ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?

ಕರ್ಪೂರದ ಆರತಿ ಬೆಳಗುವುದು

ತುಪ್ಪದ ದೀಪದಿಂದ ಆರತಿಯನ್ನು ಬೆಳಗಿದ ನಂತರ ಕರ್ಪೂದ ಆರತಿ ಬೆಳಗಬೇಕು. ಕರ್ಪೂರದ ಆರತಿಯ ಉಪಕರಣದಲ್ಲಿಟ್ಟ ಕರ್ಪೂರವನ್ನು ಪ್ರಜ್ವಲಿಸಿ. ಈಗ ತುಪ್ಪದಾರತಿಯಂತೆಯೇ ಈ ಆರತಿಯನ್ನು ಬೆಳಗಿರಿ. ಆರತಿಯನ್ನು ಬೆಳಗುವಾಗ ‘ಕರ್ಪೂರಗೌರಂ ಕರುಣಾವತಾರಂ..’ ಈ ಮಂತ್ರದ ಉಚ್ಚಾರಣೆ ಮಾಡಿರಿ. ಆರತಿಯ ಕೃತಿಯಲ್ಲಿ ಮೊದಲು ತುಪ್ಪದ ದೀಪದಿಂದ ಆರತಿಯನ್ನು ಬೆಳಗಲಾಗುತ್ತದೆ. ಅನಂತರ ಕರ್ಪೂರದಾರತಿಯನ್ನು ಬೆಳಗಲಾಗುತ್ತದೆ.

ತುಪ್ಪದ ದೀಪದಿಂದ ಆರತಿ ಬೆಳಗಿದ ನಂತರ ಕರ್ಪೂರದ ಆರತಿ ಮಾಡುವ ಕಾರಣವೇನು?

ತುಪ್ಪದ ದೀಪದಿಂದ ಆಕರ್ಷಿತವಾದ ದೇವತೆಗಳ ತತ್ತ್ವ ಲಹರಿಗಳಿಗೆ ಕರ್ಪೂರದ ಆರತಿಯು ಗತಿ ಪ್ರದಾನಿಸುತ್ತದೆ. ಇದರಿಂದ ವಾತಾವರಣ ಶುದ್ಧಿಯಾಗುತ್ತದೆ. ವಾಯು ಮಂಡಲದಲ್ಲಿ ಚೈತನ್ಯದ ವೃದ್ಧಿಯಾಗುತ್ತದೆ ಮತ್ತು ರಜ-ತಮ ಕಣಗಳ ಉಚ್ಚಾಟನೆ ಆಗುತ್ತದೆ. ಇದರಿಂದ ಪೂಜಕನಿಗೆ ಆರತಿಯನ್ನು ಮಾಡುವ ಸಮಯದಲ್ಲಿ ವಾಯುಮಂಡಲದಿಂದ ಚೈತನ್ಯ ಗ್ರಹಿಸಲು ಬರುವ ಅಡಚಣೆಗಳು ಕಡಿಮೆಯಾಗುತ್ತವೆ.

ಕರ್ಪೂರದ ಉಗ್ರ ಗಂಧದಿಂದ ವಾಯುಮಂಡಲದಲ್ಲಿ ಸೂಕ್ಷ್ಮ ಸುಗಂಧ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಈ ಸುಗಂಧ-ಲಹರಿಯುಕ್ತ ವಾಯುಮಂಡಲದೆಡೆಗೆ ಬ್ರಹ್ಮಾಂಡದಲ್ಲಿರುವ ಶಿವಶಕ್ತಿಯ ಲಹರಿಗಳು ಆಕರ್ಷಿತವಾಗುತ್ತವೆ ಮತ್ತು ವಾಸ್ತುವಿನಲ್ಲಿರುವ ಕೆಟ್ಟಶಕ್ತಿಗಳ ಸಂಚಾರಕ್ಕೆ ಅಂಕುಶವನ್ನು ಹಾಕುತ್ತವೆ. ಇದರಿಂದ ಪೂಜಾವಿಧಿಯ ಮಾಧ್ಯಮದಿಂದ ಉಂಟಾಗುವ ದೇವತಾ ತತ್ತ್ವಗಳ ಲಹರಿಗಳ ಪ್ರಕ್ಷೇಪಣೆಯಲ್ಲಿ ತೊಂದರೆದಾಯಕ ಲಹರಿಗಳ ಅಡ್ಡಿಯು ದೂರವಾಗುತ್ತದೆ.

ಕರ್ಪೂರದ ಗಂಧದಿಂದಾಗಿ ಪೂಜಕನ ಶ್ವಾಸದ ಮೂಲಕ ಶರೀರದಲ್ಲಿ ಶಿವತತ್ತ್ವವು ಪ್ರವೇಶಿಸುತ್ತದೆ ಮತ್ತು ಶ್ವಸನಮಾರ್ಗದಲ್ಲಿರುವ ಕಪ್ಪು ಶಕ್ತಿ ಮತ್ತು ಕಪ್ಪು ವಾಯುವನ್ನು ನಾಶಗೊಳಿಸುತ್ತದೆ. ಕರ್ಪೂರದ ಸುಗಂಧದಿಂದ ಶ್ವಸನ ವಿಕಾರ ಕಡಿಮೆಯಾಗುತ್ತವೆ.

(ಆಧಾರ - ಸನಾತನ ಸಂಸ್ಥೆಯ ಗ್ರಂಥ 'ಆರತಿಯನ್ನು ಹೇಗೆ ಮಾಡಬೇಕು?')

ಸಂಬಂಧಿತ ಲೇಖನಗಳು
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ 
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!
Dharma Granth

No comments:

Post a Comment

Note: only a member of this blog may post a comment.