅವರ ಸಹಕಾರಿಯವರು ಯಜ್ಞದ ಪೌರೋಹಿತ್ಯವನ್ನು ನೆರವೇರಿಸಿದರು. ಭಾರತದ ನೈತಿಕ, ಆಧ್ಯಾತ್ಮಿಕ, ಭೌತಿಕ, ಆರ್ಥಿಕ, ಸಂರಕ್ಷಣೆ, ಆಹಾರ ಮತ್ತು ನೀರು ಇತ್ಯಾದಿಗಳ ಸಮೃದ್ಧಿಗಾಗಿ ನಡೆಯುತ್ತಿರುವ ಮನುಷ್ಯನ ಪ್ರಯತ್ನಗಳಿಗೆ ದೈವಿ ಅಧಿಷ್ಠಾನ ದೊರಕಲು ಈ ಅಶ್ವಮೇಧ ಮಹಾಸೋಮಯಾಗ ನಡೆಯಲಿದೆ. ಸುಮಾರು ೧ ಸಾವಿರ ೮೦೦ ವರ್ಷಗಳ ನಂತರ ಈ ಯಜ್ಞ ನಡೆಯಲಿದೆ.

ಯಜ್ಞದ ಸಂಕಲ್ಪ ನಡೆಯುವಾಗ ಯಜ್ಞದ ಅಶ್ವವು ಮಲವಿಸರ್ಜನೆ ಮಾಡಿತು. ‘ಯಾವಾಗ ಯಜ್ಞದ ಅಶ್ವವು ವಿಧಿಯ ಸಮಯದಲ್ಲಿ ಮಲವಿಸರ್ಜನೆ ಮಾಡುತ್ತದೆಯೋ, ಆಗ ಆ ಯಜ್ಞದ ಸಂಕಲ್ಪವು ನೂರುಪ್ರತಿಶತ ಯಶಸ್ವಿಯಾಗುತ್ತದೆ’, ಎಂದು ಗುರೂಜಿಯವರು ಹೇಳಿದರು. ಈ ಸಂದರ್ಭದಲ್ಲಿ ಗೋವಾದ ಫೋಂಡಾದ ಮತದಾರ ಸಂಘದ ಸಂಸದರಾದ ಶ್ರೀ. ಲವೂ ಮಾಮಲೇದಾರ ಇವರು ಉಪಸ್ಥಿತರಿದ್ದರು.

ಸುಮಾರು ೩ ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುವ ಈ ಅಶ್ವಮೇಧ ಮಹಾಸೋಮಯಾಗಕ್ಕಾಗಿ ಸಹಾಯ ಮಾಡಲು ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮ’ದ ವತಿಯಿಂದ ಮಾಡಿದ ಕರೆ!

ಹಿಂದಿನ ಕಾಲದಲ್ಲಿ ಯಜ್ಞದ ಅಶ್ವವು ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸುತ್ತಿತ್ತು. ಆಗ ತಮ್ಮ ಸಾಮ್ರಾಜ್ಯವನ್ನು ಹೆಚ್ಚಿಸುವ ಉದ್ದೇಶವಿರುತ್ತಿತ್ತು. ಕೆಲವೊಮ್ಮೆ ಯಜ್ಞದ ಅಶ್ವಕ್ಕಾಗಿ ಯುದ್ಧಗಳಾಗುತ್ತಿದ್ದವು. ಈಗಿನ ಕಾಲದಲ್ಲಿ ದೇಶದಾದ್ಯಂತ ಅಶ್ವಮೇಧದ ಶೋಭಾಯಾತ್ರೆ ನಡೆಸಿ ಯಜ್ಞಸಂಸ್ಥೆ ಮತ್ತು ವೇದಗಳ ಮಹತ್ವ, ವೇದದಲ್ಲಿನ ಪರಿಸರ ರಕ್ಷಣೆ, ಕೂಡುಕುಟುಂಬಪದ್ಧತಿ, ವೈದಿಕ ಸಂಸ್ಕಾರಪದ್ಧತಿ, ರಾಷ್ಟ್ರೀಯ ಏಕತೆ ಇತ್ಯಾದಿ ವಿಷಯಗಳ ಬಗ್ಗೆ ಎಲ್ಲ ಪ್ರದೇಶದ ಜನರಿಗೆ ಜ್ಞಾನವನ್ನು ಮಾಡಿಕೊಟ್ಟು ಪ್ರಬೋಧಿಸಲಾಗುವುದು. ಈ ಅಶ್ವಶೋಭಾಯಾತ್ರೆಗಾಗಿ ಡಿರೆsಲ್ ಮತ್ತು ಆವಶ್ಯಕ ಸಾಮಗ್ರಿ ಇವುಗಳಿಗಾಗಿ ಬಹಳಷ್ಟು ಆರ್ಥಿಕ ಸಹಾಯ ಬೇಕಾಗಿದೆ.

‘ಈ ಯಜ್ಞಕ್ಕಾಗಿ ೧೨ ಕ್ವಿಂಟಲ್ ದೇಶಿ ಆಕಳಿನ ತುಪ್ಪ, ೧೫ ತಿಂಗಳ ತನಕ ತಗಲುವ ಯಜ್ಞ ವೃಕ್ಷದ ಒಣಗಿದ ಇಂಧನ, ಸಮಿಧೆ, ದರ್ಭೆ, ರೇಶ್ಮಿ ವಸ್ತ್ರಗಳು, ಬೆಳ್ಳಿ ಮತ್ತು ಚಿನ್ನದ ಯಜ್ಞ ಪಾತ್ರೆಗಳು, ಬೃಹತ್ ಯಜ್ಞಶಾಲೆ, ಸಾಮ್ರಾಜ್ಯಭಿಷೇಕದ ಖರ್ಚು, ಋತ್ವಿಜರ ಅಮೂಲ್ಯ ದಕ್ಷಿಣೆ, ಸುವರ್ಣದಾನ, ಗೋದಾನ, ವಸ್ತ್ರದಾನ, ಅನ್ನದಾನ ಇವುಗಳಿಗಾಗಿ ಬಹಳಷ್ಟು ಪ್ರಮಾಣದಲ್ಲಿ ಖರ್ಚು ನಡೆಯಲಿದೆ. ೩ ಕೋಟಿ ರೂಪಾಯಿ ಖರ್ಚು ಮಾಡಿ ದೇಶಕಲ್ಯಾಣಕ್ಕಾಗಿ ಮಾಡುವ ಈ ಅಶ್ವಮೇಧ ಯಜ್ಞಕ್ಕಾಗಿ ಶ್ರದ್ಧಾವಂತರು ಎಲ್ಲ ರೀತಿಯಲ್ಲಿ ಸಹಾಯ ಮಾಡಬೇಕು’, ಎಂದು ‘ಶ್ರೀ ಯೋಗಿರಾಜ ವೇದ ವಿಜ್ಞಾನ ಆಶ್ರಮದ’ ವತಿಯಿಂದ ಕರೆ ನೀಡಲಾಗಿದೆ.

No comments:

Post a Comment

Note: only a member of this blog may post a comment.