ಉದ್ದೇಶ : ಜನರು ದಿನದರ್ಶಿಕೆಯನ್ನು ಕೇವಲ ದಿನವನ್ನು ನೋಡಲು ಬಳಸುತ್ತಾರೆ. ಆದರೆ ಸನಾತನ ದಿನದರ್ಶಿಕೆಯ ವೈಶಿಷ್ಟ್ಯವೆಂದರೆ ಅದು ಕೇವಲ ಪಂಚಾಂಗ ಮಾತ್ರವಲ್ಲ ಹಿಂದೂಗಳಿಗೆ ಧರ್ಮಾಚರಣೆಯ ಬಗ್ಗೆ ತಿಳಿಸುವ ಕೈಗನ್ನಡಿಯಾಗಿದೆ. ಅಂದರೆ ಇದು ಕೇವಲ ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗವಾಗಿದೆ. ಹಿಂದೂಗಳಿಗೆ ಎಲ್ಲಿಯೂ ಸಿಗದಿರುವಂತಹ ಧರ್ಮಶಿಕ್ಷಣವನ್ನು ಈ ಪಂಚಾಂಗವು ನೀಡುತ್ತಿದೆ. ಉದಾ : ಧಾರ್ಮಿಕ ಹಬ್ಬವನ್ನು ಹೇಗೆ ಆಚರಿಸಬೇಕು, ಭಾರತೀಯ ಸಂಸ್ಕೃತಿಯಂತೆ ಆಚರಣೆ ಮಾಡುವ ಮಹತ್ವ, ಜಾತ್ರೆ-ಉತ್ಸವಗಳಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟುವುದು ಇತ್ಯಾದಿ.
ಪಂಚಾಂಗ
ಪ್ರತಿದಿನದ ಪಂಚಾಂಗದೊಂದಿಗೆ ಶುಭ-ಅಶುಭ ದಿನ, ವಿವಾಹ ಮುಹೂರ್ತ, ಉಪನಯನ ಮುಹೂರ್ತ, ಸಂಕಷ್ಟ ಚತುರ್ಥಿ, ಚಂದ್ರೋದಯ, ಗ್ರಹಣದ ಮಾಹಿತಿ, ಮಳೆ ನಕ್ಷತ್ರ, ಬೀಜ ಬಿತ್ತನೆ ಹಾಗೂ ಕೊಯ್ಲಿನ ಮುಹೂರ್ತವನ್ನೂ ಕೊಡಲಾಗಿದೆ.
ಹಿಂದೂ ರಾಷ್ಟ್ರ, ಅಂದರೆ ಈಶ್ವರೀ ರಾಜ್ಯದ ಸ್ಥಾಪನೆ
ಇಂದು ದೇಶವು ಎಲ್ಲ ದಿಕ್ಕಿನಿಂದ ಅರಾಜಕತೆಯತ್ತ ಹೊರಳಿದೆ. ಶಾಂತಿ ನೆಮ್ಮದಿ ಇಲ್ಲವಾಗಿದೆ. ದೇಶಕ್ಕೆ ಕಾಡುವ ಅನೇಕ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಅತಿ ದೊಡ್ಡ ಸಮಸ್ಯೆ ಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆ, ಕಲಬೆರಕೆ, ತೂಕದಲ್ಲಾಗುವ ಅವ್ಯವಹಾರ ಮುಂತಾದವುಗಳ ಬಗ್ಗೆ ಜನಜಾಗೃತಿ ಹಾಗೂ ಅದರ ನಿರ್ಮೂಲನೆಗಾಗಿನ ಮಾರ್ಗದರ್ಶನವು ಈ ಪಂಚಾಂಗದ ಒಂದು ವೈಶಿಷ್ಟ್ಯವಾಗಿದೆ. ಈ ಮೂಲಕ ಒಂದು ಸಮೃದ್ಧ ರಾಮ ರಾಜ್ಯವನ್ನು, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಮೈಲುಗಲ್ಲಾಗಿದೆ.
