ಅಕ್ಷಯ ತೃತೀಯಾ (ತದಿಗೆ)

ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಈ ದಿನದ ಮಹತ್ವವನ್ನು ಇಲ್ಲಿ ನೀಡುತ್ತಿದ್ದೇವೆ.

ತಿಥಿ: ‘ವೈಶಾಖ ಶುಕ್ಲ ತೃತೀಯಾ

ಮಹತ್ವ

೧.    ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ|
        ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ|
        ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ|
        ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ|| - ಮದನರತ್ನ
ಅರ್ಥ: (ಶ್ರೀಕೃಷ್ಣನು ಹೇಳುತ್ತಾನೆ) ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ; ಆದುದರಿಂದ ಋಷಿಗಳು ಇದನ್ನು ‘ಅಕ್ಷಯ ತೃತೀಯಾ’ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ)ವಾಗುತ್ತದೆ.

೨. ಅಕ್ಷಯ ತೃತೀಯಾ ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.

೩. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ.

ಹಬ್ಬವನ್ನು ಆಚರಿಸುವ ಪದ್ಧತಿ

೧. ಸ್ನಾನದಾನಾದಿ ಧರ್ಮಕಾರ್ಯಗಳು: ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ‘ಸತ್ಪಾತ್ರೇ ದಾನ’ವಾಗಿರಬೇಕು. ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡಿದ ದಾನವು ‘ಸತ್ಪಾತ್ರೇ ದಾನ’ವಾಗಿದೆ. ಸತ್ಪಾತ್ರೇ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮ ವಾಗುತ್ತದೆ. ಅಕರ್ಮಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು. ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.

ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ

ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.


ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ?

ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕ ರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ. ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್‌ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೧.೫.೨೦೦೫)


ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ?

ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.


ಎಳ್ಳು ತರ್ಪಣೆ ಮಾಡುವ ಪದ್ಧತಿ: ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು. - ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೦.೫. ೨೦೦೫)

ಅಕ್ಷಯ ತೃತೀಯಾದಂದು ಎಳ್ಳು ತರ್ಪಣೆ ಏಕೆ ನೀಡಬೇಕು? ಉದಕಕುಂಭ ಏಕೆ ನೀಡಬೇಕು? ಎಳ್ಳು ತರ್ಪಣೆ ನೀಡುವ ಪದ್ಧತಿ ಯಾವುದು ಎಂಬುದನ್ನು ವಿವರವಾಗಿ ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿಡಿಯೋವನ್ನು ನೋಡಿ.


(ಆಧಾರ: ಸನಾತನ ಸಂಸ್ಥೆಯ ಗ್ರಂಥ- ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)

ಅಕ್ಷಯ ತೃತೀಯ

ಕ್ಷಯ ಎಂದರೆ ನಶಿಸಿ ಹೋಗುವುದು ಆದರೆ ಅಕ್ಷಯವೆಂದರೆ ಎಂದು ನಶಿಸಲಾಗದ್ದು ಮತ್ತು ಸಮೃದ್ದಿಯಾಗುವಂತದ್ದು. ವೈಶಾಖ ಮಾಸದ ಶುದ್ದ ತೃತೀಯ ಜೊತೆಗೆ ರೋಹಿಣಿ ನಕ್ಷತ್ರ ಇದ್ದರೇ ಅದು ಶಾಸ್ತ್ರದ ಪ್ರಕಾರ ಆಚರಿಸುವ ಅಕ್ಷಯ ತೃತೀಯವಾಗಿದೆ. ರೋಹಿಣಿ ನಕ್ಷತ್ರ ಮತ್ತು ಜೊತೆಗೆ ತೃತೀಯವಿದ್ದರೆ ೧೦೦ ಪಟ್ಟು ಹೆಚ್ಚಿನ ಫಲ ಸಿಗುತ್ತದೆ.

ಪುರಾಣಗಳಲ್ಲಿ ಉಲ್ಲೇಖವಾಗಿರುವ ಅಕ್ಷಯ ತೃತೀಯದ ಮಹತ್ವವನ್ನು ತಿಳಿಯೋಣ

೧. ಭುರಿಶ್ರವಸ್ಸು ರಾಜನಿಗೆ ಶ್ರೀ ಮಹಾವಿಷ್ಣು ದರ್ಶನ ಕೊಟ್ಟ ದಿವಸ
೨. ವೇದವ್ಯಾಸರು ಗಣಪತಿಗೆ ಶ್ರೀ ಮನ್ಮಹಾಭಾರತ ಬರೆಯಲು ಶುರು ಮಾಡಿದ ದಿವಸ
೩. ಪರಶುರಾಮನ ಅವತಾರವಾದ ದಿವಸ
೪. ಸಮುದ್ರದಲ್ಲಿ ಅಡಗಿಸಲು ಹೊರಟ ವೇದಗಳನ್ನು ಮತ್ತೆ ಬ್ರಹ್ಮನಿಗೆ ಕೊಟ್ಟ ದಿವಸ
೫. ಕುಚೇಲ ತಂದ ಅವಲಕ್ಕಿಯನ್ನು ಶ್ರೀ ಕೃಷ್ಣ ಸಂತೋಷದಿಂದ ಸ್ವೀಕರಿಸಿ ಅನುಗ್ರಹಿಸಿದ ದಿನ
೬. ಬಹಳ ಹಿಂದೆ ಕುಂಭಕೋಣಂನ ೧೬ ವಿಷ್ಣು ದೇವಾಲಯಗಳಲ್ಲಿ ಒಟ್ಟಿಗೆ ೧೬ ಗರುಡವಾಹನಗಳಲ್ಲಿ ಮಹಾವಿಷ್ಣು ದರ್ಶನ ಕೊಟ್ಟ ದಿವಸ.
೭. ಕೃತಯುಗ ಪ್ರಾರಂಭವಾದ ದಿವಸ

ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾದ ವಿಶೇಷತೆಗಳು

೧. ಇಂದು ಮಾಡಿದ ಹೋಮ ಜಪತಪಗಳು ದಿನನಿತ್ಯಕಿಂತ ೧೦೦ ಪಟ್ಟು ಹೆಚ್ಹಾಗಿ ಫಲವನ್ನು ಕೊಡುತ್ತದೆ.
೨. ಸೂರ್ಯೋದಯಕ್ಕೆ ಮೊದಲು ನದಿಗಳಲ್ಲಿ ಸ್ನಾನವನ್ನು ಮಾಡುವುದರಿಂದ ವಿಶೇಷ ಫಲ ನೀಡುತ್ತದೆ
೩. ಗುರುಮುಖದಿಂದ ಮಂತ್ರೋಪದೇಶಕ್ಕೆ ಬಹಳ ಪ್ರಾಶಸ್ತ್ಯವಾದ ದಿನ
೪. ವೇದ ಉಪನಿಷತ್‌ಗಳ ಪಾರಯಣಕ್ಕೆ ಬಹಳ ವಿಶೇಷ
೫  ಪಿತೃತರ್ಪಣ ಕೊಡಬೇಕಾದ ದಿವಸ (ಅರ್ಹತೆ ಇದ್ದವರಿಗೆ)
೬. ದಾನ ಮಾಡಲು ಬಹಳ ಸೂಕ್ತವಾದ ದಿವಸ ಮತ್ತು ಹೆಚ್ಚಿನ ಪಲ
೭  ಲಕ್ಷ್ಮಿ ಸಾನಿದ್ಯವಿರುವ ವಸ್ತುಗಳನ್ನು ಕೊಳ್ಳಲು ವಿಶೇಷವಾದ ದಿನ

ಈ ರೀತಿ ವಿಶೇಷವಾದ ದಿನವನ್ನು ಜಪ ತಪ ಅನುಷ್ಠಾನಗಳಿಂದ ವಿಶೇಷ ಲಾಭ.

ಇತರ ವಿಷಯಗಳು
ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ
ವ್ರತಗಳು
ವ್ರತಗಳ ವಿಧಗಳು 

13 comments:

 1. ನಮಗೆ "ಅಕ್ಷಯ ತೃತೀಯ" ದ ಮಹತ್ವವನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಟ್ಟಿದಕ್ಕಾಗಿ ನಿಮಗೆ ಧನ್ಯವಾದಗಳು

  ReplyDelete
  Replies
  1. ಧನ್ಯವಾದಗಳು ವಿಜಯಾನಂದರವರೇ, ಧರ್ಮಾಚರಣೆ ಮಾಡಿ ಮತ್ತು ಧರ್ಮರಕ್ಷಣೆ ಮಾಡಿ.

   Delete
 2. it is nice and we clearly know the importace of the day thank u very much sir

  ReplyDelete
 3. Very clear information... Thanks.

  ReplyDelete
 4. ಅಕ್ಷಯ ತದಿಗೆ ವಿಷಯ ಬಹಳ ವಿಷದವಾಗಿ ಉಲ್ಲೇಖಿಸಲಾಗಿದೆ. ವೀಡಿಯೋ ಚಿತ್ರಣ ಇಲ್ಲದಿರುವುದು ಬೇಸರ ತಂದಿದೆ. ಸಾಧ್ಯವಾದರೆ ಮತ್ತೆ ಸೇರಿಸಲು ಕೋರಲಾಗಿದೆ.

  ReplyDelete
 5. Very nice, very clear information. Thank u soooo much

  ReplyDelete
 6. ತುಂಬ ಧನ್ಯವಾದಗಳು ಹೆಚ್ಚಿನ ಮಾಹಿತಿ ನೀಡಿದಕ್ಕಾಕಿ ಇನ್ನೊ ಹೆಚ್ಚು ಮಾಹಿತಿ ಹಿಗೆ ಸಿಗುತ್ತಿದ್ದರೆ ತುಂಬ ಉಪಕಾರ ಅಗುತ್ತದೆ

  ReplyDelete
 7. Very well articulated. Thanks for the noble work you are doing.

  ReplyDelete
  Replies
  1. ಮೂರೂವರೆ ಮುಹೂರ್ತಗಳು ಯಾವುದು ದಯವಿಟ್ಟು ತಿಳಿಸಿ

   Delete

Note: only a member of this blog may post a comment.