ಹಿಂದೂ ಸಂಸ್ಕೃತಿ ರಕ್ಷಣೆ ಹಾಗೂ ಭಾಷಾಭಿಮಾನ ಹೆಚ್ಚಳ
ಇಂದು ಪಾಶ್ಚಾತ್ಯರ ಅಂಧಾನುಕರಣೆಯಿಂದಾಗಿ ಮಹಾನ ಹಿಂದೂ ಸಂಸ್ಕೃತಿಯ ಬಗ್ಗೆ ಅವಹೇಳನವಾಗುತ್ತಿದೆ. ಅದರಿಂದಾಗಿ ಸಮಾಜ ಪಾಶ್ಚಾತ್ಯರ ಕುಸಂಸ್ಕ ೃತಿಯತ್ತ ವಾಲುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇದರಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಉದಾ. ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5 ರಂದಲ್ಲ ಗುರುಪೂರ್ಣಿಮೆಯಂದು ಆಚರಿಸಬೇಕು ಇತ್ಯಾದಿ. ಅಲ್ಲದೇ ಪಾಶ್ಚಾತ್ಯರ `ಡೇ' ಸಂಸ್ಕ ೃತಿಗೆ ಮಾರು ಹೋಗದಂತೆಯೂ ಮಾಹಿತಿ ನೀಡಲಾಗಿದೆ. ಇಂದು ಆಂಗ್ಲಭಾಷೆಯ ಪ್ರಭಾವದಿಂದಾಗಿ ಮಾತೃಭಾಷೆಯತ್ತ ದುರ್ಲಕ್ಷವಾಗುತ್ತಿದೆ. ಮಾತೃಭಾಷೆಯ ಜೋಪಾಸನೆಯೆಂದರೆ ರಾಷ್ಟ್ರಾಭಿಮಾನದ ಜೋಪಾಸನೆಯಾಗಿದೆ. ಹಾಗಾಗಿ ಮಾತೃಭಾಷೆಯ ಮಹತ್ವವನ್ನು ಇದರಲ್ಲಿ ತಿಳಿಯಪಡಿಸಿದ್ದೇವೆ. ದೇವಭಾಷೆ ಸಂಸ್ಕೃತದ ಮಹತ್ವದ ಬಗ್ಗೆಯೂ ಮಾಹಿತಿ ಇದೆ.
ಹಿಂದೂ ಧರ್ಮದ ಮೇಲಿನ ಆಘಾತದ ಬಗ್ಗೆ ತಿಳುವಳಿಕೆ
ಇಂದು ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರು ಮತಾಂತರವಾಗುತ್ತಿದ್ದಾರೆ. ಅಲ್ಲದೇ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಸೇರಿಸಿ ಒಂದು ರೀತಿ ವೈಚಾರಿಕ ಮತಾಂತರಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಿಂದೂಗಳಿಗೆ ಮಾರ್ಗದರ್ಶನ ಸಿಗಲೆಂದು ಮಾರ್ಗದರ್ಶಕ ಲೇಖನಗಳನ್ನೂ ಅಳವಡಿಸಲಾಗಿದೆ. ಗೋವು ಹಿಂದೂಗಳ ಶ್ರದ್ಧಾಸ್ಥಾನವಾಗಿದೆ. ಅದರ ರಕ್ಷಣೆ ಎಂದರೆ ಹಿಂದೂ ಧರ್ಮದ ರಕ್ಷಣೆಯೇ ಆಗಿದೆ. ಈ ಕುರಿತು ಪಂಚಾಂಗದಲ್ಲಿ ಗೋಹತ್ಯೆ ತಡೆಯುವ ಹಾಗೂ ಅದರ ಮಹತ್ವದ ಬಗ್ಗೆ ಮಾಹಿತಿ ನೀಡಲಾಗಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಪ್ರಸ್ತುತ ಕೃತಿಶೀಲರಾಗಿರುವವರ ಹಾಗೂ ಶಾಲಾಕಾಲೇಜುಗಳಲ್ಲಿಯೂ ನಮ್ಮ ರಾಷ್ಟ್ರಪುರುಷರ, ಕ್ರಾಂತಿಕಾರರ ಬಗ್ಗೆ ಮಾಹಿತಿ ಇಲ್ಲದ್ದರಿಂದ ಅದನ್ನು ಇದರಲ್ಲಿ ಅಳವಡಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗಿದೆ.
ಧರ್ಮ ಶಿಕ್ಷಣ
ಹಿಂದೂ ಧರ್ಮದಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಆಯಾ ಹಬ್ಬಗಳನ್ನು ಹೇಗೆ ಆಚರಿಸಬೇಕು, ಆಚರಣೆಯ ಹಿಂದಿನ ಅಧ್ಯಾತ್ಮಶಾಸ್ತ್ರ, ಸಾರ್ವಜನಿಕ ಗಣೇಶೋತ್ಸವದಲ್ಲಾಗುವ ತಪ್ಪು ಆಚರಣೆಗಳು, ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಹೀಗೆ ಅನೇಕ ಮಾಹಿತಿಗಳನ್ನು ನೀಡಲಾಗಿದೆ. ಇದರಿಂದ ಹಿಂದೂಗಳಿಗೆ ಹಬ್ಬ ಆಚರಣೆಯ ಕುರಿತು ಮಾಹಿತಿ ದೊರೆತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ನಾಮಜಪದ ಮಹತ್ವ, ಪ್ರಾರ್ಥನೆಯ ಮಹತ್ವ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಸಂತರ ಮಾಹಿತಿ
ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಪ್ರಸಿದ್ಧ ಸಂತರ ಮಾಹಿತಿಯನ್ನು ನೀಡಲಾಗಿದೆ. ಸಂತರು ಸಮಾಜವನ್ನು ಆಧ್ಯಾತ್ಮಿಕದತ್ತ ಹೊರಡಿಸಲು ಮಾಡಿದ ಪ್ರಯತ್ನಗಳ ಸಂಕ್ಷಿಪ್ತ ಮಾಹಿತಿಯನ್ನು ಕೊಡಲಾಗಿದೆ.
ದೇವರ ಹಾಗೂ ಸಂತರ ಸಾತ್ತ್ವಿಕ ಚಿತ್ರಗಳು
ಪಂಚಾಂಗದ ಮುಖಪುಟದಲ್ಲಿ ಕರ್ನಾಟಕದ ಪ್ರಸಿದ್ಧ ದೇವಸ್ಥಾನದ ದೇವರ ಹಾಗೂ ವಿವಿಧ ಸಂತರ ಚಿತ್ರಗಳನ್ನೂ ಹಾಕಲಾಗಿದೆ. ಅಲ್ಲದೇ ಸಂತರ ಪುಣ್ಯತಿಥಿ ಹಾಗೂ ಜಯಂತಿಯನ್ನು ಹಾಕಲಾಗಿದೆ. ಅಲ್ಲದೇ ಕೃತಿಶೀಲ ಸಂತರ ಮಾರ್ಗದರ್ಶನವನ್ನೂ ಮುದ್ರಿಸಲಾಗಿದೆ. ಇವೆಲ್ಲದರಿಂದ ಪಂಚಾಂಗದ ಸಾತ್ತ್ವಿಕ ಸ್ಪಂದನಕ್ಕೆ ಇನ್ನೂ ಹೆಚ್ಚಿನ ಮೆರುಗು ಸಿಕ್ಕಿದೆ.
ಪಂಚಾಂಗ (ದಿನದರ್ಶಿಕೆ)ದ ಅತುಲನೀಯ ಗುಣಮಟ್ಟ
ಇತರ ದಿನದರ್ಶಿಕೆಯಲ್ಲಿ ಸಾಮಾನ್ಯವಾಗಿ ದಿನಾಂಕಗಳಿದ್ದು ಕೇವಲ 6 ಪುಟಗಳಲ್ಲಿ 12 ತಿಂಗಳ ಮಾಹಿತಿ ಇರುತ್ತದೆ. ಇದನ್ನು ಸಾಮಾನ್ಯವಾಗಿ ರೂ. 30 ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಸನಾತನ ಪಂಚಾಂಗ(ದಿನದರ್ಶಿಕೆ)ವನ್ನು ನಾವು ರಾಷ್ಟ್ರ ಮತ್ತು ಧರ್ಮದ ಪ್ರಬೋಧನೆಯ ದೃಷ್ಟಿಯಿಂದ ಮಾಡಿದ್ದರಿಂದ ಮತ್ತು 12 ಪುಟಗಳಲ್ಲಿ ಮೇಲ್ಕಂಡ ವಿವರವಾದ ಮಾಹಿತಿಗಳನ್ನು ಕೊಟ್ಟು ಕೇವಲ ರೂ.30ರ ಅರ್ಪಣೆ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯ ಮಾಡಿಕೊಡುತ್ತಿದ್ದೇವೆ ಹಾಗೂ ಸಗಟು ಖರೀದಿಯಲ್ಲಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದನ್ನು ಗ್ಲಾಸಿ ಪೇಪರ್‍ನಲ್ಲಿ ಮುದ್ರಿಸಿದ್ದರಿಂದ ಈ ಪಂಚಾಂಗಗಳನ್ನು ಬಹುಕಾಲದ ತನಕ ಕಾಪಾಡಿಕೊಂಡು ಇಡಬಹುದು ಹಾಗೂ ಇತರರಿಗೂ ಧರ್ಮಾಚರಣೆಯ ದೃಷ್ಟಿಯಿಂದ ತೋರಿಸಬಹುದು.
ದಿನದರ್ಶಿಕೆಗಾಗಿ ಸಂಪರ್ಕಿಸಿ -
ಉತ್ತರ ಕರ್ನಾಟಕ - 7204082725
ಬೆಂಗಳೂರು - 8147091873
ಮಂಗಳೂರು - 720408 2652
ಹುಬ್ಬಳ್ಳಿ - 7204082730
ನಿಮ್ಮ ಸಮೀಪದ ಊರಿನಲ್ಲಿ ಸಿಗುವ ಬಗ್ಗೆಯೂ ಸಹ ಮೇಲಿನ ಸಂಪರ್ಕ ಕ್ರಮಾಂಕಗಳನ್ನೇ ಸಂಪರ್ಕಿಸಿ.
I like these kinds of reasons. thank you
ReplyDeleteI stay in Hyderabad. How do get this panchanga? Please write to shridharbadami@yahoo.co.in or 9618491567
ReplyDeleteI stay in Hyderabad and I want to buy this panchanga. how do i get this? Please write to me shridharbadami@yahoo.co.in or shridharbadami@gmail.com
ReplyDeletehe jevana anodu yasto karamagalla dati manushangi utti bhandha navugalu ondhu uttamavada dari deepavagi nammage dharma granth anno jyothi sikkede nannage eannustu mayathi beku please sahaya madi my number-8867866676-7353577650
ReplyDeleteSampadhakarige namaskara.............nanu vinod antha nanage 2014 panchanga beku, nanu elle bengaluru.
ReplyDeleteNange nivu ee kyalendarannu kalisalikke enu procedure swalpa healu
enthi
Vinod
nange neevu e calander 1 piece kalisikodi.
ReplyDelete